ಪ್ರಧಾನಿ ಮೋದಿಯ ರಕ್ತವು ಕ್ಯಾಮೆರಾಗಳು ಆನ್ ಆಗಿರುವಾಗ ಮಾತ್ರ ಕುದಿಯುತ್ತದೆಯೇ?: ರಾಹುಲ್ ಗಾಂಧಿ

ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕ್ಯಾಮೆರಾಗಳು ಆನ್ ಆಗಿರುವಾಗ ಮಾತ್ರ ಅವರ ರಕ್ತ ಕುದಿಯುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಆಯೋಜಿಸಿದ್ದಕ್ಕಾಗಿ ಮತ್ತು ಬೆಂಬಲಿಸಿದ್ದಕ್ಕಾಗಿ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಆಪರೇಷನ್ ಸಿಂಧೂರ್ ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ಮೋದಿ ಗುರುವಾರದಂದು ರಾಜಸ್ಥಾನದಲ್ಲಿ ಹೇಳಿದ್ದಾರೆ. “ನನ್ನ ರಕ್ತನಾಳಗಳಲ್ಲಿ ಕೇವಲ ರಕ್ತ ಮಾತ್ರ ಹರಿಯುತ್ತಿಲ್ಲ, ಬದಲಾಗಿ ಬಿಸಿ ಸಿಂಧೂರ್ (ಸಿಂಧೂರ)ವು ಕುದಿಯುತ್ತಿದೆ” ಎಂದು ಮೋದಿ ಘೋಷಿಸಿದ್ದರು. … Continue reading ಪ್ರಧಾನಿ ಮೋದಿಯ ರಕ್ತವು ಕ್ಯಾಮೆರಾಗಳು ಆನ್ ಆಗಿರುವಾಗ ಮಾತ್ರ ಕುದಿಯುತ್ತದೆಯೇ?: ರಾಹುಲ್ ಗಾಂಧಿ