ದೆಹಲಿ | ಬಿಜೆಪಿ ಗೆಲ್ಲುತ್ತಿದ್ದಂತೆ ಯಾವುದೇ ಕಡತಗಳ ಸ್ಥಳಾಂತರ ನಿಷೇಧ; ಸಚಿವಾಲಯದೊಳಗೆ ಪ್ರವೇಶ ನಿರ್ಬಂಧ!

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಕಾಣುತ್ತಿದ್ದಂತೆ ದೆಹಲಿ ಸೆಕ್ರೆಟರಿಯೇಟ್‌ ಶನಿವಾರ ಅನುಮತಿಯಿಲ್ಲದೆ ಸಂಕೀರ್ಣದಿಂದ ಫೈಲ್‌ಗಳು, ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ದಾಖಲೆಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಅಷ್ಟೆ ಅಲ್ಲದೆ, ವ್ಯಕ್ತಿಗಳಿಗೆ ಆವರಣದೊಳಗೆ ಪ್ರವೇಶವನ್ನು ನಿರ್ಬಂಧಿಸಿದ್ದು, ಭದ್ರತಾ ಕ್ರಮಗಳನ್ನು ಬಲಪಡಿಸಲು ಆದೇಶಿಸಿದೆ. ಒಂದು ದಶಕದ ಅಧಿಕಾರದ ನಂತರ ಎಎಪಿಯನ್ನು ಸೋಲಿಸಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಗೆಲುವು ಸಾಧಿಸಿದ ನಂತರ ಈ ನಿರ್ದೇಶನವನ್ನು ಹೊರಡಿಸಲಾಗಿದೆ. ಸಾಮಾನ್ಯ ಆಡಳಿತ ಇಲಾಖೆ (GAD) ಶನಿವಾರ ಹೊರಡಿಸಿದ ಆದೇಶದಲ್ಲಿ, ದಾಖಲೆಗಳು ಮತ್ತು ಫೈಲ್‌ಗಳನ್ನು … Continue reading ದೆಹಲಿ | ಬಿಜೆಪಿ ಗೆಲ್ಲುತ್ತಿದ್ದಂತೆ ಯಾವುದೇ ಕಡತಗಳ ಸ್ಥಳಾಂತರ ನಿಷೇಧ; ಸಚಿವಾಲಯದೊಳಗೆ ಪ್ರವೇಶ ನಿರ್ಬಂಧ!