ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ (ಡಿಪಿಡಿಪಿಎ) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ (ಮಾ.25) ತೀವ್ರ ಕಳವಳ ವ್ಯಕ್ತಪಡಿಸಿದ್ದು, “ಇದು ಭಾರತದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರು ಮಾಹಿತಿ ಪಡೆಯುದಕ್ಕೆ ದೊಡ್ಡ ಬೆದರಿಕೆ ಒಡ್ಡಲಿದೆ” ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ವಿವಿಧ ಕ್ಷೇತ್ರಗಳ ಹೋರಾಟಗಾರರು, ಸಂಪಾದಕರು, ಸಂಶೋಧಕರು ಮತ್ತು ಡೊಮೇನ್ ತಜ್ಞರೊಂದಿಗಿನ ಸಭೆಯ ನಂತರ ಮಾತನಾಡಿದ ಗಾಂಧಿ, “ಹೊಸ ಶಾಸನವು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಹೇಗೆ ದುರ್ಬಲಗೊಳಿಸುತ್ತದೆ” ಎಂಬುದನ್ನು ವಿವರಿಸಿದ್ದಾರೆ.
“ಇಂದು, ಸಂಸತ್ತಿನಲ್ಲಿ ವಿವಿಧ ಕ್ಷೇತ್ರಗಳ ಹೋರಾಟಗಾರರು, ಸಂಪಾದಕರು, ಸಂಶೋಧಕರು ಮತ್ತು ಡೊಮೇನ್ ತಜ್ಞರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಬಗ್ಗೆ, ವಿಶೇಷವಾಗಿ ಆರ್‌ಟಿಐ ಕಾಯ್ದೆಯ ವ್ಯಾಪ್ತಿಯ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ದತ್ತಾಂಶದ ಸಂಸ್ಕರಣೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯು, ಜನರು ಪ್ರಮುಖ ಸಾರ್ವಜನಿಕ ಮಾಹಿತಿಯನ್ನು ಪಡೆಯುವುದನ್ನು ನಿರ್ಬಂಧಿಸಬಹುದು. ಇದು ಆತಂಕವನ್ನು ಹುಟ್ಟುಹಾಕಿದೆ. ಗೌಪ್ಯತೆ ಮುಖ್ಯವಾದರೂ, ಶಾಸನವು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಸಾರ್ವಜನಿಕರ ಅವಕಾಶಕ್ಕೆ ಅಡ್ಡಿಯುಂಟು ಮಾಡಬಹುದು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Today, I had the opportunity to meet a diverse group of activists, editors, researchers, and domain experts in Parliament. They voiced serious concerns about the Digital Personal Data Protection Act, particularly its impact on the scope of the RTI Act.
This legislation, under… pic.twitter.com/ikDldTDfkK
— Rahul Gandhi (@RahulGandhi) March 25, 2025
“ಗೌಪ್ಯತೆಯನ್ನು ಕಾಪಾಡುವ ನೆಪದಲ್ಲಿ ಈ ಶಾಸನವು, ನಾಗರಿಕರು ಮತ್ತು ಪತ್ರಕರ್ತರು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಅಗತ್ಯವಾದ ಸಾರ್ವಜನಿಕ ಮಾಹಿತಿ ಪಡೆಯುವುದನ್ನು ತಡೆಯುತ್ತದೆ” ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಎನ್‌ಡಿಎ ಸರ್ಕಾರವು ಪರಿಶೀಲನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ನಿರ್ಧಾರ ತೆಗದುಕೊಳ್ಳಲಿದೆ. ಹೊಣೆಗಾರಿಕೆ ಮತ್ತು ಉತ್ತಮ ಆಡಳಿತದ ಹಿತದೃಷ್ಟಿಯಿಂದ ಈ ವಿಷಯವನ್ನು ದೇಶದ ವಿವಿಧ ವಲಯಗಳ ನಾಯಕರೊಂದಿಗೆ ಚರ್ಚಿಸಲಿದೆ. ನಮ್ಮ ಜನರ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.


