ರೈತ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ಪಾಪ್ ತಾರೆ ರಿಹಾನ್ನಾಗೆ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರು, ’ರಿರಿ’ ಎಂಬ ಹೊಸ ಹಾಡನ್ನು ಗೌರವಾರ್ಥವಾಗಿ ಸಮರ್ಪಿಸಿದ್ದಾರೆ.
ಎರಡು ನಿಮಿಷ-ಹದಿನೈದು ಸೆಕೆಂಡ್ ಹಾಡಿನಲ್ಲಿ, ದಿಲ್ಜಿತ್ ರಿಹಾನ್ನಾಳ ತಾಯ್ನಾಡು ಬಾರ್ಬಡೋಸ್ ಬಗ್ಗೆ ಮತ್ತು ಅವಳು ಸ್ವರ್ಗದಿಂದ ಇಳಿದ ದೇವತೆ ಎಂದು ಹೊಗಳಿದ್ದಾರೆ. ಉಳಿದಂತೆ ಹಾಡಿನಲ್ಲಿ ಪಂಜಾಬಿ ಹಾಡುಗಳಲ್ಲಿ ಹೆಚ್ಚಾಗಿ ಕೇಳಿಬರುವ ಸೌಂದರ್ಯ ಮತ್ತು ಬಟ್ಟೆಯ ಬಗ್ಗೆ ವರ್ಣಣೆಗಳಿವೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?
ಹಾಡನ್ನು ರಾಜ್ ರಂಜೋದ್ ಬರೆದಿದ್ದು, ದಿಲ್ಜಿತ್ ದೊಸಾಂಜ್ ಹಾಡಿದ್ದಾರೆ.
“ಅವಳು ಗೋಧಿ ಮೈಬಣ್ಣದ
ಬಾರ್ಬಡೋಸ್‌ನ ಸುಂದರ ಮಹಿಳೆ
ಅವಳನ್ನು ಸೃಷ್ಟಿಸಿದ ದೇವರಿಗೆ ನಮಸ್ಕರಿಸುತ್ತೇನೆ
ನಿಮಗೆ ಪಟಿಯಾಲ ಸೂಟ್ ಉಡುಗೊರೆಯಾಗಿ ನೀಡುತ್ತೇನೆ
ನಿಮ್ಮ ಸಂಗೀತ ಕಚೇರಿಗೆ ಕುರ್ತಾ ಪೈಜಾಮ ಧರಿಸಿ ಬರುತ್ತೇನೆ” ಎಂದು ಹಾಡು ಪ್ರಾರಂಭವಾಗುತ್ತದೆ.
#RIRI #Rihanna ✊?https://t.co/SkyOBC8lLx@Thisizintense @raj_ranjodh
— DILJIT DOSANJH (@diljitdosanjh) February 3, 2021
ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ರಿಹಾನ್ನಾ ಬೆಂಬಲ ನೀಡಿದ 24 ಗಂಟೆಗಳ ಒಳಗಾಗಿ ದಿಲ್ಜಿರ್ ಈ ಹಾಡನ್ನು ಸಮರ್ಪಿಸಿದ್ದಾರೆ. ದಿಲ್ಜಿತ್ ಪ್ರಾರಂಭದಿಂದಲೂ ರೈತ ಹೋರಾಟಕ್ಕೆ ಬೆಂಬಲ ನೀಡುತ್ತಲೆ ಬಂದಿದ್ದಾರೆ.
why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
ರಿಹಾನ್ನಾ ’ನಾವ್ಯಾಕೆ ಈ ವಿಷಯದ ಕುರಿತು ಚರ್ಚಿಸುತ್ತಿಲ್ಲ’ ಎಂದು ಸಿಎನ್‌ಎನ್ ಲೇಖನವನ್ನು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ರಿಹಾನ್ನಾ ಟ್ವೀಟ್ ಮಾಡುತ್ತಿದ್ದಂತೆ ಭಾರತದ ಬಲಪಂಥೀಯರು ಹಾಗೂ ಬಿಜೆಪಿ ಬೆಂಬಲಿಗರು ವಾಡಿಕೆಯಂತೆ ಅವರ ವ್ಯಕ್ತಿತ್ವ ಹರಣ ಸೇರಿಂತೆ, ವೈಯಕ್ತಿಕವಾಗಿ ನಿಂದಿಸಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!



I Love ananu gouri .com