ಕಳೆದ ವಾರ ರಾಜ್ಯ ಪೊಲೀಸರು ಬಂಧಿಸಿದ ರೈತರನ್ನು ವಿವಿಧ ಜೈಲುಗಳಿಂದ ಬಿಡುಗಡೆ ಮಾಡಿದ ನಂತರ ಪಂಜಾಬ್ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಒಂದು ಲೋಟ ನೀರು ಕುಡಿದಿದ್ದರೂ ಅವರು ತಮ್ಮ ಅನಿರ್ದಿಷ್ಟ ಉಪವಾಸವನ್ನು ಕೊನೆಗೊಳಿಸಿಲ್ಲ ಎಂದು ರೈತ ನಾಯಕ ಅಭಿಮನ್ಯು ಕೊಹರ್ ಶನಿವಾರ ಹೇಳಿದ್ದಾರೆ.ಧೆ
ದಲ್ಲೆವಾಲ್ ನೀರು ಸ್ವೀಕರಿಸಿ ಉಪವಾಸ ಮುರಿದಿದ್ದಾರೆ ಎಂದು ಪಂಜಾಬ್ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಬಗ್ಗೆ ಪಂಜಾಬ್ ಸರ್ಕಾರದ ಹೇಳಿಕೆಗೆ ಪ್ರತಿಜ್ರಿಯಿಸಿರುವ ರೈತ ನಾಯಕ, “ಎಲ್ಲ ರೈತರ ಬಿಡುಗಡೆಯ ನಂತರವೇ ತಾನು ನೀರು ಕುಡಿಯುವುದಾಗಿ ದಲ್ಲೆವಾಲ್ ಸ್ಪಷ್ಟಪಡಿಸಿದ್ದಾರೆ” ಎಂದು ಕೊಹರ್ ಶನಿವಾರ ಹೇಳಿದರು.
“ರೈತ ನಾಯಕರನ್ನು ಬಿಡುಗಡೆ ಮಾಡಿದ ನಂತರ ದಲ್ಲೆವಾಲ್ ಒಂದು ಲೋಟ ನೀರು ಕುಡಿದಿದ್ದಾರೆ” ಎಂದು ದಲ್ಲೆವಾಲ್ ಅವರ ಆಪ್ತ ಸಹಾಯಕ ಕೊಹರ್ ಹೇಳಿದರು. “ದಲ್ಲೆವಾಲ್ ತಮ್ಮ ಅನಿರ್ದಿಷ್ಟ ಉಪವಾಸವನ್ನು ಕೊನೆಗೊಳಿಸಿದ್ದಾರೆ ಎಂಬ ತಪ್ಪು ಅಭಿಪ್ರಾಯವನ್ನು ನೀಡಲಾಗುತ್ತಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಅವರ ಉಪವಾಸ ಸತ್ಯಾಗ್ರಹ ಮುಂದುವರೆದಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾರ್ಚ್ 19 ರಂದು ಹರಿಯಾಣದ ಖಾನೌರಿ ಮತ್ತು ಶಂಭು ಗಡಿ ಬಿಂದುಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಚದುರಿಸಲಾಯಿತು; ಧರಣಿಯಿಂದಾಗಿ ನಿರ್ಬಂಧಿಸಲಾದ ರಸ್ತೆಗಳು ಮತ್ತು ಹೆದ್ದಾರಿಗಳನ್ನು ತೆರೆಯಲಾಯಿತು ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಪ್ರತಿಭಟನಾ ನಿರತ ರೈತರು ಮತ್ತು ಅವರ ಕೆಲವು ನಾಯಕರನ್ನು ಆ ದಿನ ಪಂಜಾಬ್ ಪೊಲೀಸರು ಬಂಧಿಸಿದರು.
ಮತ್ತೊಬ್ಬ ರೈತ ನಾಯಕ ಕಾಕಾ ಸಿಂಗ್ ಕೊಟ್ರಾ ಅವರು ಶನಿವಾರ ರೈತರ ಬಂಧನದ ಬಗ್ಗೆ ದಲ್ಲೆವಾಲ್‌ಗೆ ತಿಳಿದಾಗ, ಅವರೆಲ್ಲರನ್ನೂ ಬಿಡುಗಡೆ ಮಾಡುವವರೆಗೆ ನೀರು ತೆಗೆದುಕೊಳ್ಳಲು ನಿರಾಕರಿಸಿದರು ಎಂದು ಹೇಳಿದರು. ರೈತರ ಬಿಡುಗಡೆಯ ನಂತರ ಅವರು ನೀರು ಕುಡಿದರು ಎಂದು ಕೊಟ್ರಾ ಹೇಳಿದರು.
ದಲ್ಲೆವಾಲ್ (70) ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಜಂಟಿ ವೇದಿಕೆಯ ಹಿರಿಯ ನಾಯಕ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಒದಗಿಸಲು ಕಾನೂನುಬದ್ಧ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಸ್ವೀಕರಿಸಲು ಕೇಂದ್ರವನ್ನು ಒತ್ತಾಯಿಸಲು ಅವರು ಕಳೆದ ವರ್ಷ ನವೆಂಬರ್ 26 ರಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಜನವರಿಯಲ್ಲಿ ಕೇಂದ್ರವು ರೈತ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದ ನಂತರ, ದಲ್ಲೆವಾಲ್ ಖಾನೌರಿ ಪ್ರತಿಭಟನಾ ಸ್ಥಳದಲ್ಲಿ ವೈದ್ಯಕೀಯ ನೆರವು ಪಡೆಯಲು ಪ್ರಾರಂಭಿಸಿದರು. ಆದರೆ, ತಮ್ಮ ಉಪವಾಸವನ್ನು ಕೊನೆಗೊಳಿಸಲಿಲ್ಲ.
ಮಾರ್ಚ್ 19 ರಂದು ಪೊಲೀಸ್ ಕ್ರಮದ ಸಮಯದಲ್ಲಿ ಬಂಧಿಸಲ್ಪಟ್ಟ ಸರ್ವಾನ್ ಸಿಂಗ್ ಪಂಧೇರ್, ಅಭಿಮನ್ಯು ಕೊಹರ್, ಕಾಕಾ ಸಿಂಗ್ ಕೊತ್ರಾ ಮತ್ತು ಇತರ ನಾಯಕರು ಸೇರಿದಂತೆ ಹಲವಾರು ರೈತ ನಾಯಕರನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಪಂಧೇರ್ ಅವರನ್ನು ಮುಕ್ತ್ಸರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಕೊಹರ್, ಕೊತ್ರಾ ಮತ್ತು ಇತರ ಕೆಲವು ರೈತ ನಾಯಕರನ್ನು ಪಟಿಯಾಲ ಕೇಂದ್ರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ, ಅವರು ಶುಕ್ರವಾರ ಆಸ್ಪತ್ರೆಯಲ್ಲಿ ದಲ್ಲೆವಾಲ್ ಅವರನ್ನು ಭೇಟಿಯಾದರು.
ಮಾರ್ಚ್ 19 ರಂದು ಚಂಡೀಗಢದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕೇಂದ್ರ ನಿಯೋಗದೊಂದಿಗೆ ಸಭೆಯಿಂದ ಹಿಂತಿರುಗುತ್ತಿದ್ದಾಗ ರೈತ ನಾಯಕರನ್ನು ಬಂಧಿಸಲಾಯಿತು.
ರೈತರ ಬೇಡಿಕೆಗಳನ್ನು, ವಿಶೇಷವಾಗಿ ಎಂಎಸ್‌ಪಿ ಖಾತರಿಯನ್ನು ಚರ್ಚಿಸಲು ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ನಂತರ ನಿರ್ಗಮಿಸಿದ ರೈತರು ಮೊಹಾಲಿಯನ್ನು ಪ್ರವೇಶಿಸುತ್ತಿದ್ದಂತೆ, ಅವರನ್ನು ಭಾರೀ ಬ್ಯಾರಿಕೇಡ್ ಮೂಲಕ ಎದುರಿಸಲಾಯಿತು; ರೈತರ ಸಂಘದ ಕೆಲವು ನಾಯಕರನ್ನು ಬಂಧಿಸಲಾಯಿತು.
ಶಂಭು ಮತ್ತು ಖಾನೌರಿ ಗಡಿ ಬಿಂದುಗಳಿಂದ ಪೊಲೀಸರು ರೈತರನ್ನು ಹೊರಹಾಕಿ ತಾತ್ಕಾಲಿಕ ಟೆಂಟ್‌ಗಳನ್ನು ಕೆಡವಿದ್ದರು. ಶಂಭು-ಅಂಬಾಲ ಮತ್ತು ಸಂಗ್ರೂರ್-ಜಿಂದ್ ಹೆದ್ದಾರಿಗಳಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿತ್ತು.
ಶಂಭು ಮತ್ತು ಖಾನೌರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವಾರು ರೈತರು, ಟ್ರಾಲಿಗಳು ಸೇರಿದಂತೆ ತಮ್ಮ ವಸ್ತುಗಳು ಕಾಣೆಯಾಗಿವೆ ಎಂದು ಹೇಳಿಕೊಂಡಿದ್ದಾರೆ, ಅವುಗಳನ್ನು ಕದ್ದಿರಬಹುದು ಎಂದು ಹೇಳಿದ್ದಾರೆ.
‘ಗಾಂಧಿ’ ಹೆಸರಿಟ್ಟಿರುವ ‘ಮನರೇಗಾ ಯೋಜನೆ’ ಮೋದಿ ಸರ್ಕಾರಕ್ಕೆ ಇಷ್ಟವಾಗುವುದಿಲ್ಲ: ಎಂ.ಕೆ. ಸ್ಟಾಲಿನ್


