Homeಪುಸ್ತಕ ವಿಮರ್ಶೆಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

ಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

- Advertisement -
- Advertisement -

ಗುರುಪ್ರಸಾದ್ ಕಂಟಲಗೆರೆಯವರು ಮೂಲತಃ ಕವಿ-ಕತೆಗಾರ. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಣೆಯಾದ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ಪ್ರಕಟವಾಗುವುದರ ಮೂಲಕ ಒಬ್ಬ ಸಂಶೋಧಕ, ವಿಮರ್ಶಕನಾಗಿ ಈ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಗುರುಪ್ರಸಾದ್ ದಲಿತ ಸಾಹಿತ್ಯವನ್ನು ಮರುವ್ಯಾಖ್ಯಾನ ಮಾಡುವುದನ್ನು ಗೌಣಗೊಳಿಸಿ, ನೆಲಮೂಲದವರಾದ ಮಾದಿಗ ಸಮುದಾಯವನ್ನು ಹೇಗೆ ಗ್ರಹಿಸಬಹುದೆಂಬುದನ್ನು ಮೌಖಿಕವಾಗಿ ದೊರೆಯುವ ಸಂಕಥನಗಳನ್ನು ಸಂಗ್ರಹಿಸಿ, ಅವನ್ನು ಸಮಕಾಲೀನ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಹೇಗೆ ಮುಖಾಮುಖಿಯಾಗಬಲ್ಲವು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ.

ದಲಿತರ ಸಾಂಸ್ಕೃತಿಕ ಲೋಕದ ಕಥನಗಳನ್ನು ಜನಪದ ವಾಙ್ಮಯದಲ್ಲಿರುವ, ಅದರಲ್ಲೂ ಮಾದಾರ ಸಮುದಾಯದಲ್ಲಿರುವ ಮತ್ತು ಜನಪದ ಹಾಗೂ ಸಾಂಸ್ಕೃತಿಕ ಆಚರಣೆಗಳ ಒಳಗಿರುವ ದಲಿತರ ಅಸ್ಮಿತೆಗಳನ್ನು ಇತ್ತೀಚಿನ ದಿನಗಳಲ್ಲಿ ತೀವ್ರತರವಾಗಿ ಶೋಧಿಸುವ ಕೆಲಸ ಈಗಿನ ಯುವ ಸಂಶೋಧಕರಿAದ ಬಹಳ ಅರ್ಥಪೂರ್ಣವಾಗಿ ಜರುಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ರೂಪುಗೊಂಡ ಕೃತಿಯೇ ಕಂಟಲಗೆರೆ ಗುರುಪ್ರಸಾದ್ ಅವರ ‘ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ’. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ದಲಿತ ಅಧ್ಯಯನಗಳ ಅಡಿಯಲ್ಲಿ ಇದು ಪ್ರಕಟವಾಗಿದೆ. ತುಮಕೂರು ಜಿಲ್ಲೆಯ ದಲಿತರ ಬದುಕಿನ ಪರಂಪರೆಯ ಎಲ್ಲಾ ಮಗ್ಗುಲುಗಳನ್ನು ತಳಸ್ಪರ್ಶಿಯವಾಗಿ ಶೋಧಿಸಿ ಕಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಆಕರ ಕೃತಿಯಾಗಿ ನಿಲ್ಲಬಲ್ಲದು.

‘ದಲಿತ’ ಪದ, ದಲಿತರ ಉಗಮ ವಿಕಾಸ, ಬದುಕಿನ ವಿನ್ಯಾಸ, ದಲಿತ ಚಳವಳಿಯಲ್ಲಿ ಕಂಡುಂಡ ವೈಫಲ್ಯಗಳು-ಸಾಫಲ್ಯಗಳು, ‘ದಲಿತ’ ಪದ ಇಂದು ವಿಸ್ತೃತಗೊಳ್ಳುತ್ತಿರುವ ಆರ್ದ್ರತೆ, ಅವುಗಳಲ್ಲೇ ಮುಂದುವರೆದಿರುವ- ಹಿಂದುಳಿದಿರುವ(ಸ್ಪೃಶ್ಯ-ಅಸ್ಪೃಶ್ಯ) ಜಾತಿಗಳಲ್ಲಿ ತಮ್ಮ ತಮ್ಮ ಐಡೆಂಟಿಗಳ ಹುಡುಕಾಟ, ಅಸ್ತಿತ್ವದ ಪ್ರಶ್ನೆ ಎದುರಾದಾಗ ರಾಜಕೀಯಾತ್ಮಕ ಮೇಲಾಟಗಳು ಜರುಗಿ, ಮತ್ತೊಂದು ಜಾತಿಯ ಮೇಲೆ ಸಣ್ಣದಾದ ಅಸೂಯೆ- ಸಂಘ಼ರ್ಷದಿಂದಾಗಿ ಆಗುತ್ತಿರುವ ಮೂಲದ ಆಶಯ-ಧ್ಯೇಯೋದ್ದೇಶಗಳಿಗೆ ಬಹು ದೊಡ್ಡ ಪೆಟ್ಟಾಗಿರುವುದನ್ನು ಅದರಲ್ಲೇ ಇಂದಿನವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಚಿಂತಕರು ವಿಷಾದವನ್ನು ತಳೆಯುತ್ತಿರುವುದನ್ನು ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಹೋರಾಟದ ಸಾಂಘಿಕ ಫಲದಲ್ಲಿ ಒಂದೆರಡು ಜಾತಿಗಳು ಮಾತ್ರ ಲಾಭ ಹೊಂದಿವೆ ಎಂಬುದನ್ನು ಮನಗಂಡ ಯುವಪೀಳಿಗೆ ಒಳಮೀಸಲಾತಿ ಮತ್ತು ಈಗಾಗಲೇ ಅದರ ನಷ್ಟದಿಂದ ಅರಿವಿರುವ ಕಾರಣದಿಂದ ಸರ್ಕಾರಕ್ಕೆ ಮನವರಿಕೆ ಮಾಡಿ ಸದಾಶಿವ ಆಯೋಗ ವರದಿಯನ್ನು ತಯಾರಿಸಿ, ಸರ್ಕಾರದ ಮಡಿಲಲ್ಲಿದ್ದರೂ ಅದು ಜೀವಪಡೆಯದೇ ಅನಾಥವಾಗುವುದರ ಜೊತೆಗೆ ದೀರ್ಘದಿಂದ ಶೋಷಿತ ಜನಾಂಗ ಮತ್ತೆ ನೋವಿಗೆ ತಳ್ಳಿರುವುದು ಆಘಾತ ತರಿಸಿದೆ. ಇದರ ಹೋರಾಟಗಳು ನಡೆಯುತ್ತಿದ್ದರೂ ಇದೊಂದು ರಾಜಕೀಯದ ದಾಳವಾಗಿರುವುದಂತೂ ಸತ್ಯವೆಂಬುದನ್ನು ಗುರುಪ್ರಸಾದ್ ಚರ್ಚಿಸಿದ್ದಾರೆ.

ಗುರುಪ್ರಸಾದ್ ಅವರು ಸಮುದಾಯದಲ್ಲಿ ಮೌಖಿಕವಾಗಿರುವ ದಲಿತರ ಸಾಂಸ್ಕೃತಿಕ ಸಂಕಥನಗಳನ್ನು ಕ್ಷೇತ್ರಕಾರ್ಯದ ಮೂಲಕ ಪ್ರಶ್ನಾವಳಿ ರೂಪಿಸಿಕೊಂಡು ವಕ್ತೃ-ಹಾಡುಗಾರರೊಟ್ಟಿಗೆ ಸಂವಾದಿಸಿ, ತಮಗೆ ಬೇಕಾದುದನ್ನು ಪಡೆದು, ಕಳೆದುಹೋಗುವುದನ್ನು ಅಕ್ಷರರೂಪಕ್ಕೆ ತಂದಿರುವುದು ಮೆಚ್ಚತಕ್ಕದ್ದು. ಮಾದಿಗರ ಸೃಷ್ಟಿಮೂಲದ ಸಂಕಥನಗಳನ್ನು ಭಿನ್ನ ಪ್ರದೇಶಗಳಲ್ಲಿ ದೊರೆತಿರುವ ಭಿನ್ನಪಠ್ಯಗಳನ್ನು ಶೋಧಿಸಿರುವ ಗುರುಪ್ರಸಾದ್ ಚೌಡಿಕೆಯಲ್ಲಯ್ಯ ಹೇಳಿದ ಸಂಕಥನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ದಕ್ಕಲಿಗರು ಕರ್ತೃ ಜಾನಕಲ್ ರಾಜಣ್ಣನವರು ಹೇಳಿದ ಸೃಷ್ಟಿಮೂಲದ ಬಗೆಗೆ ಇರುವ ವ್ಯತ್ಯಾಸವನ್ನು ಗುರುತಿಸುವುದನ್ನು ಕೃತಿಯಲ್ಲಿ ಕಾಣಬಹುದು.

‘ದಲಿತ’ ಪದದ ಒಳಗಿರುವ ಸಿಕ್ಕು, ಅದರೊಳಗೆ ಪಡೆಯುತ್ತಿರುವ ಸೌಲಭ್ಯಗಳು, ನಿಜವಾದ ದಲಿತರು ಯಾರು? ದಲಿತತ್ವ ಎಂದರೆ ಏನು? ಎಂಬುದನ್ನು ತಮ್ಮ ಅಭಿಪ್ರಾಯದೊಂದಿಗೆ ಅಂಬೇಡ್ಕರ್, ಕೆ.ಬಿ. ಸಿದ್ದಯ್ಯ ಅವರ ಆಲೋಚನೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ದಲಿತ ಅಂದರೆ ಡಿಪ್ರೆಸ್ಡ್ ಅನ್ನುವ ಇಂಗ್ಲಿಷ್ ಪದವಿದ್ದು, ಅದನ್ನೆ ತುಳಿತಕ್ಕೆ ಒಳಗಾದವರೆಲ್ಲರೂ ಸಮಾನ ದುಃಖಿಗಳೆಂಬುದನ್ನು ಚರ್ಚಿಸಿದ್ದಾರೆ. ದಲಿತರಲ್ಲಿ ಸ್ಪೃಶ್ಯ ಅಸ್ಪೃಶ್ಯರು ನಿರ್ಮಾಣಗೊಂಡು ಅದರ ಲಾಭವನ್ನು ಅಧಿಕವಾಗಿ ಸ್ಪೃಶ್ಯರೇ ಪಡೆಯುವ ಆತಂಕಕಾರಿ ಚಿತ್ರಣವನ್ನು ವಿಶ್ಲೇಶಿಸುವುದಾಗಿದೆ. ಆದರೆ ಇಂದು 101 ಜಾತಿಗಳ ಸಾಂಘಿಕ ಸಂಘಟನೆಯ ನೆಲೆಯೊಳಗೆ ಒಡಕು ಬಂದು ತಮ್ಮ ಅಸ್ಮಿತೆಗಳ ಹುಡುಕಾಟ ಶುರುವಾಗಿದೆ.

ಮೂಲದ ಪುರಾಣ ಸಂಕಥನಗಳು ತಿರುಚುವ ಪ್ರಯತ್ನ ನಿರಂತರವಾಗಿ ನಡೆದಿದೆ. ಸಂಕಥನಗಳಲ್ಲಿ ಭಿನ್ನ ಪಠ್ಯಗಳು ಹೇಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ನಿಂತು ಮಾತಾಡುತ್ತವೆಂಬುದನ್ನು ಗುರುಪ್ರಸಾದ್ ಗುರುತಿಸಿದ್ದಾರೆ. ನೆಲಮೂಲದವರು ಯರ‍್ಯಾರೆಂಬುದು ಜಿಜ್ಞಾಸೆ ವ್ಯಕ್ತವಾಗುತ್ತಿರುವ ಇದೇ ಸಂದರ್ಭದಲ್ಲಿ ಆದಿಜಾಂಬವರು, ಯಾದವರು ನೆಲ ಸಂಸ್ಕೃತಿಯನ್ನು ಸಾರುವ ವಕ್ತಾರರೆನಿಸಿದ್ದಾರೆಂಬುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ಕುರುಬರು, ಕುಂಚಿಟಿಗರು, ಮ್ಯಾಸಬೇಡರು ಕುಲ(ಪಂಗಡ)ಗಳಲ್ಲಿ ಹಲವು ಸಾಮ್ಯತೆಗಳಿವೆಯೆಂದರೆ ಈ ಸಮುದಾಯಗಳೆಲ್ಲವೂ ಈ ನೆಲಮೂಲದವರು, ಒಂದೇ ಸಂಸ್ಕೃತಿಯ ವಕ್ತಾರರೆಂಬುದನ್ನು ಅರಿಯಬಹುದು.

ಕೃತಿಯ ಎರಡನೆಯ ಹಂತದಲ್ಲಿ ಸಂಶೋಧಕರು ಆರು ದಲಿತರೊಟ್ಟಿಗೆ ಸಂವಾದಿಸುತ್ತಾರೆ. ಇವರೆಲ್ಲರೂ ಭಿನ್ನ ನೆಲೆಯಲ್ಲಿ ಬದುಕುತ್ತಿರುವವರು, ಆಲೋಚಿಸುತ್ತಿರುವವರು. ಲೇಖಕರ ಮೂಲ ಆಶಯವಿರುವುದು ಗ್ರಾಮ್ಯದ ಸ್ಥಳೀಯ ಹಂತದಿಂದ ರಾಜ್ಯಮಟ್ಟದ ಹೋರಾಟಗಾರರಲ್ಲಿ, ಚಿಂತಕರಲ್ಲಿ ದಲಿತತ್ವದ ನಿಲುವು ಹೇಗಿದೆ, ಅದರಲ್ಲೂ ಮಾದಿಗರ ಬದುಕಿಗೆ ಹೊಸ ಆಯಾಮವನ್ನು ಕೊಡುವ ದಾರಿ ಯಾವುದೆಂಬುದನ್ನು ಚರ್ಚಿಸುವುದು ಇಲ್ಲಿ ಮುಖ್ಯವಾಗಿದೆ. ಅವರ ಎಲ್ಲಾ ನಿಲುವುಗಳನ್ನು ಒಂದೆಡೆ ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ.

‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿಯು ಮೇಲ್ನೋಟದಲ್ಲಿ ಹಲವು ಹಂತಗಳಲ್ಲಿ ರೂಪುಗೊಂಡಿದೆ. ಅವಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಪುರಾಣದ ಕಥನಗಳಲ್ಲಿ ಮಾದಿಗರ ಪ್ರಾಮುಖ್ಯತೆ ಹಾಗೂ ಪರಂಪರೆ ಹೇಗೆ ನಯವಾಗಿ ಅದನ್ನು ವಂಚಿಸಿದೆಂಬುದನ್ನು ಗ್ರಹಿಸುವುದು.

2. ಕಂಚಿ ಫರ್ಮಾನ್‌ನಲ್ಲಿರುವ ಎಡಗೈ ಜನಾಂಗಕ್ಕಿರುವ ಸಾಂಸ್ಕೃತಿಕ ಬಿರುದಾವಳಿಗಳು, ಅಲ್ಲಿಯೂ

ಬಲಗೈಯೊಂದಿಗೆ ಸಂಘರ್ಷವಾದರೂ ಪೂರ್ವದ ಶ್ರೇಷ್ಠತೆಯಿಂದ ಮತ್ತೆ ಪಾರಮ್ಯ ಮೆರೆಯುವಿಕೆ.

3. ದಲಿತರ ಪ್ರಸ್ತ್ತುತ ಬದುಕಿನ ಆಯಾಮಗಳು, ‘ದಲಿತ’ ಪದದ ಮರುಚಿಂತನೆಯಲ್ಲಿ ಒಳಮೀಸಲಾತಿ

ಕೂಗು ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ.

4. ಸಾಹಿತ್ಯದ ಚರಿತ್ರೆಯಲ್ಲಿ ಮಾದಿಗರನ್ನು ಗೌಣಗೊಳಿಸಿ ಮಾಡಿದ ಅನ್ಯಾಯದ ವಿರುದ್ಧ ದನಿಯೆತ್ತುವಿಕೆ.

5. ದಲಿತರ ಭವಿಷ್ಯ ಹೇಗಿರಬೇಕು ಎಂಬ ಪರ್ಯಾಯ ದಲಿತ ಚಿಂತನೆಯಿದೆ.

6. ದಲಿತತನದ ಒಳಗಿರುವ ಭಿನ್ನ ಆಯಾಮಗಳು, ಜಾತಿಯೆಂಬ ಪದದ ಐಡೆಂಟಿಟಿಯ ಒತ್ತಾಸೆಗಳು,

ಅಸ್ಮಿತೆಯ ಹುಡುಕಾಟಗಳು.

ಗುರುಪ್ರಸಾದ್ ಅವರು ದಲಿತರ ಬದುಕಿನ ಸಮಗ್ರ ಚಿತ್ರಣದ ಬಗೆಗೆ ಆಲೋಚಿಸುತ್ತಲೇ, ಸಮಕಾಲೀನ ಬಿಕ್ಕಟ್ಟುಗಳ ಕಡೆಗೂ ಹೊರಳಿಕೊಳ್ಳುವುದರಿಂದ ಈ ಕೃತಿಯು ಎಲ್ಲಾ ಕಾಲಕ್ಕೂ ಮುಖಾಮುಖಿಯಾಗುವ ಸಾಮರ್ಥ್ಯವೊಂದಿದೆ. ಕೃತಿಯ ಸತ್ವ ಇರುವುದು ಪರಂಪರೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಮೌಖಿಕ ಕಥನಗಳ ಸಂಗ್ರಹ ಇದೆಯಲ್ಲ ಅದು ಇದುವರೆವಿಗೂ ಯಾರಿಂದಲೂ ಆಗದ್ದನ್ನು ಸಾಧಿಸಿದಂತಿದೆ. ಸಮುದಾಯದಲ್ಲಿ ಸಮೃದ್ಧವಾಗಿರುವ ಮೌಖಿಕ ಕಥನಗಳನ್ನು ಈಗ ಹೇಳುವ ಕೊಂಡಿಗಳು ಇಲ್ಲವಾಗುತ್ತಿರುವ ಈ ಸಂದರ್ಭದಲ್ಲಿ ದಲಿತರಿಗೆ, ಅದರಲ್ಲೂ ‘ಮಾದಿಗ’ ಜನಾಂಗಕ್ಕೆ ಕೃತಿ ಬೈಬಲ್ ಎಂದೇ ಹೇಳಬಹುದು.

-ಡಾ.ಕೆ.ವಿ.ಮುದ್ದವೀರಪ್ಪ, ತುಮಕೂರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...