ದಕ್ಷಿಣ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) ಕಚೇರಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಸವರ್ಣಿಯ ಜಾತಿಯ ಯುವತಿ ಮತ್ತು ದಲಿತ ಯುವಕನ ಅಂತರ್‌ಧರ್ಮಿಯ ವಿವಾಹಕ್ಕೆ ಸಹಾಯ ಮಾಡಿದ್ದಾರೆಂದು ಸಿಪಿಐಎಂ ಕಚೇರಿಯನ್ನು ಧ್ವಂಸ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿ ಯುವತಿಯ ಕುಟುಂಬದ ಸದಸ್ಯರು ಸೇರಿದಂತೆ 8 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪಾಲಯಂಗೊಟ್ಟೈನ ಪರಿಶಿಷ್ಟ ಸಮುದಾಯದ ಅರುಂತಥಿಯಾರ್ ಜಾತಿಗೆ ಸೇರಿದ ಮದನ್ ಮತ್ತು ಪೆರುಮಾಳ್ಪುರಂನ ಪಿಳ್ಳೈ ಸಮುದಾಯದ ದಾಕ್ಷಾಯಿಣಿ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಕುಟುಂಬವು ಅಂತರ್ಜಾತಿ ವಿವಾಹವನ್ನು ಒಪ್ಪದ ಕಾರಣ ಸಿಪಿಐ(ಎಂ) ಮುಂದೆ ಬಂದು ಪ್ರೇಮಿಗಳಿಗೆ ಸಹಾಯ ಮಾಡಿದೆ. ಅವರು ಗುರುವಾರ ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾದ ಸಹಾಯದಿಂದ ವಿವಾಹವಾಗಿದ್ದರು ಎನ್ನಲಾಗಿದೆ.
ವಿವಾಹ ಕಾರ್ಯಕ್ರಮದ ನಂತರ ಧಾಕ್ಷಾಯಿಣಿ ಕುಟುಂಬವು ಸಿಪಿಐ(ಎಂ) ಕಚೇರಿಗೆ ದಾಳಿ ಮಾಡಿದೆ. ಪೊಲೀಸರು ಕೂಡಲೇ ಪಕ್ಷದ ಕಚೇರಿ ತೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಧಾಕ್ಷಾಯಿಣಿ ಕುಟುಂಬದ ಸದಸ್ಯರು ಕಚೇರಿಯ ಬಾಗಿಲು ಮುರಿದು ಪಕ್ಷದ ಪದಾಧಿಕಾರಿಗಳು ಹಾಗೂ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದನ್ನು ಕಾಣಬಹುದು.
ಈ ಕುರಿತು ತಿರುನಲ್ವೇಲಿ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಪಕ್ಷದ ಕಚೇರಿಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ಬಾಲಕಿಯ ಕುಟುಂಬವು ಪೆರುಮಾಳ್ಪುರಂ ಪೊಲೀಸ್ ಠಾಣೆಗೆ ಬಾಲಕಿ ಕಾಣೆಯಾಗಿದ್ದಾರೆಂದು ಎಂದು ದೂರು ನೀಡಿದ್ದಾರೆ. ನವವಿವಾಹಿತರು ಸಿಪಿಐ(ಎಂ) ಕಚೇರಿಯಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಹುಡುಗಿಯ ಕುಟುಂಬ, ಪಕ್ಷದ ಕಚೇರಿಗೆ ಧಾವಿಸಿ ಅವರನ್ನು ಹುಡುಕಾಟ ನಡೆಸಿದ್ದಾರೆ. ಇದು ಬಾಲಕಿಯ ಕುಟುಂಬದ ಸದಸ್ಯರು ಮತ್ತು ಸಿಪಿಐ(ಎಂ) ಪದಾಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಚೇರಿಯ ಧ್ವಂಸಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
After CPI(M) & Untouchability Eradication Front arranged for a self respect marriage in #Tirunelveli between a #Dalit man and FC girl, the girl's family entered and damaged the CPI(M) office. #caste #news pic.twitter.com/ejjPkx2UHm
— Nidharshana Raju (@NidharshanaR) June 14, 2024
ಇದನ್ನು ಓದಿ: ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಅಂಗೀಕಾರ


