Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್ | ಉರಿಯುತ್ತಿರುವ ಚಿತೆಯ ಮೇಲೆ ವೃದ್ಧ ಮಲಗಿರುವ ಈ ವಿಡಿಯೊ ಮಹಾಕುಂಭದ್ದಲ್ಲ

ಫ್ಯಾಕ್ಟ್‌ಚೆಕ್ | ಉರಿಯುತ್ತಿರುವ ಚಿತೆಯ ಮೇಲೆ ವೃದ್ಧ ಮಲಗಿರುವ ಈ ವಿಡಿಯೊ ಮಹಾಕುಂಭದ್ದಲ್ಲ

- Advertisement -
- Advertisement -

ಉರಿಯುತ್ತಿರುವ ಚಿತೆಯ ಮೇಲೆ ವೃದ್ಧರೊಬ್ಬರು ಮಲಗಿರುವ ರೀತಿಯಲ್ಲಿ ಕಾಣುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಕಂಡು ಬಂದ ಅಗ್ನಿ ಸ್ನಾನದ ಘಟನೆ ಎಂದು ಪ್ರತಿಪಾದಿಸಿ ವೈರಲ್ ಮಾಡಲಾಗುತ್ತಿದೆ.ಈ ವೀಡಿಯೊದಲ್ಲಿ ವೃದ್ಧ ವ್ಯಕ್ತಿಯ ಬಟ್ಟೆ ಅಥವಾ ಕೂದಲಿಗೆ ಬೆಂಕಿ ತಹುಲುವುದಿಲ್ಲ ಅಥವಾ ಅವರ ದೇಹದ ಯಾವುದೇ ಭಾಗ ಸುಡುವುದಿಲ್ಲ ಎಂದು ಪ್ರತಿಪಾದಿಸಲಾಗಿದೆ. ಫ್ಯಾಕ್ಟ್‌ಚೆಕ್

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚುಕೊಂಡಿದ್ದು, ‘‘ಹರಿದ್ವಾರದ ಮಾಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಜಲ ಸ್ನಾನ ದ ಮೊದಲು ಭಾರತದ ಸಾಧು ಸಂತರು ಅಗ್ನಿ ಸ್ನಾನ ಮಾಡಿದ್ದನ್ನು ಪ್ರತ್ಯಕ್ಷ ಕಂಡ ಬಿ.ಬಿ.ಸಿ.ಚಾನೆಲ್ ವರದಿಗಾರ ಬಹಳ ಚಕಿತನಾಗಿ ಹೋದ. ಸದಾ ಹಿಂದು ಸನಾತನ ಧಮ೯ವನ್ನು ತಮ್ಮ ಚಾನೆಲ್ ನ ಕಾಯ೯ಕ್ರಮಗಳಲ್ಲಿ ಹೀನಾಯವಾಗಿ ತೋರಿಸುವ ಬಿ.ಬಿ.ಸಿ. ಚಾನೆಲ್ ಇಂದು ತಮ್ಮ ಚಾನೆಲ್ ನಲ್ಲಿ ಭಾರತೀಯ ಸಂತರ ಬಗ್ಗೆ ಗೌರವ ಪೂರ್ವಕವಾಗಿ ಜಗತ್ತಿನ ಜನರಿಗೆ ತೋರಿಸುವುದು ಅನಿವಾರ್ಯವಾಯಿತು’’ ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್, ಉರಿಯುತ್ತಿರುವ ಚಿತೆ, ವೃದ್ಧ ಮಲಗು, ವಿಡಿಯೊ, ಮಹಾಕುಂಭ, Fact check, burning pyre, old man sleeping, video, Mahakumbh,
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಈ ವಿಡಿಯೊ ಬಗ್ಗೆ ಹುಡುಕಾಡಿದಾಗ, ವೈರಲ್ ವಿಡಿಯೊ ಜೊತೆಗೆ ಹರಿದಾಡುತ್ತಿರುವ ಕುಂಭಮೇಳದ ಹೇಳಿಕೆಗೂ, ವೀಡಿಯೊಗೂ ಯಾವುದೆ ಸಂಬಂದ ಇಲ್ಲ ಎಂದು ಕಂಡುಬಂದಿದೆ. ಅಷ್ಟೆ ಅಲ್ಲದೆ, ಈ ಘಟನೆಯನ್ನು ಬಿಬಿಸಿ ವರದಿ ಮಾಡಿಲ್ಲ ಎಂದು ತಿಳಿದುಬಂದಿದೆ. ವಾಸ್ತವದಲ್ಲಿ ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಾಧು ಒಬ್ಬರ ಸಾಕ್ಷ್ಯಚಿತ್ರದ ವೀಡಿಯೊವಾಗಿದೆ.

ವಾಸ್ತವ ತಿಳಿಯಲು ವೈರಲ್ ವೀಡಿಯೊದ ಕೆಲವು ಕೀ-ಫ್ರೇಮ್​ಗಳನ್ನು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಆಗ ಈ ವೀಡಿಯೊವನ್ನು ಹಲವು ಯೂಟ್ಯೂಬ್ ಚಾನಲ್‌ಗಳಲ್ಲಿ ಅಪ್‌ಲೋಡ್ ಆಗಿರುವುದು ಕಂಡು ಬಂದಿವೆ.

2009ರ ನವೆಂಬರ್ 18 ರಂದು ಆಜ್‌ತಕ್‌ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವಿಡಿಯೊದಲ್ಲಿರುವ ವೃದ್ಧ ವ್ಯಕ್ತಿಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದೆ. ಆಜ್‌ತಕ್ ಈ ವೀಡಿಯೊವನ್ನು ನಾಲ್ಕು ಭಾಗಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ತಂಜಾವೂರಿನ ಶ್ರೀ ರಾಮಭಾವು ಸ್ವಾಮಿ ಕೇಸರಿ ವಸ್ತ್ರಗಳನ್ನು ಧರಿಸಿ ಬೆಂಕಿಯಲ್ಲಿ ಗಂಟೆಗಟ್ಟಲೆ ಧ್ಯಾನ ಮಾಡಿದರಾದರೂ ಅವರಿಗೆ ಯಾವುದೇ ಸುಟ್ಟಗಾಯ ಆಗಲಿಲ್ಲ. ಅವರ ಭಕ್ತರು ಇದನ್ನು ಪವಾಡವೆಂದು ಪರಿಗಣಿಸುತ್ತಾರೆ’’ ಎಂದು ವರದಿಯಾಗಿದೆ.

ವೈರಲ್ ವೀಡಿಯೊದಲ್ಲಿರುವ ತುಣುಕನ್ನು ಆಜ್ ತಕ್ ಅಪ್ಲೋಡ್ ಮಾಡಿರುವ ವೀಡಿಯೊದಲ್ಲಿ 2 ನಿಮಿಷ 52 ಸೆಕೆಂಡ್​ನಿಂದ ಕಾಣಬಹುದು.

ಹಾಗೆಯೆ ಈ ವೀಡಿಯೊವನ್ನು 28 ಸೆಪ್ಟೆಂಬರ್ 2012 ರಂದು ದೇವಬುದ್ಧಮ್ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ‘ಅಗ್ನಿ ಯೋಗಿ- ಭಕ್ತಿಯ ಆಧ್ಯಾತ್ಮಿಕ ವಿಜ್ಞಾನ’ ಎಂದು ಶೀರ್ಷಿಕೆ ನೀಡಲಾಗಿದೆ. ವೈರಲ್ ವೀಡಿಯೊವನ್ನು ಹೋಲುವ ದೃಶ್ಯಗಳನ್ನು 17:30 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ತೋರಿಸಲಾಗಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಶ್ರೀ ರಾಮಭಾವು ಸ್ವಾಮಿಗಳು ಅಗ್ನಿಯೊಂದಿಗೆ ತನ್ನನ್ನು ತಾನು ಸಂಯೋಜಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಸಾಕ್ಷ್ಯಚಿತ್ರವು ಅವರ ಕಥೆಯನ್ನು ಹೇಳುತ್ತದೆ ಮತ್ತು ವೈಜ್ಞಾನಿಕ ನಿರೀಕ್ಷೆಗಳನ್ನು ಮೀರಿಸಿದೆ. ಶ್ರೀ ಗುರು ರಾಮಬಾವು ಸ್ವಾಮಿಗಳು ಕಳೆದ 45 ವರ್ಷಗಳಿಂದ ವಿಶ್ವ ಶಾಂತಿ ಮತ್ತು ಎಲ್ಲಾ ವ್ಯಕ್ತಿಗಳ ಜ್ಞಾನೋದಯಕ್ಕೆ ಸಹಾಯ ಮಾಡಲು ಈ ಅಪರೂಪದ ಮತ್ತು ವಿಶಿಷ್ಟವಾದ 14 ಗಂಟೆಗಳ ಅಗ್ನಿಹೋತ್ರವನ್ನು ಪ್ರತಿನಿತ್ಯ ನಡೆಸುತ್ತಿದ್ದಾರೆ. ಕಷ್ಟಪಟ್ಟು ತಿನ್ನುವ ಅಥವಾ ಕುಡಿಯುವ ಶ್ರೀ ಗುರುಗಳು ದಿನಕ್ಕೆ 3 ಗಂಟೆಗಳ ಕಾಲ ನಿದ್ರಿಸುತ್ತಾರೆ’’ ಎಂದು ಹೇಳಲಾಗಿದೆ.

ಈ ಸಾಕ್ಷ್ಯಚಿತ್ರವನ್ನು 2 ನವೆಂಬರ್ 2011 ರಂದು ಕೂಡ ಮತ್ತೊಂದು ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹಾಗೆಯೆ ಈ 47 ನಿಮಿಷಗಳ ಸಾಕ್ಷ್ಯಚಿತ್ರದ DVD ಆವೃತ್ತಿಯು ಅಮೆಜಾನ್‌ನಲ್ಲಿ The Fire Yogi- A Story of an Extraordinary Journey ಎಂಬ ಹೆಸರಿನಲ್ಲಿ ಲಭ್ಯವಿದೆ. ಇದನ್ನು ಮೈಕ್ ವಾಸನ್ 2007 ರಲ್ಲಿ ರಚಿಸಿದರು.

ಫ್ಯಾಕ್ಟ್‌ಚೆಕ್, ಉರಿಯುತ್ತಿರುವ ಚಿತೆ, ವೃದ್ಧ ಮಲಗು, ವಿಡಿಯೊ, ಮಹಾಕುಂಭ, Fact check, burning pyre, old man sleeping, video, Mahakumbh,

ಅಷ್ಟೆ ಅಲ್ಲದೆ, ಕುಂಭಮೇಳ 2025 ರ ಸಮಯದಲ್ಲಿ ವೃದ್ಧ ವ್ಯಕ್ತಿ ಬೆಂಕಿಯ ಮೇಲೆ ಮಲಗಿರುವ ಬಗ್ಗೆ BBC ವರದಿ ಮಾಡಿದೆಯೆ ಎಂಬ ಬಗ್ಗೆ ಹುಡುಕಿದ್ದು, ಆದರೆ ಅಂತಹ ಯಾವುದೇ ವರದಿ ನಮಗೆ ಕಂಡುಬಂದಿಲ್ಲ.

ಹಾಗಾಗಿ, ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಹರಿದ್ವಾರ ಕುಂಭಮೇಳಕ್ಕೆ ಬಂದಿದ್ದ ವೃದ್ಧ ವ್ಯಕ್ತಿ ಬೆಂಕಿಯ ಮೇಲೆ ಮಲಗಿದ್ದಾರೆ ಎಂದು ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಸುಳ್ಳು ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ, ವೀಡಿಯೋ ಕುಂಭಮೇಳದದ್ದಲ್ಲ ಬದಲಿಗೆ ಇದು ಕೆಲವು ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

(ಈ ಫ್ಯಾಕ್ಟ್‌ಚೆಕ್ ಅನ್ನು ಮೂಲತಃ ನ್ಯೂಸ್ ಮೀಟರ್ ಪ್ರಕಟಿಸಿತ್ತು. ಶಕ್ತಿ ಕಲೆಕ್ಟಿವ್‌ನ ಭಾಗವಾಗಿ ನಾನುಗೌರಿ.ಕಾಂ ಇದನ್ನು ಮರುಪ್ರಕಟಿಸಿದೆ)

ಇದನ್ನೂಓದಿ:  ದೆಹಲಿ ವಿಧಾನಸಭಾ ಚುನಾವಣೆ| ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ದೆಹಲಿ ವಿಧಾನಸಭಾ ಚುನಾವಣೆ| ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...