Homeಕರ್ನಾಟಕಡಿಸಿಎಂ ಸವದಿ ಪುತ್ರನ ಕಾರು ಡಿಕ್ಕಿ, ರೈತ ಸಾವು: ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಡಿಸಿಎಂ ಸವದಿ ಪುತ್ರನ ಕಾರು ಡಿಕ್ಕಿ, ರೈತ ಸಾವು: ಪ್ರತ್ಯಕ್ಷದರ್ಶಿ ಹೇಳಿದ್ದೇನು?

- Advertisement -

ಡಿಸಿಎಂ ಲಕ್ಷ್ಮಣ ಸವದಿ ಹಿರಿಯ ಪುತ್ರ ಚಿದಾನಂದ ಸವದಿ ಚಲಾಯಿಸುತ್ತಿದ್ದ ಕಾರು ರೈತರೊಬ್ಬರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ರೈತ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮೃತ ರೈತನನ್ನು ಕೂಡ್ಲೆಪ್ಪ ಬೋಳಿ(58) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಕೂಡ್ಲೆಪ್ಪ ಬೈಕ್‌ನಲ್ಲಿ ಹೊಲದಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಹುನಗುಂದದಿಂದ ವಿಜಯಪುರ ಮಾರ್ಗವಾಗಿ ಹೊರಟಿದ್ದ ಚಿದಾನಂದ ಸವದಿಯ ಕಾರು ಹಿಮ್ಮುಖವಾಗಿ ರೈತನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕೂಡ್ಲೆಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಗಾಯಗೊಂಡ ರೈತನನ್ನು ಆಸ್ಪತ್ರೆಗೆ ಸಾಗಿಸುವ ಬದಲು ಚಿದಾನಂದ್ ಹಾಗೂ ಆತನ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆ ನಡೆದ ಕೆಲ ಹೊತ್ತಿನ ಬಳಿಕ ಸ್ಥಳೀಯರೇ ಸೇರಿಕೊಂಡು ಕೂಡ್ಲೆಪ್ಪ ಅವರನ್ನು ಆಂಬುಲೆನ್ಸ್ ಮೂಲಕ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ರೈತ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇನ್ನು ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಿದಾನಂದ ಸವದಿ, “ನಾನು ಮತ್ತು ನಮ್ಮ ಸ್ನೇಹಿತರು ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಹೋಗಿದ್ದೇವು ಅಲ್ಲಿಂದ ವಾಪಾಸ್ ಬರುವಾಗ ಅಪಘಾತವಾಗಿದೆ. ಆದರೆ, ನನ್ನ ಕಾರಿಗೂ ಹಾಗೂ ಅಪಘಾತವಾದ ಕಾರಿಗೂ 30 ಕಿ.ಮೀ ಅಂತರವಿತ್ತು. ಡ್ರೈವರ್ ನನಗೆ ಫೋನ್ ಮಾಡಿ ಅಪಘಾತವಾದ ಬಗ್ಗೆ ಮಾಹಿತಿ ನೀಡಿದ, ವಿಷಯ ತಿಳಿದು ನಾನು ಘಟನಾ ಸ್ಥಳ ತಲುಪುವ ಹೊತ್ತಿಗೆ ಅಲ್ಲಿ ಯಾರೂ ಇರಲಿಲ್ಲ, ನಾನು ಯಾವ ಸ್ಥಳೀಯರೊಂದಿಗೂ ಮಾತನಾಡಿಲ್ಲ. ನಾನು ಡಿಸಿಎಂ ಮಗ ಅಂತಲೂ ಯಾರಿಗೂ ಹೇಳಿಲ್ಲ. ಆಸ್ಪತ್ರೆಗೆ ಹೋದಾಗಲೂ ಅಲ್ಲಿ ಗಾಯಾಳುವಿನ ಕುಟುಂಬಸ್ಥರು ಯಾರು ಇರಲಿಲ್ಲ ಹೀಗಾಗಿ ಅವರನ್ನು ನಾನು ಭೇಟಿ ಮಾಡಲಾಗಲಿಲ್ಲ. ಈ ದುಃಖವನ್ನು ಸಹಿಸುವ ಶಕ್ತಿ ಭಗವಂತ ಅವರಿಗೆ ನೀಡಲಿ ನಮಗೂ ಸಹ ಘಟನೆಯಿಂದ ದುಃಖವಾಗಿದೆ” ಎಂದಿದ್ದಾರೆ.

ಮೃತ ರೈತನಿಗೆ ಪತ್ನಿ ಹಾಗೂ 5 ಜನ ಮಕ್ಕಳಿದ್ದಾರೆ. 5 ಜನರ ಪೈಕಿ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಘಟನೆಗೆ ಸಂಬಂಧಿಸಿ ಹುನಗುಂದ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 304A ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಯೂಟ್ಯೂಬ್ ಚಾನೆಲ್‌ಗೆ ತೆರಳಲು ಇಲ್ಲಿ ಕ್ಲಿಕ್ ಮಾಡಿ 

ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಅಪಘಾತದಿಂದ ರೈತನ ಸಾವು ಪ್ರಕರಣ, ಪ್ರತ್ಯಕ್ಷದರ್ಶಿ ಹೇಳಿಕೆ.

ಇದನ್ನೂ ಓದಿ: ಬೈಕಿಗೆ ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಡಿಕ್ಕಿ, ರೈತ ಸಾವು

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial