Homeಕರ್ನಾಟಕಮತಾಂತರ ನಿಷೇಧ ಮಸೂದೆ ಅಸ್ಪೃಶ್ಯತೆಯನ್ನು ಸುಡುವುದೇ?

ಮತಾಂತರ ನಿಷೇಧ ಮಸೂದೆ ಅಸ್ಪೃಶ್ಯತೆಯನ್ನು ಸುಡುವುದೇ?

- Advertisement -
- Advertisement -

ಮತಾಂತರ ಎಂಬ ವಿಷಯವು ನಿನ್ನೆ ಮೊನ್ನೆಯದಲ್ಲ. ಶತಮಾನಗಳಿಂದ ವಿವಿಧ ರೂಪದಲ್ಲಿ ಹಂತಹಂತವಾಗಿ ತನ್ನ ಸ್ವರೂಪವನ್ನು ಬದಲಿಸಿಕೊಂಡು ಚರ್ಚೆಗೆ ಬರುತ್ತಿದೆ. ರಾಜಕೀಯ ವಿದ್ಯಮಾನಗಳು ಬದಲಾದಂತೆ ಚರ್ಚೆಯ ವಿಧಾನಗಳು ಸಹ ಹೊಸ ಹೊಸ ರೂಪವನ್ನು ಪಡೆದುಕೊಂಡು ಇಂದು ಮತ್ತೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ಕಾಲಕಾಲಕ್ಕೆ ನೀತಿಗಳು ಬದಲಾದಂತೆ ಹಲವಾರು ಕಾಯ್ದೆ ಕಾನೂನುಗಳು ಬದಲಾಗುತ್ತ ಬಂದಿವೆ. ವಿಶೇಷವೇನೆಂದರೆ ಹೆಚ್ಚು ಕಾನೂನು ಕಾಯ್ದೆಗಳ ತಿದ್ದುಪಡಿ ಜಾರಿಯಾಗುತ್ತಿರುವುದು ಹೆಚ್ಚಾಗಿ ಸಾಮಾಜಿಕ ವಿಷಯಗಳಲ್ಲಿ ಎಂಬುದನ್ನು ಗಂಭೀರವಾಗಿ ಗಮನಿಸಬೇಕಾಗುತ್ತದೆ. ಉದಾಹರಣೆಗೆ ರೈತ ವಿರೋಧಿ ಕಾಯ್ದೆಗಳು, ಹೊಸ ಶಿಕ್ಷಣ ನೀತಿ, ಗೋಮಾಂಸ ನಿಷೇಧ ಕಾಯ್ದೆ ….. ಹೀಗೆ ಹಲವಾರು ಕಾಯ್ದೆಗಳು ಪ್ರಜೆಗಳ ಭಾವನೆಗಳಿಗೆ ಹೊಡೆತವನ್ನು ಕೊಟ್ಟಿವೆ. ಈ ಸಾಲಿಗೆ ಮತಾಂತರ ನಿಷೇಧ ಮಸೂದೆಯೂ ಸೇರಿದೆ.

ಮತಾಂತರ ನಿಷೇಧ ಮಸೂದೆಯು ಸಂವಿಧಾನಿಕ ವಾಗಿದೆಯೋ ಅಥವಾ ಅಸಂವಿಧಾನಿಕವಾಗಿದೆಯೋ ಎಂಬ ಚರ್ಚೆಗಳಿಗಿಂತ, ಗಮನಿಸಬೇಕಾದ ಕೆಲವು ವಿಷಯಗಳಿವೆ. ಅಂದರೆ ಜನ ಮತಾಂತರವಾಗುವುದಕ್ಕೆ ಮೂಲ ಕಾರಣಗಳೇನು ಎಂಬ ವಿಷಯಗಳ ಬಗ್ಗೆ ಚರ್ಚಿಸಿ, ರಾಜಕೀಯ ಪ್ರೇರಿತವಾಗದೆ ಅದಕ್ಕೆ ಸೂಕ್ತವಾದ ಪರಿಹಾರಗಳನ್ನು ಸೂಚಿಸುವುದರ ಮೂಲಕ ಮತಾಂತರ ಎಂಬ ಪರಿಕಲ್ಪನೆಗೆ ಸ್ಪಷ್ಟತೆಯನ್ನು ನೀಡಬಹುದು.

ಮತಾಂತರ ಎಂದರೆ ಏನು…?

ಒಂದು ನಿರ್ದಿಷ್ಟ ಧರ್ಮ ಜಾತಿ ಅಥವಾ ಸಮುದಾಯದ ಜನರು ತಮ್ಮ ಮೂಲ ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಗೆ ಬದಲಾಗುವುದು ಅಥವಾ ಒಂದು ಧರ್ಮದ ಆಚಾರ ವಿಚಾರಗಳನ್ನು ತ್ಯಜಿಸಿ ಹಲವಾರು ಸೈದ್ಧಾಂತಿಕ ಕಾರಣಗಳಿಂದ ಸ್ವ – ಇಚ್ಛೆಯಿಂದ ಮತ್ತೊಂದು ಧರ್ಮದ ನೀತಿ-ನಿಯಮಗಳನ್ನು ಅನುಸರಿಸುವುದೇ ಆಗಿರುತ್ತದೆ.

ಮತಾಂತರಕ್ಕೆ ಮೂಲ

ಶತಮಾನಗಳ ಇತಿಹಾಸವನ್ನು ತೆರೆದಾಗ ಧರ್ಮದಿಂದ ಧರ್ಮಕ್ಕೆ ಸಂಸ್ಕೃತಿಯನ್ನು ಸಂಸ್ಕೃತಿಗೆ ತಮ್ಮ ನಿತ್ಯ ಜೀವನದ ಬದುಕಿನಲ್ಲಿ ಬದಲಾವಣೆಯನ್ನು ಕೊಂಡುಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ, ಅವುಗಳಲ್ಲಿ ಪ್ರಮುಖವಾಗಿ

1.ಸಾಮಾಜಿಕ ಸ್ಥಾನಮಾನ
2.ಆರ್ಥಿಕ ಸ್ಥಾನಮಾನ
3.ಸಾಂಸ್ಕೃತಿಕ ಸ್ಥಾನಮಾನ

ಈ ಮೂರು ಅಂಶಗಳು ಪ್ರಮುಖವಾಗಿದ್ದು, ಇನ್ನೂ ಅನೇಕ ಕಾರಣಗಳಿರಬಹುದು. ಅವುಗಳಲ್ಲಿ ಅಂತರ್ ಧರ್ಮೀಯ ವಿವಾಹಗಳು, ಪ್ರೀತಿ-ಪ್ರೇಮದ ಹೆಸರಿನಲ್ಲಿ ಮತ್ತು ಬಲವಂತವಾಗಿ ಕ್ಷುಲ್ಲಕ ಕಾರಣಗಳಿಗೆ ಮತಾಂತರವಾಗಿರುವ ಉದಾಹರಣೆಗಳೂ ಇತಿಹಾಸದಲ್ಲಿವೆ.

ಸಾಮಾಜಿಕ ಸ್ಥಾನಮಾನ

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಶತಮಾನಗಳಿಂದ ಕಂಡುಬಂದಂತಹ ಸಾಮಾಜಿಕ ಪಿಡುಗುಗಳಲ್ಲಿ ಅಸ್ಪೃಶ್ಯತೆ ಆಚರಣೆ ಮೊದಲ ಪಟ್ಟಿಯಲ್ಲಿದೆ. ಸಾಮಾನ್ಯವಾಗಿ ಜನರಲ್ಲಿ ಮೇಲು-ಕೀಳು ಎಂಬ ಭಾವನೆ ಗಳಿಂದ ನೊಂದು, ಸಮಾಜದಲ್ಲಿ ಬದುಕಲು ಯೋಗ್ಯವಲ್ಲದ ವಾತಾವರಣವನ್ನು ಸೃಷ್ಟಿ ಮಾಡಿರುವುದು ಸಹ ಮತಾಂತರಕ್ಕೆ ಕಾರಣವಾಗಿದೆ. ಇದರ ಜೊತೆಗೆ ತಿನ್ನುವ ಆಹಾರದ ಮೇಲೆ ಒತ್ತಡವನ್ನು ತರುವಂತಹ ಪರಿಸ್ಥಿತಿಯ ನಿರ್ಮಾಣದಿಂದ ಹಾಗೂ ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ, ಹೋಟೆಲ್ ಗಳು ಮತ್ತು ಇನ್ನು ಮುಂತಾದ ಅನೇಕ ಪ್ರದೇಶದಿಂದ ನೊಂದ ಹಿಂದುಳಿದ ಸಮಾಜವನ್ನು ಅವರ ವೃತ್ತಿಗೆ ಅನುಗುಣವಾಗಿ ಅವರ ಸಾಮಾಜಿಕ ಸ್ಥಾನಮಾನದ ಆಧಾರವನ್ನಿಟ್ಟುಕೊಂಡು ಪ್ರವೇಶವನ್ನು ನಿಷೇಧಗೊಳಿಸಿರುವುದು, ತಳಸಮುದಾಯದ ವ್ಯಕ್ತಿಸ್ವಾತಂತ್ರ್ಯಕ್ಕೆ ಅವರ ಸ್ವಾಭಿಮಾನಕ್ಕೆ ದಕ್ಕೆ ಆಗಿರುವುದು ಸಹ ಮತಾಂತರಕ್ಕೆ ಕಾರಣವಾಗಿರುವುದು ಅಕ್ಷರಶಃ ಸತ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಮಾಜದ ಮುಖ್ಯ ವಾಹಿನಿಗೆ ಬರಲು, ಸಮಾಜದಲ್ಲಿ ಗೌರವ ಮತ್ತು ಉತ್ತಮ ಸ್ಥಾನಮಾನದ ನಿರೀಕ್ಷೆಯನ್ನು ಇಟ್ಟುಕೊಂಡು ಕೆಲವೊಂದು ಸಮುದಾಯಗಳು ಮತಾಂತರವನ್ನು ಮಾಡುತ್ತಿವೆ.

ಇದನ್ನೂ ಓದಿರಿ: ಚಿಕ್ಕಬಳ್ಳಾಪುರ: ಮತಾಂತರ ನಿಷೇಧ ಮಸೂದೆ ಬೆನ್ನಲ್ಲೆ ದುಷ್ಕರ್ಮಿಗಳಿಂದ ಚರ್ಚ್ ಧ್ವಂಸ

ಆರ್ಥಿಕ ಸ್ಥಾನಮಾನ

ಮತಾಂತರಕ್ಕೆ ಜನರ ಆರ್ಥಿಕ ಸ್ಥಾನಮಾನವು ಮೂಲಕಾರಣವಾಗಿದೆ. ಅಂದರೆ ಒಂದು ಧರ್ಮದಲ್ಲಿ ಹಲವಾರು ಜಾತಿ ಸಮುದಾಯಗಳಿವೆ ಬಡವ-ಶ್ರೀಮಂತ ಎಂಬ ಭೇದಭಾವವೂ ಇರುತ್ತದೆ, ಹಾಗೆಯೇ ಎಲ್ಲರಿಗೂ ಶಿಕ್ಷಣ ಇರುವುದಿಲ್ಲ, ಎಲ್ಲರೂ ಉದ್ಯೋಗಿಗಳಾಗಿರುವುದಿಲ್ಲ, ಕೆಲವರ ಆರ್ಥಿಕ ಸ್ಥಿತಿ ಕುಗ್ಗಿರುವುದರಿಂದ ಅವರ ಜೀವನಶೈಲಿ ಸಂಪೂರ್ಣ ಬದಲಾವಣೆಯಾಗಿರುತ್ತದೆ. ಸರಿಯಾದ ರೀತಿಯಾದ ಶಿಕ್ಷಣ-ಉದ್ಯೋಗ, ಆರೋಗ್ಯದ ಸೌಲಭ್ಯ ಇಲ್ಲದೇ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಆಗದೇ, ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗೆ ಉಳಿದುಬಿಡುತ್ತಾರೆ ಶಿಕ್ಷಣವನ್ನು ಪಡೆದ ಕೆಲವು ತಳಸಮುದಾಯದ ಪ್ರತಿಭಾವಂತ ಪ್ರತಿಭೆಗಳಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನ ಇಲ್ಲದ ಕಾರಣ ಶಿಕ್ಷಣವನ್ನು ಪಡೆಯಲು ಮತ್ತು ಅವರ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ನೀಡುವ ಧರ್ಮದ ಸಿದ್ಧಾಂತಗಳನ್ನು ಒಪ್ಪಿಕೊಂಡು ತಮ್ಮ ಬದುಕಿಗೆ ಅರ್ಥವನ್ನು ಕಂಡುಕೊಳ್ಳಲು ಕೆಲವು ಸಮುದಾಯಗಳು ಮುಂದಾಗಿವೆ.

ಸಾಂಸ್ಕೃತಿಕ ಸ್ಥಾನಮಾನ

ಭಾರತ ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ಒಂದು ರಾಷ್ಟ್ರ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಒಂದು ನಾಡು. ಇಲ್ಲಿ ಹಲವಾರು ಧರ್ಮ-ಜಾತಿ ಭಾಷೆಗಳನ್ನು ನಾವು ಗಮನಿಸಬಹುದು, ವಿವಿಧ ಜಾತಿ ಧರ್ಮಗಳ ಸಂಪ್ರದಾಯಗಳ, ಆಚರಣೆಗಳ ಮೇಲೆ ಪ್ರಬಲ ಧರ್ಮದ ಜ್ಞಾನಿಗಳು ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಿದ್ಧಾಂತವಿರಬೇಕೆಂದು ಬಲವಂತವಾಗಿ ಒತ್ತಡ ಹೇರುವುದು ಸೂಕ್ತವಲ್ಲ.

ಆಯಾಯ ಧರ್ಮದ ಅಥವಾ ಜಾತಿ ಸಂಸ್ಕೃತಿ ಆಧಾರದ ಮೇಲೆ ಅವರವರ ಉಡುಗೆ-ತೊಡುಗೆ ಆಹಾರ ಪದ್ಧತಿ ಧಾರ್ಮಿಕ ಆಚರಣೆಗಳನ್ನು ಅವಲಂಬಿಸಿರುತ್ತವೆ. ಯಾವುದೇ ಒಂದು ನಿರ್ದಿಷ್ಟ ಧರ್ಮವು ಜಾತಿ ಉಪಜಾತಿಗಳನ್ನು ಹೊಂದಿರುತ್ತದೆ. ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅವರ ಸಂಸ್ಕೃತಿಗಳ ಮೇಲೆ ಒತ್ತಡ ಹಾಕುವುದರಿಂದ ಅವರ ಸಂಪ್ರದಾಯಗಳಿಗೆ ದಕ್ಕೆ ಉಂಟಾಗುತ್ತದೆ. ಉದಾಹರಣೆಗೆ ಮಡೆಸ್ನಾನ ಪದ್ಧತಿ, ದೇವಸ್ಥಾನಗಳಿಗೆ ಪ್ರವೇಶ ನಿಷಿದ್ಧ, ಗೋಮಾಂಸ ನಿಷೇಧ, ದೇವಸ್ಥಾನಗಳಿಗೆ ಅರೆ ಬೆತ್ತಲೆ ಸೇವೆ ಮತ್ತು ಪ್ರವೇಶ ಈ ರೀತಿಯ ಅನಿಷ್ಟ ಪದ್ಧತಿಗಳ ಹೇರಿಕೆಯಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವರ ಆಹಾರ ಪದ್ಧತಿ ಮತ್ತು ಸಂಸ್ಕೃತಿಗೆ ದಕ್ಕೆ ಉಂಟಾದ ಸಂದರ್ಭದಲ್ಲಿ ಅವರ ಆಚಾರ ವಿಚಾರಗಳಿಗೆ ಮನ್ನಣೆ ಸಿಗುವಂತಹ ಸಂಸ್ಕೃತಿಯನ್ನು ಅವಲಂಬಿಸಲು ಸೈದ್ಧಾಂತಿಕವಾಗಿ ವಲಸೆ ಹೋಗುವುದು ಸಹ ಸರ್ವೇಸಾಮಾನ್ಯವಾಗಿ ಇರುತ್ತದೆ. ಇದು ಒಂದು ರೀತಿಯ ಮತಾಂತರಕ್ಕೆ ಕಾರಣವಾಗಿದೆ.

ಭಾರತ ಜಾತ್ಯತೀತ ರಾಷ್ಟ್ರ. ಜಗತ್ತಿಗೆ ಬುದ್ಧನ ಶಾಂತಿಮಂತ್ರವನ್ನು ಸಾರಿದ ನಾಡು. ಸರ್ವಧರ್ಮ ಸಮನ್ವಯವನ್ನು ಸಾರಿದ ನಾಡಿನಲ್ಲಿ ಭಾವನಾತ್ಮಕ ಪ್ರೇರಿತ ಕಾನೂನುಗಳು ಜಾರಿಯಾಗುತ್ತಿರುವುದು ಆತಂಕಕಾರಿ. ಭಾರತ ಸಂವಿಧಾನದಲ್ಲಿ ಭಾರತದ ಮ್ಯಾಗ್ನ ಕಾರ್ಟ್ ಎಂದೇ ಕರೆಯುವ ಮೂಲಭೂತ ಹಕ್ಕುಗಳನ್ನು ನೋಡಿದಾಗ ಅದರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಈ ದೇಶದ ಪ್ರಜೆಗಳಿಗೆ ನೀಡಲಾಗಿದೆ. ಅನುಚ್ಛೇದ 25,26,27,28 ರಲ್ಲಿ ಇದರ ಬಗ್ಗೆ ವಿವರಿಸಲಾಗಿದೆ.

  1. ಯಾವುದೇ ಧರ್ಮವನ್ನು ಸ್ವೀಕರಿಸುವ ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡಲಾಗಿದೆ
  2. ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಪ್ರಚಾರಮಾಡಲು ತೆರಿಗೆ ವಿನಾಯಿತಿಯ ಹಕ್ಕು
  3. ಧಾರ್ಮಿಕ ವಿಷಯಗಳ ನಿರ್ವಹಣೆಯ ಹಕ್ಕು
  4. ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಅಥವಾ ಪೂಜಾ ಸಮಾರಂಭಗಳಲ್ಲಿ ಹಾಜರಾಗುವಿಕೆಯಿಂದ ವಿನಾಯಿತಿ ಹಕ್ಕು

ಜಾಗತಿಕ ಮಟ್ಟದಲ್ಲಿ ಧರ್ಮಪ್ರಚಾರ ಮತ್ತು ಮತಾಂತರಗಳು ನಡೆದಿವೆ. ಭಾರತಕ್ಕೆ ಬ್ರಿಟಿಷರ ಆಗಮನಕ್ಕಿಂತಲೂ ಮೊದಲು ಭಾರತಕ್ಕೆ ಬಂದಂತಹ ಆರ್ಯರು ಭಾರತದ ಮೂಲ ನಿವಾಸಿಗಳ ಮೇಲೆ ಒತ್ತಡ ಹೇರಿ ಅವರ ಸಂಸ್ಕೃತಿಯನ್ನು ಭಾರತದಲ್ಲಿ ಬೇರೂರಿಸಿ, ಮೂಲ ಸಂಸ್ಕೃತಿಯನ್ನು ಬಲಿ ಕೊಟ್ಟಿರುವುದು ಒಂದು ಮತಾಂತರವೇ ಅಲ್ಲವೇ….

ಈ ಮತಾಂತರ ನಿಷೇಧ ಮಸೂದೆಯು ಜಗತ್ತಿಗೆ ಶಾಂತಿಯ ತತ್ವ ಬೋಧನೆ ಮಾಡಿದ ಬುದ್ಧರ ಸಿದ್ದಾಂತಕ್ಕೆ ಸವಾಲಾಗಿದೆ…?

ಸಾಮ್ರಾಟ್ ಅಶೋಕ ಜಾಗತಿಕಮಟ್ಟದಲ್ಲಿ ಧರ್ಮದ ಪ್ರಚಾರ ಮಾಡಿ ಹಲವಾರು ದೇಶಗಳನ್ನು ಬೌದ್ಧಮಯವಾಗಿಸಿರುವುದನ್ನು ಈ ದೇಶ ಮರೆಯುವಂತಿಲ್ಲ.

ಇದರ ಜೊತೆಗೆ ದೇವ ಮಾನವರೆಂದೇ ಪ್ರಸಿದ್ದಿ ಪಡೆದ ಧರ್ಮದ ಪ್ರವಾದಿಗಳಾದ ಯೇಸು ಮತ್ತು ಮಹಮದ್ ಪೈಗಂಬರ ರಂತಹ ಮಹಾನ್ ಪುರುಷರ ಬದುಕಿಗೆ ಇದು ಪ್ರಶ್ನೆಯೇ?

ವಿಶ್ವಗುರು ಬಸವಣ್ಣ ಅವರು ನೊಂದ ಸಮುದಾಯಗಳನ್ನು ಒಗ್ಗೂಡಿಸಿ ಅವರಲ್ಲಿ ಸಾಮಾಜಿಕ ಸ್ಥಾನಮಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಲಿಂಗಾಯತ ಧರ್ಮದ ಸ್ಥಾಪನೆ ಮತ್ತು ಪ್ರಚಾರವನ್ನು ಮಾಡಿರುವುದನ್ನು ಇಂದು ಭಾರತದ ಧರ್ಮದ ಜ್ಞಾನಿಗಳು ಮರೆತಂತಿದೆ ಅಲ್ಲವೇ? ಶಂಕರ – ಮಧ್ವಾಚಾರ್ಯರು ಧರ್ಮದ ಪ್ರಚಾರ ಮಾಡಲಿಲ್ಲವೇ? ಇದು ಶತಮಾನಗಳಿಂದ ಪ್ರಚಲಿತವಾಗಿದೆ ಆದರೆ ಸ್ವರೂಪ ಬೇರೆ ಬೇರೆ ಇದ್ದರೂ ಪ್ರಕ್ರಿಯೆ ಒಂದೇ ಆಗಿದೆ.

ಮತಾಂತರ ನಿಷೇಧ ಮಸೂದೆ ಎನ್ನುವುದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಒಂದು ತಂತ್ರ ವಾಗಿರುವುದು ಜಗಜ್ಜಾಹೀರಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷಗಳಲ್ಲಿ ಕೆಲವು ಸಂಘಟನೆಗಳು ಬೆರೆತು ತಮ್ಮ ಸಿದ್ಧಾಂತಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಭಾವನಾತ್ಮಕ ವಿಚಾರಗಳನ್ನು ಸಮಾಜದ ಮುನ್ನೆಲೆಗೆ ತಂದು ಸಮಾಜವನ್ನು ಒಡೆಯುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ.

ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಇದ್ದರೂ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುತ್ತಿರುವ ಸನಾತನ ಜ್ಞಾನಿಗಳಿಗೆ ಸುಪ್ರೀಂಕೋರ್ಟ್ ಕೆಲವೊಂದು ಪ್ರಕರಣಗಳಲ್ಲಿ ಪಾಠ ಹೇಳಿದೆ.

ಅಡ್ವಕೇಟ್ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ದೇಶದಲ್ಲಿ ದೊಡ್ಡ ಮಟ್ಟದ ಧಾರ್ಮಿಕ ಮತಾಂತರ ಪ್ರಕ್ರಿಯೆ ಆಗುತ್ತಿದೆ ಎಂದು ಪಿ.ಎ.ಎಲ್ ಮೊರೆ ಹೋಗಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿದಂತಹ ಸುಪ್ರೀಂ ಕೋರ್ಟ್ ನ ಜಸ್ಟಿಸ್ ರೋಹಿಂಟನ್ ನಾರಿಮನ್ ಅವರು ಸಂವಿಧಾನದ ಅನುಚ್ಚೇದ 25ರ ಪಾಠ ಮಾಡಿ ಅರ್ಜಿಯನ್ನು ವಜಾ ಮಾಡಿದೆ. ತಮಿಳುನಾಡಿನಲ್ಲಿ ಪಿ ಮುನೇಶ್ವರಿ ವರ್ಸಸ್ ದಿ ತಮಿಳುನಾಡು ಗೌರ್ನಮೆಂಟ್ ಪ್ರಕರಣದಲ್ಲಿ ಮದ್ರಸ್ ಕೋರ್ಟ್ ಚರ್ಚಿಗೆ ಹೋಗುವುದರಲ್ಲಿ ಹಾಗೂ ಕೊರಳಿಗೆ ಶಿಲುಭೆ ಧರಿಸುವುದರಲ್ಲಿ ಮತ್ತು ಮನೆಯಲ್ಲಿ ಯೇಸುವಿನ ಫೋಟೋ ಹಾಕಿದರೆ ತಪ್ಪಿಲ್ಲವೆಂದು ತಿಳಿಸಿ ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಹಕ್ಕನ್ನು ಅನುಚ್ಚೇದ 25ನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿರುವುದನ್ನು ಲೇಖನಗಳಲ್ಲಿ, ಪತ್ರಿಕೆಗಳಲ್ಲಿ ಓದಿದ್ದೇವೆ.

ಬಲವಂತವಾಗಿ ಆಮಿಷವೊಡ್ಡಿ ಮಾಡುವ ಮತಾಂತರ ತಪ್ಪು. ಆದರೆ ಪ್ರಸ್ತುತ ದಿನಗಳಲ್ಲಿ ಈ ರೀತಿಯ ಬಲವಂತವಾಗಿ ಮತಾಂತರ ಬಹುತೇಕ ಇಲ್ಲವೇ ಇಲ್ಲ…

ಆಮಿಷಕ್ಕೆ ಬಲಿಯಾಗಿ ಮತಾಂತರ ಹೊಂದಿದರೂ, ಈವರೆಗೆ ಯಾವೊಂದು ಪ್ರಕರಣವು ದಾಖಲಿಸಿರುವ ಸನ್ನಿವೇಶವು ನಿರ್ಮಾಣವಾಗಿಲ್ಲ. ಕಾರಣ ಮತಾಂತರವಾಗುವ ವ್ಯಕ್ತಿಗೆ ಮತಾಂತರದ ಅರಿವು ಇರುತ್ತದೆಯೋ ವಿನಃ ಪ್ರಜ್ಞಾಹೀನನಾಗಿ ಮತಾಂತರ ಹೊಂದುವುದಿಲ್ಲ ಹಾಗೂ ಮತಾಂತರವಾದರೂ ಅದು ಸಂವಿಧಾನ ಬದ್ಧವಾಗಿರುತ್ತದೆ ಮತ್ತು ವ್ಯಕ್ತಿಯ ಸ್ವಇಚ್ಛೆಯಿಂದ ಆಗಿರುತ್ತದೆ, ಇದರಿಂದ ಮತಾಂತರ ನಿಷೇಧ ಅಪ್ರಸ್ತುತವೆನಿಸುತ್ತದೆ.

ಮತಾಂತರ ಎಂಬುದು ಅಪರಾಧವಲ್ಲ ಸಂಕೋಲೆಯಿಂದ ಸ್ವಾತಂತ್ರದೆಡೆಗೆ ಚಲಿಸುವ ಒಂದು ಮಾರ್ಗ. ಎಲ್ಲಿ ನಮಗೆ ಗೌರವ ವ್ಯಕ್ತಿ ಸ್ವತಂತ್ರ ಇಲ್ಲವೋ ಅಂತ ಸಂಸ್ಕೃತಿಯಿಂದ ಹೊರನಡೆದು ನಮಗೆ ಬೇಕಾದ ಸಂಸ್ಕೃತಿಯ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ದೇಶದ ಸಂವಿಧಾನ ನಮಗೆ ನೀಡಿದೆ. ಈ ದೇಶಕ್ಕೆ ಬೃಹತ್ ಶ್ರೇಷ್ಠ ಸಂವಿಧಾನವನ್ನು ನೀಡಿದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಬೌದ್ಧ ಧರ್ಮಗಳನ್ನು ಅಧ್ಯಯನ ನಡೆಸಿ ಭಾರತದ ಮೂಲ ಧರ್ಮ ತಥಾಗತ ಗೌತಮ ಬುದ್ಧರು ಸ್ಥಾಪಿಸಿದ ಬೌದ್ಧಧರ್ಮವನ್ನು ಸ್ವೀಕರಿಸಿ, ಮತಾಂತರವಾಗಿ ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಾಂದಿಯಾದರು. ಕೇವಲ ಯಾವುದೋ ಒಂದೆರಡು ಪ್ರಕರಣಗಳನ್ನು ಮುಂದಿಟ್ಟುಕೊಂಡು ಸರ್ಕಾರ ಇಡೀ ನಾಡಿನ ಶಾಂತಿ ಕದಡುವ ಕೆಲಸಕ್ಕೆ ಮುಂದಾಗದೇ, ಸಂವಿಧಾನದ ಉಲ್ಲಂಘನೆ ಮಾಡದೇ ಕಾನೂನುಗಳನ್ನು ರೂಪಿಸುವುದು ಅಗತ್ಯ.

  • ಶೃಂಗಾರ್‌ ಕೆ.ಎಸ್‌.
ಶೃಂಗಾರ್‌ ಕೆ.ಎಸ್. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿದ್ದಾರೆ.

ಇದನ್ನೂ ಓದಿರಿ: ಎಂಇಎಸ್‌ ನಿಷೇಧಕ್ಕೆ ಒತ್ತಡ: ಡಿಸೆಂಬರ್‌ 31ಕ್ಕೆ ಸಂಪೂರ್ಣ ಕರ್ನಾಟಕ ಬಂದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನೋಡಿ ಇದೆಲ್ಲ ಬೊಗಳೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಧರ್ಮ ಬೋಧನೆ ಮಾಡ್ತಾ ಇದಾರೆ. ಮಕ್ಕಳ ಮನದಲ್ಲಿ ಧರ್ಮವನ್ನೇ ತುಂಬುತ್ತಿದ್ದಾರೆ. ಮನೆ ಮನೆಗಳಿಗೆ ಬಂದು ಧರ್ಮ ಬೋಧನೆ ಮೂಲಕ ಮನ ಪರಿವರ್ತನೆ ಪ್ರಯತ್ನ ಮಾಡ್ತಾ ಇದಾರೆ. ಇದು ಸರೀನಾ ?

  2. ಧರ್ಮಗಳನ್ನ ಅನುಸರಿಸಿ ಅರ್ಥ ಮಾಡಿಕೊಂಡು ಸಂವಿಧಾನದ ಕಾನೂನುಗಳನ್ನ ಪಾಲನೆ ಮಾಡಿ ಅನುಸರಿಸುವುದೇ ಮುಖ್ಯ ಗುರಿ 👍

  3. ಧರ್ಮಗಳನ್ನ ಅನುಸರಿಸಿ ಅರ್ಥ ಮಾಡಿಕೊಂಡು ಸಂವಿಧಾನದ ಕಾನೂನುಗಳನ್ನ ಪಾಲನೆ ಮಾಡಿ ಅನುಸರಿಸುವುದೇ ನಮ್ಮೆಲ್ಲರ ಮುಖ್ಯ ಗುರಿ 👍

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...