Homeಮುಖಪುಟಹಿಂದೂ, ಮುಸ್ಲಿಂ ಸಮುದಾಯಗಳಲ್ಲಿ ಇಳಿದ ‘ಫಲವತ್ತತೆ’ ದರ: ಅಧ್ಯಯನ

ಹಿಂದೂ, ಮುಸ್ಲಿಂ ಸಮುದಾಯಗಳಲ್ಲಿ ಇಳಿದ ‘ಫಲವತ್ತತೆ’ ದರ: ಅಧ್ಯಯನ

- Advertisement -
- Advertisement -

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡರಲ್ಲೂ ಸಮಾನಾಂತರವಾಗಿ ಫಲವತ್ತೆ (ಗರ್ಭದಾರಣೆ) ಪ್ರಮಾಣ ಇಳಿಮುಖವಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ವಾಷಿಂಗ್‌‌ಟನ್ ಮೂಲದ ಲಾಭದ ಉದ್ದೇಶವಿಲ್ಲದ ಪ್ಯೂ ಸಂಶೋಧನಾ ಸಂಸ್ಥೆ ತನ್ನ ಅಧ್ಯಯನವನ್ನು ಪ್ರಕಟಿಸಿದ್ದು, ಭಾರತದ ಜನಗಣತಿ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮಾಹಿತಿಯ ಆಧಾರದ ಮೇಲೆ ಅಧ್ಯಯನ ಮಾಡಲಾಗಿದೆ. ಜನಸಂಖ್ಯೆಯ ಧಾರ್ಮಿಕ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುವ ‘ಫಲವತ್ತೆಯ ದರ, ವಲಸೆ ಮತ್ತು ಪರಿವರ್ತನೆಗಳು’- ಈ ಮೂರು ಪ್ರಮುಖ ಅಂಶಗಳ ಕುರಿತು ಅಧ್ಯಯನ ಮಾಡಲಾಗಿದೆ.

ಫಲವತ್ತತೆ ಪ್ರಮಾಣ ಮುಸ್ಲಿಂ ಸಮುದಾಯಗಳಲ್ಲಿ ಹೆಚ್ಚಿತ್ತು. ಆದರೆ,  ಮುಸ್ಲಿ ಸಮುದಾಯದಲ್ಲಿಯೂ ಫಲವತ್ತತೆ ದರದಲ್ಲಿ ತೀವ್ರ ಕುಸಿತ ಕಾಣಬಹುದು ಎಂದು ವರದಿ ಹೇಳಿದೆ. 1992ರಿಂದ 2015 ಅವಧಿಯಲ್ಲಿ 4.4 ದರದಿಂದ 2.6 ದರಕ್ಕೆ ಮುಸ್ಲಿಂ ಸಮುದಾಯದಲ್ಲಿ ಫಲವತ್ತತೆ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಹಿಂದೂ ಸಮುದಾಯದಲ್ಲಿ 3.3ರಿಂದ 2.1ಕ್ಕೆ ಫಲವತ್ತತೆ ಕುಸಿತ ಕಂಡಿದೆ. ಭಾರತದ ಧಾರ್ಮಿಕ ಗುಂಪುಗಳ ನಡುವಿನ ಹೆರಿಗೆಯ ಅಂತರವು ಹಿಂದೆಂದಿಗಿಂತ ಕಡಿಮೆಯಾಗಿದೆ ಎಂದು ಅಧ್ಯಯನ ಹೇಳಿದೆ.

ಭಾರತದ ಸರಾಸರಿ ಫಲವತ್ತತೆ ದರ 2.2 ಇದ್ದು, ಆರ್ಥಿಕವಾಗಿ ಮುಂದುವರಿದ ಅಮೆರಿಕದಂತಹ (1.6) ದೇಶಗಳಿಗೆ ಹೋಲಿಸಿದರೆ ಹೆಚ್ಚಿದೆ. ಆದರೆ 1992 (3.4 ದರ) ಅಥವಾ 1951ನೇ (5.9 ದರ) ಇಸವಿಗೆ ಹೋಲಿಸಿದರೆ ಭಾರತದಲ್ಲಿ ಫಲವತ್ತತೆ ದರ ಕಡಿಮೆಯಾಗಿದೆ.

ಈ ಎರಡು ಧಾರ್ಮಿಕ ಗುಂಪುಗಳ ನಡುವಿನ ಹೆರಿಗೆಯ ಪ್ರಮಾಣದಲ್ಲೂ ಕಡಿಮೆಯಾಗಿದೆ. 1951 ಮತ್ತು 1961ರ ನಡುವೆ, ಮುಸ್ಲಿಂ ಜನಸಂಖ್ಯೆಯು ಶೇ. 32.7 ಇತ್ತು. ಶೇ. 21.6ರಷ್ಟಿದ್ದ ಜನಸಂಖ್ಯೆ ಶೇ.11ರಷ್ಟು ಹೆಚ್ಚಾಗಿತ್ತು. ಆದರೆ ಈ ಅಂತರ ಕಡಿಮೆಯಾಗಿದೆ. 2001ರಿಂದ 2011ರವರೆಗೆ, ಮುಸ್ಲಿಮರು (24.7%) ಇದ್ದಾರೆ.

1951 ಮತ್ತು 2011ರ ನಡುವೆ, ಮುಸ್ಲಿಮರು ಶೇ. 4.4ರಿಂದ ಶೇ.14.2 ಜನಸಂಖ್ಯೆಗೆ ಏರಿದರೆ, ಹಿಂದೂಗಳು ಶೇ. 4.3ರಷ್ಟು ಇಳಿದು 79.8ರಷ್ಟಾಗಿದ್ದರು. ಆದರೆ ಪ್ರಮುಖ ಧಾರ್ಮಿಕ ಗುಂಪುಗಳು (ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಜೈನರು) ಹೆಚ್ಚಿವೆ. ಇದಕ್ಕೆ ಏಕೈಕ ಅಪವಾದವೆಂದರೆ ಪಾರ್ಸಿಗಳು ಇದ್ದಾರೆ. ಅವರ ಸಂಖ್ಯೆ 1951 ಮತ್ತು 2011ರ ನಡುವೆ 1,10,000 ರಿಂದ 60,000ಕ್ಕೆ ಇಳಿದಿದೆ.

ಕುತೂಹಲಕಾರಿಯಾಗಿ, ಭಾರತದ ಒಟ್ಟು ಜನಸಂಖ್ಯೆ 120 ಕೋಟಿಯಲ್ಲಿ 80 ಲಕ್ಷ ಜನರು ಆರು ಪ್ರಮುಖ ಧಾರ್ಮಿಕ ಗುಂಪುಗಳಲ್ಲಿ ಯಾವುದಕ್ಕೂ ಸೇರಿಲ್ಲ. ಈ ವರ್ಗ ಹೆಚ್ಚಾಗಿ ಆದಿವಾಸಿ ಜನರನ್ನು ಒಳಗೊಂಡಿದ್ದು, ದೊಡ್ಡ ಗುಂಪು ಸರ್ನಸ್ (ಸುಮಾರು 50 ಲಕ್ಷ), ಗೊಂಡ್ (10 ಲಕ್ಷ) ಮತ್ತು ಸಾರಿ ಧರ್ಮ (5,10,000) ಇರುವುದನ್ನು ಕಾಣಬಹುದು.

ಗಂಡು ಮಕ್ಕಳ ಮೇಲಿನ ವ್ಯಾಮೋಹದ ಮೇಲೆ ಗರ್ಭಪಾತ ಮಾಡಿರುವುದನ್ನು ಗಮನಿಸಲು 1970ರಿಂದ 2017ರ ನಡುವಿನ ಅಂಕಿ-ಅಂಶಗಳನ್ನು ಪರಿಶೀಲಿಸಲಾಗಿದೆ. “ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಹೋಲಿಸಿದರೆ ಹಿಂದೂಗಳಲ್ಲೇ ಹೆಚ್ಚು ಗರ್ಭಪಾತ ಮಾಡಲಾಗಿದೆ” ಎಂದು ವರದಿ ಹೇಳಿದೆ.

ಫಲವತ್ತತೆ ವಿಚಾರದಲ್ಲಿ ಧರ್ಮದ ಪಾತ್ರವಿಲ್ಲ ಎಂದು ಎಚ್ಚರಿಸಿರುವ ಅಧ್ಯಯನವು ಮಧ್ಯ ಭಾರತದಲ್ಲಿ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಿದ್ದರು, ಬಿಹಾರ ಮತ್ತು ಉತ್ತರ ಪ್ರದೇಶ ಕ್ರಮವಾಗಿ 3.4 ಮತ್ತು 2.7ರ ಒಟ್ಟು ಫಲವತ್ತತೆ ದರವನ್ನು ಹೊಂದಿವೆ. ತಮಿಳುನಾಡು ಮತ್ತು ಕೇರಳದಲ್ಲಿ ಕ್ರಮವಾಗಿ 1.7 ಮತ್ತು 1.6ರ ಫಲವತ್ತತೆ ಇದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ಸಂಕಷ್ಟ: ಮಗಳನ್ನು ನೇಣಿಗೇರಿಸಿ ತಾಯಿ ಆತ್ಮಹತ್ಯೆ ಯತ್ನ, ಮಗಳು ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...