ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕವಾದರೂ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ನಾನು ಉಪಮುಖ್ಯಮಂತ್ರಿಯಾಗುವಂತೆ ಆಯಿತು. ಅಧಿಕಾರ ಹಂಚಿಕೆಕೊಂಡು ಸಮಾನತೆ ಕಾಣಬೇಕು ಎಂಬ ಮನಸ್ಥಿತಿ ಬಾರದೆ ಇರುವುದು ನೋವಿನ ಸಂಗತಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ ಪುತ್ರ ಪಾವಗಡ ಶ್ರೀರಾಮ್ ಅವರ ನಿವಾಸಕ್ಕೆ ಭೇಟಿ ನೀಡಿ ಕೆಲ ಕಾಲ ಅಲ್ಲಿ ಸೇರಿದ್ದವರೊಂದಿಗೆ ಮಾತುಕತೆ ನಡೆಸಿದರು. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಎಂದೋ ಆಗಬೇಕಿತ್ತು. ಆದರೆ ಸಮಾಜ ಮತ್ತು ರಾಜಕೀಯ ಮುಖಂಡರ ಮನಸ್ಥಿತಿ ಅದಕ್ಕೆ ಒಗ್ಗಿಕೊಂಡಿಲ್ಲದಿರುವುದನ್ನು ಇದು ಸೂಚಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಿಲ್ಲ: ಸಿದ್ದರಾಮಯ್ಯ ಮಾತಿಗೆ ರಾಜಕೀಯ ಬಣ್ಣ ಬೇಡ – ಡಾ.ಜಿ.ಪರಮೇಶ್ವರ್
ಹೋರಾಟ ನನ್ನ ಸ್ವಂತಕ್ಕೆ ಮಾಡುತ್ತಿಲ್ಲ. ಬಾಲ್ಯದಿಂದಲೂ ನಾನು ಸಮಾಜದಲ್ಲಿ ಬದಲಾವಣೆಯ ಉದ್ದೇಶಕ್ಕಾಗಿ ಶ್ರಮಿಸುತ್ತಿದ್ದೇನೆ. ಸಮಾಜದಲ್ಲಿ ಜಾತಿಪದ್ದತಿ ಇದ್ದು ಇದು ಸಮಾಜಕ್ಕೆ ಅಂಟಿದ ರೋಗ. ಜಾತಿ ಪದ್ದತಿ ಮತ್ತು ಶೋಷಣೆ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ. ದಲಿತರು ಸುಖವಾಗಿ ಅಂದರೆ ನಮ್ಮದಿಯಿಂದ ಬದುಕು ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಆದರೆ ಅಂತಹ ಪರಿಸ್ಥಿತಿ ಇಂದಿಗೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಯಾವುದೇ ಚುನಾವಣೆಗಳು ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲೂ ಇಲ್ಲ. ಆದರೆ ಡಾ.ಜಿ.ಪರಮೇಶ್ವರ್ ದಲಿತ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ನಾನು ಉಪಮುಖ್ಯಮಂತ್ರಿಯಾಗಿದ್ದು ಕಾಕತಾಳೀಯ ಎಂದು ಹೇಳಿರುವುದು ಮತ್ತೊಮ್ಮೆ ದಲಿತ ಮುಖ್ಯಮಂತ್ರಿಯ ವಿಚಾರವನ್ನು ಹರಿಯಬಿಟ್ಟಂತೆ ಆಗಿದೆ. ಪಾವಗಡ ಶ್ರೀರಾಂ ದಲಿತ ಮುಖ್ಯಮಂತ್ರಿಯಾಗಬೇಕು ಎಂದು ಹೋರಾಟ ಮಾಡಿದವರಲ್ಲಿ ಒಬ್ಬರು ಎಂದು ಪರಮೇಶ್ವರ್ ನೆನಪಿಸಿದರು.
ಸೂಲಗಿತ್ತಿ ನರಸಮ್ಮ ಶಾಲೆಗೆ ಹೋಗಲಿಲ್ಲ. ಅಕ್ಷರ ಕಲಿಯಲಿಲ್ಲ. ಆದರೂ ಸಾವಿರಾರು ಹೆರಿಗೆಗಳನ್ನು ಮಾಡಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಅವಿಸ್ಮರಣೀಯ. ವೈದ್ಯರೇ ಇಲ್ಲದ ಕಾಲದಲ್ಲಿ ಬರಿಗೈಯಲ್ಲಿ ಹೆರಿಗೆ ಮಾಡಿಸುವುದು ಅಂದರೆ ಕಷ್ಟದ ಕೆಲಸ. ಅಂಥಾ ಸಂದರ್ಭದಲ್ಲಿ ಹೆರಿಗೆ ಮಾಡಿಸಿ ಹೆಣ್ಣು ಮಕ್ಕಳ ಬಾಳಿನಲ್ಲಿ ನಗುವನ್ನು ಕಂಡವರು ನರಸಮ್ಮ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಹುದ್ದೆಯೆ ತಿರಸ್ಕರಿಸಿದ ನಾವು ಯಕಶ್ಚಿತ್ ಮಂತ್ರಿ ಸ್ಥಾನಕ್ಕೆ ಆಸೆ ಪಡಲ್ಲ: ಕುಮಾರಸ್ವಾಮಿ



ಪರಮೇಶ್ವರ ಅವರು ಉಪ ಮುಖ್ಯಮಂತ್ರಿ ಆಗಿದ್ದೇ ತಪ್ಪಾಗಿದೆ. ಯಾಕಂದ್ರೆ ಅವರು ಬ್ರಾಹ್ಮಣರ ಗುಲಾಮರಾಗಿ ಉಪಮುಖ್ಯಮಂತ್ರಿ ಆಗಿದ್ದಾಗಿ ವಿಧಾನ ಸೌಧ ದಲ್ಲಿ ಪೂಜೆ ಬ್ರಾಹ್ಮಣರ ನ್ನು ಕರೆಯಿಸಿ ಪೂಜೆ ಮಾಡಿ. ಬಾಬಾಸಾಹೆಬರಿಗೆ ಅಪಮಾನ್ ಮಾಡಿದ್ರು. ಬಾಬಾಸಾಹೆಬರು ತೋರಿಸಿದ್ದು ಭೌದ್ಧ ಧರ್ಮದ ದಾರಿ. ಕೊನೇಗೆ ಸರ್ಕಾರ ಬಿದ್ದಿದ್ದೆ ಒಳ್ಳೆದಾಯ್ತು. ನಮಗೆ ಬ್ರಾಹ್ಮಣರ ಗುಲಾಮರು ಮಂತ್ರಿಗಳು ಬೆಡಾ