ಭಾರತವು ಶ್ರೇಷ್ಠ ಹಿಂದೂ ರಾಷ್ಟ್ರವಾಗಿದೆ, ಆದರೆ ಜಾತ್ಯತೀತತೆಯು ಭಾರತವನ್ನು ಮತ್ತು ಅದರ ಶ್ರೇಷ್ಠತೆಯನ್ನು ನಾಶಪಡಿಸುತ್ತಿದೆ. ಹಿಂದುತ್ವದಿಂದ ಮಾತ್ರ ಭಾರತವನ್ನು ಉಳಿಸಲು ಸಾಧ್ಯ” ಎಂದು ದಲೈಲಾಮಾರವರು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪೋಸ್ಟ್‌ನಲ್ಲಿ ಹೇಳಿದಂತೆ ದಲೈಲಾಮಾರವರು ಅಂತಹ ಹೇಳಿಕೆಗಳನ್ನು ನೀಡಿದ್ದಾರೆಯೇ ಎಂದು ಹುಡುಕಿದಾಗ ಎಲ್ಲಿಯೂ ಅಂತಹ ಮಾಹಿತಿ ದೊರಕಿಲ್ಲ. ದಲೈಲಾಮಾ ಅವರು ನಿಜವಾಗಿಯೂ ಇಂತಹ ಹೇಳಿಕೆಗಳನ್ನು ನೀಡಿದ್ದರೆ, ಎಲ್ಲಾ ಪ್ರಮುಖ ಪತ್ರಿಕೆಗಳು ಅದರ ಬಗ್ಗೆ ಪ್ರಕಟಿಸುತ್ತಿದ್ದವು. ದಲೈಲಾಮಾ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಾದ Facebook, Twitter, Instagram – ಅಥವಾ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಹೇಳಿಕೆಗಳು ಕಂಡುಬಂದಿಲ್ಲ.
ದಲೈಲಾಮಾ ಅವರು ಜಾತ್ಯತೀತತೆಯ ಆಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಹೇಳಿದ್ದಾರೆ. “ಭಾರತವು ಜಾತ್ಯತೀತ ಸಂಪ್ರದಾಯವನ್ನು ಅನುಸರಿಸುತ್ತದೆ; ಇದು ಎಲ್ಲಾ ಧರ್ಮಗಳನ್ನು, ನಾಸ್ತಿಕರನ್ನು ಸಹ ಸಮಾನವಾಗಿ ಗೌರವಿಸುತ್ತದೆ, ಇದು ಅನನ್ಯವಾಗಿದೆ. ವಿವಿಧ ಧರ್ಮಗಳು ಸಹೋದರತೆಯಿಂದ ಒಟ್ಟಿಗೆ ಬಾಳುವುದು ಭಾರತದ ಹಿರಿಮೆ ” ಎಂದು ಹೇಳಿದ್ದಾಗಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಒಟ್ಟಿನಲ್ಲಿ “ಭಾರತವು ಶ್ರೇಷ್ಠ ಹಿಂದೂ ರಾಷ್ಟ್ರವಾಗಿದೆ, ಆದರೆ ಸೆಕ್ಯುಲರಿಸಂ ಭಾರತವನ್ನು ಮತ್ತು ಅದರ ಹಿರಿಮೆಯನ್ನು ನಾಶಪಡಿಸುತ್ತಿದೆ. ಹಿಂದುತ್ವದಿಂದ ಮಾತ್ರ ಭಾರತವನ್ನು ಉಳಿಸಬಹುದು” ಎಂದು ದಲೈಲಾಮಾರವರು ಹೇಳಿಲ್ಲ.
ಇದನ್ನೂ ಓದಿ; ಯುಪಿ: 17 ವಿದ್ಯಾರ್ಥಿನಿಯರಿಗೆ ಮಾದಕವಸ್ತು ನೀಡಿ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ


