Homeಪುಸ್ತಕ ವಿಮರ್ಶೆಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ.

- Advertisement -
- Advertisement -

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಆರಂಭವಾದ ತೊಂಭತ್ತರ ದಶಕ ಬೌದ್ಧಿಕ ಚಿಂತನೆಯ ದೃಷ್ಟಿಯಿಂದಲೂ ಮಹತ್ವದ ಕಾಲಘಟ್ಟ. ಹಾಗೆಯೇ ಎಂಭತ್ತರ ದಶಕದ ನಂತರ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ವಸಾಹತೋತ್ತರ ಚಿಂತನೆಗಳು ಡಾಳಾಗಿ ಕಾಣಿಸಿಕೊಳ್ಳತೊಡಗಿದವು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಬೌದ್ಧಿಕ ನಿರ್ವಸಹತೀಕರಣದ ಪರಿಕಲ್ಪನೆ ಕಾಣಿಸಿಕೊಂಡದ್ದು ಈ ಹಂತದಲ್ಲಿಯೇ. ಹಾಗೆ ನೋಡಿದರೆ ಆಫ್ರಿಕಾದ ಚಿಂತಕ ಥಿಯಾಂಗೊ ಗೂಗಿಯ ನಿರ್ವಸಹತೀಕರಣ ಚಿಂತನೆಯನ್ನು ರಹಮತ್ ತರೀಕರೆಯವರು ಸಂಗ್ರಹರೂಪದಲ್ಲಿ ತಂದದ್ದು ಬಹುಶಃ ಮೊದಲ ಪ್ರಯತ್ನಗಳಲ್ಲೊಂದು.

ಇಂಥ ಬೌದ್ಧಿಕ ನಿರ್ವಸಹತೀಕರಣದ ಯತ್ನ ಭಾರತೀಯ ಭಾಷೆಗಳಲ್ಲಿ ಎರಡು ನೆಲೆಯಲ್ಲಿ ಆಗಬೇಕಿತ್ತು. ಭಾಷಿಕವಾಗಿ ಪ್ರಾದೇಶಿಕ ಭಾಷೆಗಳು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಚಿಂತನೆಯಿಂದ ಮುಕ್ತವಾಗಿ ತನ್ನದೆ ಆದ ಚಿಂತನಾ ಪರಂಪರೆಯನ್ನು ಕಂಡುಕೊಳ್ಳಬೇಕಾಗಿತ್ತು. ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆ ನಮ್ಮಲ್ಲಿ ಕಾಣಿಸಿಕೊಂಡದ್ದು ಈ ಹಿನ್ನೆಲೆಯಲ್ಲಿ. ಹಾಗೆಯೇ ಡಿ ಎನ್ ಶಂಕರಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಕೂಡ ಈ ಚಿಂತನೆಯ ಆದ್ಯ ಕೃತಿಗಳಲ್ಲೊಂದು ಎಂಬುದನ್ನು ಮರೆಯುವಂತಿಲ್ಲ.

ಕನ್ನಡದ ಸಾಹಿತ್ಯ ಮೀಮಾಂಸೆಯೆಂದರೆ ಅದೊಂದು ಅಸ್ಮಿತೆಯ ಹುಡುಕಾಟದ ಮಹಾಯಾನ. ಅಥವಾ ಬೇರೊಂದು ಮಾತಿನಲ್ಲಿ ಅದನ್ನು ಬಿಡುಗಡೆಯ ಕಥನವೆಂದು ಕರೆಯಬಹುದು. ರಹಮತ್ ತರೀಕೆರೆಯವರು ಕನ್ನಡ ಸಾಹಿತ್ಯ ಮೀಮಾಂಸೆಯನ್ನು ವ್ಯಾಖ್ಯಾನಿಸುವುದು ಗಮನಾರ್ಹವಾದದ್ದು. ಅವರ ದೃಷ್ಟಿಯಲ್ಲಿ ಸಾಹಿತ್ಯದ ಹುಟ್ಟಿನ ಪ್ರೇರಣೆಗಳು, ಅದು ಸೃಷ್ಟಿಯಾಗುವ ಕ್ರಮಗಳು, ಅಭಿವ್ಯಕ್ತಿಯಾಗುವ ಪ್ರಕಾರಗಳು, ಅದು ಭಾಷೆಯನ್ನು ಬಳಸುವ ವಿಧಾನ, ಅನುಸರಿಸುವ ಶೈಲಿ, ಅದನ್ನು ಅನುಸಂದಾನ ಮಾಡುವ ಜನ ಮತ್ತು ಸಂಸ್ಥೆಗಳು, ಸಮಾಜದ ಮೇಲಾಗುವ ಪರಿಣಾಮ ಇವೆಲ್ಲವನ್ನು ಕುರಿತ ತಾತ್ವಿಕ ಚಿಂತನೆಯ ಸಾಹಿತ್ಯ ಮೀಮಾಂಸೆಯಾಗಿದೆ. ಅದು ಒಂದು ಭಾಷಿಕ ಸಮುದಾಯವು ಕಾಲಕಾಲಕ್ಕೆ ಪಟ್ಟ ಪಾಡುಗಳ ಮೂಲಕ ಹಾದು ಬಂದ ಕಥನವಾಗಿದೆ.

ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸುವ ಪ್ರಯತ್ನಗಳು ಹಲವು ರೀತಿಯಲ್ಲಿ ಆಗಿವೆ. ಬೇಂದ್ರೇ ಕುರ್ತಕೋಟಿಯವರಲ್ಲಿ ಪಾಶ್ಚಾತ್ಯ ಸಾಹಿತ್ಯ ಚಿಂತನೆಯ ಕುರಿತು ಸಮರ್ಥನೀಯ ನಿರಾಕರಣೆಯಿದೆ. ಆದರೆ ಭಾರತೀಯ ಕಾವ್ಯ ಮೀಮಾಂಸೆಯ ಕುರಿತು ಇಂಥ ನಿರಾಕರಣೆ ಕಾಣುವುದಿಲ್ಲ. ಆದರೆ ಎಂಭತ್ತರ ದಶಕದ ನಂತರದ ಕನ್ನಡ ಸಾಹಿತ್ಯ ಚಿಂತನೆಯಲ್ಲಿ ಕೆ.ವಿ.ನಾರಾಯಣ, ಡಿ.ಆರ್. ನಾಗರಾಜ್, ನಟರಾಜ್ ಬೂದಾಳ್, ರಹಮತ್ ತರೀಕೆರೆಯವರು ಸಂಸ್ಕೃತ ಮತ್ತು ಪಾಶ್ಚಾತ್ಯ ಮೀಮಾಂಸೆಗಳೆರಡು ನಮ್ಮ ಚಿಂತನೆಗಳನ್ನು ಹೇಳಲಾರವು ಎಂಬ ನಿಲುವಿಗೆ ಬರುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆಯ ಯಜಮಾನಿಕೆಯ ರಸದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ. ಆನಂದದ ಅನುಸಂಧಾನದ ವೈದಿಕ ಪರಿಕಲ್ಪನೆಯಾದ ರಸಕ್ಕೆ ವಿರುದ್ಧವಾಗಿ ದುಃಖಾನುಸಂಧಾನವನ್ನು ಹೇಳಿಕೊಟ್ಟ ಬೌದ್ಧ ಮೀಮಾಂಸೆಯನ್ನು ಮಂಡಿಸುತ್ತಾರೆ. ಹಾಗೆಯೇ ಏಕರಸದ ಸರಳ ಸ್ಥಿತಿಯ ಚಿಂತನೆಗೆ ರ‍್ಯಾಯವಾಗಿ ಜೈನ ಚಿಂತನೆಯಾದ ಅನೇಕಾಂತವಾದವನ್ನು ಹಾಗೂ ಅರಿವಿನ ಅನುಸಂಧಾನದ ವಚನ ಚಿಂತನೆಯನ್ನು ಮುನ್ನೆಲೆಗೆ ತರುತ್ತಾರೆ.

ಹೀಗೆ ಕನ್ನಡ ಸಾಹಿತ್ಯ ಮೀಮಾಂಸೆಯೆಂಬುದು ಬಹುಮುಖಿ ನೆಲೆಗಳಲ್ಲಿ ಕಟ್ಟಲ್ಪಡುತ್ತಿರುವ ಸಂದರ್ಭದಲ್ಲಿ ಡಾ.ರವಿಕುಮಾರ್ ನೀಹ ಅವರ ‘ದಲಿತ ಸಾಹಿತ್ಯ ಮೀಮಾಂಸೆ’ ಕೃತಿ ಪ್ರಕಟವಾಗಿದೆ. ಈ ಕೃತಿ ಕೆಲವು ಮುಖ್ಯ ಕಾರಣಗಳಿಂದ ಮುಖ್ಯವಾಗಿ ಕಾಣುತ್ತದೆ. ಈ ಕೃತಿಯಲ್ಲಿ ಇರುವ ಸೈದ್ಧಾಂತಿಕ ಸ್ಪಷ್ಟತೆಗಾಗಿ ಮಹತ್ವದ್ದಾಗಿ ಪರಿಗಣಿಸಬೇಕಾಗಿದೆ. ಕನ್ನಡ ಸಾಹಿತ್ಯ ಮೀಮಾಂಸೆಗೆ ಪರ್ಯಾಯವಾಗಿ ದಲಿತ ಸಾಹಿತ್ಯ ಮೀಮಾಂಸೆ ಹುಟ್ಟಿಕೊಂಡಿದೆ ಎಂಬ ನಿಲುವು ಈ ಅಧ್ಯಯನದಲ್ಲಿ ಇಲ್ಲ. ದಲಿತ ಸಾಹಿತ್ಯ ಮೀಮಾಂಸೆಯು ಕನ್ನಡ ಸಾಹಿತ್ಯ ಮೀಮಾಂಸೆಯ ಒಂದು ಭಾಗವೇ ಆಗಿದ್ದೂ, ಅದರ ಒಂದು ವಿಶಿಷ್ಟ ಭಾಗವಾಗಿ ರೂಪುಗೊಂಡಿದೆ ಎಂಬ ನಿಲುವು ಅವರಲ್ಲಿದೆ. ಹಾಗೆಯೆ ದಲಿತರ ಸಾಮಾಜಿಕ ಬದುಕು, ಸೌಲಭ್ಯ, ಕಸುಬು, ಅಭಿವ್ಯಕ್ತಿ, ಆಲೋಚನೆ, ಅನುಭವ, ಬಹುಮುಖತೆ, ಮೂಲಕವೇ ಮೀಮಾಂಸೆಯನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವರದು. ಜೊತೆಗೆ ದಲಿತ ಮೀಮಾಂಸೆಯೆನ್ನುವುದು ಒಂದು ಲೋಕದೃಷ್ಟಿಯಾದ್ದರಿಂದ ಬದುಕಿನ ವಿನ್ಯಾಸಗಳು ಬದಲಾದ ಹಾಗೆ ಲೋಕವನ್ನು ನೋಡುವ ನೋಟಕ್ರಮವು ಬದಲಾಗಬೇಕಾದದ್ದು ಸಹಜ ಹಾಗೂ ಅನಿವಾರ್ಯ ನಂಬಿಕೆ ಇಲ್ಲಿಯದು. ತಳವೂರಿದ ಕುರುಬ ಕಟುಕನಾದ ಎನ್ನುವ ನಿಸಾರರ ಕವನದ ಸಾಲು ಹೇಳುವುದು ಇದನ್ನೇ. ಯಾವುದೇ ಚಿಂತನೆ ಎಲ್ಲ ಕಾಲಕ್ಕೂ ಶಾಶ್ವತ ಮತ್ತು ಸಾರ್ವತ್ರಿಕ ಮತ್ತು ತ್ರಿಕಾಲಾ ಭಾದಿತ ಚಿಂತನೆಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ್ದಾಗಿದೆ.

ಡಾ.ರವಿಕುಮಾರ್ ನೀಹ

ದಲಿತ ಸಾಹಿತ್ಯ ಮೀಮಾಂಸೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ದಲಿತ’ ಪದ ಪಡೆದ ಹಲವು ಅರ್ಥ ಸ್ವರೂಪವನ್ನು ಗುರುತಿಸುವ ಕೆಲಸವನ್ನು ಕೃತಿ ಮಾಡಿದೆ. ಆರಂಭದಲ್ಲಿದ್ದ ಹಸಿವಿನ ಪ್ರಶ್ನೆ, ಅವಮಾನದ ಪ್ರಶ್ನೆಯನ್ನು ಹಾದು ಈಗ ಅಸ್ಮಿತೆಯ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ವಿಶ್ಲೇಷಿಸಿದೆ. ಹಾಗೆಯೆ ದಲಿತ ಸಾಹಿತ್ಯ ಮೀಮಾಂಸೆಯ ಪರಂಪರೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಆರಂಭವನ್ನು ಡಿ ಆರ್ ನಾಗರಾಜ್ ಅವರ ಪ್ಲೇಮಿಂಗ್ ಪೀಟ್ ಕೃತಿಯ ಮೂಲಕ ಗುರುತಿಸುತ್ತದೆ. ನಂತರದ ಕಾಲಘಟ್ಟದಲ್ಲಿ ದೇವಯ್ಯ ಹರವೆ, ಪ್ರೊ.ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ್, ಬಿ.ಎಂ. ಪುಟ್ಟಯ್ಯನವರು ವಿಸ್ತರಿಸಿದ ಪರಂಪರೆಯನ್ನು ವಿಸ್ತರಿಸಿದೆ. ಆದರೆ ಇಲ್ಲಿ ವಿಶ್ಲೇಷಿಸುವ ಕ್ರಮ ಎಂಭತ್ತರ ದಶಕದ ದಲಿತ ಸಾಹಿತ್ಯಕ್ಕೆ ಸೀಮಿತಗೊಂಡಿರುವುದು ಗಂಭೀರವಾದ ಮಿತಿಯೆನಿಸುತ್ತದೆ. ದಲಿತ ಸಾಹಿತ್ಯ ಆರಂಭವಾಗುವ ಮೊದಲಿನ ಲಿಖಿತ ಮತ್ತು ಮೌಖಿಕ ಪರಂಪರೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆ ಕೃತಿಯ ವ್ಯಾಪ್ತಿ ಹೆಚ್ಚುತ್ತಿತ್ತು. ಇಂದಿನ ದಲಿತ ಸಾಹಿತ್ಯ ಸಾಮಾಜಿಕ ಕ್ರೋಧದ ಮಾದರಿಯ ಜೊತೆಗೆ ಆಧ್ಯಾತ್ಮಿಕ ಹುಡುಕಾಟದ ಮಾದರಿಯನ್ನು ಸಹ ತೀವ್ರವಾಗಿ ಅಭಿವ್ಯಕ್ತಿಸುವುದರಿಂದ ಆಧ್ಯಾತ್ಮಿಕ ದಂಗೆಯ ನಾಯಕರಾದ ಮಂಟೇಸ್ವಾಮಿ, ಮಾದಪ್ಪನವರೆಗೆ ಈ ಪರಂಪರೆಯನ್ನು ವಿಸ್ತರಿಸುವ ಸಾಧ್ಯತೆಯಿತ್ತು.

ದಲಿತ ಸಾಹಿತ್ಯ ಮೀಮಾಂಸೆ ಇನ್ನೊಂದು ನೆಲೆಯಲ್ಲಿ ನನಗೆ ಮುಖ್ಯವೆನಿಸುತ್ತದೆ. ಈ ಮೀಮಾಂಸೆ ತನ್ನ ಸ್ವರೂಪದಲ್ಲಿಯೇ ಒಳಗೊಳ್ಳುವಿಕೆಯ ನೆಲೆಯನ್ನು(inclusive) ಒಳಗೊಂಡಿದೆ. ಹಾಗೆಯೇ ಪ್ರಖರ ರಾಜಕೀಯ ಚಿಂತನೆಯನ್ನು ತನ್ನ ಭಿತ್ತಿಯಾಗಿಸಿಕೊಂಡಿದೆ. ವೈಯಕ್ತಿಕವು ರಾಜಕೀಯವೇ ಆಗಿರುವ ಇಂದಿನ ಕಾಲಘಟ್ಟದಲ್ಲಿ ಸ್ಪಷ್ಟ ರಾಜಕೀಯ ಚಿಂತನೆಯನ್ನು ಹೊಂದಿರುವುದು ಅಗತ್ಯವಾಗಿದೆ. ಹಾಗೆಯೆ ದಲಿತ ಚಿಂತನೆಯೊಂದಿಗೆ ಬೆಸೆದುಕೊಂಡಿರುವ ಬೌದ್ಧದರ್ಶನವನ್ನು ಚರ್ಚಿಸುವುದರ ಮೂಲಕ, ಜೊತೆಗೆ ಅಲೆಮಾರಿಗಳು ಲೈಂಗಿಕ ಅಲ್ಪಸಂಖ್ಯಾತರು, ಬಿಕ್ಷುಕರ ಜಗತ್ತುಗಳ ಮೂಲಕ ಅನಾವರಣಗೊಳ್ಳುತ್ತಿರುವ ಕಲಾಲೋಕವನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿದೆ.

ಡಾ.ಪ್ರಕಾಶ್ ಬಡವನಹಳ್ಳಿ

ಈ ಕೃತಿಯ ಕುಲಕಥನ ಮೀಮಾಂಸೆ ನವೀನ ರೀತಿಯದ್ದಾಗಿದೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಚಲಿತವಾಗಿರುವ ಖಂಡಕಾವ್ಯಗಳಿಗಿಂತ ಭಿನ್ನವಾಗಿ ಕುಲಕಥನಗಳನ್ನು ನೋಡಬೇಕೆಂದು ಗಟ್ಟಿಯಾಗಿ ವಾದಿಸುತ್ತದೆ. ಈ ಕಾವ್ಯಗಳು ಸಾಮಾಜಿಕ ಆಕ್ರೋಶದ ಮಾದರಿಗಿಂತ ಭಿನ್ನವಾಗಿ ಸ್ವಾಭಿಮಾನ ಸಮಾನತೆಗಳನ್ನು ತಮ್ಮ ಕುಲಪುರಾಣಗಳಲ್ಲಿ ಹೆಕ್ಕಿ ತೆಗೆಯುವ ಮಾದರಿಯನ್ನು ಪಠ್ಯಗಳ ಮೂಲಕವೇ ವಿಶ್ಲೇಷಿಸುವ ಕ್ರಮ ಮಹತ್ವದ್ದಾಗಿದೆ. ಇಷ್ಟಾಗಿ ನಮ್ಮ ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ ಎಂಬ ಸೂಕ್ಷ್ಮತೆ ಇರುವ ದಲಿತ ಸಾಹಿತ್ಯ ಮೀಮಾಂಸೆ ಮಹತ್ವದ ಕೃತಿಯಾಗಿದೆ.

  • ಡಾ.ಪ್ರಕಾಶ್ ಬಡವನಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...