Homeಮುಖಪುಟಕೆ.ಎಸ್‌ ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆಗಳು ಹೊಸದೇನಲ್ಲ: ಇಲ್ಲಿವೆ ಸಾಲು ಸಾಲು ಪ್ರಕರಣಗಳು

ಕೆ.ಎಸ್‌ ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆಗಳು ಹೊಸದೇನಲ್ಲ: ಇಲ್ಲಿವೆ ಸಾಲು ಸಾಲು ಪ್ರಕರಣಗಳು

- Advertisement -
- Advertisement -

ಕರ್ನಾಟಕ ರಾಜಕಾರಣದ ಮಟ್ಟಿಗೆ ಆಗಿಂದಾಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮತ್ತು ಪ್ರಚೋದನಾಕಾರಿ ಭಾಷಣ ಮಾಡುವುದರಲ್ಲಿ ಬಿಜೆಪಿ ಹಿರಿಯ ನಾಯಕ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಅಗ್ರಗಣ್ಯರು. ಇಂತಹ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಅವರು ಪೇಚಿಗೆ ಸಿಲುಕಿ, ನಂತರ ಕ್ಷಮೆ ಕೇಳಿದ ಪ್ರಸಂಗಗಳೂ ಸಾಕಷ್ಟಿವೆ. ತೀರಾ ಇತ್ತೀಚೆಗೆ ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಕೆ.ಎಸ್. ಈಶ್ವರಪ್ಪ “ಮುಂದೊಂದು ದಿನ ತ್ರಿವರ್ಣ ಧ್ವಜದ ಬದಲು ಕೇಸರಿ ಭಾಗವಧ್ವಜವೇ ದೇಶದ ರಾಷ್ಟ್ರೀಯ ಧ್ವಜವಾದರೂ ಆಗಬಹುದು” ಎಂಬ ಹೇಳಿಕೆ ನೀಡಿ ಮತ್ತೆ ವಿವಾದದ ಕೇಂದ್ರವಾಗಿದ್ದರು. ಈಶ್ವರಪ್ಪನವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಿರತರಾಗಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರೇ ಈ ಹೇಳಿಕೆಯನ್ನು ಟೀಕಿಸಿ ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ಫೆ.20 ರಂದು ಶಿವಮೊಗ್ಗದಲ್ಲಿ ಬಜರಂಗದಳದ ಹರ್ಷ ಎಂಬ ಹುಡುಗನ ಕೊಲೆಯಾಗುತ್ತದೆ. ಕೂಡಲೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತಲುಪಿಕೊಳ್ಳುವ ಈಶ್ವರಪ್ಪ, “ಇದು ಮುಸ್ಲಿಂ ಗೂಂಡಾಗಳು ಮಾಡಿದ ಕಾರ್ಯ” ಎಂಬ ಹೇಳಿಕೆ ಕೊಡುವುದರ ಜೊತೆಗೆ ಶವದ ಮೆರವಣಿಗೆಯನ್ನೂ ಮುಂದೆ ನಿಂತು ನಡೆಸುತ್ತಾರೆ. ನಂತರ ಇದು ಇಡೀ ಶಿವಮೊಗ್ಗ ನಗರದಾದ್ಯಂತ ಕರ್ಫ್ಯೂ ಜಾರಿ ಮಾಡುವ ಮಟ್ಟಿಗಿನ ಕೋಮುದಳ್ಳುರಿಗೆ ಕಾರಣವಾಗಿದೆ. ಆದರೆ, ಸಚಿವ ಈಶ್ವರಪ್ಪ ಹೀಗೆ ವಿವಾದಾತ್ಮಕ ಅಥವಾ ಪ್ರಚೋದನಕಾರಿ ಹೇಳಿಕೆ ನೀಡಿ ಪೇಚಿಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ.

ಈಶ್ವರಪ್ಪನವರ ಹಲವು ವಿವಾದಾತ್ಮಕ ಹೇಳಿಕೆಗಳ ಪಟ್ಟಿ ಇಲ್ಲಿದೆ:

2014 ಕೊಪ್ಪಳ: ಕಾಂಗ್ರೆಸ್‌ನಲ್ಲಿ ತಾಯಿ ಹಾಲು ಕುಡಿದ ಗಂಡಸರೇ ಇಲ್ಲ:

ಲೋಕಸಭಾ ಚುನಾವಣೆ ಗರಿಗೆದರಿದ್ದ ದಿನಗಳವು. ನರೇಂದ್ರ ಮೋದಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ದೇಶದ ವಿವಿಧೆಡೆ ಪ್ರಚಾರದಲ್ಲಿ ತೊಡಗಿದ್ದ ಕಾಲ. ಆಗ ಕೊಪ್ಪಳಕ್ಕೂ ಮೋದಿ ಪ್ರಚಾರಕ್ಕೆ ಆಗಮಿಸುವುದು ಪಕ್ಕಾ ಆಗಿತ್ತು. ಹೀಗಾಗಿ ಮೋದಿ ಕೊಪ್ಪಳಕ್ಕೆ ಆಗಮಿಸುವುದಕ್ಕೂ ಮೊದಲು ಕೊಪ್ಪಳದಲ್ಲಿ ಕಾರ್ಯಕಾರಿಣಿ ಸಭೆ ಆಯೋಜಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈಶ್ವರಪ್ಪನವರನ್ನು ಜಿಲ್ಲೆಗೆ ಕಳುಹಿಸಿಕೊಡಲಾಗಿತ್ತು.

ಆದರೆ, ಕೊಪ್ಪಳ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ್ದ ಈಶ್ವರಪ್ಪ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, “ಮನಮೋಹನ್ ಸಿಂಗ್ ಗಂಡಸೇ ಅಲ್ಲ, ಕಾಂಗ್ರೆಸ್‌ನಲ್ಲಿ ತಾಯಿ ಮೊಲೆಹಾಲು ಕುಡಿದ ಗಂಡಸರೇ ಇಲ್ಲ” ಎಂಬಂತಹ ಮಾತುಗಳನ್ನು ಆಡಿಬಿಟ್ಟಿದ್ದರು. ಈ ಹೇಳಿಕೆ ದೇಶದಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಈಶ್ವರಪ್ಪನ ಸುತ್ತ ದೊಡ್ಡ ವಿವಾದವೂ ರೂಪ ತಳೆದಿತ್ತು. ಕೊನೆಗೆ ಈಶ್ವರಪ್ಪ ಕ್ಷಮೆ ಕೇಳುವುದರೊಂಗಿಗೆ ಈ ವಿವಾದಕ್ಕೆ ಇತಿಶ್ರೀ ಹಾಡಲಾಗಿತ್ತು.

ಡಿಸೆಂಬರ್. 9 2017: ರಾಜಕಾರಣಿಗಳು ಸುಳ್ಳೋ ಪೊಳ್ಳೊ ಹೇಳಿ ಓಟ್ ಕೇಳ್ಬೇಕು:

ರಾಜ್ಯದ ಎಲ್ಲಾ ಪಕ್ಷಗಳೂ 2018ರ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿದ್ದ ಸಂದರ್ಭ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಮತ ಕೇಳುವ ಬಗ್ಗೆ ಕಿವಿಮಾತು ಹೇಳಿದ್ದ ಈಶ್ವರಪ್ಪ, “ಬಿಜೆಪಿ ಸರಕಾರ ಏನು ಮಾಡಿದೆ, ಕೇಂದ್ರ ಸರಕಾರ ಏನು ಮಾಡಿದೆ. ನಾವು ಬಂದ್ಮೇಲೆ ಏನೇನು ಮಾಡ್ತೀವಿ, ದಲಿತರಿಗೆ, ಹಿಂದುಳಿದವರಿಗೆ ರೈತರಿಗೆ ಹೆಣ್ಮಕ್ಕಳಿಗೆ ವಯಸ್ಸಾಗಿರೋರಿಗೆ ಏನು ಮಾಡುತ್ತೇವೆ ಈ ವಿಷಯಗಳೆಲ್ಲಾ ಗೊತ್ತಿರಬೇಕು, ನಾವಿದನ್ನೆಲ್ಲಾ ತಿಳ್ಕೊಂಡು ಹೋಗ್ಬೇಕು… ಅಕಸ್ಮಾತ್ ನಮಗೆ ಗೊತ್ತಿಲ್ಲ ಅಂದ್ರೆ… ಒಂದನ್ನು ನೆನಪಿಟ್ಕೊಬೇಕು.. .ರಾಜಕಾರಣಿಗಳು ಗೊತ್ತಿಲ್ಲ ಅಂತ ಯಾವಾಗ್ಲೋ ಒಪ್ಕೋಬಾರ್ದು. ಸುಳ್ಳೋ ಪೊಳ್ಳೋ ಏನೋ ಒಂದು ಹೇಳಿ ಬಂಡ್ಬಿಡ್ಬೇಕು.

ವಾಜಪೇಯಿ ಇದ್ದಂತ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಹೊಡೆದು ಹೊಡೆದು ಸಾಯಿಸ್ಬಿಟ್ರು ಎಂದು ಹೇಳಬೇಕು. ನೀವು ನೋಡಿದ್ದೀರಾ .. ನಿಮಗೆ ಗೊತ್ತಿಲ್ಲ ಆದರೂ ಹೀಗೆ ಹೇಳ್ಬೇಕು.. ನೋಡಿ ವಾಜಪೇಯಿ ಇದ್ದ ಸಂದರ್ಭದಲ್ಲಿ ಪಾಕಿಸ್ತಾನವು ತಲೆ ಎತ್ತಿಲ್ಲ. ಮನಮೋಹನ್ ಸಿಂಗ್ ಬಂದಾಗ ಅಲ್ಲಿಂದಂತಹ ಪಾಕಿಸ್ತಾನದ ಸೈನಿಕರು ಭಾರತದ ಸೈನಿಕರನ್ನು ಕೊಂದು ಹಾಕಿದ್ರು.. ನರೇಂದ್ರ ಮೋದಿಯವರು ಬರ್ತಾ ಇದ್ದಂಗೆ ಪಾಕಿಸ್ತಾನವನ್ನ ಇಲ್ಲಾ ಅನ್ನಿಸಿಬಿಡ್ತಾರೆ. ನರೇಂದ್ರ ಮೋದಿ ಗಂಡುಗಲಿ ಅಂತ ಇಡೀ ಪಪಂಚ ಒಪ್ತಿದೆ ತಾನೇ..” ಎಂದು ಏನೋ ಒಂದು ಹೇಳಿಬಿಡಬೇಕು” ಎಂದು ಈಶ್ವರಪ್ಪ ಹೇಳಿದ್ದರು. ಈಶ್ವರಪ್ಪನವರ ಈ ಹೇಳಿಕೆಯ ವಿರುದ್ಧವೂ ಸಾರ್ವಜನಿಕ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್‌: ಕೆ.ಎಸ್ ಈಶ್ವರಪ್ಪನವರಿಗೆ ಬೈದಿದ್ದನ್ನು ಸಿದ್ದರಾಮಯ್ಯನವರಿಗೆ ಸಿ.ಎಂ. ಇಬ್ರಾಹಿಂ ಏಕವಚನದಲ್ಲಿ ಬೈಗುಳ ಎಂದು ತಿರುಚಲಾಗಿದೆ

ಆಗಸ್ಟ್ 08 2021, ಶಿವಮೊಗ್ಗ: ಹಿಂದೂಗಳ ಮೇಲೆ ಕೈ ಮಾಡಿದ್ರೆ ಒಂದಕ್ಕೆ ಎರಡು ತೆಗೀರಿ:

ಕಳೆದ ವರ್ಷ ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರ ಎದುರು ಮಾತನಾಡಿದ್ದ ಸಚಿವ ಈಶ್ವರಪ್ಪ, “ಈ ಹಿಂದೆ ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು. ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ವಾಪಾಸ್ ಹೊಡಿಯೋ ಶಕ್ತಿ ನಮಗೆ ಇರಲಿಲ್ಲ. ಆದರೆ, ಈಗ ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೀತಿದೆ. ನಮಗೆ ಈಗ ತಿರುಗಿಸಿ ಹೊಡೆಯುವ ಶಕ್ತಿ ಬಂದಿದೆ. ಹೀಗಾಗಿ ಯಾರು ನಮ್ಮ ಕಾರ್ಯಕರ್ತರ ಮೇಲೆ ಯಾವುದರಲ್ಲಿ ಹೊಡೀತಾರೋ ಅದ್ರಲ್ಲೆ ತಿರುಗಿಸಿ ಹೊಡೆಯಿರಿ, ಒಂದಕ್ಕೆ ಎರಡು ತೆಗೀರಿ” ಎಂದು ಬಹಿರಂಗವಾಗಿ ಹಿಂಸಾಕೃತ್ಯಕ್ಕೆ ಕರೆ ನೀಡಿದ್ದರು.

ಸರ್ಕಾರದಲ್ಲಿ ಜವಾಬ್ದಾರಿ ಹುದ್ದೆಯಲ್ಲಿರುವ ಸಚಿವರೊಬ್ಬರ ಈ ಹೇಳಿಕೆ ವಿರೋಧ ಪಕ್ಷ ಮತ್ತು ಪ್ರಜ್ಞಾವಂತ ಸಮಾಜದಿಂದ ಸಾಕಷ್ಟು ಟೀಕೆಗೆ ಒಳಗಾಯಿತು. ಮಾಧ್ಯಮಗಳು ಈ ಬಗ್ಗೆ ದಿನಗಟ್ಟಲೆ ಚರ್ಚೆಗಳನ್ನೂ ನಡೆಸಿತ್ತು. ಆದರೆ, ಕೊನೆವರೆಗೂ ಈಶ್ವರಪ್ಪ ತಮ್ಮ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆ ಕೇಳಿರಲಿಲ್ಲ.

ಇದನ್ನೂ ಓದಿ:‘ರೆಬಲ್ ಆಗುವುದು ಗೊತ್ತಿಲ್ಲ, ನ್ಯಾಯ ಕೇಳುವುದನ್ನು ಬಿಡಲ್ಲ’: ಕೆ.ಎಸ್ ಈಶ್ವರಪ್ಪ ಪತ್ರಿಕಾಗೋಷ್ಠಿ

ಆಗಸ್ಟ್ 10 2021 ಬೆಂಗಳೂರು, ಕಾಂಗ್ರೇಸಿಗರು ಕುಡುಕ ಸೂ….ಮಕ್ಕಳು:

“ಹಿಂದೂ ಕಾರ್ಯಕರ್ತರ ಮೇಲೆ ಕೈ ಮಾಡಿದವರನ್ನು ಒಂದಕ್ಕೆ ಎರಡು ತೆಗೆದುಬಿಡಿ” ಎಂಬ ಈಶ್ವರಪ್ಪನವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾಪ್ರಹಾರವನ್ನೇ ನಡೆಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು” ಈಶ್ವರಪ್ಪನವರ ಹೇಳಿಕೆ ಸರಿಯಲ್ಲ ಇದು ಹಿಂಸೆಯನ್ನು ಪ್ರಚೋದಿಸುವಂತಿದೆ” ಎಂದು ಖಂಡಿಸಿದ್ದರು.

ಆದರೆ, ಕಾಂಗ್ರೆಸ್ ನಾಯಕರ ಈ ಅಭಿಪ್ರಾಯದ ವಿರುದ್ಧ ಬಹಿರಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾದ ಪದವನ್ನು ಬಳಸಿದ್ದ ಈಶ್ವರಪ್ಪನವರು, “ಕಾಂಗ್ರೇಸಿಗರು ಕುಡುಕ ಸೂ….ಮಕ್ಕಳು” ಎಂಬ ಪದವನ್ನು ಬಳಿಸಿಬಿಟ್ಟಿದ್ದರು. ಕೊನೆಗೆ ಈ ಹೇಳಿಕೆ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾದ ಬೆನ್ನಿಗೆ ಈಶ್ವರಪ್ಪ ಕ್ಷಮೆ ಕೋರಿದ್ದರು.

ನವೆಂಬರ್.30 2021, ಬೆಂಗಳೂರು: ಸಿದ್ದರಾಮಯ್ಯ ಕುಡುಕ ಮೋಸಗಾರ:

ವಿರೋಧ ಪಕ್ಷದ ನಾಯಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ರಾಜಕೀಯದಲ್ಲಿ ಪಕ್ಷಗಳ ನಾಯಕರು ಹೀಗೆ ಪರಸ್ಪರ ವಾಗ್ದಾಳಿ ನಡೆಸುವುದು ತೀರಾ ಸಾಮಾನ್ಯವಾದ ವಿಚಾರ. ಆದರೆ, ಸಿದ್ದರಾಮಯ್ಯನವರ ಟೀಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಈಶ್ವರಪ್ಪ, “ಸಿದ್ದರಾಮಯ್ಯ ಓರ್ವ ಕುಡುಕ, ಮೋಸಗಾರ. ಯಾವ ಸಂದರ್ಭದಲ್ಲಿ ಕುಡೀತಾರೆ, ಕುಡಿದಾಗ ಏನು ಮಾತಾಡ್ತಾರೆ ಅಂತ ಅವರಿಗೆ ಗೊತ್ತಿರಲ್ಲ” ಎಂದು ವಯಕ್ತಿಕವಾಗಿ ನಿಂದಿಸಿದ್ದರು. ಈ ಹೇಳಿಕೆ ಸಹ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.


ಇದನ್ನೂ ಓದಿ: ಸಿ.ಎಂ ಜಿಲ್ಲೆ ಶಿವಮೊಗ್ಗದಲ್ಲಿ ಕೋಮು ರಾಜಕಾರಣ ಭುಗಿಲೆದ್ದಿತಾ? – ಎನ್‌. ರವಿಕುಮಾರ್ ಟೆಲೆಕ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...