Homeಚಳವಳಿಬಂಡೀಪುರ ಅರಣ್ಯ ದಿನಗೂಲಿ ನೌಕರರ ಸ್ಥಳಾಂತರ ಆದೇಶ ವಾಪಸ್‌: ಎಸಿಎಫ್‌ ಹೇಳಿಕೆ

ಬಂಡೀಪುರ ಅರಣ್ಯ ದಿನಗೂಲಿ ನೌಕರರ ಸ್ಥಳಾಂತರ ಆದೇಶ ವಾಪಸ್‌: ಎಸಿಎಫ್‌ ಹೇಳಿಕೆ

- Advertisement -
- Advertisement -

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆಯ 205 ತಾತ್ಕಾಲಿಕ ದಿನಗೂಲಿ ನೌಕರರ ಸ್ಥಳಾಂತರ ವಿಚಾರ ಗಂಭೀರತೆ ಪಡೆದುಕೊಂಡಿದೆ. ಅರಣ್ಯ ಸಂರಕ್ಷಣಾಧಿಕಾರಿ ನಟೇಶ್ ನಿರ್ಧಾರಕ್ಕೆ ದಿನಗೂಲಿ ನೌಕರರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ಹಾದಿ ಹಿಡಿದಾಗ ಸ್ಥಳಕ್ಕೆ ಆಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್‌, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸ್ಥಳಾಂತರ ಆದೇಶವನ್ನು ವಾಪಸ್‌ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇಎಸ್‌ಐ, ಪಿಎಫ್‌ ಸೌಲಭ್ಯ ಸೇರಿದಂತೆ ಕೆಲಸದ ಭದ್ರತೆ ವಿಚಾರವಾಗಿ ಮುಖಂಡರಾದ ನಾಗರಾಜ್‌ ನೇತೃತ್ವದಲ್ಲಿ ನೌಕರರು ಹಕ್ಕೊತ್ತಾಯ ಸಲ್ಲಿಸಿದ್ದರು. ಹಲವು ವರ್ಷ ದುಡಿದರೂ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ, ಬದಲಿಗೆ ಸ್ಥಳಾಂತರ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂಬುದು ಅಲ್ಲಿನ ನೌಕರರ ದೂರಾಗಿದೆ.

ಬೇಟೆ ನಿಗ್ರಹ ಶಿಬಿರ ವ್ಯಾಪ್ತಿಯಲ್ಲಿದ್ದವರನ್ನು ತೆಗೆದು ಬೇರೆಡೆಗೆ ಹಾಕಲಾಗಿತ್ತು. ಹತ್ತಿರವಾಗಿ ಸ್ಥಳಾಂತರ ಮಾಡಿದ್ದರೆ ಯೋಚಿಸಬೇಕಿರಲಿಲ್ಲ. ಇಡಿಯಾಲದಿಂದ ಬಂಡೀಪುರಕ್ಕೆ ಹಾಕುವುದು, ಬಂಡೀಪುರದಿಂದ ಗುಂಡ್ರೆಗೆ ಸ್ಥಳಾಂತರ ಮಾಡುವುದು ನಡೆದಿತ್ತು. ಅಂದರೆ 30ರಿಂದ 40ಕಿ.ಮೀ. ದೂರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅರಣ್ಯ ಸಂರಕ್ಷಣಾಧಿಕಾರಿ ನಟೇಶ್‌ ಅವರ ಈ ಕ್ರಮವನ್ನು ಖಂಡಿಸಿ ದಿನಗೂಲಿ ನೌಕರರು ಒಂದೆಡೆ ಸೇರಿ ಪ್ರತಿಭಟಿಸುತ್ತಿದ್ದರು.

ದಿನಗೂಲಿ ನೌಕರರು ಕೆಲಸಕ್ಕೆ ಹೋಗದಿದ್ದರೆ ಕಾಡು ಉಳಿಯುವುದಿಲ್ಲ. ಹೀಗಾಗಲೇ ವನ್ಯಜೀವಿಗಳನ್ನು ಬೇಟೆಯಾಡುತ್ತಿರುವ ಪ್ರಕರಣಗಳು ಬಂಡೀಪುರ ಅರಣ್ಯದಲ್ಲಿ ಹೆಚ್ಚಿವೆ. ಸರ್ಕಾರ ತುರ್ತಾಗಿ ಮಧ್ಯ ಪ್ರವೇಶಿಸಿ, ಪರಿಹಾರ ನೀಡಬೇಕು. ಅರಣ್ಯ ಸಂರಕ್ಷಣಾಧಿಕಾರಿ ನಟೇಶ್‌ ಅವರ ಮನವೊಲಿಸುವಿಕೆಯೂ ಒಪ್ಪಿತ ರೀತಿಯಲ್ಲಿ ನಡೆದಿಲ್ಲ ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅಕ್ಕದ ಪಕ್ಕದ ವಲಯಕ್ಕೆ ಹಾಕಿದರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮೂವತ್ತು, ನಲವತ್ತು ಕಿ.ಮೀ. ದೂರಕ್ಕೆ ಸ್ಥಳಾಂತರಿಸಿದರೆ ಯಾರೂ ಒಪ್ಪಿಕೊಳ್ಳುವುದಿಲ್ಲ. ಇಂತಹ ಅಧಿಕಾರಿಗಳ ಧೋರಣೆಯಿಂದ ನಾವು ಒದ್ದಾಡಬೇಕಾಗುತ್ತದೆ. ಈಗಾಗಲೇ ಬಂಡೀಪುರದಲ್ಲಿ ಎರಡು ಮೂರು ಸಲ ಬೆಂಕಿ ಬಿದ್ದಿದೆ. ಇದು ಮುಂದುವರಿದರೆ ಅರಣ್ಯ ಇನ್ನಷ್ಟು ನಾಶವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.

ಸದ್ಯಕ್ಕೆ ಸ್ಥಳಾಂತರ ನಿಲ್ಲಿಸಲಾಗುವುದು ಮತ್ತು ದಿನಗೂಲಿ ಕಾರ್ಮಿಕರಿಗೆ ಕೆಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್‌ ನಿರ್ಧಿರಿಸಿರುವುದು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದಂತಾಗಿವೆ.


ಇದನ್ನೂ ಓದಿ: ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ನಿಷೇಧ: ಕಡ್ಡಾಯ ಯಂತ್ರೋಪಕರಣ ಬಳಕೆಗೆ ಹೈಕೋರ್ಟ್ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...