ದೆಹಲಿ ಚುನಾವಣೆಯ ಅಭ್ಯರ್ಥಿಯಾಗಿರುವ ಬಿಜೆಪಿಯ ಕಪಿಲ್ ಮಿಶ್ರಾ ಅವರು ತಮ್ಮ ಟ್ವೀಟ್ ಮೂಲಕ ಮತದಾನವನ್ನು ಭಾರತ ವಿರುದ್ಧ ಪಾಕಿಸ್ತಾನದ ಯುದ್ದಕ್ಕೆ ಹೋಲಿಸಿದನ್ನು ಚುನಾವಣಾ ಸಂಸ್ಥೆಯು ಕಟು ಶಬ್ದಗಳಲ್ಲಿ ಖಂಡಿಸಿದೆ.
ಕಪಿಲ್ ಮಿಶ್ರಾ ಅವರ ಕೋಮುವಾದಿ ಟ್ವೀಟ್ ಅನ್ನು ಡಿಲೀಟ್ ಮಾಡಿ ಎಂದು ಟ್ವಿಟ್ಟರ್‌ಗೆ ಚುನಾವಣಾ ಸಂಸ್ಥೆ ಮನವಿ ಮಾಡಿದೆ.
#UPDATE Delhi Chief Electoral Officer's office requests Election Commission of India to begin the process for removal of Kapil Mishra's tweet. Election Commission has asked Twitter directly to remove the tweet. https://t.co/BRBBo1Jixa
— ANI (@ANI) January 24, 2020
ಇತ್ತೀಚಿಗೆ ಹಲವು ಕೋಮು ಮತ್ತು ಪ್ರಚೋದನಾಕಾರಿ ಟ್ವೀಟ್‌ಗಳನ್ನು ಮಾಡುತ್ತಿರುವ ಕಪಿಲ್ ಮಿಶ್ರಾ ಅವರು ನಿನ್ನೆ “ಭಾರತ ವಿರುದ್ಧ ಪಾಕಿಸ್ತಾನ, ಫೆಬ್ರವರಿ 8, ದೆಹಲಿ. ಭಾರತ ಮತ್ತು ಪಾಕಿಸ್ತಾನ ದೆಹಲಿಯ ಬೀದಿಗಳಲ್ಲಿ ಸ್ಪರ್ಧಿಸಲಿವೆ.” ಎಂದು ಪೋಸ್ಟ್ ಮಾಡಿದ್ದರು
ಮಿಶ್ರಾ ಅವರ ಟ್ವೀಟ್ ಅನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗವು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್ ಗೆ ಪತ್ರ ಬರೆದಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಕಪಿಲ್ ಮಿಶ್ರಾ ಅವರ ಟೀಕೆಗಳು “ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವುದು ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವುದು ಅಥವಾ ವಿವಿಧ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುತ್ತವೆ” ಇದು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಟ್ವೀಟ್ ಕುರಿತು ವರದಿಯನ್ನು 24 ಗಂಟೆಗಳ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ದೆಹಲಿ ಚುನಾವಣಾ ಕಚೇರಿಗೆ ಸೂಚಿಸಲಾಗಿದೆ.
ಟ್ವೀಟ್ ಬಗ್ಗೆ ಕಪಿಲ್ ಮಿಶ್ರಾ “ದೆಹಲಿಯ ಅನೇಕ ಸ್ಥಳಗಳಲ್ಲಿ ಮಿನಿ ಪಾಕಿಸ್ತಾನಿಗಳನ್ನು ರಚಿಸಲಾಗಿದೆ. ಶಾಹೀನ್ ಬಾಗ್ ಅನ್ನು ವಿವಿಧ ಸ್ಥಳಗಳಲ್ಲಿ ಪುನರಾವರ್ತಿಸಲಾಗುತ್ತಿದೆ. ಇಂದರ್ ಲೋಕ್, ಚಂದ್ ಬಾಗ್ ಮುಂತಾದ ಇತರ ಸ್ಥಳಗಳು ಸಹ ಮಿನಿ ಪಾಕಿಸ್ತಾನ ಆಗಿವೆ. ರಸ್ತೆ ತಡೆ ಮಾಡುವ ಮೂಲಕ ಹಲವು ಪ್ರದೇಶಗಳು ಮತ್ತು ಶಾಲೆಗಳು ಇತ್ಯಾದಿಗಳನ್ನು ನಿರ್ಬಂಧಿಸುವ ಮೂಲಕ ಪ್ರತಿಭಟನಾಕಾರರು ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಎಂದು ಹೇಳಿದ್ದಾರೆ.
ತಮಗೆ ಬಂದ ನೋಟಿಸ್ ಕುರಿತು ಮಾತನಾಡಿದ ಕಪಿಲ್ ಮಿಶ್ರಾ “ನಾನು ಇಂದು ನನ್ನ ಉತ್ತರವನ್ನು ನೀಡುತ್ತೇನೆ. ನಾನು ಏನೂ ತಪ್ಪು ಹೇಳಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ಸತ್ಯವನ್ನು ಮಾತನಾಡುವುದು ಈ ದೇಶದಲ್ಲಿ ಅಪರಾಧವಲ್ಲ. ನಾನು ಸತ್ಯವನ್ನು ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ನಾನು ನಿಲ್ಲುತ್ತೇನೆ” ಎಂದಿದ್ದಾರೆ.
ಮಿಶ್ರಾ ಅವರ ನಾಮಪತ್ರವನ್ನು ರದ್ದುಗೊಳಿಸುವಂತೆ ಎಎಪಿ ಮುಖ್ಯ ಚುನಾವಣಾ ಅಧಿಕಾರಿಗೆ ಕೇಳಿದೆ. ಸರ್ಕಾರಿ ವಸತಿ ಸೌಕರ್ಯವನ್ನು ಬಳಸುವವರಿಗೆ ನೀರು, ವಿದ್ಯುತ್ ಮತ್ತು ದೂರವಾಣಿ ವೆಚ್ಚಗಳ ಬಗ್ಗೆ ಯಾವುದೇ ಬಾಕಿ ಪ್ರಮಾಣಪತ್ರವನ್ನು ನೀಡುವ ನಿಯಮಗಳನ್ನು ಕಡ್ಡಾಯಗೊಳಿಸಿದೆ. ಆದರೆ ಮಿಶ್ರಾ ಅವರು ತಮ್ಮ ನಾಮಪತ್ರಗಳಲ್ಲಿ ಇದನ್ನು ಉಲ್ಲೇಖಿಸಿಲ್ಲ ಎಂದು ಆಪ್ ಆರೋಪಿಸಿದೆ.


