‘ಆಪರೇಶನ್‌ ಸಿಂಧೂರ’ ಕುರಿತು ಪೋಸ್ಟ್:‌ ಅಶೋಕ ವಿವಿ ಪ್ರಾಧ್ಯಾಪಕಗೆ 14 ದಿನಗಳ ನ್ಯಾಯಾಂಗ ಬಂಧನ

‘ಆಪರೇಷನ್ ಸಿಂಧೂರ’ ಕುರಿತ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮುದಾಬಾದ್ ಅವರನ್ನು ಸೋನೆಪತ್ ನ್ಯಾಯಾಲಯ ಮಂಗಳವಾರ (ಮೇ.20) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಲಿ ಖಾನ್ ಅವರನ್ನು ಭಾನುವಾರ ದೆಹಲಿಯಲ್ಲಿ ಬಂಧಿಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದು ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಝಾದ್ ಸಿಂಗ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸರು ಇನ್ನೂ ಏಳು ದಿನಗಳ ಕಾಲ ಅಲಿ ಖಾನ್ ಅವರನ್ನು ಕಸ್ಟಡಿಗೆ ಕೇಳಿದ್ದರು. … Continue reading ‘ಆಪರೇಶನ್‌ ಸಿಂಧೂರ’ ಕುರಿತು ಪೋಸ್ಟ್:‌ ಅಶೋಕ ವಿವಿ ಪ್ರಾಧ್ಯಾಪಕಗೆ 14 ದಿನಗಳ ನ್ಯಾಯಾಂಗ ಬಂಧನ