ರಾಜಸ್ಥಾನದ ಜುಂಝುನು ಜಿಲ್ಲೆಯ ಮೆಹರಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದದಾಸಪುರ ಗ್ರಾಮದಲ್ಲಿ ದಲಿತ ವರನ ಕುದುರೆ ಮೆರವಣಿಗೆ ಭಾರೀ ಭದ್ರತೆ ನೀಡಲಾಗಿತ್ತು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಕೈನಲ್ಲಿ ಹಿಡಿದಿದ್ದ ವರ ರಾಕೇಶ್ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದಾಗ, ಗ್ರಾಮದಲ್ಲಿ ಅವರಿಗೆ ರಕ್ಷಣೆ ನೀಡಲು ರ್ಯಾಪಿಡ್ ಆಕ್ಷನ್ ಫೋರ್ಸ್ ಮತ್ತು ಪೊಲೀಸ್ ಇಲಾಖೆಯ 60 ಕ್ಕೂ ಹೆಚ್ಚು ಸಿಬ್ಬಂದಿ ಕಾವಲು ಕಾಯುತ್ತಿದ್ದರು.
“ಬಾರಾತ್ (ವರನ ಕುದುರೆ ಸವಾರಿ) ಮೆರವಣಿಗೆಗಾಗಿ ಕುದುರೆಯ ಮೇಲೆ ಕುಳಿತರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ರಾಕೇಶ್‌ಗೆ ಬೆದರಿಕೆ ಹಾಕಲಾಗಿದೆ ಎಂದು ದೂರು ಬಂದಿದೆ ಎಂದು ಮೆಹರಾ ಪೊಲೀಸ್ ಠಾಣೆಯ ಉಸ್ತುವಾರಿ ಭಜನ್‌ರಾಮ್ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಧಾವಿಸಿ ರಾಕೇಶ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೆಲವರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.
ರಾಕೇಶ್ ಮತ್ತು ಅವರ ಕುಟುಂಬಕ್ಕೆ ಗ್ರಾಮದ ಕೆಲವು ಯುವಕರು ಕುದುರೆಯ ಮೇಲೆ ಕುಳಿತುಕೊಳ್ಳದಂತೆ ಬೆದರಿಕೆ ಹಾಕಿದರು. ನಂತರ ರಾಕೇಶ್ ಅವರ ಕುಟುಂಬವು ಪೊಲೀಸರಿಗೆ ಈ ವಿಷಯವನ್ನು ವರದಿ ಮಾಡಿತು. ಗ್ರಾಮದ ಅರ್ಧ ಡಜನ್‌ಗೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ರಾಕೇಶ್ ಅವರ ಬಾರಾತ್ ಅನ್ನು ಹೊರಗೆ ಕರೆದೊಯ್ಯುವಾಗ ಮೆಹರಾ, ಖೇತ್ರಿ, ಖೇತ್ರಿ ನಗರ ಮತ್ತು ಬಬಾಯಿ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿತ್ತು. ಪೊಲೀಸ್ ಸಿಬ್ಬಂದಿಯಲ್ಲದೆ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ವಿಕಾಸ್ ಆಲ್ಹಾ ಮತ್ತು ರಾಜ್ಯ ಕಾರ್ಯದರ್ಶಿ ರವಿ ಮರೋಡಿಯಾ ಗ್ರಾಮದಲ್ಲಿ ಹಾಜರಿದ್ದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಪ್ರಬಲ ಜಾತಿಯ ನೆರೆಹೊರೆಯ ಮೂಲಕ ಮದುವೆ ಮೆರವಣಿಗೆ ಹೋಗುತ್ತಿದ್ದಾಗ ದಲಿತ ವರನನ್ನು ಕುದುರೆಯಿಂದ ಬಲವಂತವಾಗಿ ಕೆಳಗಿಳಿಸಿ ಕಲ್ಲುಗಳನ್ನು ಎಸೆಯಲಾಯಿತು. ಪೊಲೀಸ್ ಕಾನ್‌ಸ್ಟೆಬಲ್ ರಾಬಿನ್ ಸಿಂಗ್ ಡಿಸೆಂಬರ್ 11 ರಂದು ವಧುವಿನ ಮನೆಗೆ ಹೋಗುತ್ತಿದ್ದಾಗ ಪುರುಷರ ಗುಂಪೊಂದು ಕುದುರೆಯನ್ನು ಕಡಿವಾಣದಿಂದ ಹಿಡಿದು ಬಲವಂತವಾಗಿ ಕೆಳಗಿಳಿಸಿತು ಎಂದು ಕುಟುಂಬವು ತನ್ನ ದೂರಿನಲ್ಲಿ ಆರೋಪಿಸಿದೆ.
ಅವರು ಕಲ್ಲುಗಳನ್ನು ಎಸೆದು ಮದುವೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಕಿರುಕುಳ ನೀಡಿದರು. ಆರೋಪಿಗಳು ಸಂಗೀತ ವ್ಯವಸ್ಥೆಯನ್ನು ಸಹ ಹಾನಿಗೊಳಿಸಿ, ಕಲ್ಲು ತೂರಾಟದಲ್ಲಿ ಡಿಜೆ ಗಾಯಗೊಂಡರು ಎಂದು ವರನ ತಂದೆ ನಂದ್ರಮ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ‘ಟರ್ಬನ್ ತೆಗೆಸಿ ಕಸದ ಬುಟ್ಟಿಗೆ ಎಸೆದರು..’; ಅಮೆರಿಕ ಬಂಧನ ಶಿಬಿರದಲ್ಲಿನ ಚಿತ್ರಹಿಂಸೆ ಬಗ್ಗೆ ವಿವರಿಸಿದ ಸಿಖ್ ವ್ಯಕ್ತಿ


