ಡೆಹ್ರಾಡೂನ್‌ನಲ್ಲಿ ಮೇಘಸ್ಪೋಟ: ಕನಿಷ್ಠ 10 ಮಂದಿ ಸಾವು, ಹಲವರು ನಾಪತ್ತೆ; ವರದಿ

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮಂಗಳವಾರ (ಸೆ.16) ಮುಂಜಾನೆ ಸಂಭವಿಸಿದ, ಧಾರಾಕಾರ ಮಳೆ ಮತ್ತು ವ್ಯಾಪಕ ನಾಶನಷ್ಟಕ್ಕೆ ಕಾರಣವಾದ ಮೇಘಸ್ಫೋಟದಲ್ಲಿ ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 8 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸಹಸ್ರಧಾರ ಕೇಂದ್ರಿತ ಮೇಘಸ್ಪೋಟದಿಂದ ಹಠಾತ್ ಪ್ರವಾಹ ಉಂಟಾಗಿ ಹೋಟೆಲ್‌, ಅಂಗಡಿ ಮತ್ತು ಮನೆಗಳು ಕೊಚ್ಚಿ ಹೋಗಿವೆ. ಜಿಲ್ಲೆಯಾದ್ಯಂತ ವಾಣಿಜ್ಯ ಸಂಸ್ಥೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ಅನೇಕ ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಡೆಹ್ರಾಡೂನ್‌ನ ಮಾಲ್ ದೇವ್ತಾ ಮತ್ತು … Continue reading ಡೆಹ್ರಾಡೂನ್‌ನಲ್ಲಿ ಮೇಘಸ್ಪೋಟ: ಕನಿಷ್ಠ 10 ಮಂದಿ ಸಾವು, ಹಲವರು ನಾಪತ್ತೆ; ವರದಿ