Homeಅಂತರಾಷ್ಟ್ರೀಯExplainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

Explainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

ಯುಎಸ್‌ಎಯು ಹಳೆಯ ಕಾಲದ ನೇರ ಚುನಾವಣಾ ಪದ್ಧತಿಯನ್ನು ಪರೋಕ್ಷ ಮಾಡಿದುದು ಹೇಗೆ? ಯುಎಸ್‌ಎಯ ಪ್ರಜಾಪ್ರಭುತ್ವದ ಮಾದರಿ ಹೇಗೆ ಕೆಲಸ ಮಾಡುತ್ತದೆ? ಈ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಅದರ ಮೂಲವನ್ನು ನೆನಪಿಸಿಕೊಳ್ಳುವುದು ಅತ್ಯಂತ ಅಗತ್ಯ.

- Advertisement -
- Advertisement -

ಉತ್ತರ ಅಮೇರಿಕಾ ಖಂಡದ 13 ಮೂಲ ಬ್ರಿಟಿಷ್ ವಸಾಸತುಗಳು 1776ರಲ್ಲಿ ಬಂಡೆದ್ದು ಪ್ರತ್ಯೇಕವಾದಾಗ ಅಮೇರಿಕಾ ಸಂಯುಕ್ತ ಸಂಸ್ಥಾನದ ಆರಂಭವಾಯಿತು. ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಎಂಬ ಹೆಸರೇ ಇವು ಪ್ರತ್ಯೇಕ ರಾಜ್ಯಗಳು ಜೊತೆ ಸೇರಿ ಒಂದು ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತವೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಈ ರಾಜ್ಯಗಳು ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಂಡಿರುತ್ತವೆ ಮತ್ತು ಹೊಸ ದೇಶದ ಪ್ರಜೆಗಳು ಅವಳಿ ಪೌರತ್ವ ಹೊದಿರುತ್ತಾರೆ. ಅವೆಂದರೆ ರಾಜ್ಯದ ಪೌರತ್ವ ಮತ್ತು ದೇಶದ ಪೌರತ್ವ.

ಆ ಹೊಸ ದೇಶದ ಮೂಲಾಧಾರ ಎಂದರೆ ಹಲವಾರು ಸೈದ್ಧಾಂತಿಕ ಮತ್ತು ಆರ್ಥಿಕ ವಿಷಯಗಳ ಒಂದು ಕಲಸುಮೇಲೋಗರ ಸಮಾಗಮವಾಗಿತ್ತು. ಕ್ವೇಕರ್ಸ್‌ನಂತಹ (ಬ್ಯಾಪ್ಟಿಸ್ಟ್‌ಗಳಂತೆ ಒಂದು ಧಾರ್ಮಿಕ ಗುಂಪು) ಸಮುದಾಯಗಳು ಹೊಸ ನೆಲದಲ್ಲಿ ತಮ್ಮ ಹೊಸ ಅಸ್ತಿತ್ವವನ್ನು ಕಂಡುಕೊಳ್ಳಲು ಬಯಸಿದ್ದವು. ಕೆಲವು ಸಂದರ್ಭಗಳಲ್ಲಿ ಅವು ಗುಲಾಮಿ ಪದ್ಧತಿಯನ್ನು ಅನುಸರಿಸುತ್ತಿದ್ದವು. ಈ ವಸಾಹತುಗಳು ಆರ್ಥಿಕವಾಗಿ ಬ್ರಿಟನ್‌ನಿಂದ ಸ್ವತಂತ್ರಗೊಂಡು ಅವುಗಳಿಗೆ ಅದರ ರಾಜಕೀಯ ಅಥವಾ ಮಿಲಿಟರಿ ಅಸ್ತಿತ್ವ ಬೇಕಾಗಿರಲಿಲ್ಲ.

ಕೆಲವರು ಅಮೇರಿಕಾದ ಮೂಲನಿವಾಸಿಗಳ (ಇಂಡಿಯನ್ಸ್) ಸಮುದಾಯಗಳ ಜೊತೆ ಬ್ರಿಟಿಷ್ ಸಾಮ್ರಾಜ್ಯವು ಮಾಡಿಕೊಂಡಿದ್ದ ಒಪ್ಪಂದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಪಶ್ಚಿಮದ ಭಾಗಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದವು. ಇದರ ಜೊತೆಗೇ ಕೆಲವು ವಸಾಹತುಗಳು ಉದಾತ್ತವಾದ ಉದಾರವಾದಿ ಚಿಂತನೆಗಳನ್ನು ಸಾಂಪ್ರದಾಯಿಕವಾದ ಶ್ರೀಮಂತ ಸಮುದಾಯ ಇಲ್ಲದೇ ಇದ್ದಂತಹ ಒಂದು ಹೊಸ ದೇಶದಲ್ಲಿ ಪರೀಕ್ಷೆಗೆ ಒಡ್ಡಲು ಬಯಸಿದ್ದವು.

ಈ ರೀತಿಯಾಗಿ ಬೇರೆಬೇರೆ ಹಿತಾಸಕ್ತಿಗಳು ಮತ್ತು ಚಿಂತನೆಗಳಿದ್ದ ಬೇರೆಬೇರೆ ವಸಾಹತುಗಳು ಜೊತೆಗೆ ಬಂದಾಗ ಬೇರೆಬೇರೆ ರೀತಿಯ ಆಡಳಿತ ಪದ್ಧತಿಗಳು ಜೊತೆಗೆ ಸೇರುವುದು ಅನಿವಾರ್ಯವಾಯಿತು. ಇವುಗಳ ಏಕತೆ ಅಥವಾ ಒಗ್ಗಟ್ಟು ಬಹಳ ಸೂಕ್ಷ್ಮವಾಗಿತ್ತು. ಆದುದರಿಂದ ಹಲವಾರು ರಾಜಿ ಮತ್ತು ಹೊಂದಾಣಿಕೆಗಳನ್ನು ಮಾಡಲಾಯಿತು. ಸ್ಥಳೀಯವಾಗಿ ವಸಾಹತುಗಳ ರಾಜಕೀಯ ವ್ಯವಸ್ಥೆಗಳು ಉಳಿದುಕೊಳ್ಳುತ್ತವೆ. ಇದು ಸ್ಥಳೀಯ ಇರೋಕಿಗಳಂತಹ ಮೂಲನಿವಾಸಿ ಸಮುದಾಯಗಳು ಸಾಂಪ್ರದಾಯಿಕವಾಗಿ ಅಭಿವೃದ್ಧಿಪಡಿಸಿದ್ದ ಆಡಳಿತ ಪದ್ಧತಿಗಳಿಂದ ಕಲಿತುಕೊಂಡದ್ದು ಮತ್ತು ಆ ಕಾಲದ ಐರೋಪ್ಯ ರಾಜಕೀಯ ವ್ಯವಸ್ಥೆಗಳ ಮಿಶ್ರಣವಾಗಿತ್ತು.

ಈ ವಸಾಹತುಗಳು ಹೊಸ ದೇಶವನ್ನು ಸೇರುವ ಮೊದಲು ಪ್ರತಿಯೊಂದು ವಸಾಹತಿಗೆ ಸ್ವಾಯತ್ತತೆ ಬೇಕೆಂದು ಒತ್ತಾಯಿಸಿದ್ದವು. ಈ ರಾಜ್ಯಗಳು ಕೇಂದ್ರ ಸರಕಾರವೊಂದರ ಅಡಿಯಲ್ಲಿ ಏಕೀಕೃತ (ಸಂಯುಕ್ತ)ವಾಗುವುದೆಂದು ನಿರ್ಧಾರವಾಯಿತು. ರಾಜಧಾನಿ ವಾಷಿಂಗ್ಟನ್ ಡಿ.ಸಿ. ಆ ಕಾಲದಲ್ಲಿ ದೇಶದ ಮಧ್ಯ ಭಾಗದಲ್ಲಿ ಇದ್ದು, ಅದು ಯಾವುದೇ ರಾಜ್ಯದ ಭಾಗವಾಗಿರಲಿಲ್ಲ. ಕಾರಣವೆಂದರೆ ಅದು ಎಲ್ಲಾ ರಾಜ್ಯಗಳ ಕುರಿತು ಆಲಿಪ್ತ ಅಥವಾ ನಿರ್ಲಿಪ್ತವಾಗಿರಬೇಕು ಎಂಬ ಚಿಂತನೆಯಾಗಿತ್ತು. ಕೇಂದ್ರ ಸರಕಾರವು ಮೂರು ಸ್ವತಂತ್ರವಾದ ವಿಭಾಗಗಳನ್ನು ಹೊಂದಿತ್ತು. ಅವೆಂದರೆ, ಬ್ರಿಟಿಷ್ ಪದ್ಧತಿಯಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಈ ವಸಾಹತುಗಳಿಗೆ ಯಾವುದೇ ರಾಜ ಇಲ್ಲದಿದ್ದುದರಿಂದ ಕಾರ್ಯಾಂಗವು ಶಾಸಕಾಂಗದ ನಿರ್ಧಾರದಂತೆ ಕಾರ್ಯ ನಿರ್ವಹಿಸಬೇಕಾಗಿತ್ತು.

ಯುಎಸ್‌ಎಯ ಶಾಸಕಾಂಗ

ಯುಎಸ್‌ಎಯ ಶಾಸಕಾಂಗವು ಎರಡು ಭಾಗಗಳಿಂದ ಕೂಡಿದೆ. ಅದೆಂದರೆ, ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಅಥವಾ ಭಾರತೀಯ ಸಂಸತ್ತಿನ ರಾಜ್ಯಸಭೆಯ ರೀತಿಯಲ್ಲಿ ಇರುವ ಸೆನೆಟ್. ಪ್ರತೀ ರಾಜ್ಯಕ್ಕೆ ಎರಡರಂತೆ ಸೆನೆಟರ್‌ಗಳಿದ್ದಾರೆ. ಬ್ರಿಟನ್‌ನಲ್ಲಿ ಇದ್ದಂತೆ ಶ್ರೀಮಂತ ಪಾಳೆಯಗಾರಿ ವರ್ಗ ಇಲ್ಲದಿದ್ದುದರಿಂದ ಸೆನೆಟರ್‌ಗಳ ಆಯ್ಕೆ ಜನರಿಂದಲೇ ನಡೆಯಬೇಕೆಂದಾಯಿತು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎಂದರೆ ಜನಪ್ರತಿನಿಧಿ ಸಭೆ ಎಂಬುದು ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್ ಅಥವಾ ಭಾರತದ ಲೋಕಸಭೆಯಂತೆ ಇದೆ. ಅದು ಹೆಸರೇ ಹೇಳುವಂತೆ ಜನರ ಪ್ರತಿನಿಧಿ ಸಭೆಯಾಗಿದೆ. ಇಡೀ ದೇಶವನ್ನು ಜಿಲ್ಲೆಗಳಾಗಿ ವಿಭಜಿಸಲಾಯಿತು. ಪ್ರತಿಯೊಂದು ಜಿಲ್ಲೆಯು ಒಬ್ಬೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಎಂದು ನಿರ್ಧರಿಸಲಾಯಿತು.

ಮತದಾರ ಘಟಕ (ಇಲೆಕ್ಟೋರಲ್ ಕಾಲೇಜ್)

ಶಾಸಕಾಂಗಕ್ಕೆ ಆಯ್ಕೆ ಮಾಡುವುದರ ಜೊತೆಗೆ ಜನರು ಕಾರ್ಯಾಂಗದ ಮುಖ್ಯಸ್ಥರಾದ ಅಧ್ಯಕ್ಷರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇದನ್ನು ಮುಖ್ಯವಾಗಿ ಗುಲಾಮಿ ಪದ್ಧತಿಗೆ ಅವಕಾಶ ನೀಡಿದ್ದ ಹಲವಾರು ರಾಜ್ಯಗಳು ವಿರೋಧಿಸಿದ್ದವು. ಏಕೆಂದರೆ, ತಮ್ಮ ರಾಜ್ಯದ ಜನಸಂಖ್ಯೆ ಕಡಿಮೆಯಾದಲ್ಲಿ ತಮ್ಮ ರಾಜ್ಯದ ಪ್ರಭಾವ ಕುಂದುತ್ತದೆ ಎಂಬ ಕಾರಣಕ್ಕಾಗಿ. ಆ ಕಾಲದಲ್ಲಿ ಜಮೀನು ಹೊಂದಿದ್ದ ಪುರುಷರಿಗೆ ಮಾತ್ರ ಮತದಾನದ ಅವಕಾಶವಿತ್ತು. ಹೆಚ್ಚು ಕೃಷಿ ಪ್ರಧಾನವಾದ ರಾಜ್ಯಗಳಲ್ಲಿ ಮತದಾನ ಮಾಡಹುದಾದ ಜನರ ಸಾಂದ್ರತೆ ಸಹಜವಾಗಿಯೇ ಕಡಿಮೆಯಾಗಿತ್ತು. ಇದು ಗುಲಾಮರಿಂದ ಕೆಲಸ ಮಾಡಿಸುತ್ತಿದ್ದ ಭಾರಿ ಪ್ರಮಾಣದ ಜಮೀನು ಹೊಂದಿದ್ದ ಭೂಮಾಲಕರ ಆತಂಕವಾಗಿತ್ತು. ಆದುದರಿಂದ ಈ ಆತಂಕ ದೂರ ಮಾಡಲು ಯುಎಸ್‌ಎಯು ಮತದಾನ ಘಟಕದ ವ್ಯವಸ್ಥೆ ಮಾಡಿತು.

ಕೆಲವು ವಸಾಹತುಗಳಿಗೆ ಇದ್ದ ಪ್ರಮುಖ ಆತಂಕ ಎಂದರೆ ಗುಲಾಮಿ ಪದ್ಧತಿಗೆ ಏನಾದೀತು ಎಂಬುದು. ಯುಎಸ್‌ಎಯ ನಕ್ಷೆಯನ್ನು ಗುಲಾಮಿ ಪದ್ಧತಿಗೆ ಅವಕಾಶ ನೀಡುವ ಮತ್ತು ಅದನ್ನು ರದ್ದುಗೊಳಿಸಿದ ರಾಜ್ಯಗಳ ನಡುವೆ ಸಮತೋಲನ ಇರುವಂತೆ ರಚಿಸಲಾಯಿತು. ಈ ಸಮತೋಲನವನ್ನು ಕಾಪಾಡಿಕೊಂಡು ಬರುವಂತೆ ಯುಎಸ್‌ಎಯ ಈ ರಾಜ್ಯಗಳ ಇತಿಹಾಸ ಇದೆ. ಹೆಚ್ಚಿನ ಸಲ ಒಂದು ಹೊಸ ರಾಜ್ಯ ಸೇರ್ಪಡೆಯಾದಾಗ, ಈ ಸಮತೋಲನ ಕಾಪಾಡಿಕೊಳ್ಳಲು ಹಳೆಯ ರಾಜ್ಯಗಳನ್ನು ಒಡೆಯಲಾಗಿದೆ.

ಈ ಮತದಾರ ಘಟಕ ವ್ಯವಸ್ಥೆಯಲ್ಲಿ ಪ್ರತೀ ರಾಜ್ಯಕ್ಕೆ ನಿರ್ದಿಷ್ಟ ಸಂಖ್ಯೆಯ ಮತಗಳು ಇರುತ್ತವೆ. ಮತಗಳು ಸೆನೆಟರ್‌ಗಳ ಸಂಖ್ಯೆಗೆ (ಪ್ರತೀ ರಾಜ್ಯಕ್ಕೆ ಎರಡೆರಡು) ಮತ್ತು ಜನ ಪ್ರತಿನಿಧಿಗಳ ಸಂಖ್ಯೆಗೆ (ಹೆಚ್ಚುಕಡಿಮೆ ಜನಸಂಖ್ಯೆಗೆ ಅನುಗುಣವಾಗಿ) ಅನುಗುಣವಾಗಿ ಇರುತ್ತದೆ. ಪ್ರತಿಯೊಂದು ರಾಜ್ಯದ ಒಳಗೆ ಯಾವ ಅಭ್ಯರ್ಥಿ ರಾಜ್ಯವನ್ನು ಪ್ರತಿನಿಧಿಸುತ್ತಾನೆ/ಳೆ ಎಂಬುದನ್ನು ನಾಗರಿಕರು ಬಹುಮತದ ಆಧಾರದಲ್ಲಿ ನಿರ್ಧರಿಸುತ್ತಾರೆ. ರಾಜ್ಯದ ಬೆಂಬಲವನ್ನು ರಾಜ್ಯಗಳು ಹೊಂದಿರುವ ಸ್ಥಾನಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಮತದಾರ ಘಟಕದಲ್ಲಿ ಬಹುಮತ ಹೊಂದಿರುವ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲುತ್ತಾನೆ/ಳೆ‌.

ಈ ವ್ಯವಸ್ಥೆಯ ಸಮಸ್ಯೆಗಳು

ಈ ವ್ಯವಸ್ಥೆಯ ಟೀಕಾಕಾರರು ಇತಿಹಾಸವನ್ನು ಎತ್ತಿತೋರಿಸುತ್ತಾರೆ. ಅದು ಒಂದು ರಾಜಿಯಾಗಿದ್ದು, ಮೂಲ ಉದ್ದೇಶವನ್ನೇ ನುಂಗಿಹಾಕಿದೆ.

ಮೊದಲನೆಯದಾಗಿ ಅದು ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳಿಗೆ ಅನ್ಯಾಯವಾಗಿ ಹೆಚ್ಚು ಪ್ರಾತಿನಿಧ್ಯ ನೀಡುತ್ತದೆ ಮತ್ತು ಕೃಷಿ ಪ್ರಧಾನವಾದ ಪ್ರಬಲ ರಾಜ್ಯಗಳ ಶಕ್ತಿಯನ್ನು ಕುಂದಿಸುತ್ತದೆ. ಯುಎಸ್‌ಎಯಲ್ಲಿ ಕೃಷಿಕರು ಕೇವಲ 1.3ರಷ್ಟಿದ್ದರೂ ಭಾರೀ ಪ್ರಮಾಣದ ಸರಕಾರಿ ಸಬ್ಸಿಡಿಯ ಪರಿಣಾಮವಾಗಿ ತುಂಬಾ ಶ್ರೀಮಂತರಾಗಿದ್ದಾರೆ.

ಎರಡನೆಯದಾಗಿ ವ್ಯವಸ್ಥೆಯು ಅನಗತ್ಯವಾಗಿ ಪರೋಕ್ಷವಾಗಿದೆ. ಕೆಲವು ಸಲ ಬಹುಸಂಖ್ಯಾತರು ಒಬ್ಬ ಅಭ್ಯರ್ಥಿಯ ಪರವಾಗಿ ಮತ ಹಾಕಿದರೂ ಅದು ಮತದಾರರ ಘಟಕದಲ್ಲಿ ಸರಿಯಾಗಿ ಪ್ರತಿನಿಧಿಸಲ್ಪಡುವುದಿಲ್ಲ. ಹಿಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಮತ್ತು ಅಲ್ ಗೋರ್ ವಿರುದ್ಧ ಜಾರ್ಜ್ ಡಬ್ಲ್ಯೂ ಬುಷ್ ಚುನಾವಣೆಯಲ್ಲಿ ಮತದಾರ ಘಟಕಗಳು ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಬಹುಸಂಖ್ಯಾತ ಜನರು ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು. ಬಹುಸಂಖ್ಯಾತ ಜನರು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಸೋಲಾಯಿತು.

ಮೂರನೆಯದಾಗಿ, ರಾಜ್ಯಗಳ ಹಕ್ಕುಗಳು ಹಿಂದೆ ಗುಲಾಮಿ ಪದ್ಧತಿಯನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿದ್ದರೆ, ಇಂದು ಬಿಳಿಯರ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿವೆ. ಪರಿಣಾಮವಾಗಿ ಆಫ್ರಿಕನ್ ಅಮೇರಿಕನ್ ಜನರು ಪ್ರಬಲವಾಗಿರುವ ಕಡೆಗಳಲ್ಲೂ ಅವರ ಮತಗಳು ಬಿಳಿಯರ ಪ್ರಾಬಲ್ಯವಿರುವ ಮತದಾರ ಘಟಕಗಳಿಂದ ಕಡೆಗಣಿಸಲ್ಪಟ್ಟಿರುವುದು ಕಂಡುಬಂದಿದೆ. ಇದು ಪ್ರಜಾಪ್ರಭುತ್ವವಾದಿ ಹಕ್ಕುಗಳನ್ನೇ ಕಡೆಗಣಿಸುತ್ತದೆ.

“ಸ್ವಿಂಗ್” ರಾಜ್ಯಗಳೆಂದರೇನು?

ಹೆಚ್ಚಿನ ರಾಜ್ಯಗಳಲ್ಲಿ ರಾಜಕೀಯ ಪರಿಸ್ಥಿತಿ ಹೇಗಿದೆಯೆಂದರೆ, ಯಾವ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದನ್ನು ಮೊದಲೇ ಊಹಿಸಬಹುದು. ಕೆಲವು ರಾಜ್ಯಗಳು ಯಾವತ್ತೂ ಡೆಮಾಕ್ರಾಟ್ ಅಭ್ಯರ್ಥಿಗಳನ್ನು ಬೆಂಬಲಿಸಿದರೆ, ಕೆಲವು ರಾಜ್ಯಗಳು ಯಾವತ್ತೂ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತವೆ. ಅವುಗಳಲ್ಲಿ ಚುನಾವಣಾ ಪ್ರಚಾರ ಮಾಡುವುದೇ ಅಪ್ರಸ್ತುತವಾಗುತ್ತದೆ. ಫಲಿತಾಂಶ ಅನಿರ್ಧಾರಿತವಾಗಿರುವ ಕೆಲವೇ ಕೆಲವು ರಾಜ್ಯಗಳು ಮಾತ್ರ ಹೋರಾಟದ ಕಣಗಳಾಗಿ ಪರಿಣಮಿಸುತ್ತವೆ. ಇವುಗಳನ್ನೇ ಫಲಿತಾಂಶ ಏರುಪೇರು ಮಾಡಬಲ್ಲ “ಸ್ವಿಂಗ್” ರಾಜ್ಯಗಳೆಂದು ಪರಿಗಣಿಸಲಾಗುತ್ತದೆ.

ಇಂದು ಬಹುತೇಕ ಅಮೇರಿಕನ್ ಜನರು ಮತದಾರರ ಘಟಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ಏಕೆಂದರೆ ಅದು ಬಹುತೇಕ ಜನರ ಮತಶಕ್ತಿಯನ್ನು ಕುಂದಿಸುತ್ತದೆ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಹೆಚ್ಚು ಮತಗಳನ್ನು ಗಳಿಸಿಯೂ, ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕವಂತೂ ಈ ಓಬಿರಾಯನ ಕಾಲದ ವ್ಯವಸ್ಥೆಯ ಬಗ್ಗೆ ವಿರೋಧ ಗಣನೀಯವಾಗಿ ಹೆಚ್ಚಿದೆ.

  • ಕಿಶೋರ್ ಗೋವಿಂದ, ಬೆಂಗಳೂರು  ಅಮೆರಿಕಾದಲ್ಲಿ ಹುಟ್ಟಿ, ಬೆಳೆದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರು)

ಅನುವಾದ: ನಿಖಿಲ್ ಕೋಲ್ಪೆ


Also Read: The Electoral College: How America made its direct election indirect

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...