ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಮೂರನೇ ದಿನವಾದ ಬುಧವಾರ ದೆಹಲಿ ಕಾಂಗ್ರೆಸ್‌ನಿಂದ ಭಾರಿ ಪ್ರತಿಭಟನೆ ನಡೆದಿದೆ.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಾರಿ ನಿರ್ದೇಶನಾಲಯದ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಪೊಲೀಸರು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ನುಗ್ಗಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಕಾಂಗ್ರೆಸ್ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆ ಕಾಂಗ್ರೆಸ್ ಕಚೇರಿಗೆ ಗೇಟು ತಳ್ಳಿಕೊಂಡು ನುಗ್ಗುತ್ತಿರುವ ವಿಡಿಯೋವನ್ನು ಹಂಚಿಕೊಂಡು, ಬಿಜೆಪಿ ಸರ್ಕಾರವನ್ನು ಸರ್ವಾಧಿಕಾರಿ ಎಂದು ಟೀಕಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ: ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ರನ್ನು ಎಳೆದೊಯ್ದ ಪೊಲೀಸರು
ओ तानाशाह…जब गुण्डई ही करनी है, तो उतरो लोकतंत्र की कुर्सी से और आओ जनता के सामने।
कांग्रेस के जिस दफ्तर में तुमने अपने पुलिसिया गुंडे भेजे हैं, उस दफ्तर ने दुनिया के सबसे बड़े साम्राज्य को धूल चटाई है…तुम्हारे अहंकार की तो हैसियत ही क्या है?
हम अहंकार तुम्हारा तोड़ेंगे। pic.twitter.com/rQexyK3srA
— Congress (@INCIndia) June 15, 2022
ಘಟನೆ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ, “ಇಂದು ದೆಹಲಿ ಪೊಲೀಸರು ಬಿಜೆಪಿ ಸರ್ಕಾರದ ಬೆಂಬಲದೊಂದಿಗೆ ಬಲವಂತವಾಗಿ ಕಾಂಗ್ರೆಸ್ ಪ್ರಧಾನ ಕಚೇರಿಗೆ ನುಗ್ಗಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕತ ಮೇಲೆ ಹಲ್ಲೆ ನಡೆಸಿದ್ದಾರೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಬಿಜೆಪಿ ಸರ್ಕರ ಮನತ್ತು ದೆಹಲಿ ಪೊಲೀಸರ ಈ ಗೂಂಡಾ ವರ್ತನೆ ಸಹಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
“ಮೋದಿ ಸರ್ಕಾರದ ಸಾಕು ಪ್ರಾಣಿಗಳಂತೆ ವರ್ತಿಸುತ್ತಿರವ ದೆಹಲಿ ಪೊಲೀಸ್ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಬಲವಂತವಾಗಿ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದ ಎಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ಒತ್ತಾಯಿಸುತ್ತೇವೆ. ಜೊತೆಗೆ ಅವರನ್ನು ಅಮಾನತ್ತು ಮಾಡಿ ವಿಚಾರಣೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
LIVE: Special Congress Party Briefing by Shri @rssurjewala at the AICC HQ.
https://t.co/O8fP87far5— Congress (@INCIndia) June 15, 2022
ಇದರ ಜೊತೆಗೆ ನಾಳೆ ದೇಶದ ಎಲ್ಲಾ ರಾಜಭವನಗಳಿಗೆ ಘೇರಾವ್ ಹಾಕಲಾಗುತ್ತದೆ. ಪೊಲೀಸರ ಹಲ್ಲೆ ವಿರೋಧಿಸುವುದರ ಜೊತೆಗೆ ರಾಹುಲ್ ಗಾಂಧಿ ಅವರ ಮೇಲಿನ ನಕಲಿ ಪ್ರಕರಣವನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಪ್ರತಿಭಟನಾ ನಿರತ ರಾಜ್ಯಸಭಾ ಸಂಸದೆ ಜೆಬಿ ಮಾಥೂರ್ ಅವರನ್ನು ದೆಹಲಿ ಪೊಲೀಸರು ಅಮಾನುಷವಾಗಿ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
This is how Rajyasabha MP Ms. Jeby Mathur is treated by Delhi Police.
Is this the new normal in this country? pic.twitter.com/W8DXcFvYDx
— Anshuman Sail (@AnshumanSail) June 14, 2022
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸತತ ಮೂರನೇ ದಿನವು ರಾಹುಲ್ ಗಾಂಧಿ ವಿಚಾರಣೆಗೆ ಸಮನ್ಸ್



Police were not allowed to maintain law and order by Gundas peoples, rowdy sheeters ,funds provided by share holders of the herald money laundring cheating case ..to protect the accused against charges of cheating still to be proven by ED ..accused are in court bail.
So police are stopped from doing duties by above Gundas for questioning their political leaders…above law and constitution.
Trying to protect and flee from guilt and charges blaming ruling parties to gain sympathy..as usual.