- Advertisement -
- Advertisement -
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಸೆಕ್ಷನ್ 13ರಡಿಯಲ್ಲಿ ಲೇಖಕಿ ಅರುಂಧತಿ ರಾಯ್ ಹಾಗೂ ಕಾಶ್ಮೀರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರಾಗಿದ್ದ ಡಾ. ಶೇಖ್ ಶೌಕತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅನುಮತಿ ನೀಡಿದ್ದಾರೆ.
2010ರಲ್ಲಿ ‘ಆಝಾದಿ – ದಿ ಓನ್ಲಿ ವೇ’ ತಲೆಬರಹದಲ್ಲಿ ಕಮಿಟಿ ಫಾರ್ ದಿ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್ ಸಂಘಟನೆಯು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಎಂದು ಹಲವಾರು ಮಂದಿಯ ವಿರುದ್ಧ ಸುಶೀಲ್ ಪಂಡಿತ್ ದೂರು ದಾಖಲಿಸಿದ್ದರು.
ಕಳೆದ ವರ್ಷ ಲೇಖಕಿ ಅರುಂಧತಿ ರಾಯ್ ಮತ್ತು ಡಾ. ಶೇಖ್ ಶೌಕತ್ ವಿರುದ್ಧ ಇದೇ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ/153ಬಿ ಹಾಗೂ 505ರ ಅಡಿ ವಿಚಾರಣೆಗೊಳಪಡಿಸಲು ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 196ರ ಅಡಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದರು.
14 ವರ್ಷ ಹಳೆಯ ಪ್ರಕರಣ:
ಸುಶೀಲ್ ಪಂಡಿತ್ ನೀಡಿದ ದೂರಿನ ಹಿನ್ನೆಲೆ ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ರಾಯ್ ಮತ್ತು ಡಾ. ಹುಸೇನ್ ವಿರುದ್ಧ ಅಕ್ಟೋಬರ್ 2010ರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಉಪನ್ಯಾಸಕ ಸೈಯದ್ ಅಬ್ದುಲ್ ರಹಮಾನ್ ಗೀಲಾನಿ ಇಬ್ಬರೂ ವಿಚಾರಣೆಯ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ.
https://twitter.com/the_hindu/status/1801604611549045014
ಇದನ್ನು ಓದಿ: ಆಂಧ್ರಪ್ರದೇಶ: ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ನೇಮಕ


