Homeಕರ್ನಾಟಕ‘ಶರ್ಟ್, ಪ್ಯಾಂಟ್ ಬಿಚ್ಚಲು ಕಾಂಗ್ರೆಸ್‌ನವರು ಹೇಳಿ ಕೊಟ್ಟಿದ್ರಾ?’ - ಡಿ.ಕೆ. ಶಿವಕುಮಾರ್‌‌

‘ಶರ್ಟ್, ಪ್ಯಾಂಟ್ ಬಿಚ್ಚಲು ಕಾಂಗ್ರೆಸ್‌ನವರು ಹೇಳಿ ಕೊಟ್ಟಿದ್ರಾ?’ – ಡಿ.ಕೆ. ಶಿವಕುಮಾರ್‌‌

- Advertisement -
- Advertisement -

ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಯಲ್ಲಿರುವ ಲೈಂಗಿಕ ಹಗರಣ ಮತ್ತು ಸಿಡಿ ವಿಚಾರವಾಗಿ ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ “ರಾಜಕಾರಣದಲ್ಲಿ ಷಡ್ಯಂತ್ರ ಸಹಜ. ಇವರಿಗೆ ಶರ್ಟು, ಪ್ಯಾಂಟ್ ಬಿಚ್ಚಲು ಯಾರಾದರೂ ಹೇಳಿ ಕೊಟ್ಟಿದ್ರಾ? ಅವರು ಆಡಿರುವ ಮಾತುಗಳಿಗೆ ಸ್ಕ್ರಿಪ್ಟ್ ನಾವು ಬರೆದು ಕೊಟ್ಟಿದ್ವಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಪ್ರಕರಣವನ್ನು ನಾವೂ ಗಮನಿಸುತ್ತಿದ್ದೇವೆ. ಸುಮ್ಮನೆ ಏನೂ ಕುಳಿತಿಲ್ಲ. ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದ ಶಾಸಕರು ಸಿಡಿ ಬಿಡುಗಡೆ ಮಾಡಿದ್ದಾರೆ. ವಿಶ್ವನಾಥ್ ಅವರು ಮುಖ್ಯಮಂತ್ರಿಗೆ ಸಿಡಿ ಗುಮ್ಮಾ ಅಂತಾ ಹೇಳಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಿ ಸಚಿವರಾಗಿದ್ದಾರೆ ಅಂತಾ ಯತ್ನಾಳ್ ಅವರು ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಎಲ್ಲರನ್ನು ಒಗ್ಗೂಡಿಸಲು ಯೋಗೇಶ್ವರ್ ಅವರು 9 ಕೋಟಿ ಸಾಲ ಮಾಡಿಕೊಂಡಿದ್ದರು ಎಂದು ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹಿಂದೆ ಶ್ರೀನಿವಾಸ ಗೌಡರು ಭ್ರಷ್ಟಾಚಾರ ಕುರಿತು ಸದನದಲ್ಲೇ ಕೊಟ್ಟ ಹೇಳಿಕೆ ಬಗ್ಗೆ ತನಿಖೆ ಮಾಡಲು ಆಗಲಿಲ್ಲ. ಭ್ರಷ್ಟಾಚಾರದ ಬಗ್ಗೆ ಕೊಟ್ಟ ಹೇಳಿಕೆ ವಿರುದ್ಧದ ತನಿಖೆ ಏನಾದವು?” ಎಂದು ಹೇಳಿದ್ದಾರೆ.

ಇದನ್ನೂ ಓದಿ: Breaking: ಮಾ. 26ಕ್ಕೆ ಸಂಪೂರ್ಣ ಭಾರತ್ ಬಂದ್ – ಹೋರಾಟನಿರತ ರೈತರ ಕರೆ

“ಸಿ.ಡಿ.ಯಲ್ಲಿ ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ, ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ. ಕನ್ನಡಿಗನಾಗಿ ನಾನು ಆ ಮಾತು ಹೇಳಬಾರದು. ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಕನ್ನಡ ಹೋರಾಟಗಾರರು ಯಾಕೆ ಇನ್ನೂ ಸುಮ್ನೆ ಇದ್ದಾರೋ ಗೊತ್ತಿಲ್ಲ. ಈ ಎಲ್ಲ ವಿಚಾರವಾಗಿ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಯಾಕೆ ಇನ್ನೂ ಕೇಸು ಹಾಕಿಲ್ಲ, ಕೇಸು ತೆಗೆದುಕೊಂಡಿಲ್ಲ” ಎಂದು ಅವರು ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

“ಈ ವಿಚಾರವಾಗಿ ಕೆಲವರು ಕೋರ್ಟ್ ಗೆ ಹೋಗಿ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಸಿ.ಡಿ. ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದಾರೆ. ಯಾಕೆ ಕೋರ್ಟ್ ಗೆ ಹೋಗಿದ್ದಾರೋ ಆ ಬಗ್ಗೆ ಅವರಿಗೇ ಗೊತ್ತಿದೆ. ನಮಗೇನು ಗೊತ್ತು? ಈ ಸಿ.ಡಿ. ಪ್ರಸಂಗ ಬಾಂಬೆಯಲ್ಲಿ ನಡೆಯಿತೋ? ಬೆಂಗಳೂರಿನಲ್ಲಿ ನಡೆಯಿತೋ? ಪೂನಾದಲ್ಲಿ ನಡಿತೋ? ಬಿಜೆಪಿ ಸರ್ಕಾರ ಇತ್ತೋ? ಶಿವಸೇನೆ ಸರ್ಕಾರ ಇತ್ತೋ? ಯಾರು, ಏನು, ಎತ್ತಾ ಅಂತಾ ಅವರೇ ಹೇಳಬೇಕು? ಇದರಲ್ಲಿ ತಿರುಚುವುದು ಏನಿದೆ? ಒಂದೋ ಎರಡೋ ತಿರುಚಬಹುದು. 19 ಸಿ.ಡಿ.ಗಳನ್ನೂ ತಿರುಚಲು ಆಗುತ್ತಾ?” ಎಂದು ಡಿಕೆಶಿ ಕೇಳಿದ್ದಾರೆ.

ಸಿ.ಡಿ.ಯನ್ನು ಕಾಂಗ್ರೆಸ್‌‌ನವರು ಬಿಡುಗಡೆ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ,  “ಕಾಂಗ್ರೆಸ್‌ನವರು ಮಾಡಿದ್ದಾರೆ ಅಂದ್ರೆ, ಕಾಂಗ್ರೆಸ್ ಅವರು ಬಂದು ನಿಮ್ಮ ಶರ್ಟು, ಪ್ಯಾಂಟ್ ಬಿಚ್ಚಿ ಅಂತಾ ಹೇಳಿ ಕೊಟ್ಟಿದ್ರಾ? ಸಿಎಂ ಭ್ರಷ್ಟ ಎಂದು ಹೇಳಲು ಸ್ಕ್ರಿಪ್ಟ್ ಬರೆದು ಕೊಟ್ಟಿದ್ರಾ? ಕನ್ನಡಿಗರ ವಿರುದ್ಧ ಮಾತಾಡಿ ಎಂದು ಹೇಳಿಕೊಟ್ವಾ? ನಾವೇನು ಸ್ಕ್ರಿಪ್ಟ್ ಕೊಟ್ವಾ? ಇದೇನು ಸಿನಿಮಾನಾ? ಇವೆಲ್ಲಾ ಅವರ ಬಾಯಿಲ್ಲಿ ಬಂದಂತಹ ನುಡಿಮುತ್ತುಗಳು..!” ಎಂದು ಹೇಳಿದ್ದಾರೆ.

ಯಾವ ತನಿಖೆ ಬೇಕಾದರೂ ಮಾಡಲಿ, ಯಾವ ಪಕ್ಷದ ಮೇಲಾದರೂ ಹೇಳಲಿ. ವಿರೋಧ ಪಕ್ಷವಾಗಿ ನಾವು ಭ್ರಷ್ಟಾಚಾರ ಆರೋಪ ಮಾಡುವುದು ಬೇರೆ ವಿಚಾರ. ಆದರೆ ಹಾಲಿ ಮಂತ್ರಿ ಅವರು ಮುಖ್ಯಮಂತ್ರಿ ಭ್ರಷ್ಟ ಎಂದಾಗ ಈ ಬಗ್ಗೆ ತನಿಖೆ ನಡೆಯಬೇಕು ಅಲ್ಲವೇ? ಇದನ್ನು ಮುಖ್ಯಮಂತ್ರಿಗಳು ಹೇಗೆ ಸಹಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅವರಿಗೆ ಹಾಲು ಕುಡಿಸಿ, ಇಂತಹ ಮಾತು ಹೇಳಿಸಲು ಅವರೇನು ಚಿಕ್ಕ ಮಕ್ಕಳಾ? ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಅಂತಾ ಕಾಂಗ್ರೆಸ್‌ಗೆ ಗೊತ್ತಿದೆ. ನಾವು ನಿಭಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರದೊಂದಿಗೆ ಚರ್ಚಿಸಲು ಯಾವುದೇ ಸಮಿತಿ ರಚಿಸಿಲ್ಲ – ರೈತ ಮುಖಂಡರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...