ನನ್ನನ್ನು ಬೆದರಿಸಲು ನನ್ನ ಕುಟುಂಬಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿವೆ. ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಂಗ ಸದಸ್ಯರು ಸಹ ಒತ್ತಡ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹೇಳಿದ್ದಾರೆ.
ವಿಐಟಿ-ಎಪಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ನ್ಯಾಯಮೂರ್ತಿ ರಮಣ, ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಂಗ ಸದಸ್ಯರು ಸಹ ಒತ್ತಡ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ ಎಂದಿದ್ದಾರೆ.
“ಇಲ್ಲಿ ಹಾಜರಿರುವ ನೀವೆಲ್ಲರೂ, ಇಲ್ಲಿ ಹಾಜರಿರುವ ನಿಮ್ಮಲ್ಲಿ ಹೆಚ್ಚಿನವರು, ನನ್ನ ಕುಟುಂಬವನ್ನು ಹೇಗೆ ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಯಿತು ಎಂಬುದನ್ನು ಅರಿತಿದ್ದೀರಿ. ಇದೆಲ್ಲವೂ ನನ್ನನ್ನು ಬೆದರಿಸಲು ಮಾತ್ರ ಮಾಡಲಾಗಿತ್ತು, ಮತ್ತು ನಾನು ಒಬ್ಬಂಟಿಯಾಗಿರಲಿಲ್ಲ. ಆ ಕಠಿಣ ಹಂತದಲ್ಲಿ, ರೈತರ ಪರವಾಗಿ ಸಹಾನುಭೂತಿ ಹೊಂದಿದ್ದ ಎಲ್ಲರೂ ಬೆದರಿಕೆ ಮತ್ತು ಬಲವಂತವನ್ನು ಎದುರಿಸಿದರು” ಎಂದು ಅವರು ಶನಿವಾರ ಹೇಳಿದ್ದಾರೆ. ಆದರೆ ಈ ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತವನ್ನು ನೇರವಾಗಿ ಉಲ್ಲೇಖಿಸಿಲ್ಲ.


