ಈ ಹಿಂದೆ ಹೇಳಿದಂತೆ ಭಾರತ ಸೇರಿದಂತೆ ವಿವಿಧ ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಡೊನಾಲ್ಡ್ ಟ್ರಂಪ್ ಸರ್ಕಾರ ಏಪ್ರಿಲ್ 2 ಬುಧವಾರ (ಭಾರತೀಯ ಕಾಲಮಾನ ಏಪ್ರಿಲ್ 3 ರಾತ್ರಿ 2 ಗಂಟೆ ಸುಮಾರಿಗೆ) ಪ್ರತಿ ಸುಂಕ (Reciprocal tariffs)ಘೋಷಣೆ ಮಾಡಿದೆ.
ಭಾರತದ ಉತ್ಪನ್ನಗಳ ಮೇಲೆ ಶೇಕಡ 26ರಷ್ಟು ಪ್ರತಿ ಸುಂಕ ಹೇರಲಾಗಿದೆ. “ಭಾರತ ಅಮೆರಿಕದ ಉತ್ಪನ್ನಗಳ ಮೇಲೆ ಶೇಕಡ 52ರಷ್ಟು ಸುಂಕ ವಿಧಿಸುತ್ತಿದೆ. ನಾವು ಶೇಕಡ 26ರಷ್ಟು ವಿನಾಯಿತಿಯೊಂದಿಗೆ ಶೇಕಡ 26ರಷ್ಟು ಮಾತ್ರ ಪ್ರತಿ ಸುಂಕ ವಿಧಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಶ್ವೇತ ಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ‘ಮೇಕ್ ಅಮೆರಿಕ ವೆಲ್ದಿ ಅಗೈನ್’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ವಿವಿಧ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಸುಂಕ ಮತ್ತು ಅದಕ್ಕೆ ಪ್ರತಿಯಾಗಿ ಅಮೆರಿಕ ಘೋಷಣೆ ಮಾಡಿದ ಸುಂಕದ ಚಾರ್ಟ್ ಪ್ರದರ್ಶಿಸಿದ್ದಾರೆ.
Pathetic #EuropeanUnion : #Trump announces reciprocal #tariffs against EU
Watch for details#DonaldTrump pic.twitter.com/oDkuRd79mK
— The Times Of India (@timesofindia) April 3, 2025
ಪ್ರತಿಸುಂಕ ವಿಧಿಸಿದ ನಿನ್ನೆಯ ದಿನವನ್ನು (ಏ.2) ‘ಅಮೆರಿಕದ ವಿಮೋಚನಾ ದಿನ’ (US Libaration Day)ಎಂದು ಕರೆದ ಟ್ರಂಪ್, “2025ರ ಏಪ್ರಿಲ್ 2ನ್ನು ಅಮೆರಿಕದ ಕೈಗಾರಿಕೆಗಳು ಮರುಹುಟ್ಟು ಪಡೆದ ದಿನವನ್ನಾಗಿ ಸದಾ ನೆನಪಿಸಿಕೊಳ್ಳಬೇಕು. ಅಮೆರಿಕದ ಭವಿಷ್ಯದ ಪುನರುತ್ಥಾನದ ದಿನ, ಅಮೆರಿಕವನ್ನು ಮತ್ತೆ ಸಮೃದ್ಧ ರಾಷ್ಟ್ರವನ್ನಾಗಿಸುವುದನ್ನು ಪ್ರಾರಂಭ ಮಾಡಿದ ದಿನ. ನಾವು ದೇಶವನ್ನು ಸಮೃದ್ಧ, ಉತ್ತಮ ಹಾಗೂ ಸಂಪದ್ಭರಿತ ರಾಷ್ಟ್ರವನ್ನಾಗಿ ಮಾಡುತ್ತೇವೆ” ಎಂದು ಹೇಳಿದ್ದಾರೆ.
“ದಶಕಗಳಿಂದ ಹತ್ತಿರದ-ದೂರದ, ಶತ್ರು-ಮಿತ್ರ ಎಲ್ಲಾ ರಾಷ್ಟ್ರಗಳು ಅಮೆರಿಕವನ್ನು ಲೂಟಿಗೈದಿವೆ. ನಮಗೆ ಅನ್ಯಾಯ ಮಾಡಿವೆ ಎಂದ ಟ್ರಂಪ್, ಇಂತಹ ವ್ಯಾಪಾರ ಅಸಮಾನತೆ ಮುಂದುವರಿಯಲು ಈ ಹಿಂದಿನ ಅಮೆರಿಕನ್ ನಾಯಕರನ್ನು ಕಾರಣರಾಗಿದ್ದಾರೆ” ಎಂದು ದೂಷಿಸಿದ್ದಾರೆ.
ಜಾಗತಿಕ ಸುಂಕ ವ್ಯವಸ್ಥೆಯಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಆರೋಪಿಸಿದ ಟ್ರಂಪ್, “ಮೋಟಾರ್ ಸೈಕಲ್‌ಗಳ ಆಮದಿನ ಮೇಲೆ ಅಮೆರಿಕ ಶೇಕಡ 2.4ರಷ್ಟು ಸುಂಕ ವಿಧಿಸಿದರೆ, ಥೈಲ್ಯಾಂಡ್, ಶೇ.60, ಭಾರತ ಶೇ.70, ವಿಯೆಟ್ನಾಂ ಶೇ.75ರಷ್ಟು ಹಾಗೂ ಇತರ ದೇಶಗಳು ಇದಕ್ಕಿಂತಲೂ ಹೆಚ್ಚು ಸುಂಕ ವಿಧಿಸುತ್ತಿವೆ ಎಂದು ವಿವರಿಸಿದ್ದಾರೆ.
ಆಟೋ ಮೊಬೈಲ್ ಉದ್ಯಮದಲ್ಲಿನ ಸುಂಕ ವ್ಯತ್ಯಾಸದ ಬಗ್ಗೆ ಉಲ್ಲೇಖಿಸಿದ ಟ್ರಂಪ್, “ಅಮೆರಿಕ ವಿದೇಶಿ ನಿರ್ಮಿತ ವಾಹನಗಳ ಆಮದಿನ ಮೇಲೆ ಶೇ.2.5ರಷ್ಟು ಮಾತ್ರ ಸುಂಕ ವಿಧಿಸುತ್ತಿದೆ. ಆದರೆ, ಯುರೋಪಿಯನ್ ದೇಶಗಳು ಶೇ. 10ರಷ್ಟು ಸುಂಕ ವಿಧಿಸುತ್ತಿವೆ. ಅವರು ಶೇ. 20ರಷ್ಟು ವ್ಯಾಟ್ ಕೂಡ ವಿಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾವ ದೇಶದ ಮೇಲೆ ಎಷ್ಟು ಪ್ರತಿ ಸುಂಕ?..ಇಲ್ಲಿದೆ ಪಟ್ಟಿ
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ: ಬೆಳಗಿನ ಜಾವ 1.15ಕ್ಕೆ ನಡೆದ ಮತದಾನ


