ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 25 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ಸತತವಾಗಿ ಬೆಲೆ ಹೆಚ್ಚಳಗೊಂಡ ಎರಡನೇ ದಿನವಾಗಿ ದಾಖಲಾಯಿತು.
ತೈಲ ಮಾರಾಟ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 84.70 ರೂ. ಮತ್ತು ಡೀಸೆಲ್ ಬೆಲೆ 74.88 ರೂ ಆಗಿದೆ. ದೆಹಲಿಯ ಇತಿಹಾದಲ್ಲೆ ಪ್ರಸ್ತುತ ದರವು ದಾಖಲೆಯ ಗರಿಷ್ಠ ಬೆಲೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ 87.56 ಆಗಿದ್ದರೆ, ಡೀಸೆಲ್ ಬೆಲೆ 78.95 ರೂ ಗಳಾಗಿದೆ.
ಇದನ್ನೂ ಓದಿ: ಕಚ್ಚಾ ತೈಲದ ದರ ಕಡಿಮೆ – ಆದರೂ ಪೆಟ್ರೋಲ್ ದರ ಗರಿಷ್ಠ!
ಮುಂಬೈಯಲ್ಲಿ ಪೆಟ್ರೋಲ್ ಬೆಲೆಯನ್ನು ಈ ಹಿಂದೆ ಇದ್ದ ದರ 91.07 ರೂ.ಗಳಿಂದ 91.32 ರೂ.ಗೆ ಹೆಚ್ಚಾಗಿದ್ದರೆ, ಡೀಸೆಲ್ ದರ 81.34 ರೂ.ನಿಂದ 81.60 ರೂ.ಗೆ ಏರಿತು. ಮುಂಬೈನಲ್ಲಿ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ದರವಾಗಿ ದಾಖಲಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಔಟ್‌ಲೆಟ್‌ಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ಗಳು ಸುಮಾರು ಒಂದು ತಿಂಗಳ ಅವಧಿಯ ವಿರಾಮದ ನಂತರ( ಜನವರಿ 6 ರಿಂದ) ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿವೆ.
ಆದರೆ, ಕಚ್ಚಾ ಇಂಧನದ ದರಗಳು ಗುರುವಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 52.81 ಡಾಲರ್‌ಗೆ ತಲುಪಿದೆ.
ಇದನ್ನೂ ಓದಿ: ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!


