ಸಗಣಿ ಬಳಿದ ಪ್ರಕರಣ: ಪ್ರಾಂಶುಪಾಲೆಯ ಕಚೇರಿ ಗೋಡೆಗೆ ಸಗಣಿ ಬಳಿದು ಪ್ರತಿಭಟಿಸಿದ ವಿದ್ಯಾರ್ಥಿ ಒಕ್ಕೂಟ; ವೀಡಿಯೋ ವೈರಲ್

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಅಧ್ಯಕ್ಷ ರೋನಕ್ ಖತ್ರಿ ನೇತೃತ್ವದ ವಿದ್ಯಾರ್ಥಿಗಳು ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲೆಯ ಕಚೇರಿಯ ಗೋಡೆಗಳಿಗೆ ಹಸುವಿನ ಸಗಣಿ ಬಳಿದಿದ್ದಾರೆ. ಬೇಸಿಗೆಯ ಬಿಸಿಲಿನ ತಾಪವನ್ನು ತಗ್ಗಿಸಲು ಕಾಲೇಜಿನ ತರಗತಿ ಕೊಠಡಿಗಳಿಗೆ ಸಗಣಿಯಿಂದ ಸಾರಿಸಿದ್ದ ಪ್ರಾಂಶುಪಾಲೆಯ  ಕ್ರಮವನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿದೆ ಎಂದು ಖತ್ರಿ ಆರೋಪಿಸಿದ್ದಾರೆ. ಈ ಹಿಂದೆ ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲೆಯು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಬಳಿಯುತ್ತಿರುವ ವಿಡಿಯೊ ವೈರಲ್ ಆಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ … Continue reading ಸಗಣಿ ಬಳಿದ ಪ್ರಕರಣ: ಪ್ರಾಂಶುಪಾಲೆಯ ಕಚೇರಿ ಗೋಡೆಗೆ ಸಗಣಿ ಬಳಿದು ಪ್ರತಿಭಟಿಸಿದ ವಿದ್ಯಾರ್ಥಿ ಒಕ್ಕೂಟ; ವೀಡಿಯೋ ವೈರಲ್