Homeಕರ್ನಾಟಕದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನದಲ್ಲಿ ಅನುಮಾನ, ಆತಂಕ, ನಂಬಿಕೆ - ದೇವನೂರ ಮಹಾದೇವ

ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನದಲ್ಲಿ ಅನುಮಾನ, ಆತಂಕ, ನಂಬಿಕೆ – ದೇವನೂರ ಮಹಾದೇವ

ಬಡವರಿಗೆ ಕೆಲಸ ಮಾಡುತ್ತಿಲ್ಲ ಎಂದು ಚರ್ಚಿಸುವುದೂ ಅಪರಾಧವಾಗುವುದಾದರೆ ಎಲ್ಲಾ ಊರು ನಗರಗಳ ತೊಂಬತ್ತು ಭಾಗವನ್ನು ಜೈಲಾಗಿ ಪರಿವರ್ತಿಸಬೇಕಾಗುತ್ತದಲ್ಲವೆ?

- Advertisement -
- Advertisement -

ಗೆಳೆಯ ದೊಡ್ಡಿಪಾಳ್ಯ ನರಸಿಂಹಮೂರ್ತಿರನ್ನು ರಾಯಚೂರು ಪೊಲೀಸ್, ಎರಡು ದಶಕಗಳ ಹಿಂದೆ ನಡೆದಿತ್ತು ಎನ್ನಲಾದ `ಕ್ರಿಮಿನಲ್ ಪ್ರಕರಣ’ ಗಳಲ್ಲಿ ವಿನೋದ್ ಎಂಬ ಹೆಸರಿನಲ್ಲಿ ಭಾಗಿಯಾಗಿದ್ದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯೇ ನರಸಿಂಹಮೂರ್ತಿ ಎಂದು ಪೊಲೀಸ್ ಸಾಕ್ಷಿ ಆಧರಿಸಿ ಗುಮಾನಿ ಮೇಲೆ ಬಂಧಿಸಲಾಗಿದೆ.

ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎನ್ನುವುದೇ ಅನುಮಾನ ಆತಂಕ ಹುಟ್ಟಿಸುವಂತಿದೆ. ಯಾಕೆಂದರೆ ನರಸಿಂಹಮೂರ್ತಿ ಸಾರ್ವಜನಿಕ ವ್ಯಕ್ತಿ. ಪತ್ರಿಕಾ ಕ್ಷೇತ್ರದಲ್ಲಿ ಚಿರಪರಿಚಿತ. ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ. ಪ್ರಗತಿಪರ ಸಂಘಟನೆಗಳ ಸಖ. ದಶಕಗಳಿಂದಲೂ ರಾಯಚೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲಿ ಸುತ್ತಾಟ ನಡೆಸಿದವರು, ಅವರು ಭಾಗವಹಿಸಿದ ಕಾರ್ಯಕ್ರಮ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 1997 ರಿಂದಲೇ ಬೆಂಗಳೂರು-ಮೈಸೂರು ಕಾರಿಡಾರ್ ವಿರುದ್ಧದ ಹೋರಾಟದಲ್ಲಿ ನರಸಿಂಹಮೂರ್ತಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರೊಡನೆ ಸಕ್ರಿಯವಾಗಿದ್ದನ್ನು ನಾವು ನೋಡಿದ್ದೇವೆ. ಗೌರಿ ಟ್ರಸ್ಟ್‌ಗೆ ಎಚ್.ಎಸ್.ದೊರೆಸ್ವಾಮಿಯವರು ಅಧ್ಯಕ್ಷರು, ನರಸಿಂಹಮೂರ್ತಿ ಪ್ರಧಾನ ಕಾರ್ಯದರ್ಶಿ.

ದೊರೆಸ್ವಾಮಿಯವರು ಇದ್ದ ಕಡೆ ಬಲಗೈಯಂತೆ ಅವರ ಜೊತೆ ನರಸಿಂಹಮೂರ್ತಿಯವರೂ ಸಾಮಾನ್ಯವಾಗಿ ಇದ್ದೇ ಇರುತ್ತಾರೆ.
ಹೀಗಿರುವಾಗ, ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎನ್ನುವುದಾದರೆ ಎಚ್.ಎಸ್.ದೊರೆಸ್ವಾಮಿಯವರೂ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಬೇಕಾಗಿ ಬರುವ ದಯಾನೀಯ ಪರಿಸ್ಥಿತಿಯೂ ನಮಗೆ ಬರಬಹುದೇನೋ.

ಇನ್ನೂ ತಮಾಷೆ ಎಂದರೆ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಪೊಲೀಸ್ ಕ್ವಾಟ್ರಸ್ ಎದುರೇನೆ ನರಸಿಂಹಮೂರ್ತಿ ಮನೆ. ನರಸಿಂಹಮೂರ್ತಿ ಮನೆ ಗುರುತು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳನ್ನೆ ಮೂರ್ತಿ ಮನೆ ವಿಳಾಸ ಕೇಳುವ ಪರಿಪಾಠ ಉಂಟು. ಹೀಗಿರುವಾಗ ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎಂದು ಹೇಳುವಲ್ಲಿ ಯಾವುದಾದರೂ ಕಾಣದ ಕೈಗಳ ಒತ್ತಡ ಇರಬಹುದೇ? ಈ ಅನುಮಾನ ಆತಂಕ ಕಾಡುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕೆ, ಪತ್ರಿಕಾಕರ್ತರು, ಭಿನ್ನ ಧ್ವನಿಗಳ ಕತ್ತು ಹಿಸುಕಲಾಗುತ್ತಿದೆ.

ಈ ಪ್ರಕರಣ ಸಂಬಂಧಪಟ್ಟಂತೆ, ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವೇದಮೂರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ಪ್ರಕರಣಗಳ ನೀಡಿರುವ ವಿವರಗಳನ್ನು ವಿಶೇಷವಾಗಿ ಗಮನಿಸಬೇಕಾಗಿದೆ. ಅವರು ಹೇಳುತ್ತಾರೆ- 1) ಬಡವರಿಗೆ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಏಳೆಂಟು ಜನ ಸಭೆ ನಡೆಸುತ್ತಿದ್ದರು- ಇದೊಂದು ಪ್ರಕರಣ 2) ಬಿಡಿಓ ನೇತೃತ್ವದಲ್ಲಿ ಸಭಾ ಭವನ ಕಟ್ಟುತ್ತಿದ್ದಾಗ ಪಕ್ಕದಲ್ಲಿದ್ದ ಗರೀಬನ ಜೋಪಡಿಗೆ ತೊಂದರೆಯಾಗುತ್ತದೆ ಎಂದು ಒಂದಿಷ್ಟು ಜನ ಮಾರಾಕಾಸ್ತ್ರಗಳೊಡನೆ ಅಡಚಣೆ ಮಾಡಿದರು. 3) ಈ ಪ್ರಕರಣಗಳಲ್ಲಿ ಚಾರ್ಜ್‍ಷೀಟ್ ಆಗಿದೆ. ನ್ಯಾಯಾಲಯದಿಂದ ವಾರೆಂಟ್ ಇದೆ. ಈ ವಾರೆಂಟ್ ಮೇರೆಗೆ (ವಿನೋದ್ ಎಂಬ ಹೆಸರಲ್ಲಿ ಪ್ರಕರಣಗಳಲ್ಲಿ ಭಾಗವಹಿಸಿದ್ದ ವ್ಯಕ್ತಿಯೇ ತಲೆ ಮರೆಸಿಕೊಂಡಿದ್ದ ನರಸಿಂಹಮೂರ್ತಿ ಎಂದು) ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಮುಂದಿನದು ನ್ಯಾಯಾಲಯಕ್ಕೆ ಬಿಟ್ಟಿದ್ದು ಎನ್ನುತ್ತಾರೆ.

ಮೊದಲನೆಯದಾಗಿ ಎಸ್.ಪಿ. ವೇದಮೂರ್ತಿಯವರ ಸರಳ, ನೇರ ಮಾತುಗಳನ್ನು ನಾವು ಗೌರವಿಸಬೇಕು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಲಯದ ವಾರೆಂಟ್ ಇದೆ. ಆ ಪ್ರಕಾರವಾಗಿ ಕರ್ತವ್ಯ ನಿರ್ವಹಿಸಿದ್ದೇವೆ ಎನ್ನುತ್ತಾರೆ. ಈಗ ಇರುವ ಯಥಾಸ್ಥಿತಿ ಜಡ ಕಾನೂನು ಪ್ರಕಾರ ಅವರು ಕೆಲಸ ಮಾಡಿದ್ದಾರೆ. ಅವರು ಮಾಡಲೇಬೇಕಾಗುತ್ತದೆ. ಆದ್ದರಿಂದ ಎತ್ತು ಈಯ್ತು ಎಂದರೆ ಕೊಟ್ಟಿಗೆಗೆ ಕಟ್ಟು ಎಂಬ ಗಾದೆ ಮಾತಿನಂತೆ ಪೊಲೀಸ್ ಬಗ್ಗೆ ಕುರುಡಾಗಿ ಎಗರಾಡುವುದನ್ನು ನಮ್ಮ ಹೋರಾಟದ ಸಂಘಟನೆಗಳ ಗೆಳೆಯರು ಕೈ ಬಿಡುವುದು ಕ್ಷೇಮ.

ಯಾಕೆಂದರೆ, ಇಲ್ಲಿ ನಾವು ಚರ್ಚಿಸಬೇಕಾದ ವಿಚಾರಗಳೇ ಬೇರೆ ಇದೆ. ಬಡವರಿಗೆ ಕೆಲಸ ಮಾಡುತ್ತಿಲ್ಲ ಎಂದು ಚರ್ಚಿಸುವುದೂ ಅಪರಾಧವಾಗುವುದಾದರೆ ಎಲ್ಲಾ ಊರು ನಗರಗಳ ತೊಂಬತ್ತು ಭಾಗವನ್ನು ಜೈಲಾಗಿ ಪರಿವರ್ತಿಸಬೇಕಾಗುತ್ತದಲ್ಲವೆ? ಇನ್ನು ಸಮುದಾಯ ಭವನ ಕಟ್ಟುವುದಕ್ಕೆ ಒಂದಿಷ್ಟು ಜನ ಅಡಚಣೆ ಮಾಡಿದರು ಎಂಬ ಪ್ರಕರಣವನ್ನು ಈಗಾಗಲೇ ನ್ಯಾಯಾಲಯ ವಿಚಾರಣೆ ಮಾಡಿ ಸಾಕ್ಷ್ಯಾ ಇಲ್ಲದೆ ಪ್ರಕರಣವನ್ನು ಖುಲಾಸೆ ಮಾಡಿದೆ. ಏನು ಆರೋಪ ಇತ್ತೋ ಅದೇ ಬಿದ್ದುಹೋಗಿದೆ. ಈ ಸಂಬಂಧ ಬಂಧಿಸಿದ್ದ ಆರೋಪಿಗಳ ಬಿಡುಗಡೆಯೂ ಆಗಿದೆ. ಆರೋಪವೇ ಬಿದ್ದು ಹೋಗಿರುವಾಗ, ಇವರಲ್ಲಿ ಆರೋಪಿತರಾದ ವಿನೋದನೊ ಮತ್ತೊಬ್ಬನೊ ಸಿಕ್ಕರೆಷ್ಟು? ಸಿಗದಿದ್ದರೆಷ್ಟು? ಈ ಪ್ರಕರಣವನ್ನು ಜೀವಂತವಾಗಿರಿಸುವುದೇಕೆ? ಇದು ನಮ್ಮ ಪೊಲೀಸ್ ಮತ್ತು ನ್ಯಾಯಾಲಯದ ಮೇಲೆ ಆಚರಣಾತ್ಮಕ ವೃಥಾ ಹೆಣ ಭಾರವಲ್ಲವೆ?- ಪಿ.ಐ.ಎಲ್. ಮೂಲಕ ಪ್ರಶ್ನಿಸಬೇಕಾಗಿದೆ. ಜೊತೆಗೆ ಇದನ್ನು ಸಾರ್ವಜನಿಕರು, ಸಂಘಟನೆಗಳು, ಪರ್ಯಾಯ ಕಾನೂನು ತಜ್ಞರು ಚರ್ಚಿಸಬೇಕಾಗಿದೆ.

ಯಾರ ಅಪರಾಧವೂ ಕಾನೂನು ಚೌಕಟ್ಟನ್ನು ಮೀರಿದ್ದಲ್ಲ ಎಂಬ ಅರಿವಿನಲ್ಲೆ, ನರಸಿಂಹಮೂರ್ತಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಹೊರಬರುತ್ತಾರೆಂಬ ನಂಬಿಕೆ ಇದ್ದರೂ, ಕಾನೂನು ಪ್ರಕ್ರಿಯೆಗಳನ್ನು ವಿಳಂಬಗೊಳಿಸುತ್ತ ‘ವಿಳಂಬ ಹಿಂಸೆ’ ನೀಡಬಹುದೆನ್ನುವ ಆತಂಕವೂ ನನಗಿದೆ. ಈ ರೀತಿಯಾದಲ್ಲಿ ಸ್ವರಾಜ್ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳಾದ ರೈತ ಸಂಘ, ದಲಿತ ಸಂಘಟನೆ, ಮತ್ತಿತರ ಸಮಾಜಮುಖಿ ಸಂಘಟನೆಗಳ ಜೊತೆಗೂಡಿ ಬರ, ನೆರೆ, ಉದ್ಯೋಗ ಕುಸಿತ ಇವುಗಳನ್ನೆಲ್ಲ ಸಮ್ಮಿಲನಗೊಳಿಸಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...