ಧರ್ಮಪುರಿ: ಬಿಹಾರದ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಮತ ರಾಜಕೀಯ’ದಲ್ಲಿ ತೊಡಗಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಬಿಹಾರದ ಭಾಷಣದಲ್ಲಿ ತಮಿಳುನಾಡನ್ನು ಸಂದರ್ಶಕರು ವಾಸಿಸುವ ಸ್ಥಳವೆಂದು ಕರೆದಿದ್ದಾರೆ.”ಅವರಿಗೆ ತಮಿಳುನಾಡಿನಲ್ಲಿ ಮಾತನಾಡಲು ಧೈರ್ಯವಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ‘ಯಾರು ಏನೇ ಪಿತೂರಿ ನಡೆಸಿದರೂ, ಎಷ್ಟೇ ಮಾನಹಾನಿಕರ ಹೇಳಿಕೆಗಳನ್ನು ಹರಡಿದರೂ, 2026 ರಲ್ಲಿ ಡಿ.ಎಂ.ಕೆ ಖಂಡಿತವಾಗಿಯೂ ಸರ್ಕಾರ ರಚಿಸುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಪ್ರತಿಪಾದಿಸಿದ್ದಾರೆ.
ಅಲ್ಲದೆ ರಾಜ್ಯವನ್ನು ಎಐಎಡಿಎಂಕೆ ಹಿಡಿತದಿಂದ ಮುಕ್ತಗೊಳಿಸಲು ತಮ್ಮ ಪಕ್ಷ ದೃಢನಿಶ್ಚಯ ಮಾಡಿದೆ ಎಂದು ಹೇಳಿದ್ದಾರೆ.
ನವೆಂಬರ್ 2 ರಂದು ವಿರೋಧ ಪಕ್ಷವಾದ ಎಐಎಡಿಎಂಕೆ ಮತ್ತು ಬಿಜೆಪಿ ಬಹಿಷ್ಕರಿಸಿದ ಎಸ್‌ಐಆರ್ ಕುರಿತ ಸರ್ವಪಕ್ಷ ಸಭೆಯನ್ನು ಉಲ್ಲೇಖಿಸಿದ ಅವರು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ವಿಷಯದ ಬಗ್ಗೆ “ದ್ವಿಮುಖ ನೀತಿ” ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
“ತಮಿಳುನಾಡಿನ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮತ್ತು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುವ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸುವುದು ಎಲ್ಲಾ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ” ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.


