Homeಮುಖಪುಟನಾನುಗೌರಿ ಪೇಜ್ ನಿರ್ಭಂಧಿಸಿದ ಫೇಸ್‌ಬುಕ್: ಗೌರಿ ಮೀಡಿಯಾ ತಂಡ ಖಂಡನೆ

ನಾನುಗೌರಿ ಪೇಜ್ ನಿರ್ಭಂಧಿಸಿದ ಫೇಸ್‌ಬುಕ್: ಗೌರಿ ಮೀಡಿಯಾ ತಂಡ ಖಂಡನೆ

ಬ್ಲಾಕ್ ಮಾಡುವ ಏಕಪಕ್ಷೀಯ ನಿರ್ಧಾರವನ್ನು ಬಲವಾಗಿ ವಿರೋಧಿಸದೆ ನಮಗೆ ಮಾರ್ಗವಿಲ್ಲ. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಇಂತಹ ಸಣ್ಣ ಸಂಗತಿಗಳಲ್ಲಿ ನ್ಯಾಯ ಪಡೆಯುವುದರಲ್ಲಿಯೂ ಅಡಗಿದೆ ಎಂಬುದು ನಮ್ಮ ಬಲವಾದ ನಂಬಿಕೆ.

- Advertisement -
- Advertisement -

ಸ್ವಂತಂತ್ರ ಮಾಧ್ಯಮ ಸಂಸ್ಥೆ ಗೌರಿ ಮೀಡಿಯಾ ಟ್ರಸ್ಟ್ ನಡೆಸುತ್ತಿರುವ ನಾನುಗೌರಿ.ಕಾ ವೆಬ್‌ಸೈನ್‌ನ ಅಧಿಕೃತ ಫೇಸ್‌ಬುಕ್ ಪುಟವನ್ನು ಫೇಸ್‌ಬುಕ್ ಗುರುವಾರ ನಿರ್ಭಂಧಿಸಿದೆ. ಯಾವುದೇ ನಿರ್ದಿಷ್ಠ ಕಾರಣಗಳನ್ನು ನೀಡದ ಫೇಸ್‌ಬುಕ್, ಸಮುದಾಯ ನಿಯಮಗಳನ್ನು ಮುರಿದಿದ್ದಾರೆ ಎಂದಷ್ಟೇ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗೌರಿ ಮೀಡಿಯಾ ತಂಡ ಖಂಡನಾ ಹೇಳಿಕೆ ಬಿಡುಗಡೆ ಮಾಡಿದೆ. ಅದರ ಪೂರ್ಣಪಾಠ ಇಲ್ಲಿದೆ.

ಗೆಳೆಯರೇ,
ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಸುದ್ದಿ ಅಂತರ್ಜಾಲ ಪತ್ರಿಕೆಯನ್ನು ಬಹಳ ಪರಿಣಾಮಕಾರಿಯಾಗಿ ನಾನುಗೌರಿ.ಕಾಂ ನಡೆಸಿಕೊಂಡು ಬರುತ್ತಿರುವುದನ್ನು ನೀವು ಗಮನಿಸಿದ್ದೀರಿ. ಪ್ರಭುತ್ವ ಆಗಲೀ, ದೈತ್ಯ ಟೆಕ್ ಸಂಸ್ಥೆ ಆಗಲೀ, ಅವುಗಳಿಂದ ಇವೇ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಿರೀಕ್ಷಿಸುವುದು ನ್ಯಾಯವಲ್ಲವೇ?

ನೆನ್ನೆ ಇಂದ ಫೇಸ್‌ಬುಕ್ ನಾನುಗೌರಿ.ಕಾಮ್ ನ ಯಾವುದೇ ಸುದ್ದಿ ಲಿಂಕ್ ಗಳನ್ನು ಶೇರ್ ಮಾಡಲು ಬಿಡುತ್ತಿಲ್ಲ. ಎಫ್ ಬಿಯ ಸಮುದಾಯ ನಿಯಮಗಳನ್ನು ಮುರಿದಿದ್ದೇವೆ ಎಂಬ ಒಂದು ಸಾಮಾನ್ಯ ಸಂದೇಶವನ್ನು ಪ್ರತಿ ಬಾರಿಯೂ ನಮ್ಮೆಡೆಗೆ ಅದು ಎಸೆಯುತ್ತಿದೆಯೇ ಹೊರತು, ಹಲವು ಬಾರಿ ಅದನ್ನು ನಿರಾಕರಿಸಿ ಮನವರಿಕೆ ಮಾಡಲು ಪ್ರಯತ್ನಿಸಿದ ನಂತರವೂ, ಅವರ ಸಪೋರ್ಟ್ ತಂಡಕ್ಕೆ ಪತ್ರ ಬರೆದು ಬಿನ್ನವಿಸಿಕೊಂಡ ನಂತರವೂ ಅದು ನಮಗೆ ನಿರ್ದಿಷ್ಟ ಕಾರಣಗಳನ್ನು ನೀಡದೆ ವೃತ್ತಿಪರತೆಯನ್ನು ಮರೆತುಬಿಟ್ಟಿದೆ.

ಕಳೆದ ವಾರ ಪ್ರಸಕ್ತ ರಾಜ್ಯ ಸರ್ಕಾರವನ್ನು ಮೌಲ್ಯಮಾಪನ ಮಾಡಿ ಬರೆದ ಎರಡು ಮೂರು ಪರಿಣಾಮಕಾರಿ ಲೇಖನಗಳ, ಬಿಜೆಪಿ ಶಾಸಕರೊಬ್ಬರ ಹಗರಣದ ಕುರಿತು ವಿಡಿಯೋ ಸಾಕ್ಷ್ಯದೊಂದಿಗೆ ಮಾಡಿದ ವರದಿಯ ಬೆನ್ನಲ್ಲಿಯೇ ಇದು ನಡೆದಿರುವುದು ಆತಂಕಕಾರಿಯಾಗಿದೆ ಮತ್ತು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆಲವು ಹಿತಾಸಕ್ತಿಗಳ ಕೈವಾಡವು ಈ ಬ್ಲಾಕಿಂಗ್ ಹಿಂದೆ ಇರುವುದನ್ನು ಅಲ್ಲಗಳೆಯುವಂತಿಲ್ಲ. ಅವರೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ನಮ್ಮ ಲಿಂಕ್ ಗಳ ಬಗ್ಗೆ ಸುಳ್ಳು ಸುಳ್ಳೇ ಅರೋಪ ಮಾಡಿ ಫೇಸ್ಬುಕ್ ಗೆ ರಿಪೋರ್ಟ್ ಮಾಡಿರುವ ಸಾಧ್ಯತೆಯೂ ದೊಡ್ಡದಾಗಿದೆ. ಆದರೆ ಇಂತಹ ಹುರುಳಿಲ್ಲದ ಆರೋಪಗಳ ಬಗ್ಗೆ ಸಣ್ಣ ಕ್ರಾಸ್ ಚೆಕ್ ಮಾಡುವ ಸೌಲಭ್ಯ ಫೇಸ್ಬುಕ್ ಹೊಂದಿರಬಾರದೇ? ಅಂತ ಅಪೇಕ್ಷೆ ನಮಗೆ ಇರಬಾರದೇ? ಅಷ್ಟು ಕೂಡ ವೆರಿಫೈ ಮಾಡದೆ ಸುಳ್ಳು ಆರೋಪಗಳಿಗೆ ಬಲಿಯಾಗಿ ನಮ್ಮ ಜಾಲತಾಣದ ಲಿಂಕ್ ಗಳನ್ನು ಶೇರ್ ಮಾಡದಂತೆ ನಿಷೇಧಿಸಿರುವ ಫೇಸ್ಬುಕ್ ನಡೆಯನ್ನು ಗೌರಿ ಮೀಡಿಯಾ ತೀವ್ರವಾಗಿ ಖಂಡಿಸುತ್ತದೆ.

ಈ ಸಮಯದಲ್ಲಿ ಬೇರೆ ಉಪಾಯ ಕಾಣದೆ ನಿಮ್ಮ ಬೆಂಬಲಕ್ಕೆ ಮೊರೆ ಇಡುತ್ತಿದ್ದೇವೆ. ದಯವಿಟ್ಟು ಈ ಪೋಸ್ಟ್ ಅನ್ನು ವ್ಯಾಪಕವಾಗಿ ಶೇರ್ ಮಾಡಿ, ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಫೇಸ್ಬುಕ್ ಮೇಲೆ ಒತ್ತಡ ಹೇರಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಎಲ್ಲರ ಧ್ವನಿಯೂ ನಮಗೆ ಮುಖ್ಯ – ಅದು ಹಳ್ಳವಾಗಿ ನಂತರ ಸಮುದ್ರವಾಗಿ ಒಂದು ದಿನ ಭೋರ್ಗರೆಯುತ್ತದೆ ಎಂಬ ನಂಬಿಕೆ ಇದ್ದೇ ಇದೆ. ಕನಿಷ್ಟ ಫೇಸ್ಬುಕ್ ನಾವು ಉಲ್ಲಂಘಿಸಿರುವ ನಿಯಮಗಳೆಡೆಗೆ ಬೊಟ್ಟು ಮಾಡಲಿ. ನಾವು ತಿದ್ದಿಕೊಳ್ಳುವುದಕ್ಕೂ ಸಿದ್ಧ. ಆದರೆ ಬ್ಲಾಕ್ ಮಾಡುವ ಏಕಪಕ್ಷೀಯ ನಿರ್ಧಾರವನ್ನು ಬಲವಾಗಿ ವಿರೋಧಿಸದೆ ನಮಗೆ ಮಾರ್ಗವಿಲ್ಲ. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಇಂತಹ ಸಣ್ಣ ಸಂಗತಿಗಳಲ್ಲಿ ನ್ಯಾಯ ಪಡೆಯುವುದರಲ್ಲಿಯೂ ಅಡಗಿದೆ ಎಂಬುದು ನಮ್ಮ ಬಲವಾದ ನಂಬಿಕೆ.

– ಗೌರಿ ಮೀಡಿಯಾ ತಂಡ

***

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...