Homeಮುಖಪುಟಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಡೇಟ್‌ ಫಿಕ್ಸ್

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಡೇಟ್‌ ಫಿಕ್ಸ್

- Advertisement -
- Advertisement -

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಿಗೆ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ನಿಗಧಿಯಾಗಿದೆ. ಚುನಾವಣಾ ಆಯೋಗವು ಫೆಬ್ರವರಿ 10 ರಿಂದ ಮಾರ್ಚ್ 07ರವರೆಗೆ 7 ಹಂತಗಳಲ್ಲಿ ಈ ಐದು ರಾಜ್ಯಗಳಿಗೆ ಚುನಾವಣೆ ನಡೆಸಲಾಗುವುದು ಮತ್ತು ಮಾರ್ಚ್ 10 ರಂದು ಫಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದೆ.

ಮೊದಲ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ)

ಜನವರಿ 14 ರಿಂದ ನಾಮಪತ್ರ ಪಕ್ರಿಯೆ ಆರಂಭ ಚುನಾವಣೆ ಫೆಬ್ರವರಿ 10 ರಂದು.

ಎರಡನೇ ಹಂತ (ಪಂಜಾಬ್, ಉತ್ತರಪ್ರದೇಶ, ಗೋವಾ, ಉತ್ತರಾಖಂಡಗಳಲ್ಲಿ ನಡೆಯಲಿದೆ)

ಜನವರಿ 21 ರಿಂದ ನಾಮಪತ್ರ ಪಕ್ರಿಯೆ ಆರಂಭವಾಗಲಿದ್ದು ಚುನಾವಣೆ ಫೆಬ್ರವರಿ 14 ರಂದು.

ಮೂರನೇ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ)

25 ಜನವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 20 ರಂದು.

ನಾಲ್ಕನೇ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ)

27 ಜನವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 23 ಫೆಬ್ರವರಿ

5ನೇ ಹಂತ ( ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಮಾತ್ರ)

1 ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 27 ರಂದು.

6ನೇ ಹಂತ ( ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಮಾತ್ರ)

4ನೇ ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಮಾರ್ಚ್ 3 ರಂದು.

7ನೇ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ)

10 ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಮಾರ್ಚ್ 07 ರಂದು.

ಫಲಿತಾಂಶ: 10 ಮಾರ್ಚ್

ಪಂಜಾಬ್, ಗೋವಾ ಉತ್ತರಾಖಂಡ ರಾಜ್ಯಗಳು ಒಂದೇ ಹಂತದಲ್ಲಿ ಅಂದರೆ ಫೆಬ್ರವರಿ 14 ರಂದು ಚುನಾವಣೆ ಎದುರಿಸಲಿವೆ. ಮಣಿಪುರ ಎರಡು ಹಂತಗಳಲ್ಲಿ ಮತ್ತು ಉತ್ತರ ಪ್ರದೇಶವು 7 ಹಂತಗಳಲ್ಲಿ ಚುನಾವಣೆ ಎದುರಿಸಲಿದೆ.

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಉಲ್ಲಂಘಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೋವಿಡ್ ಕಾರಣಕ್ಕೆ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ನಾಮಪತ್ರ ಸಲ್ಲಿಸುವ ಅವಕಾಶ ನೀಡಲಾಗಿದ್ದು, ಕೋವಿಡ್ ಕಾರಣಕ್ಕೆ ನೇರವಾಗಿ ನಾಮಪತ್ರ ಸಲ್ಲಿಸುವ ಬದಲು ಆನ್‌ಲೈನ್‌ ಮೂಲಕ ಸಲ್ಲಿಸಬಹುದು ಎಂದರು. ಜೊತೆಗೆ ಚುನಾವಣಾ ರ್ಯಾಲಿಗಳನ್ನು, ಪ್ರಚಾರವನ್ನು ಆದಷ್ಟು ಆನ್‌ಲೈನ್ ಮೂಲಕ ಮಾಡಲು ಮನವಿ ಮಾಡಿದರು.

ರೋಡ್ ಶೋ, ಪಾದಯಾತ್ರೆಗಳನ್ನು, ಸೈಕಲ್ ಬೈಕ್ ರ್ಯಾಲಿಗಳನ್ನು, ಚುನಾವಣಾ ಪ್ರಚಾರ ಸಭೆಗಳನ್ನು ಜನವರಿ 15ರವರೆಗೂ ನಡೆಸಬಾರದು ಎಂದು ಆಯೋಗ ತಾಕೀತು ಮಾಡಿದೆ. ನಂತರ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಮನೆ ಮನೆ ಪ್ರಚಾರಕ್ಕೆ ಕೇವಲ 05 ಜನರಿಗೆ ಮಾತ್ರ ಅವಕಾಶವಿರುತ್ತದೆ. ಫಲಿತಾಂಶದ ನಂತರ ವಿಜಯೋತ್ಸವ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ. ಒಬ್ಬ ಅಭ್ಯರ್ಥಿಯ ಪರವಾಗಿ ಮತ ಎಣಿಕೆ ಕೇಂದ್ರಕ್ಕೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮುಖ್ಯ ಚುನಾವಣಾಧಿಕಾರಿ ಸುಶೀಲ್ ಚಂದ್ರರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, “ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಿವು ಜವಾಬ್ದಾರಿಯನ್ನು ಚುನಾವಣಾ ಆಯೋಗಕ್ಕೆ ಸಂವಿಧಾನ ನೀಡಿದೆ. ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕೆ ಇದು ಸರಿಯಾಗಿ ನಡೆಸಲಾಗುತ್ತಿಲ್ಲ. ಮುಂದಿನ ಚುನಾವಣೆಗಳಿಗೆ ಸಮರ್ಪಕ ಪ್ರೊಟೋಕಾಲ್ ಅಳವಡಿಸಲಾಗುವುದು” ಎಂದರು.

ಕೋವಿಡ್ ರಕ್ಷಣೆ ಚುನಾವಣೆ, ಮುಕ್ತು ಚುನಾವಣೆ ಅತಿ ಹೆಚ್ಚಿನ ಮತದಾರರು ಭಾಗವಹಿಸುವಂತೆ ಮಾಡುವುದಕ್ಕಾಗಿ ಕಳೆದ 6 ತಿಂಗಳಿನಿಂದ ಚುನಾವಣಾ ಆಯೋಗ ಕೆಲಸ ಮಾಡಿದ್ದೇವೆ ಎಂದರು. ಎಲ್ಲಾ ರಾಜ್ಯಗಳಿಗೆ ಭೇಟಿ ಮಾಡಿ ರಾಜಕೀಯ ಪಕ್ಷಗಳು ಮತ್ತು ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದಿದ್ದೇವೆ ಎಂದು ತಿಳಿಸಿದರು.

ಗೋವಾದ 40 ಸ್ಥಾನಗಳಿಗೆ, ಮಣಿಪುರದ 60 ಕ್ಷೇತ್ರಗಳಿಗೆ, ಉತ್ತರಾಖಂಡದ 70 ಕ್ಷೇತ್ರಗಳಿಗೆ, ಪಂಜಾಬ್‌ನ 117 ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ 403 ಸ್ಥಾನಗಳಿಗೆ ಸೇರಿ ಒಟ್ಟು ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಒಟ್ಟು 18.34 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡದ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಗರಿಷ್ಠ 40 ಲಕ್ಷ ರೂಗಳವರೆಗೆ ಖರ್ಚು ಮಾಡಬಹುದು. ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳು ಗರಿಷ್ಠ 28 ಲಕ್ಷ ರೂಗಳವರೆಗೆ ಖರ್ಚು ಮಾಡಬಹುದು ಎಂದು ಆಯೋಗ ತಿಳಿಸಿದೆ.

ಜನವರ 07ರ ಮಾಹಿತಿಯಂತೆ ಈ ಐದು ರಾಜ್ಯಗಳಲ್ಲಿ 15 ಕೋಟಿ ಜನರು ಮೊದಲ ಡೋಸ್ ಲಸಿಕೆ ಮತ್ತು ಸುಮಾರು 9 ಕೋಟಿ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.

ಗೋವಾ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 15 ರಂದು ಮುಕ್ತಾಯಗೊಳ್ಳಲಿದೆ. ಮಣಿಪುರ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 19 ರಂದು ಮುಕ್ತಾಯಗೊಳ್ಳಲಿದ್ದು, ಉತ್ತರಾಖಂಡ ಮತ್ತು ಪಂಜಾಬ್ ವಿಧಾನಸಭೆಯ ಚುನಾವಣೆಯು ಮಾರ್ಚ್ 23ರವರೆಗೆ ಮತ್ತು ಯುಪಿ ವಿಧಾನಸಭೆಯ ಅಧಿಕಾರಾವಧಿಯು ಮೇ 14 ರವರೆಗೆ ಇರುತ್ತದೆ.

2022ರ ಫೆಬ್ರವರಿಯಲ್ಲಿ ನಡೆಯಬೇಕಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮೂಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಮನವಿ ಮಾಡಿತ್ತು. ಅಲ್ಲದೆ ರಾಜ್ಯದಲ್ಲಿ ಚುನಾವಣಾ ರ್ಯಾಲಿಗಳನ್ನು ಸಹ ರದ್ದುಗೊಳಿಸಬೇಕೆಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದೆ. ಹೆಚ್ಚುತ್ತಿರುವ ಒಮೈಕ್ರಾನ್ ಪ್ರಕರಣಗಳು ತೀವ್ರಥರನಾದ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಕಾರಣದಿಂದ ಈ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.


ಇದನ್ನೂ ಓದಿ: ದ್ವೇಷ ಭಾಷಣ, ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಮಾತನಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಐಐಎಂ ವಿದ್ಯಾರ್ಥಿಗಳು,…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...