ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿ ವಿಕಲಾಂಗ ವ್ಯಕ್ತಿಯ ಮೇಲೆ ದೊಣ್ಣೆಗಳಿಂದ ಒಬ್ಬ ಪುರುಷ ಹಾಗೂ ಮಹಿಳೆ ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳು ವಿಕಲಾಂಗ ವ್ಯಕ್ತಿಯ ಸಂಬಂಧಿಕರಾಗಿದ್ದು, ಆಸ್ತಿ ವಿಚಾರದಲ್ಲಿ ಜಗಳವಾಡುತ್ತಿದ್ದಾರೆ ಎಂದು ಪತ್ತೆ ಹಚ್ಚಲಾಗಿದೆ.
ಸ್ಕೂಟರ್‌ನಲ್ಲಿ ಕುಳಿತಿದ್ದ ಅಂಗವಿಕಲ ವ್ಯಕ್ತಿ ಗಜೇಂದ್ರ ಅವರನ್ನು ದೊಣ್ಣೆಯಿಂದ ಥಳಿಸಲಾಗುತ್ತದೆ. ಜೊತೆಗೆ ತ್ರಿಚಕ್ರ ವಾಹನವನ್ನು ಜಕಂಗೊಳಿಸಲಾಗುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವರು ಪರದಾಡುತ್ತಾರೆ. ಗಜೇಂದ್ರ ಅವರು ತನ್ನ ಸಂಬಂಧಿ ಜುಗೇಂದ್ರನಿಂದ ಶಾಲೆಯನ್ನು ಬಾಡಿಗೆಗೆ ಪಡೆದಿದ್ದರು.
नफरत के इस दौर में हम किस मुकाम पर आकर खड़े हो गए है, इस पर पुनः चिंतन की जरूरत है..
ये तस्वीरें इंसानियत को शर्मसार करने वाली है.. pic.twitter.com/jcP5NH1xHk
— Srinivas BV (@srinivasiyc) March 29, 2022
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಯನ್ನು ಮುಚ್ಚಿದ್ದರಿಂದ, ಜುಗೇಂದ್ರ ಅದನ್ನು ಬಾಡಿಗೆದಾರರಿಗೆ ನೀಡಿದ್ದರು. ಈ ವಿಚಾರವಾಗಿ ವಾಗ್ವಾದ ನಡೆದಿದೆ.
ಭಾನುವಾರ ಇಬ್ಬರು ವ್ಯಕ್ತಿಗಳು ದೈಹಿಕ ಹಿಂಸೆ ನಡೆಸಿದ್ದಾರೆ. ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಲಾಗಿದೆ.
ಇದನ್ನೂ ಓದಿರಿ: ತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’


