ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುವಂತೆ ಆಗಲಿದ್ದು, ಅಂತಹ ಸಮಾಜ ಸೃಷ್ಟಿಯಾಗುವ ದಿನ ದೂರವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ. “ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಮತ್ತು ನಮ್ಮ ಧರ್ಮವನ್ನು ವಿದೇಶಿ ಭಾಷೆಗಳಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರು
“ಆಧಿ-ಅಧುರಿ [ಅಪೂರ್ಣ] ಆಗಿರುವ ವಿದೇಶಿ ಭಾಷೆಗಳಿಂದ ಸಂಪೂರ್ಣ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಅದು ಭಾರತೀಯತೆ, ಭಾರತೀಯ ಭಾಷೆಗಳೊಂದಿಗೆ ಮಾತ್ರ ಸಾಧ್ಯ” ಎಂದು ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಭಾಷೆಗಳನ್ನು “ನಮ್ಮ ಸಂಸ್ಕೃತಿಯ ರತ್ನಗಳು” ಎಂದು ಕರೆದ ಅವರು, ಅವುಗಳಿಲ್ಲದೆ, “ನಾವು ಭಾರತೀಯರಾಗುವುದನ್ನು ನಿಲ್ಲಿಸಿ ಬಿಡುತ್ತೇವೆ” ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ಜೂನ್ 6 ರಂದು ಭಾರತೀಯ ಭಾಷಾ ಅನುಭಾಗ್ ಅಥವಾ ಭಾರತೀಯ ಭಾಷಾ ವಿಭಾಗವನ್ನು ಪ್ರಾರಂಭಿಸಿದ್ದರು. ಈ ಉಪಕ್ರಮವು ಎಲ್ಲಾ ಭಾರತೀಯ ಭಾಷೆಗಳಿಗೆ ಸಂಘಟಿತ ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದ್ದು, ಇದು “ಆಡಳಿತವನ್ನು ವಿದೇಶಿ ಭಾಷೆಗಳ ಪ್ರಭಾವದಿಂದ ಮುಕ್ತಗೊಳಿಸುವ” ಉದ್ದೇಶವನ್ನು ಹೊಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಮೂಲಕ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರುತ್ತಿದೆ ಎಂದು ಹಲವಾರು ರಾಜ್ಯ ಸರ್ಕಾರಗಳು ಮತ್ತು ಪ್ರಾದೇಶಿಕ ಪಕ್ಷಗಳು ಆರೋಪಿಸುತ್ತಿರುವ ಮಧ್ಯೆಯೆ ಗೃಹ ಸಚಿವ ಅಮಿತ್ ಶಾ ಈ ಹೇಳಿಕೆ ಗುರುವಾರ ನೀಡಿದ್ದಾರೆ.
ಮಂಗಳವಾರವಷ್ಟೆ, ಮಹಾರಾಷ್ಟ್ರ ಸರ್ಕಾರವು ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯನ್ನು “ಸಾಮಾನ್ಯವಾಗಿ” ಕಲಿಸುವ ಮೂರನೇ ಭಾಷೆ ಎಂದು ಆದೇಶ ಹೊರಡಿಸಿತ್ತು. ಮರಾಠಿ ಭಾಷಾ ಪರ ಹೋರಾಟಗಾರರು ಈ ಕ್ರಮವನ್ನು ಟೀಕಿಸಿದ್ದು, ಸರ್ಕಾರವು “ಹಿಂಬಾಗಿಲಿನ” ಮೂಲಕ ತ್ರಿಭಾಷಾ ಸೂತ್ರವನ್ನು ಮತ್ತೆ ಪರಿಚಯಿಸುತ್ತಿದೆ ಎಂದು ಆರೋಪಿಸಿದ್ದಾರೆ.
ತಮಿಳುನಾಡು ಮತ್ತು ಕರ್ನಾಟಕ ಕೂಡ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಲೆ ಇವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ತಮಿಳುನಾಡು ನಿರಂತರವಾಗಿ ವಿರೋಧಿಸಿತ್ತಿದೆ. ರಾಜ್ಯದಲ್ಲಿ ತಮಿಳು ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ವಿದ್ಯಾರ್ಥಿಗಳಿಗೆ ಕಲಿಸುವ ದಶಕಗಳಷ್ಟು ಹಳೆಯದಾದ ದ್ವಿಭಾಷಾ ನೀತಿಯನ್ನು ತಾನು ಬದಲಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: 2 ಲಕ್ಷ ಇರಾಕಿಗಳ ಹತ್ಯೆ ಮಾಡಿದ್ದ ಅಮೆರಿಕ: ಈ ಯುದ್ಧದ ಇತಿಹಾಸ ಮರುಕಳಿಸದಿರಲಿ
2 ಲಕ್ಷ ಇರಾಕಿಗಳ ಹತ್ಯೆ ಮಾಡಿದ್ದ ಅಮೆರಿಕ: ಈ ಯುದ್ಧದ ಇತಿಹಾಸ ಮರುಕಳಿಸದಿರಲಿ

