ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ.ಎಸ್ ಸಸಿಕಾಂತ್ ಸೆಂಥಿಲ್ ರವರು ಇಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರು ತಾವು ರಾಜಿನಾಮೆ ನೀಡುವುದಕ್ಕೆ ಕಾರಣಗಳನ್ನು ನೀಡಿ ಪತ್ರ ಬರೆದಿದ್ದಾರೆ. ಅದರ ಕನ್ನಡ ಅನುವಾದ ಇಲ್ಲಿದೆ ನೋಡಿ.
ಆತ್ಮೀಯ ಗೆಳೆಯರೆ,
“ಇಂದು ಭಾರತೀಯ ಆಡಳಿತ ಸೇವೆಗೆ ನಾನು ರಾಜೀನಾಮೆಯನ್ನು ನೀಡುತ್ತಿದ್ದೇನೆ. ಈ ಸಮಯದಲ್ಲಿ, ಈ ನಿರ್ಧಾರವು ಕೇವಲ ವೈಯಕ್ತಿಕ ನಿರ್ಧಾರ ಎಂದು ಸ್ಪಷ್ಟಪಡಿಸುವುದು ನನಗೆ ಮುಖ್ಯವಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ನನ್ನ ಪ್ರಸ್ತುತ ಪ್ರೊಫೈಲ್‌ನಲ್ಲಿ ಯಾರೊಂದಿಗೂ ಅಥವಾ ಯಾವುದೇ ಘಟನೆಯೊಂದಿಗೆ ಸಂಪರ್ಕ ಹೊಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಮತ್ತು ಜನ ಪ್ರತಿನಿಧಿಗಳ ನನಗೆ ಅತ್ಯುತ್ತಮ ಸಹಕಾರ ನೀಡಿದ್ದಾರೆ ಅವರಿಗೆ ಧನ್ಯವಾದಗಳು ಮತ್ತು ಮಧ್ಯೆಯೇ ನಾನು ಕೆಲಸವನ್ನು ಸ್ಥಗಿತಗೊಳಿಸಿದ್ದಕ್ಕಾಗಿ ನಾನು ಅವರಿಗೆ ಕ್ಷಮೆಯಾಚಿಸುತ್ತೇನೆ.”

“ನಮ್ಮ ವೈವಿಧ್ಯಮಯ ಪ್ರಜಾಪ್ರಭುತ್ವದ ಮೂಲಭೂತ ಆಧಾರ ಸ್ಥಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿರುವಾಗ ಸರ್ಕಾರದಲ್ಲಿ ನಾಗರಿಕ ಸೇವಕನಾಗಿ ನಾನು ಮುಂದುವರೆಯುವುದು ಅನೈತಿಕ ಎಂದು ನಾನು ಭಾವಿಸುತ್ತೇನೆ. ಬಹುತ್ವದ ಬೇರುಗಳಿಗೆ ಭವಿಷ್ಯದಲ್ಲಿ ಭಾರೀ ಅಪಾಯ ಕಾದಿದೆ. ಮುಂಬರುವ ದಿನಗಳು ನಮ್ಮ ರಾಷ್ಟ್ರಕ್ಕೆ ಅತ್ಯಂತ ಕಷ್ಟಕರವಾದ ಸವಾಲುಗಳನ್ನು ಇರುವುದರಿಂದ ನಾನ ಹೊರಗಿನಿಂದ ನಿಂತು ಜನರಿಗಾಗಿ ದುಡಿಯುವುದೇ ಲೇಸು ಎಂದು ನನಗನ್ನಿಸುತ್ತಿದೆ. ಕೇವಲ ವ್ಯಾವಹಾರಿಕ ಮಾತ್ರವಲ್ಲದೇ ನನ್ನೊಂದಿಗೆ ಕೆಲಸ ಮಾಡಿದ, ನನ್ನ ಹಾದಿಯಲ್ಲಿ ಜೊತೆಗೂಡಿದ ಎಲ್ಲಾ ಸ್ನೇಹಿತರಿಗೂ, ಅವರ ಕುಟುಂಬ ವರ್ಗಕ್ಕೂ ಪ್ರೀತಿ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.”
2009ರ ಐ.ಎ.ಎಸ್ ಕೇಡರ್ ಆದ ತಮಿಳುನಾಡು ಮೂಲದ ಸಸಿಕಾಂತ್ ಸೆಂಥಿಲ್ ರಾಜಿನಾಮೆ ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನ ನಿರಾಸೆ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ದಿನ ಅವರು ಸೇವೆಯಲ್ಲಿರಬೇಕಿತ್ತು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಲು ಸಾಲಾಗಿ ಐ.ಎ.ಎಸ್ ಅಧಿಕಾರಿಗಳು ರಾಜಿನಾಮೆ ನೀಡುತ್ತಿರುವುದಕ್ಕೆ ಇಂದಿನ ಭಾರತದ ಸ್ಥಿತಿಯೇ ಕಾರಣವೇ ಎಂಬ ಅಸಮಾಧಾನ ಕೂಡ ಬರುತ್ತಿದೆ. ಕಳೆದ 10 ದಿನಗಳ ಹಿಂದಷ್ಟೇ ಕಣ್ಣನ್ ಗೋಪಿನಾಥ್ ಎಂಬ ಐ.ಎ.ಎಸ್ ಅಧಿಕಾರಿ ಕೂಡ ರಾಜಿನಾಮೆ ನೀಡಿದ್ದರು.



ಭಾರತದ ಮೂಲಭೂತ ಗುಣಗಳಾದ ಬಹುತ್ವ ಮತ್ತು ಪ್ರಜಾಪ್ರಭುತ್ವಕ್ಕೆ ಹಿಂದೆಂದೂ ಕಾಣದ ರೀತಿಯಲ್ಲಿ ಧಕ್ಕೆಯಾಗುತ್ತಿರುವಾಗ ನಾಗರಿಕ ಸೇವೆಯಲ್ಲಿ ( IAS) ಮುಂದುವರಿಯುವುದು ಅನೈತಿಕ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ ದಕ ಜಿಲ್ಲೆಯ ಅತ್ಯಂತ ದಕ್ಷ ಜಿಲ್ಲಾಧಿಕಾರಿ ಶ್ರೀ ಸೆಂಥಿಲ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದೇಶದ ಅರ್ಥ ವ್ಯವಸ್ಥೆ ವೇಗವಾಗಿ ಕುಸಿಯುತ್ತಿದೆ. ಲಕ್ಷಾಂತರ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಕಾಶ್ಮೀರವನ್ನು ಸೈನಿಕರು ಆಳುತ್ತಿದ್ದಾರೆ. ಉತ್ತರಪೂರ್ವದ ಸುಮಾರು ೭೦ ಲಕ್ಷ ಜನ ಭಯಭೀತರಾಗಿದ್ದಾರೆ. ವಿಜ್ಞಾನಿಗಳು ಒಳ್ಳೆ ಮಕ್ಕಳು ಹುಟ್ಟಲು ಗರ್ಭಿಣಿಯರಿಗೆ ಸೆಗಣಿ ತಿನ್ನಲು ಹೇಳುತ್ತಿದ್ದಾರೆ. ರಾಜಕಾರಣಿಗಳು ಬೆಂಕಿಹಚ್ಚುವ ಮಾತಾಡುತ್ತಿದ್ದಾರೆ.
ಯಾರಿಗಾಗಿ? ಯಾರು? ಯಾವ ಬಗೆಯ ನಾಡನ್ನು ಕಟ್ಟುತ್ತಿದ್ದಾರೋ ತಿಳಿದವರು ಹೇಳಬೇಕು.
it is very bad development in the interest of the Nation