- Advertisement -
- Advertisement -
ಹಾಲಿನ ಉತ್ಪನ್ನಗಳ ಆಮದಿಗೆ ಅವಕಾಶ ನೀಡುವ RCEP ಒಪ್ಪಂದ ವಿರೋಧಿಸಿ ನವೆಂಬರ್ 4ರಂದು ದೇಶಾದ್ಯಂತ ತಾಲ್ಲೂಕು-ಜಿಲ್ಲಾಧಿಕಾಗಿಗಳ ಕಛೇರಿ ಎದುರು ಪ್ರತಿಭಟನೆಗೆ ಸಿಪಿಐಂ ಪಕ್ಷ ಕರೆ ನೀಡಿದೆ.
ಸಿಪಿಎಂನ ಅಂಗಸಂಸ್ಥೆಗಳಾದ ಹಾಲು ಉತ್ಪಾದಕರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ(KPRS), ಕರ್ನಾಟಕ ಪ್ರಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಜೊತೆಗೂಡು ಆರ್‌ಸಿಇಪಿ ವಿರುದ್ಧ ಹೋರಾಡಲು ನಿರ್ಧರಿಸಿವೆ.

ಹಾಲಿನ ಉತ್ಪನ್ನಗಳು, ರೇಷ್ಮೆ ಮುಂತಾದ ಕೃಷಿ ಉತ್ಪಾದನೆಗಳ ಸುಂಕರಹಿತ ಆಮದಿಗೆ ಆರ್‌ಸಿಎಪಿ ಒಪ್ಪಂದ ಅವಕಾಶ ಮಾಡಿಕೊಡುತ್ತದೆ ಎಂದು ದೂರಿರುವ ಸಿಪಿಎಂ ಈ ಒಪ್ಪಂದದ ಬದಲಿಗೆ ಹಾಲು ಮತ್ತು ರೇಷ್ಮೆ ಆಮದಿಗೆ ಹೆಚ್ಚು ತೆರಿಗೆ ವಿಧಿಸಬೆಕೇಂದು ಆಗ್ರಹಿಸಿದೆ.
ಸರ್ಕಾರವು ರೈತರು ಮತ್ತು ಕೂಲಿಕಾರರ ನೆರವಿಗಾಗಿ ಸಹಕಾರ ಚಳವಳಿಯನ್ನು ಬಲಪಡಿಸಲು ಅಗತ್ಯ ಕ್ರಮಗಳಿಗೆ ಮುಂದಾಗಬೇಕೆಂದು ಸಹ ಪಕ್ಷವು ಒತ್ತಾಯಿಸಿದೆ.


