ಹೈದರಾಬಾದ್ ನಗರದ ಹೊರವಲಯದಲ್ಲಿರುವ ದುಂಡಿಗಲ್‌ನಲ್ಲಿ ಬುಧವಾರ ರಾತ್ರಿ ಗೋರಕ್ಷಕರ ಗುಂಪು ಜಾನುವಾರು ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ ನಂತರ ಉದ್ವಿಗ್ನತೆ ಉಂಟಾಗಿದೆ.
ನಗರಕ್ಕೆ ವಾಹನದಲ್ಲಿ ಎತ್ತುಗಳನ್ನು ಸಾಗಿಸುತ್ತಿದ್ದ ವ್ಯಾಪಾರಿಗಳನ್ನು ಗಂಡಿ ಮೈಸಮ್ಮ ಬಳಿ ದುಷ್ಕರ್ಮಿಗಳು ತಡೆದಿದ್ದಾರೆ. ಚಾಲಕ ಮತ್ತು ವ್ಯಾಪಾರಿಗಳನ್ನು ವಾಹನದಿಂದ ಹೊರತೆಗೆಳೆದ ನಂತರ ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ನಂತರ, ಗೋರಕ್ಷಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿಯೇ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ದಾಳಿಯಲ್ಲಿ ಇಬ್ಬರೂ ಬಲಿಪಶುಗಳಿಗೆ ಗಾಯಗಳಾಗಿವೆ ಎಂದು ಎಐಎಂಐಎಂ ಎಂಎಲ್‌ಸಿ ಮಿರ್ಜಾ ರಹಮತ್ ಬೇಗ್ ಹೇಳಿದ್ದಾರೆ.
ಪೊಲೀಸರು ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಭಾಗಿಯಾಗಿರುವ ಎಲ್ಲರನ್ನು ಬಂಧಿಸಬೇಕು ಎಂದು ಎಂಎಸ್‌ಸಿ ಒತ್ತಾಯಿಸಿದರು. ಈದ್ ಅಲ್ ಅಧಾ ಹಬ್ಬಕ್ಕೂ ಮುನ್ನ ಸೈಬರಾಬಾದ್‌ನಲ್ಲಿ ಗೋರಕ್ಷಕರ ಚಟುವಟಿಕೆ ಹೆಚ್ಚಾಗಿದೆ.
ಹಬ್ಬದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ತಪ್ಪಿಸುವಂತೆ ಜಾಮಾ ಮಸೀದಿ ಶಾಹಿ ಇಮಾಮ್ ಮನವಿ


