Homeಮುಖಪುಟದೆಹಲಿ: ಪೊಲೀಸರ ಕ್ರಮ ಖಂಡಿಸಿ ಮಧ್ಯರಾತ್ರಿ ವೈದ್ಯರ ಪ್ರತಿಭಟನೆ

ದೆಹಲಿ: ಪೊಲೀಸರ ಕ್ರಮ ಖಂಡಿಸಿ ಮಧ್ಯರಾತ್ರಿ ವೈದ್ಯರ ಪ್ರತಿಭಟನೆ

ನೀಟ್‌ ಪರೀಕ್ಷೆಯ ನಂತರ ಕಾಲೇಜು ಹಂಚಿಕೆ ವಿಳಂಬವನ್ನು ವಿರೋಧಿಸಿ ವೈದ್ಯರು ಪ್ರತಿಭಟಿಸುತ್ತಿದ್ದು, ಸರ್ಕಾರ ಕ್ರಮ ಜರುಗಿಸದಿದ್ದರೆ ಬುಧವಾರ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.

- Advertisement -
- Advertisement -

ನವ ದೆಹಲಿ: ನೀಟ್‌ ಸ್ನಾತಕೋತ್ತರ ಪರೀಕ್ಷೆಯ ನಂತರ ಕಾಲೇಜು ಹಂಚಿಕೆ ವಿಳಂಬವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿರುವ ದೆಹಲಿಯ ನಿವಾಸಿ ವೈದ್ಯರ ಗುಂಪುಗಳು ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿವೆ.

ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್‌‌ನ ​​(ಎಫ್‌‌ಒಆರ್‌ಡಿಎ) 4,000 ಸದಸ್ಯರು ಸೋಮವಾರ ಮಧ್ಯರಾತ್ರಿ ಸರೋಜಿನಿ ನಗರ ಪೊಲೀಸ್ ಠಾಣೆ ಎದುರು ಧರಣಿಯನ್ನು ನಡೆಸಿದ್ದು, ರಾತ್ರಿ ಕರ್ಫ್ಯೂಗೆ ಬದ್ಧರಾಗಿ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ. ಹಿಂದಿನ ದಿನ ಆರೋಗ್ಯ ಸಚಿವಾಲಯದ ಕಚೇರಿ ಕಡೆಗೆ ಮೆರವಣಿಗೆ ಹೊರಟಾಗ ತಡೆಯಲಾಗಿದೆ ಎಂದು ವೈದ್ಯರು ಆರೋಪಿಸಿದ್ದಾರೆ.

ಎಲ್ಲಾ ಆರ್‌ಡಿಎ ಸಂಘಗಳು ಮತ್ತು ಭಾರತದಾದ್ಯಂತ ಇರುವ ಇತರ ವೈದ್ಯರ ಸಂಘಗಳು ಬುಧವಾರದಿಂದ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ​​(ಎಫ್‌ಎಐಎಂಎ) ಕರೆ ನೀಡಿದೆ. ಏಮ್ಸ್‌ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಫೋರ್ಡಾಗೆ ಬೆಂಬಲವಾಗಿ ನಿಂತಿದೆ. 24 ಗಂಟೆಗಳ ಒಳಗೆ ಸರ್ಕಾರದಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ದೊರೆಯದಿದ್ದರೆ ಬುಧವಾರ ಎಲ್ಲಾ ತುರ್ತು ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ವೈದ್ಯರು ಎಚ್ಚರಿಸಿದ್ದಾರೆ.

ವೈದ್ಯಕೀಯ ಭ್ರಾತೃತ್ವಕ್ಕೆ ಇದು “ಕಪ್ಪು ದಿನ” ಎಂದು ವೈದ್ಯರು ಕರೆದಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಹಲವು ಮಹಿಳಾ ವೈದ್ಯರು ಹಲ್ಲೆಗೊಳಗಾಗಿದ್ದಾರೆ. ಪೊಲೀಸರು ನಮ್ಮನ್ನು ತಡೆದಿದ್ದಾರೆ ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸಫ್ದರ್‌ಜಂಗ್, ಆರ್‌ಎಂಎಲ್ ಮತ್ತು ಲೇಡಿ ಹಾರ್ಡಿಂಜ್ – ಇತರ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಯ ಮೇಲೆ ವೈದ್ಯರ ಪ್ರತಿಭಟನೆ ಪರಿಣಾಮ ಬೀರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಶೇ. 66ರಷ್ಟು ಸಾಮರ್ಥ್ಯದಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಹೊಸ ವೈದ್ಯರ ನೇಮಕ ತುರ್ತಾಗಿ ಆಗಬೇಕಿದೆ. ವೈದ್ಯಕೀಯ ಪ್ರವೇಶದಲ್ಲಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿರುವುದರಿಂದ ಒಂದು ವರ್ಷದಿಂದ ನೇಮಕಾತಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

“ನಾವು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು (ಎಂಎಎಂಸಿ) ಕ್ಯಾಂಪಸ್‌ನಿಂದ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದೇವೆ. ಆದರೆ ನಾವು ಮೆರವಣಿಗೆ ಪ್ರಾರಂಭಿಸಿದ ಕೂಡಲೇ, ಭದ್ರತಾ ಸಿಬ್ಬಂದಿ ನಮ್ಮನ್ನು ತಡೆದರು. ಪೊಲೀಸರ ಕ್ರಮದಿಂದಾಗಿ ಕೆಲವು ಕಿರಿಯ ವೈದ್ಯರು ಗಾಯಗೊಂಡಿದ್ದಾರೆ” ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, “ಯಾವುದೇ ಬಲ ಪ್ರಯೋಗ ಮಾಡಿಲ್ಲ, ನಿಂದನೀಯ ಭಾಷೆ ಬಳಸಿಲ್ಲ. ಕೇವಲ 12 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು” ಎಂದಿದ್ದಾರೆ.

ಆರರಿಂದ ಎಂಟು ಗಂಟೆಗಳ ಕಾಲ ಪ್ರತಿಭಟನಾಕಾರರು ದೆಹಲಿಯ ಆರ್ಟಿರಿಯಲ್ ಐಟಿಒ ರಸ್ತೆಯ ಒಂದು ಭಾಗವನ್ನು ಸ್ಥಗಿತಗೊಳಿಸಿದರು. ಸ್ಥಳದಿಂದ ದೂರ ಸರಿಯುವಂತೆ ಅವರಿಗೆ ಪದೇ ಪದೇ ಮನವಿ ಮಾಡಲಾಗಿದ್ದರೂ ಅವರು ರಸ್ತೆ ಜಾಮ್ ಮಾಡುವುದನ್ನು ಮುಂದುವರೆಸಿದರು. ನಂತರ, ಐಟಿಒ ಮಾರ್ಗದ ಎರಡೂ ಮಾರ್ಗಗಳನ್ನು ಪ್ರತಿಭಟನಾಕಾರರು ನಿರ್ಬಂಧಿಸಿದರು ಎಂದು ಪೊಲೀಸರು ಆರೋಪಿಸಿದ್ದಾರೆ.

“ನಾವು ಸಂಘದ ಸದಸ್ಯರೊಂದಿಗೆ ಮಾತನಾಡಿದ್ದೇವೆ ಮತ್ತು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ರಸ್ತೆಗಳನ್ನು ನಿರ್ಬಂಧಿಸುವುದನ್ನು ಮುಂದುವರೆಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಪ್ರತಿಭಟನಾಕಾರರನ್ನು ರಸ್ತೆಯಿಂದ ತೆರೆವುಗೊಳಿಸಲು ಯತ್ನಿಸಿದಾಗ ಅವರು ಪೊಲೀಸ್ ಸಿಬ್ಬಂದಿಯ ಸಮವಸ್ತ್ರವನ್ನು ಹರಿದು ಹಾಕಲು ಯತ್ನಿಸಲಾಯಿತು. ಪೊಲೀಸ್ ವಾಹನಗಳ ಗಾಜು ಒಡೆದು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ” ಎಂದು ಪೊಲೀಸರು ದೂರಿದ್ದಾರೆ.

ತಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದಲ್ಲಿ ಸೇವೆಯನ್ನು ತ್ಯಜಿಸಿ “ಸಾಮೂಹಿಕ ರಾಜೀನಾಮೆ” ನೀಡಲು ಸಂಘದ ಸದಸ್ಯರಲ್ಲಿ ಕೋರಲಾಗುವುದು ಎಂದು ನಿವಾಸಿ ವೈದ್ಯರ ಸಂಘ ಎಚ್ಚರಿಸಿದೆ.


ಇದನ್ನೂ ಓದಿರಿ: ಆರೋಗ್ಯ ಸೂಚ್ಯಂಕದಲ್ಲಿ ಕೇರಳ ಅತ್ಯುತ್ತಮ ರಾಜ್ಯ, ಉತ್ತರ ಪ್ರದೇಶಕ್ಕೆ ಕಡೆಯ ಸ್ಥಾನ: ನೀತಿ ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...