Homeಎಕಾನಮಿಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

ಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

- Advertisement -
- Advertisement -

ಭಾರತದ ಆರ್ಥಿಕತೆ ಬೀಳುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ, ಆರ್.ಬಿ.ಐ. ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು “ಈ ದೇಶ ನಿರುದ್ಯೋಗದ ಟೈಂ ಬಾಂಬ್ ಮೇಲೆ ಕೂತಿದೆ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಈ ಟೈಂ ಬಾಂಬ್ ಸಿಡಿಯದೇ ದೇಶ ರಕ್ಷಣೆ ಹೇಗೆ ಮಾಡಬೇಕು ಎಂದು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ “ಕೆಲಸ ಮಾಡದ ಸೋಮಾರಿಗಳ ಕಂಪನಿಗಳು ಮಾತ್ರ ಮುಚ್ಚುತ್ತಿವೆ, ಅವುಗಳು ಇದ್ದೂ ಏನೂ ಪ್ರಯೋಜನವಿಲ್ಲ ಹೋಗ್ಲಿ ಬಿಡಿ, ದೇಶಕ್ಕೆ ಯಾವುದೇ ಅಪಾಯವಿಲ್ಲ” ಎಂದು ಮೋದಿಯ ಅಭಿಮಾನಿಗಳು ವಾದಿಸುತ್ತಿದ್ದಾರೆ. ಹಾಗಾದರೆ ನಷ್ಟದಲ್ಲಿರುವ ಕಂಪನಿಗಳು/ಕಾರ್ಖಾನೆಗಳೆಲ್ಲಾ ಸೋಮಾರಿಗಳಾ? ನಷ್ಟದಲ್ಲಿರುವ ಕಂಪನಿಗಳು ಈಗ ಮೂರಂಕೆಯ ಸಂಖ್ಯೆ ದಾಟಿವೆಯಾದರೂ ಇಲ್ಲಿ ಕೆಲವನ್ನು ಮಾತ್ರ ನೋಡೋಣ.

ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರ ಕೃಷಿ. ಇದೀಗ ಕೃಷಿ ಲಾಭದಾಯಕದ ಮಾತು ಹಾಗಿರಲಿ ಕೃಷಿಯಲ್ಲಿ ತೊಡಗಿರುವ ಮುಂದೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಹಾಗೂ ರೈತ ಕಾರ್ಮಿಕರ ಬದುಕನ್ನು ಉಳಿಸಿಕೊಳ್ಳಲು ನಾವೆಲ್ಲಾ ಪರದಾಡುತ್ತಿರುವ ಸಂದರ್ಭದಲ್ಲಿದ್ದೇವೆ. ರೈತರನ್ನು ಸೋಮಾರಿಗಳು ಕಷ್ಟಪಟ್ಟು ದುಡಿಯದವರು ಎಂದು ವಾದ ಮಾಡುವುದಾದರೆ ಇದು ಆತ್ಮವಂಚನೆ ಅಲ್ಲವೇ? ‘ಕೃಷಿ ಆತ್ಮಹತ್ಯೆ ಕ್ಷೇತ್ರ’ವಾಗಿದ್ದು ಮೋದಿಯ ಕಾಲದಲ್ಲೇ ಅಲ್ಲ. ಇದಕ್ಕೆ ಕಾಂಗ್ರೆಸ್ ಆಡಳಿತವೂ ಸೇರಿ ಕಾರಣವಾಗಿದೆ. ಆದರೆ ದುರಾದೃಷ್ಟವಶಾತ್ ಹೋಲಿಸಿ ನೋಡಲು ರೈತರ ಆತ್ಮಹತ್ಯೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಲೇ ಇಲ್ಲ! ಇಂದಿಗೂ ಸಾಪೇಕ್ಷವಾಗಿ ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಹಿಂದಿನ ಸರ್ಕಾರಗಳು ಕಾರಣವಾಗಿರುವುದು ನಿಜವೇ ಆದರೂ ಮೋದಿ ‘ಆಳ್ವಿಕೆಯಲ್ಲಿ’ ನಷ್ಟ ಕಂಡ/ಕಾಣುತ್ತಿರುವ ಸಂಸ್ಥೆಯ ಬಗ್ಗೆ ಗಮನಹರಿಸೋಣ.

ಎಚ್.ಎ.ಎಲ್: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು 1940 ರಿಂದಲೂ ಬಾಹ್ಯಾಕಾಶಕ್ಕೆ ಕೊಡುಗೆ ನೀಡುತ್ತಾ ಬಂದಿದೆ. 1964 ರಿಂದ ಹಿಂದುಸ್ತಾನ್ ಏರ್ ಕ್ರಾಫ್ಟ್ ನಿಂದ ಎಚ್.ಎ.ಎಲ್ ಎಂದು ಮರುನಾಮಕರಣಗೊಂಡು ಬಾಹ್ಯಾಕಾಶ ಹಾಗೂ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸೇನೆಗೆ ಧೃವ್, ಚೇತಕ್, ಲ್ಯಾನ್ಸರ್ ಇನ್ನೂ ಮುಂತಾದ ಹೆಲಿಕಾಪ್ಟರ್ ಅನ್ನು ನೀಡಿದೆ. ಹಾಗೂ ಎಲ್.ಸಿ.ಎ, ಎಚ್ ಟಿಟಿ-40, ಐಜೆಟಿ ನಂತಹ ಯುದ್ಧ ವಿಮಾನಗಳನ್ನೂ ಕೊಡೆಗೆಯಾಗಿ ನೀಡಿದೆ. ಇದಲ್ಲದೆ ಫೈಟರ್ ಜೆಟ್, ಪವರ್ ಪ್ಲಾಂಟ್, ಹಲವಾರು ಬೇರೆ ಬೇರೆ ಉಪಕರಣಗಳನ್ನು ನೀಡಿದೆ.

ಸದ್ಯಕ್ಕೆ 32,108 (2014 ರ ಗಣತಿ) ಜನರು ಈ ಸರ್ಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಐತಿಹಾಸಿಕ ಸಂಸ್ಥೆ ನಮ್ಮ ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆಯೇ ಸರಿ. (ರಾಫೇಲ್ ಒಪ್ಪಂದದ ಚರ್ಚೆಯಲ್ಲಿ ಕೇಂದ್ರದ ಮಂತ್ರಿಗಳು ಎಚ್.ಎ.ಎಲ್ ಕಾರ್ಯಕ್ಷಮತೆ ಚೆನ್ನಾಗಿಲ್ಲ ಹಾಗಾಗಿ ಅಂಬಾನಿಗೆ ಈ ಒಪ್ಪಂದ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅಂಬಾನಿ ತನ್ನ ಜೀವನದಲ್ಲಿ ಒಂದೂ ಯುದ್ಧ ವಿಮಾನವನ್ನು ತಯಾರು ಮಾಡಿಲ್ಲ ಹಾಗು ಅಂತಹ ಘಟಕ ಆತನ ಬಳಿ ಇಲ್ಲ ಎನ್ನುವುದು ವಾಸ್ತವ. ಇತಿಹಾಸ ತಿಳಿಯದ ಮುಗ್ಧರು ಇದನ್ನೇ ಸತ್ಯವೆಂದು ತಿಳಿದು ವಾದಿಸುವುದು ದುರಂತ) ಇಂತಹ ಎಚ್.ಎ.ಎಲ್ ಸಂಸ್ಥೆ ಇತಿಹಾಸದಲ್ಲೇ ಪ್ರಥಮ ಬಾರಿಗೆ (ಜನವರಿ, 2019) ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲದೆ 1,000 ಕೋಟಿ ರೂ ಸಾಲವನ್ನು ಮಾಡಿತ್ತು! ಈಗಲೂ ಒಟ್ಟಾರೆ ಆದಾಯ ಏರಿಕೆ ಕಂಡಿಲ್ಲ. ಈ ಸಂಸ್ಥೆಯನ್ನು ಸೋಮಾರಿ ಸಂಸ್ಥೆ ಎಂದರೆ ಆತ್ಮವಂಚನೆಯ ಕೆಲಸವಲ್ಲದೆ ಮತ್ತೇನು?

ಬಿ.ಎಸ್.ಎನ್.ಎಲ್: 2000 ನೇ ಇಸವಿಯಲ್ಲಿ ಶುರುವಾಗಿರುವ ಈ ಸಂಸ್ಥೆಯ ವಾರಸುದಾರರು ಭಾರತ ಸರ್ಕಾರವಾಗಿದೆ. 1,74,216 ಸಿಬ್ದಂದಿಗಳಿರುವ ಈ ಸಂಸ್ಥೆ ಹಳ್ಳಿ ಹಳ್ಳಿಗೂ ದೂರವಾಣಿ ಸಂಪರ್ಕವನ್ನು ನೀಡಿದ ಮೊಟ್ಟ ಮೊದಲ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬಲವರ್ಧನೆಗೆ ಕೆಲಸ ಮಾಡದ ಸರ್ಕಾರ ಜಿಯೋ ಎನ್ನುವ ಖಾಸಗೀ ವ್ಯಕ್ತಿಯೊಬ್ಬನ ಟೆಲಿಕಾಂ ಪ್ರಚಾರಕ್ಕಾಗಿ ದೇಶದ ಪ್ರಧಾನ ಮಂತ್ರಿಗಳೇ ಅಧಿಕೃತ ರಾಯಭಾರಿ ಆಗಿದ್ದು ನಿಜಕ್ಕೂ ದೇಶದ ಬಹುದೊಡ್ಡ ದುರಂತ. ಈಗ ಬಿ.ಎಸ್.ಎನ್.ಎಲ್ ಸಂಸ್ಥೆ ನಷ್ಟದಲ್ಲಿದ್ದು ವರಮಾನ ಇಳಿಮುಖ ಕಾಣುತ್ತಿದೆ. ಇದರ ಆಪರೇಷನಲ್ ಇನ್ಕಂ -14,000 ಕೋಟಿ (ಮೈನಸ್). ಹೀಗಾಗಿ ಸಿಬ್ಬಂದಿಗಳ ವೇತನಕ್ಕೂ ತೊಂದರೆಯಾಗುತ್ತಿದೆ. ಈಗ ಸಂಸ್ಥೆಯ ಬಲವರ್ಧನೆಗೆ ದುಡಿಯದ ಸರ್ಕಾರವನ್ನು ಬಿಟ್ಟು 1,74,216 ಜನರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ?

2013ರಲ್ಲಿ ನಂ.1 ಬ್ರಾಂಡ್ ಆಗಿದ್ದ ಭಾರತದ ಪಾರ್ಲೇಜಿ ಕಂಪನಿ 1939 ರಿಂದಲೂ ಕೆಲಸ ಮಾಡುತ್ತಿದೆ. ಅಲ್ಲದೆ ಇದು ಹಾಲು ಉತ್ಪಾದಕ ರೈತರಿಗೂ ಸಂಜೀವಿನಿಯಾಗಿತ್ತು. ಇದೀಗ ಪಾರ್ಲೆಜಿ ಕಂಪನಿಯೂ ನಷ್ಟದಲ್ಲಿದ್ದು 10,000 ನೌಕರರನ್ನು ಕಿತ್ತುಹಾಕಿದೆ. ಜಿ.ಎಸ್.ಟಿ ಮತ್ತು ನೋಟು ರದ್ಧತಿಯೇ ತಮ್ಮ ನಷ್ಟಕ್ಕೆ ಕಾರಣ ಎಂದು ಕಂಪನಿಯ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಆದರೆ ಇಂತಹ ದೀರ್ಘ ಇತಿಹಾಸವಿರುವ ಕಂಪನಿಯನ್ನು “ಇದು ಭಾರತದ ಕಂಪನಿಯಲ್ಲ, ಅಲ್ಲಿ ಕೇವಲ 4 ಸಾವಿರ ಸಿಬ್ಬಂದಿ ಅಷ್ಟೇ ಇರೋದು, 10 ಸಾವಿರ ಎಲ್ಲಿಂದ?” ಎನ್ನುವ ಸುಳ್ಳು ಸಂದೇಶವನ್ನು ಬಿಜೆಪಿಯ ವಕ್ತಾರರೇ ಹಂಚುತ್ತಿದ್ದಾರೆ. ಅಂದರೆ ಬ್ರಿಟಾನಿಯ ಕಂಪನಿಯ 4 ಸಾವಿರ ಸಿಬ್ಬಂದಿಯನ್ನು ತೋರಿಸಿ ಪಾರ್ಲೆಜಿಗೆ ಹೋಲಿಸುವ ಸುಳ್ಳನ್ನು ಬಿತ್ತುತ್ತಿದ್ದಾರೆ. ಇದನ್ನು ನಂಬಿದ ಮುಗ್ದರು ಪಾರ್ಲೆಜಿಯನ್ನೂ ಸೋಮಾರಿಗಳು ಎನ್ನುತ್ತಿದ್ದಾರೆ.

ಇನ್ನೂ ನೂರಾರು ವರ್ಷಗಳ ಇತಿಹಾಸವಿರುವ ನೇಯ್ಗೆ ಕ್ಷೇತ್ರದ ತಮಿಳುನಾಡಿನಲ್ಲಿ ಒಂದೇ ಬಾರಿ 200 ಕಾರ್ಖಾನೆಗಳು ಮುಚ್ಚಿದವು, ಟೀ ಉತ್ಪಾದನಾ ಕ್ಷೇತ್ರವೂ ನಷ್ಟದಲ್ಲಿದೆ. ಈ ಎರಡು ಕ್ಷೇತ್ರಗಳು ಇತಿಹಾಸದಲ್ಲಿ ಮೊದಲ ಬಾರಿಗೆ “ನಾವು ನಷ್ಟದಲ್ಲಿದ್ದೇವೆ ನಮ್ಮನ್ನು ಕಾಪಾಡಿ” ಎನ್ನುವ ಪತ್ರಿಕಾ ಜಾಹೀರಾತನ್ನೇ ನೀಡಿದವು. ಈ ಗಂಭೀರತಯನ್ನು ಅರ್ಥ ಮಾಡಿಕೊಳ್ಳದೆ ಆ ನೇಕಾರ ಹಾಗೂ ರೈತ ಕಾರ್ಮಿಕರನ್ನೂ ಸೋಮಾರಿಗಳು ಎಂದರೆ ಅಂಬಾನಿಯ ಟ್ರಾಪ್ ಗೆ ನಾವು ಬಿದ್ದಂತೆಯೇ ಸರಿ.

ಇದೀಗ ಅತಿದೊಡ್ಡ ನಷ್ಟ ಹಾಗೂ ತಿಂಗಳಿಗೆ 15-20 ವರ್ಷಗಳ ಅನುಭವವಿದ್ದರೂ ನೂರಾರು ಕಾರ್ಮಿಕರನ್ನು ಕೆಲಸದಿಂದ ಕಿತ್ತುಹಾಕುತ್ತಿರುವ ಆಟೋಮೊಬೈಲ್ ಕ್ಷೇತ್ರಗಳಿಗೆ ಹತ್ತಾರು ವರ್ಷದ ಇತಿಹಾಸವಿದೆ ಹಾಗೂ ಲಕ್ಷಾಂತರ ಕಾರ್ಮಿಕರು/ಸಿಬ್ಬಂದಿಗಳು ಜಪಾನ್ ಟೆಕ್ನಾಲಜಿಯ ಅನುಸಾರ ಅಮಾನವೀಯವಾಗಿ ಸೆಕೆಂಡ್ ಲೆಕ್ಕದಲ್ಲಿ ಮಾನೇಸಾರ್, ಹೊಂಡಾ, ಟಿವಿಎಸ್, ಹಿರೋ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ? ಟಿವಿಎಸ್, ಟಾಟಾ ಕಂಪನಿಗಳು ಸಹ ನಷ್ಟಕ್ಕೆ ಸಿಲುಕಿವೆ. ಅದಕ್ಕೆ ಸೋಮಾರಿತನ ಕಾರಣವೇ?

ಹೀಗೆ ನಷ್ಟ ಅನುಭವಿಸುತ್ತಿರುವ ಎಲ್ಲರನ್ನು ಸೋಮಾರಿಗಳು ಎನ್ನುತ್ತಾ ಮುಖೇಶ್ ಅಂಬಾನಿ ಅಥವಾ ಇನ್ನೊಬ್ಬ ವ್ಯಕ್ತಿ ಮಾತ್ರ ‘ಕ್ರೀಯಾಶೀಲ’ ಎಂದು ನಾವು ಹೇಳುವುದಾದರೆ ಅದು ಮೋಸ ಎಂತಲೇ ಅರ್ಥ. ಏಕೆಂದರೆ ಅಂಬಾನಿಗೆ ಸರ್ಕಾರಗಳು ಲಕ್ಷ ಕೋಟಿಗಳ ಲೆಕ್ಕದಲ್ಲಿ ತೆರಿಗೆ ವಿನಾಯಿತಿ ನೀಡಿವೆ. ಅವರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿವೆ. ಪುಕ್ಕಟೆಯಾಗಿ ಆತನ ಜಿಯೊ ಟೆಲಿಕಾಂಗೆ ಪ್ರಧಾನಿಗಳು ಜಾಹಿರಾತು ಕೊಟ್ಟಿದ್ದಾರೆ. ಆದರೆ ಇದನ್ನೆ ಸರ್ಕಾರಿ ಸಂಸ್ಥೆಗಳಿಗೆ ಅಥವಾ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಂಸ್ಥೆಗಳಿಗೆ ಏಕೆ ಮಾಡಲಿಲ್ಲ? ಕರ್ನಾಟಕ ಸಿದ್ದಾರ್ಥ್ ರವರ ಕಾಫಿಡೇ ಗೆ ಏಕೆ ನೆರವು ನೀಡಲಿಲ್ಲ? ಈ ಪ್ರಶ್ನೆಗೆ ಉತ್ತರಿಸುತ್ತೀರಾ?

ಹೀಗೆ ಸೋಮಾರಿ ಕಂಪನಿಗಳು ಎಂಬ ಸುಳ್ಳನ್ನು ಹಂಚುವುದರಿಂದ ನಾವು “ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೃಷಿ, ಸಣ್ಣ ವ್ಯಾಪಾರಗಳು ಹಾಗೂ ಗುಡಿ ಕೈಗಾರಿಕೆಗಳನ್ನು ನಾಶ ಮಾಡುತ್ತೇವೆ, ಉದ್ಯೋಗವೇ ಸೃಷ್ಟಿಯಾಗದ ಏಕಸ್ವಾಮ್ಯ ಬಂಡವಾಳವಾದವನ್ನು ಬೆಳೆಸುವ ಮತ್ತು ನಿರುದ್ಯೋಗದ ಪರ ವಹಿಸಿದಂತಾಗುತ್ತದೆ.”

ಹಾಗಾದರೇ ಸೋಮಾರಿತನ ಇಲ್ಲವೇ? ಖಂಡಿತವಾಗಿಯೂ ಇದೆ! ಆರ್ಥಿಕತೆ ಹಿಂಜರಿತ, ನಿರುದ್ಯೋಗಕ್ಕೆ ಕಾರಣಗಳನ್ನು, ಅದರ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ, ತರ್ಕಬದ್ದವಾಗಿ ಓದುವುದರಲ್ಲಿ, ಸ್ವಂತ ವಿಚಾರ ಮಾಡುವುದರಲ್ಲಿ ಸೋಮಾರಿತನ ಇದ್ದೇಯಿದೆ. ಇದರಿಂದ ಹೊರಬರಬೇಕಿದೆ. ದೇಶಕ್ಕೆ ಎದುರಾಗಲಿರುವ ಅಪಾಯದಿಂದ ಉಳಿಸಬೇಕಿದೆ. ಮುನ್ನೋಟವನ್ನು ಕಟ್ಟಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಾರ್ವಜನಿಕ ವಲಯದ ಕಂಪೆನಿಗಳಾದ ಬಿ.ಇ.ಎಂ.ಎಲ್ , ಸೇರಿದಂತೆ ಅನೇಕ ಕಂಪೆನಿಗಳನ್ನು ಇಂದು ಖಾಸಗೀಯವರಿಗೆ ಪರಭಾರೆ ಮಾಡಿ ಸರಕಾರ ಕೈ ತೊಳೆದು ಕೊಳ್ಳಲು ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ, ಅವರು ನೀಡುವ ಕಾರಣ ಹೆಚ್.ಎ.ಎಲ್ ಸೇರಿದಂತೆ ಎಲ್ಲವೂ ಕೂಡ ಒಂದೋ ನಷ್ಟದಲ್ಲಿ ಇದ್ದಾವೆ ಹಾಗೂ ಅವುಗಳ ಕಾರ್ಯಕ್ಷಮತೆ ಖಾಸಗೀಯವರ ತರಹ ಇಲ್ಲ ಎಂದು. ದುರಂತ ಎಂದರೆ ಸಾರ್ವಜನಿಕ ಉದ್ದಿಮೆಗಳಲ್ಲಿ ಇರುವ ನಮೋ ಭಕ್ತರು ಈ ಕಂಪೆನಿಗಳನ್ನು ಖಾಸಗೀ ಒಡೆತನಕ್ಕೆ ಮಾರಲು ತುದಿಗಾಲಿನಲ್ಲಿ ಕಾದಿದ್ದಾರೆ, ಆ ಮೂಲಕ ಪ್ರಧಾನ ಸೇವಕ ರ ಕೈ ಬಲಪಡಿಸುತ್ತಾರಂತೆ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....