Homeಕರ್ನಾಟಕಡೀಕೆಗಾಗಿ ಒಕ್ಕಲಿಗರು ಒಟ್ಟಾದದ್ದು ಲಿಂಗಾಯತರ ಯಡ್ಯೂರಪ್ಪನವರಿಗೆ ರಿಲೀಫ್ ಕೊಡುವುದೇ?

ಡೀಕೆಗಾಗಿ ಒಕ್ಕಲಿಗರು ಒಟ್ಟಾದದ್ದು ಲಿಂಗಾಯತರ ಯಡ್ಯೂರಪ್ಪನವರಿಗೆ ರಿಲೀಫ್ ಕೊಡುವುದೇ?

- Advertisement -
- Advertisement -

ಬಂಧನದಲ್ಲಿರುವ ಡಿಕೆ ಶಿವಕುಮಾರ್ ಅವರಿಗಾಗಿ ಒಕ್ಕಲಿಗರು ಒಗ್ಗೂಡಿದ್ದಾರೆ! ಒಗ್ಗೂಡಿ ರೊಚ್ಚಿಗೆದ್ದಿದ್ದಾರೆ! ಸೆಪ್ಟೆಂಬರ್ 11ರಂದು ಬಸವನಗುಡಿಯ ನ್ಯಾಶನಲ್ ಕಾಲೇಜಿನಿಂದ ಫ್ರೀಡಂ ಪಾರ್ಕಿನವರೆಗೆ ಕಿಕ್ಕಿರಿದ ಒಕ್ಕಲಿಗ ಜನಸ್ತೋಮ ಕೊಡಬೇಕಾದ ಸಂದೇಶವನ್ನು, ತಲುಪಿಸಬೇಕಾದವರಿಗೆ ಪರಿಣಾಮಕಾರಿಯಾಗಿಯೇ ತಲುಪಿಸಿದ್ದಾರೆ. ರಾಜಕೀಯ ವೈಷಮ್ಯ ಮನಸ್ಸಲ್ಲಿಟ್ಟುಕೊಂಡು ನಮ್ಮ ಜಾತಿಯ ನಾಯಕರುಗಳ ತಂಟೆಗೆ ಬಂದರೆ ಹುಶಾರು ಅನ್ನೋ ಮೆಸೇಜನ್ನು ಸೀದಾ ದಿಲ್ಲಿಗೆ ತಲುಪಿಸುವುದು ಪ್ರತಿಭಟನೆಯ ಉದ್ದೇಶವಾಗಿತ್ತು. ಆ ಪ್ರತಿಭಟನೆಯ ನಿಜವಾದ ಫಲಾನುಭವಿ ಡಿ.ಕೆ.ಶಿವಕುಮಾರರಿಗಿಂತ ಹೆಚ್ಚಾಗಿ ದೇವೇಗೌಡರ ಫ್ಯಾಮಿಲಿ! ಸಿಎಂ ಆಗಿದ್ದಾಗ ಕುಮಾರಸ್ವಾಮಿಯವರು ಮಾಡಿಕೊಂಡ ಹಲಗೆವಡೇರಳ್ಳಿ ಡಿನೋಟಿಫಿಕೇಷನ್, ಫೋನ್ ಕದ್ದಾಲಿಕೆ, ಐಎಂಎ ಹಗರಣದ ಫೈಲುಗಳನ್ನು ಕೈಲಿಟ್ಟುಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ಮುಂದಿನ ಟಾರ್ಗೆಟ್ ದೇವೇಗೌಡರ ಫ್ಯಾಮಿಲಿ ಅನ್ನೋದು ಬಹಳ ಖಚಿತ ಮಾಹಿತಿ. ಅದರಿಂದ ಬಚಾವಾಗುವ ಸಲುವಾಗಿಯೇ ದೇವೇಗೌಡರು ಡಿ.ಕೆ. ಪ್ರಕರಣದ ಮೂಲಕ ಜಾತಿ ಅಸ್ತ್ರವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ.

ನಿನ್ನೆ ನಡೆದ ಪ್ರತಿಭಟನೆಯಲ್ಲಿ ಗೌಡರ ಫ್ಯಾಮಿಲಿಯವರು ಅಧಿಕೃತವಾಗಿ ಕಾಣಿಸಿಕೊಳ್ಳದೆ ಹೋದರು ಜೆಡಿಎಸ್ ಕಾರ್ಯಕರ್ತರೇ ದಟ್ಟವಾಗಿ ಜಮಾಯಿಸಿದ್ದರು. ಒಕ್ಕಲಿಗರು ಸಾರಾಸಗಟಾಗಿ ಜೆಡಿಎಸ್ ಪಾಳೆಯದಲ್ಲಿರೋದರಿಂದ ಜಾತಿ ನೆಲೆಗಟ್ಟಿನಲ್ಲಿ ಅವರು ಒಂದುಕಡೆ ಕಲೆತಾಗ ಜೆಡಿಎಸ್ ಕಾರ್ಯಕರ್ತರಾಗಿಯೂ ಕಾಣಿಸಿಕೊಳ್ಳೋದು ಸಹಜ ಅಂತ ಇದನ್ನು ತಳ್ಳಿಹಾಕಲಿಕ್ಕಾಗದು. ಯಾಕೆಂದರೆ ಸ್ವತಃ ಕುಮಾರಸ್ವಾಮಿಯವರೇ “ನನಗೆ ಚನ್ನಪಟ್ಟಣದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ಇದ್ದುದರಿಂದ ಪ್ರತಿಭಟನೆಗೆ ಹೋಗಲಿಲ್ಲ. ಅಲ್ಲದೇ ನನ್ನನ್ನು ಕರೆದೂ ಇರಲಿಲ್ಲ. ಆದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು” ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಬಂಧನ ಕಾನೂನು ಪ್ರಕ್ರಿಯೆಗಿಂತ ಹೆಚ್ಚಾಗಿ ಬಿಜೆಪಿಯ ರಾಜಕೀಯ ವೈಷಮ್ಯ ಒಳಗೊಂಡಿರುವಂತೆ ಒಕ್ಕಲಿಗರ ಪ್ರತಿಭಟನೆಯ ಹಿಂದೆಯೂ ದೇವೇಗೌಡರ ರಾಜಕೀಯ ತಂತ್ರಗಾರಿಕೆಯ ಛಾಯೆಯನ್ನು ತಳ್ಳಿ ಹಾಕಲಿಕ್ಕಾಗುವುದಿಲ್ಲ.

ಅದೇನೆ ಇರಲಿ, ಬಿಜೆಪಿ ವರ್ಸಸ್ ಒಕ್ಕಲಿಗರು ಕದನದವು ಪರೋಕ್ಷವಾಗಿ ಯಡಿಯೂರಪ್ಪನವರ ಕೈ ಬಲಪಡಿಸುತ್ತಾ? ಎಂಬ ಲೆಕ್ಕಾಚಾರವೊಂದು ಓಡಾಡುತ್ತಿದೆ. ಈಗಲೂ ಯಡಿಯೂರಪ್ಪ ಲಿಂಗಾಯತರ ಮಾಸ್ ಲೀಡರ್ ಆಗಿ ಉಳಿದುಕೊಂಡಿದ್ದರೂ ಬಿಜೆಪಿಯೊಳಗೆ ಅವರಿಗೆ ಮೊದಲಿದ್ದ ಮಾನ್ಯತೆಗಳು ಸಿಗುತ್ತಿಲ್ಲ. ಈ ಮೊದಲು ದಿವಂಗತ ಅನಂತ್ ಕುಮಾರ್ ಪಕ್ಷದೊಳಗೆ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾಗಿದ್ದರೂ ಯಡಿಯೂರಪ್ಪ ಇಂಥಾ ದೈನೇಸಿ ಸ್ಥಿತಿ ತಲುಪಿರಲಿಲ್ಲ. ಆದರೆ ಯಾವಾಗ ಬಿ.ಎಲ್.ಸಂತೋಷ್ ಕೈ ಮೇಲಾಗುತ್ತಾ ಬಂತೊ ಆಗಿನಿಂದ ಯಡಿಯೂರಪ್ಪ ವಿಪರೀತ ಮುಖಭಂಗ ಅನುಭವಿಸುತ್ತಿದ್ದಾರೆ. ಯಡ್ಯೂರಪ್ಪ ಸಿಎಂ ಆಗುವುದಕ್ಕಿಂತ ಕೆಲ ದಿನಗಳ ಹಿಂದಷ್ಟೇ ಸಂತೋಷರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಂತಹ ಪ್ರಭಾವಿ ಹುದ್ದೆಗೆ ಆಯ್ಕೆ ಮಾಡಿದ್ದೇ ಸಿಎಂ ಆಗಲಿರುವ ಯಡ್ಯೂರಪ್ಪರನ್ನು ನಿಯಂತ್ರಿಸುವ ಸಲುವಾಗಿ.

ಸಂತೋಷ್ ಎಷ್ಟೇ ಪರಿಣಿತ ತಂತ್ರಗಾರರಾದರು ಜನರನ್ನು ಸೆಳೆಯುವಂತ ಮಾಸ್ ಲೀಡರ್ ಸದ್ಯಕ್ಕಂತು ಅಲ್ಲ. ಯಡಿಯೂರಪ್ಪನವರ ಆ ಸಾಮರ್ಥ್ಯ ರಾಜ್ಯ ಬಿಜೆಪಿಯ ಮತ್ತ್ಯಾವ ನಾಯಕನಿಗೂ ಇಲ್ಲ ಅನ್ನೋದನ್ನು `ಕೆಜೆಪಿ’ ತುಂಬಾ ಹಿಂದೆಯೇ ಸಾಬೀತು ಮಾಡಿದೆ. ಹಾಗಿರುವಾಗ ಯಾವ ಧೈರ್ಯದಲ್ಲಿ ಬಿಜೆಪಿ ಯಡಿಯೂರಪ್ಪನವರನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಅಂತ ನೋಡಲು ಹೋದರೆ ಎರಡು ಕಾರಣಗಳು ಕಾಣುತ್ತವೆ.

ಮೊದಲನೆಯದ್ದು, 2014ರ ನಂತರದಲ್ಲಿ ಬಿಜೆಪಿ ನಾಯಕತ್ವ ಕೇಂದ್ರೀಕರಣಗೊಳ್ಳುತ್ತಿರುವುದು. ಮೋದಿ-ಶಾ ಜೋಡಿಯ ಮುಂದೆ ಯಾವ ಪ್ರಾದೇಶಿಕ ಮುಖಗಳೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಯಾವುದೇ ರಾಜ್ಯದ ಚುನಾವಣೆ ಸ್ಥಳೀಯ ಇಶ್ಯೂಗಳಿಗಿಂತ ಹೆಚ್ಚಾಗಿ ರಾಷ್ಟ್ರೀಯ ಚರ್ಚೆಗಳನ್ನೇ ತಮ್ಮ ಸುತ್ತ ಹೆಣೆದುಕೊಳ್ಳುತ್ತಿರೋದು ಮತ್ತು ಮೋದಿ-ಶಾ ಜೋಡಿಯೇ ವೇದಿಕೆಗಳನ್ನು ಆವರಿಸಿಕೊಳ್ಳುತ್ತಿರೋದು ಇದೇ ಕಾರಣಕ್ಕೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. 2019ರ ಚುನಾವಣಾ ಫಲಿತಾಂಶ ಅದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡಿದೆ. ಚುನಾವಣೆಗು ಮುನ್ನ ಯಡ್ಯೂರಪ್ಪ ಹೇಳಿದ್ದ 22 ಸೀಟುಗಳ ಲೆಕ್ಕಾಚಾರವನ್ನೂ ಮೀರಿ 25 ಬಿಜೆಪಿ ಸಂಸದರು ಗೆದ್ದದ್ದು ಸ್ವತಃ ಯಡಿಯೂರಪ್ಪನವರಿಗೇ ಒಳಗೊಳಗೇ ಕೀಳರಿಮೆ ಉಂಟುಮಾಡಿರೋದು ಸುಳ್ಳಲ್ಲ. ಹಾಗಾಗಿ ಕರ್ನಾಟಕದಲ್ಲಿ ಯಡಿಯೂರಪ್ಪ ಈಗ ನಮಗೆ ಅನಿವಾರ್ಯವಲ್ಲ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿರಬಹುದು.

ಇನ್ನು ಎರಡನೇ ಕಾರಣ, ಲಿಂಗಾಯತರ ವೋಟ್ ಬ್ಯಾಂಕ್ ಮೇಲಿನ ಹಿಡಿತದ ಕೆಮಿಸ್ಟ್ರಿ. ಈ ಮೊದಲು ಯಡಿಯೂರಪ್ಪನವರ ಕಾರಣಕ್ಕೆ ಲಿಂಗಾಯತ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುತ್ತಿತ್ತು. ಅದರಿಂದಾಗಿಯೇ ಪಕ್ಷದ ಮೇಲೆ ಯಡ್ಯೂರಪ್ಪನವರ ಹಿಡಿತವೂ ಜೋರಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮೋದಿಯವರ ನಾಯಕತ್ವದ ಕೇಂದ್ರೀಕರಣ ಹೆಚ್ಚಾದಂತೆಲ್ಲ, ಜಾತಿಯ ಕಾರಣಕ್ಕೆ ಹಾಗೂ ಆ ಜಾತಿಯ ಲೀಡರುಗಳ ಕಾರಣಕ್ಕೆ ಬಿಜೆಪಿಯ ಪಾರಂಪರಿಕ ಮತಗಳೆನಿಸಿದ್ದ ಸಮುದಾಯಗಳು ಮೋದಿತ್ವ ಮತ್ತು ಹಿಂದೂತ್ವದ ನಶೆಗೆ ಒಳಗಾಗಿವೆ. ಇದೇ ಸಮೀಕರಣದಡಿಯಲ್ಲಿ ಲಿಂಗಾಯತರು, ಅದರಲ್ಲೂ ಲಿಂಗಾಯತ ಯುವಸಮೂಹ, ಜಾತಿಯ ಪ್ರಭಾವಕ್ಕಿಂತಲೂ ಹೆಚ್ಚಾಗಿ ಮೋದಿತ್ವ-ಹಿಂದೂತ್ವಗಳಿಂದ ಬಿಜೆಪಿ ಜೊತೆ ಕನೆಕ್ಟ್ ಆಗಿದ್ದಾರೆ. ಅದನ್ನು ಬಿಜೆಪಿ ಹೈಕಮ್ಯಾಂಡಿಗೆ ಅರ್ಥ ಮಾಡಿಸಿದ್ದು ಸಿದ್ರಾಮಯ್ಯನವರ ಸರ್ಕಾರದ `ಲಿಂಗಾಯತ ಪ್ರತ್ಯೇಕ ಧರ್ಮ’ದ ಶಿಫಾರಸ್ಸು!

`ಇದು ಹಿಂದೂ ಧರ್ಮವನ್ನು ಹೊಡೆಯುವ ಹುನ್ನಾರ’ ಎಂದು ಅದರ ಸುತ್ತ ಬಿಜೆಪಿ ಬೆಂಬಲಿತ ಮಾಧ್ಯಮಗಳು ಮತ್ತು ಬಲಪಂಥೀಯ ಸೋಶಿಯಲ್ ಮೀಡಿಯಾಗಳು ನಡೆಸಿದ ಅಪಪ್ರಚಾರದ ಪರಿಗೆ  ಲಿಂಗಾಯತರು ಹಿಂದೂತ್ವದ ಸೆಳೆತಕ್ಕೆ ತಲೆದೂಗುತ್ತಾ ಬಂದರು. ಅದರ ಪರಿಣಾಮವೇ 2018ರ ವಿಧಾನಸಭಾ ಚುನಾವಣೆಯಲ್ಲಿ ಹಲವು ಜನಪರ ಕೆಲಸ ಮಾಡಿದ್ದ ಸಿದ್ರಾಮಯ್ಯನವರ ಕಾಂಗ್ರೆಸನ್ನು ಹಿಂದಿಕ್ಕಿ ಬಿಜೆಪಿ 104 ಸ್ಥಾನಗಳನ್ನು ಗೆದ್ದದ್ದು. ಸಾರಾಂಶ ಇಷ್ಟೇ, ಯಡಿಯೂರಪ್ಪನವರ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಲಿಂಗಾಯತರು ಈಗ ಮೋದಿತ್ವ-ಹಿಂದೂತ್ವದ ಸೆಳೆತಕ್ಕೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಇದು ಅರ್ಥವಾದ ದಿನದಿಂದಲೇ ಯಡಿಯೂರಪ್ಪ ಪಕ್ಷದೊಳಗೆ ಸೊರಗುತ್ತಾ ಬಂದರು, ಈಗಂತು ತನ್ನಿಷ್ಟದ ಒಂದು ಸಂಪುಟವನ್ನು ರಚಿಸಿಕೊಳ್ಳಲಿಕ್ಕೂ ಪರದಾಡಬೇಕಾದ ನಿತ್ರಾಣ ಸ್ಥಿತಿಗೆ ಬಂದಿದ್ದಾರೆ.

ಡಿ.ಕೆ.ಶಿವಕುಮಾರ್ ಬೆಂಬಲಿಸುವ ರೂಪದಲ್ಲಿ ದೇವೇಗೌಡರ ಕುಟುಂಬದ ಮೇಲೆ ಎರಗಬಹುದಾದ ದಾಳಿಗೆ ಮುನ್ನೆಚ್ಚರಿಕೆ ಕೊಡುವ ಸಲುವಾಗಿ ಈಗ ಒಕ್ಕಲಿಗರು ಒಗ್ಗೂಡಿ ದನಿ ಮೊಳಗಿಸಿರುವುದು ರಾಜ್ಯದಲ್ಲಿ ಮತ್ತೆ ಲಿಂಗಾಯತರೂ ಜಾತಿ ಧೃವೀಕೃತ ರಾಜಕಾರಣಕ್ಕೆ ನಾಂದಿ ಹಾಡುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಲಿಂಗಾಯತರು ಮತ್ತು ಒಕ್ಕಲಿಗರು, ಕರ್ನಾಟಕದ ರಾಜಕಾರಣವನ್ನು ನಿಯಂತ್ರಿಸುತ್ತಾ ಬಂದ ಎರಡು ಪ್ರಭಾವಿ ಸಮುದಾಯಗಳು. ಒಕ್ಕಲಿಗರು ಪಕ್ಷಾತೀತವಾಗಿ ಒಗ್ಗೂಡಿ ತಮ್ಮ ಜಾತಿಯ ಲೀಡರುಗಳ ಹಿತಕಾಯಲು ಮುಂದಾಗುತ್ತಾರೆಂದರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿಬಿಟ್ಟರೆ, ಅದು ಸಹಜವಾಗಿಯೇ ಲಿಂಗಾಯತರಲ್ಲೂ ಜಾತಿ ಧೃವೀಕರಣವನ್ನು ಕೆರಳಿಸುತ್ತೆ. ಅಥವಾ ಮೋದಿತ್ವದ ಕಾರಣಕ್ಕೆ ಲಿಂಗಾಯತರ ಮೇಲೆ ಜಾತಿ ರಾಜಕಾರಣದ ಹಿಡಿತ ಕಳೆದುಕೊಂಡಿರುವ ಯಡ್ಯೂರಪ್ಪನವರು ಸಣ್ಣದಾಗಿ  ಪ್ರಯತ್ನಪಟ್ಟರೂ `ಒಕ್ಕಲಿಗರಂತೆ ನಾವೂ ನಮ್ಮ ನಾಯಕರ ಬೆನ್ನಿಗೆ ನಿಲ್ಲಲು ಸಿದ್ದ’ ಎಂದು ಲಿಂಗಾಯತರು ಪ್ರತಿಕ್ರಿಯಿಸುವ ಸಾಧ್ಯತೆಯನ್ನು ಈ ಪ್ರತಿಭಟನೆ ದಟ್ಟವಾಗಿಸಿದೆ. ಹಾಗೇನಾದರು ಆದಲ್ಲಿ, ಸಂತೋಷ್ ಉಪಟಳದಿಂದ ನಿಶ್ಯಕ್ತಗೊಂಡಿರುವ ಯಡಿಯೂರಪ್ಪನವರಿಗೆ ಬಲ ಬರಲಿದೆ. ನಿರೀಕ್ಷೆಗು ಮೀರಿ 25 ಸಂಸದರನ್ನು ಗೆಲ್ಲಿಸಿಕೊಂಡಿದ್ದರಿಂದ ಕರ್ನಾಟಕದಲ್ಲಿ ಹಿಂದೂತ್ವ, ಮೋದಿತ್ವಗಳ ನಶೆಯಲ್ಲಿ ಜಾತಿ ರಾಜಕಾರಣದ ಪಾಳೆಗಾರಿಕೆ ಮುಗಿದಿದೆ ಎಂದು ಭ್ರಮಿಸಿದ್ದ ಬಿಜೆಪಿ ಹೈಕಮಾಂಡ್ ಡಿ.ಕೆ. ಬಂಧನದ ಪ್ರತಿರೋಧ ಕಂಡು ತಬ್ಬಿಬ್ಬಾಗಿರುವುದಂತೂ ನಿಜ. ಅದಕ್ಕೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪೆದ್ದುಪೆದ್ದಾಗಿ ಡೀಕೆ ಬಂಧನವನ್ನು ಸಿದ್ರಾಮಯ್ಯನವರ ತಲೆಗೆ ಕಟ್ಟಲು ಹೋಗಿ ನಗೆಪಾಟಲಿಗೆ ಈಡಾದದ್ದು. ಬಿಜೆಪಿಯು ಕರ್ನಾಟಕದ ಜಾತಿ ರಾಜಕಾರಣದ ಸುಳಿಗಳನ್ನು ಕಂಡು ತಬ್ಬಿಬ್ಬಾದಷ್ಟು ಅಂತಹ ರಾಜಕಾರಣವನ್ನೇ ಉಸಿರಾಡಿಕೊಂಡು ಬಂದ ಯಡ್ಯೂರಪ್ಪನಂತವರಿಗೆ ಲಾಭವೇ ಅಲ್ಲವೇ!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...