Homeಮುಖಪುಟ'ನನ್ನ ಪುಸ್ತಕ ಉಲ್ಲೇಖಿಸಿ ತಪ್ಪು ಮಾಹಿತಿ ಹರಡಬೇಡಿ': ಕಂಗನಾ ರನೌತ್ 'ಎಮರ್ಜೆನ್ಸಿ' ವಿರುದ್ಧ ಕಾನೂನು ಕ್ರಮಕ್ಕೆ...

‘ನನ್ನ ಪುಸ್ತಕ ಉಲ್ಲೇಖಿಸಿ ತಪ್ಪು ಮಾಹಿತಿ ಹರಡಬೇಡಿ’: ಕಂಗನಾ ರನೌತ್ ‘ಎಮರ್ಜೆನ್ಸಿ’ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೂಮಿ ಕಪೂರ್

- Advertisement -
- Advertisement -

‘ಐತಿಹಾಸಿಕ ವಿಷಯಗಳನ್ನು ತಪ್ಪಾಗಿ ಪ್ರಸ್ತುತಪಡಿಸಲಾಗಿದೆ’ ಎಂದು ಆರೋಪಿಸಿ, ಬಿಜೆಪಿ ಸಂಸದೆ ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ನಿರ್ಮಾಪಕರ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಮಾನನಷ್ಟ ಮೊಕದ್ದಮೆ ಹೂಡಲು ಲೇಖಕಿ ಕೂಮಿ ಕಪೂರ್ ನಿರ್ಧರಿಸಿದ್ದಾರೆ.

ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರನ್ನು ಇಂದಿರಾ ಗಾಂಧಿಯವರೊಂದಿಗೆ ರಹಸ್ಯವಾಗಿ ಒಪ್ಪಂದ ಮಾಡಿಕೊಂಡು ಕೆಲಸ ಮಾಡುತ್ತಿರುವಂತೆ ಚಿತ್ರಿಸಿದ್ದಕ್ಕಾಗಿ ಈ ಹಿಂದೆ ಎಮರ್ಜೆನ್ಸಿ ಚಿತ್ರ ಸಿಖ್ ಗುಂಪುಗಳಿಂದ ವಿರೋಧವನ್ನು ಎದುರಿಸಿತ್ತು.

ಚಿತ್ರದ ಡಿಸ್ಕ್ಲೈಮರ್‌ನಲ್ಲಿ, ಇದು ಕೂಮಿ ಕಪೂರ್ ಅವರ ‘ದಿ ಎಮರ್ಜೆನ್ಸಿ’ ಮತ್ತು ‘ಜಯಂತ್ ವಸಂತ್ ಸಿನ್ಹಾ ಅವರ ‘ಪ್ರಿಯದರ್ಶಿನಿ’ ಕೃತಿಗಳನ್ನು ಆಧರಿಸಿದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೆ ಕಪೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಎರಡು ಲೀಗಲ್ ನೋಟಿಸ್‌ಗಳ ನಂತರವೂ, ಚಿತ್ರದ ಡಿಸ್ಕ್ಲೈಮರ್‌ ಬದಲಾಗಿಲ್ಲ” ಎಂದು ಕೂಮಿ ಕಪೂರ್ ಹೇಳಿದ್ದಾಗಿ ದಿ ಟೆಲಿಗ್ರಾಫ್‌ಗೆ ವರದಿ ಮಾಡಿದೆ.

“ಅವರು ಇಂದಿರಾ ಗಾಂಧಿಯವರ ಬಗ್ಗೆ ಸಿನಿಮಾ ಮಾಡುತ್ತಿರುವುದಾಗಿ ನನಗೆ ಹೇಳಿದರು. ನಾನು ಅವರಿಗೆ ಅನುಮತಿ ಕೊಟ್ಟೆ. ಅದು ನನ್ನ ಮೂರ್ಖತನ, ಏಕೆಂದರೆ ಅವರು ನಾವು ಒಂದೇ ಅಧ್ಯಾಯವನ್ನು ಬಳಸುತ್ತಿರುವುದಾಗಿ ಹೇಳಿದ್ದರು. ಆದರೆ, ಎಲ್ಲಾ ಅಧ್ಯಾಯಗಳನ್ನು ಬಳಸಿಕೊಂಡಿದ್ದಾರೆ. ಇಂದಿರಾ ಗಾಂಧಿಯವರ ಜೀವನವು ಪಬ್ಲಿಕ್ ಡೊಮೈನ್‌ನಲ್ಲಿದೆ. ಹಾಗಾಗಿ, ನನ್ನ ಪುಸ್ತಕವನ್ನು ಉಲ್ಲೇಖಿಸಿ ತಪ್ಪು ಮಾಹಿತಿ ಹರಡಬೇಡಿ” ಎಂದು ಕೂಮಿ ಕಪೂರ್ ಹೇಳಿದ್ದಾರೆ.

ಏಪ್ರಿಲ್ 3ರಂದು ಕಂಗನಾ ರನೌತ್ ಅವರ ‘ಮಣಿಕರ್ಣಿಕಾ ಫಿಲ್ಮ್ಸ್’ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ‘ನೆಟ್‌ಫ್ಲಿಕ್ಸ್‌’ಗೆ ನೋಟಿಸ್‌ ನೀಡಿರುವ ಕಪೂರ್ ಪರ ವಕೀಲರು, “ನೀವು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರಿತವಾಗಿ ಚಿತ್ರದಲ್ಲಿ ಸತ್ಯಗಳನ್ನು ತಿರುಚಿದ್ದೀರಿ. ನಮ್ಮ ಕಕ್ಷಿದಾರರ ಹಕ್ಕುಗಳು ಮತ್ತು ಒಪ್ಪಿಗೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೀರಿ ಮತ್ತು ಸದರಿ ಚಿತ್ರದೊಂದಿಗೆ ಅವರ ಹೆಸರನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿದ್ದೀರಿ” ಎಂದಿದ್ದಾರೆ.

ಕಪೂರ್ ಪರ ವಕೀಲರು ಎಮರ್ಜೆನ್ಸಿ ಚಿತ್ರದಲ್ಲಿ ವಿಷಯಗಳನ್ನು ತಿರುಚಲಾಗಿದೆ ಎಂಬುವುದಕ್ಕೆ 6 ಉದಾಹಣೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ, “ಇಂದಿರಾ ಗಾಂಧಿಯವರು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಬಳಿಗೆ ವೈಯಕ್ತಿಕವಾಗಿ ಹೋಗಿ ಸಂಪುಟ ಸಭೆ ಕರೆಯದೆ ತುರ್ತು ಪರಿಸ್ಥಿತಿ ಘೋಷಿಸುವಂತೆ ಬೆದರಿಕೆ ಹಾಕಿದ್ದಾರೆ ಎಂಬುದು ಮತ್ತು ಪತ್ರಕರ್ತ ನಿಖಿಲ್ ಚಕ್ರವರ್ತಿ ಅವರನ್ನು ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆ [ಮಿಸಾ] ಅಡಿಯಲ್ಲಿ ಬಂಧಿಸಲಾಗಿದೆ ಎಂಬುದು ಒಳಗೊಂಡಿವೆ.

ಕಪೂರ್ ಪರ ವಕೀಲರು ನೀಡಿರುವ ಮಾನನಷ್ಟ ಮೊಕದ್ದಮೆ ನೋಟಿಸ್‌ನಲ್ಲಿ, “ಕಿಶೋರ್ ಕುಮಾರ್ ಅವರ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋ ನಿಷೇಧಿಸಿದಾಗ ಅವರು ಭಾರತದಲ್ಲಿ ಇರಲಿಲ್ಲ ಎಂದು ಆಕ್ರೋಶಗೊಂಡ ಅಕ್ಬರ್ ಅಹ್ಮದ್ (ಡಂಪಿ) ನಮ್ಮ ಕಕ್ಷಿದಾರರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ನಮ್ಮ ಕಕ್ಷಿದಾರರು ಅವರನ್ನು ಸಮಾಧಾನಪಡಿಸಿ ತಮ್ಮ ಪುಸ್ತಕದಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಕಿಶೋರ್ ಕುಮಾರ್ ಅವರ ಹಾಡುಗಳನ್ನು ನಿಷೇಧಿಸಲು ಅಂದಿನ ಮಾಹಿತಿ ಮತ್ತು ಪ್ರಸಾರ ಸಚಿವ ವಿ ಸಿ ಶುಕ್ಲಾ ಕಾರಣ, ಅಕ್ಬರ್ ಅಹ್ಮದ್ (ಡಂಪಿ) ಅಲ್ಲ” ಎಂದು ಎಂದು ವಿವರಿಸಬೇಕಾಯಿತು” ಎಂದು ಹೇಳಲಾಗಿದೆ.

ಕಪೂರ್ ಅವರ ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ನಡುವಿನ 2021ರ ಒಪ್ಪಂದವು ಸತ್ಯಗಳನ್ನು ತಿರುಚಲು ಅವಕಾಶ ನೀಡುವುದಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರಸ್ತಾವಿತ ಚಿತ್ರದ ಸ್ಕ್ರಿಪ್ಟ್ ಅನ್ನು ನಮ್ಮ ಕಕ್ಷಿದಾರರಿಗೆ ತೋರಿಸಲು ನಿಮ್ಮನ್ನು ವಿನಂತಿಸಲಾಗಿತ್ತು. ನಮ್ಮ ಕಕ್ಷಿದಾರ ಫಾಲೋ-ಅಪ್ ಸಂದೇಶಗಳ ಹೊರತಾಗಿಯೂ, ನೀವು ಅದನ್ನು ಮಾಡಿಲ್ಲ ಎಂದು ಕಪೂರ್ ಪರ ವಕೀಲರು ಹೇಳಿದ್ದಾರೆ.

ಇದಲ್ಲದೆ, ಸದರಿ ಒಪ್ಪಂದದಲ್ಲಿ ನಮ್ಮ ಕಕ್ಷಿದಾರ ಹೆಸರು, ಭಾವಚಿತ್ರ, ಜೀವನಚರಿತ್ರೆ ಮತ್ತು ಗುರುತನ್ನು ಜಾಹೀರಾತು ಮತ್ತು ಪ್ರಚಾರದ ಉದ್ದೇಶಗಳಿಗಾಗಿ ಬಳಸುವುದು ಕಟ್ಟುನಿಟ್ಟಾಗಿ ‘ಲೇಖಕರ ಲಿಖಿತ ಅನುಮೋದನೆಗೆ ಒಳಪಟ್ಟಿರುತ್ತದೆ’ ಎಂದು ನಿರ್ದಿಷ್ಟವಾಗಿ ಹೇಳಲಾಗಿದೆ. ನೀವು ಅಂತಹ ಯಾವುದೇ ಅನುಮೋದನೆಯನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಲಾಗಿದೆ.

ಏಪ್ರಿಲ್ 10 ರಂದು, ಮಣಿಕರ್ಣಿಕಾ ಫಿಲ್ಮ್ಸ್ ಕಪೂರ್ ಅವರ 2015ರ ಪುಸ್ತಕವು ಚಿತ್ರಕ್ಕೆ ಏಕೈಕ ಆಧಾರವಲ್ಲ. ಹಾಗಾಗಿ, ಸ್ಕ್ರಿಪ್ಟ್ ಅನ್ನು ಅವರಿಂದ ಅನುಮೋದಿಸುವ ಯಾವುದೇ ಅಗತ್ಯತೆ ಕಂಪನಿಗೆ ಇಲ್ಲ ಎಂದು ಹೇಳುವ ಮೂಲಕ ಆರೋಪಗಳನ್ನು ತಿರಸ್ಕರಿತ್ತು.

ವಿಷಯ ಕಥೆ ಮತ್ತು ಚಿತ್ರಕಥೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಲು ಸೃಜನಶೀಲ ಸ್ವಾತಂತ್ರ್ಯಗಳನ್ನು ಚಲಾಯಿಸಲಾಗುವುದು ಎಂದು ಪಕ್ಷಗಳ ಒಪ್ಪಂದದಲ್ಲಿ ಸ್ಪಷ್ಟವಾಗಿ ಒಪ್ಪಿಕೊಳ್ಳಲಾಗಿದೆ ಮತ್ತು ಈ ಉದ್ದೇಶಕ್ಕಾಗಿ ಕಪೂರ್ ಅವರು ಪುಸ್ತಕದ ಮೇಲಿನ ‘ಸಂಪೂರ್ಣ ಬೌದ್ಧಿಕ ಆಸ್ತಿ ಹಕ್ಕುಗಳನ್ನು’ ನಿರ್ಮಾಪಕರಿಗೆ ನೀಡಿದ್ದಾರೆ ಎಂದು ಆರೋಪಗಳ ಕುರಿತು ಮಣಿಕರ್ಣಿಕಾ ಫಿಲ್ಮ್ಸ್‌ ಹೇಳಿದೆ.

ಕಂಪನಿಯ ನಿರ್ದೇಶಕಿಯಾಗಿರುವ ರನೌತ್, ನಮ್ಮ ಇಮೇಲ್ ಮತ್ತು ವಾಟ್ಸಾಪ್ ಸಂದೇಶಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ದಿ ಟೆಲಿಗ್ರಾಫ್ ಹೇಳಿದೆ.

ಸೆನ್ಸಾರ್ ಮಂಡಳಿಯು ತನ್ನ ಚಿತ್ರದ ಪ್ರಮಾಣೀಕರಣವನ್ನು ಸ್ಥಗಿತಗೊಳಿಸುವ ಮೂಲಕ “ತುರ್ತು ಪರಿಸ್ಥಿತಿ” ಹೇರಿದೆ ಎಂದು ಕಳೆದ ವರ್ಷ ಕಂಗನಾ ರನೌತ್ ಅವರು ಆರೋಪಿಸಿದ್ದರು.

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಿಂದ ಚಿತ್ರಕ್ಕೆ ‘ಪರವಾನಗಿ’ ನೀಡಲಾಗಿದ್ದು, ಹಾಗಾಗಿ, ಕಪೂರ್ ಅವರು ನಮ್ಮ ಬದಲು ಅವರನ್ನೇ ಸಂಪರ್ಕಿಸಬೇಕು ಎಂದು ಏಪ್ರಿಲ್ 8 ರಂದು ನೆಟ್‌ಫ್ಲಿಕ್ಸ್ ಕೈ ತೊಳೆದುಕೊಂಡಿದೆ.

ಕಪೂರ್ ಅವರ ಕಾನೂನು ತಂಡವು ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದೆ.

ಜನವರಿಯಲ್ಲಿ ಚಿತ್ರ ಮಂದಿರಗಳಲ್ಲಿ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾದಾಗ ಕಪೂರ್ ಅವರು ನೋಡಿರಲಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಿದ ನಂತರವೇ ಅವರು ನೋಡಿದ್ದಾರೆ. ಅದರಲ್ಲಿನ ತಪ್ಪು ಉಲ್ಲೇಖಗಳು ಕಂಡು ಅವರಿಗೆ ದಿಗಿಲು ಉಂಟಾಗಿದೆ ಎಂದು ದಿ ಟೆಲಿಗ್ರಾಫ್ ಹೇಳಿದೆ.

ಯೇಸುಕ್ರಿಸ್ತಗೆ ಅಗೌರವ ಆರೋಪ: ‘ಜಾಟ್’ ಚಿತ್ರತಂಡದ ವಿರುದ್ಧ ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ಅಂತರ್ಜಾತಿ ವಿವಾಹ, ಸೊಸೆಯ ಕುಟುಂಬದವರಿಂದ ದಲಿತ ವ್ಯಕ್ತಿ ಕೊಲೆ.

ವಧುವಿನ ಕುಟುಂಬವು ಈ ಹಿಂದೆ ವರನ ತಂದೆಯನ್ನು ಬೆದರಿಸಿ ಸೊಸೆಯನ್ನು ತಮ್ಮ ಮನೆಗೆ ವಾಪಸ್‌ ಕಳುಹಿಸಲು ಒತ್ತಾಯಿಸಿತ್ತು ಎಂದು ವರನ ಕುಟುಂಬದವರು ಆರೋಪಿಸಿದ್ದಾರೆ. ಗುಜರಾತ್‌ ನ ನರೋಲ್‌ ಬಳಿ ಅಂತರ್ಜಾತಿ ವಿವಾಹವಾದ ನಂತರ ಮೇಲ್ಜಾತಿಗೆ...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ-ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ಬಿಹಾರದ ಒಂದೇ ಎಂಜಿನ್ ಸರ್ಕಾರ ಕೇಂದ್ರದಿಂದ ನಡೆಸಲ್ಪಡುತ್ತಿದೆ: ಪ್ರಿಯಾಂಕಾ ಗಾಂಧಿ

ಮುಂಬರುವ ರಾಜ್ಯ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಬಿಹಾರದ ಜನರಲ್ಲಿ ಮನವಿ ಮಾಡಿದರು. ಬೇಗುಸರಾಯ್‌ನಲ್ಲಿ ನಡೆದ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಬಿಹಾರದ ಎನ್‌ಡಿಎ ಸರ್ಕಾರದ ಉದ್ದೇಶಗಳು...

‘ನನ್ನ ಮಾತು ಕೇಳಿದ್ದರೆ ಯಡಿಯೂರಪ್ಪ ಜೈಲಿಗೆ ಹೋಗುತ್ತಿರಲಿಲ್ಲ’: ಜಮೀರ್ ಅಹಮದ್ ಖಾನ್

ಹೊಸಪೇಟೆ: ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ಹಣಕಾಸು ನಿರ್ವಹಣೆ ವಿಚಾರಣೆಯಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದೆ, ನನ್ನ ಮಾತನ್ನು ತಿರಸ್ಕರಿಸಿ, ಯಡಿಯೂರಪ್ಪನವರು ಜೈಲಿಗೆ ಹೋಗುವಂತಾಯಿತು. ನನ್ನ ಮಾತು...

ಮಸೀದಿ ಧ್ವಂಸಕ್ಕೆ ‘ಜೈಶ್ರೀರಾಮ್-ಜೈ ಬಜರಂಗಬಲಿ’ ಘೋಷಣೆ ಸಾಧನವಾಗಿ ಬಳಸಲಾಗುತ್ತಿದೆ: ಸ್ವಾಮಿ ಪ್ರಸಾದ್ ಮೌರ್ಯ

ಬಿಜೆಪಿ ಆಡಳಿತದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಈಗ ಜೈ ಶ್ರೀ...

ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಕಾಲ್ತುಳಿತ: ಆಯೋಜಕರ ಮೇಲೆ ಆರೋಪ ಹೊರಿಸಿದ ಆಂಧ್ರ ಮುಖ್ಯಮಂತ್ರಿ

ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾ ಪ್ರದೇಶದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹತ್ತು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡ ಘಟನೆಯ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವು ಖಾಸಗಿ ವ್ಯಕ್ತಿಗೆ ಸೇರಿದ್ದು,...

ದೆಹಲಿ ವಿಷಕಾರಿ ಗಾಳಿ: ಪ್ರತಿ ಏಳು ಸಾವುಗಳಲ್ಲಿ ಒಂದು ಮಾಲಿನ್ಯಕ್ಕೆ ಸಂಬಂಧಿಸಿದ್ದು

ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್‌ಎಂಇ) ನಡೆಸಿದ ವಿಶ್ಲೇಷಣೆಯ ಪ್ರಕಾರ, ವಾಯು ಮಾಲಿನ್ಯವು ದೆಹಲಿಗೆ ಅತ್ಯಂತ ಮಾರಕ ಆರೋಗ್ಯ ಸಮಸ್ಯೆಯಾಗಿ ಮುಂದುವರೆದಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಬೊಜ್ಜುಗಿಂತ ಹೆಚ್ಚಿನ ಜೀವಗಳನ್ನು...

ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ…ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ರಾತ್ರಿ ಹೊತ್ತು ರಸ್ತೆಯಲ್ಲಿ ಕುಳಿತಿರುವ ಹುಲಿಯೊಂದರ ತಲೆ ಸವರುವ ವ್ಯಕ್ತಿ, ತನ್ನ ಕೈಯ್ಯಲ್ಲಿದ್ದ ಮದ್ಯದ ಬಾಟಲಿಯಿಂದ ಹುಲಿಗೆ ಮದ್ಯ ಕುಡಿಸಲು ಯತ್ನಿಸಿದ 6 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದು...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ದೆಹಲಿಯನ್ನು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ಬಿಜೆಪಿ ಸಂಸದನ ಒತ್ತಾಯ

ರಾಷ್ಟ್ರ ರಾಜಧಾನಿ ದೆಹಲಿಯನ್ನು ಮಹಾಭಾರತ ಯುಗದಲ್ಲಿ ಪಾಂಡವರು ಸ್ಥಾಪಿಸಿದರು ಎಂದು ನಂಬಲಾದ ಪ್ರಾಚೀನ ನಗರದ ಹೆಸರಾದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಕೇಂದ್ರ ಗೃಹ ಸಚಿವ...