Homeದಿಟನಾಗರಫ್ಯಾಕ್ಟ್‌‌ಚೆಕ್‌: ‘ಡಿಸೆಂಬರ್‌ 13 ರಂದು ಸೂರ್ಯ ಉದಯಸುವುದಿಲ್ಲ’ ಎಂಬುದು ನಿಜವೇ?

ಫ್ಯಾಕ್ಟ್‌‌ಚೆಕ್‌: ‘ಡಿಸೆಂಬರ್‌ 13 ರಂದು ಸೂರ್ಯ ಉದಯಸುವುದಿಲ್ಲ’ ಎಂಬುದು ನಿಜವೇ?

- Advertisement -
- Advertisement -

ಪ್ರತಿವರ್ಷ ಡಿಸೆಂಬರ್‌ ತಿಂಗಳು ಬಂದರೆ ಸಾಕು, ‘ಜಗತ್ತೇ ನಾಶ’, ‘ಭೂಮಿಯ ಅಂತ್ಯ’ ‘ಪ್ರಳಯ’ ಎಂದೆಲ್ಲಾ ಸುದ್ದಿಗಳು ಓಡಾಡುತ್ತವೆ. ಮಾಧ್ಯಮಗಳು ಕೂಡಾ ಇಂತಹದ್ದೇ ವಿಷಯಗಳನ್ನು ಇಟ್ಟುಕೊಂಡು ದಿನಗಟ್ಟಲೆ ಚರ್ಚಿಸುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ಸಂದೇಶ ಹಾಗೂ ವಿಡಿಯೊ ಹರಿದಾಡಲು ಪ್ರಾರಂಭವಾಗಿದೆ. ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ನಲ್ಲಿ ಇದು ಹರಿದಾಡುತ್ತಿದೆ.

ವೈರಲ್‌ ಸಂದೇಶ

ಮಲಯಾಳಂ ಭಾಷೆಯ ಈ ವಿಡಿಯೊದಲ್ಲಿ ನಿರೂಪಕನೊಬ್ಬ, “ಡಿಸೆಂಬರ್ 13 ರಂದು ಸೂರ್ಯೋದಯ ಆಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. 13 ರಂದು ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದಿಲ್ಲ ಎಂದು ನಾಸಾ ಕಂಡುಹಿಡಿದಿದೆ. ಈ ಅಪೂರ್ವ ಘಟನೆಗೆ ತಯಾರಾಗಿರಲು ತನ್ನ ತಂಡಕ್ಕೆ ಅದು ಹೇಳಿದೆ ಎಂದು ವರದಿ ಬರುತ್ತಿದೆ….” ಎಂದು ಅವರು ಹೇಳುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವಿಡಿಯೊ ಜೊತೆಗೆ ಕನ್ನಡ ಶೀರ್ಷಿಕೆಯು ಹರಿದಾಡುತ್ತಿದ್ದು, “ಡಿಸೆಂಬರ್ 13 ರಂದು ಸೂರ್ಯ ಉದಯಿಸಲ್ಲ ಎಂದು ನಾಸಾ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದೆ” ಎಂದು ಅದು ಪ್ರತಿಪಾದಿಸುತ್ತದೆ. ಇದನ್ನು ಫೇಸ್‌ಬುಕ್‌ನಲ್ಲಿ ಕೂಡಾ ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಅದನ್ನು ನೀವು ಇಲ್ಲಿ ನೋಡಬಹುದು.

ಮೊದಲೇ ಹೇಳಿದಂತೆ ಈ ರೀತಿಯ ಸುದ್ದಿಗಳು ಪ್ರತಿವರ್ಷ ಡಿಸೆಂಬರ್‌ ತಿಂಗಳಲ್ಲಿ ಓಡಾಡುತ್ತವೆ. ಮಾಧ್ಯಮಗಳಂತೂ ಇಂತಹ ವಿಷಯಗಳನ್ನು ಇಟ್ಟುಕೊಂಡು ಚರ್ಚೆ ಮತ್ತು ಕಾರ್ಯಕ್ರಮ ನಡೆಸಿ ತಮ್ಮ ಟಿಆರ್‌ಪಿ ರೇಟ್‌ ಹೆಚ್ಚಿಸಿಕೊಂಡು ಲಕ್ಷಾಂತರ ದುಡ್ಡನ್ನು ಎಣಿಸಿಕೊಳ್ಳುತ್ತವೆ. ಜನರು ಗಾಬರಿ ಬೀಳುತ್ತಾರೆ. ಆದರೆ ನಮ್ಮ ಭೂಮಿ ಮಾತ್ರ ಈ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಎಂಐಎಂಗೆ ಶಾರುಖ್‌ ಬೆಂಬಲವೆಂದು ಫೋಟೋ ತಿರುಚಿ ಅಪಪ್ರಚಾರ

ಪ್ರಸ್ತುತ ವಾಟ್ಸಪ್‌‌ನಲ್ಲಿ ಹರಿದಾಡುತ್ತಿರುವ ಈ ಸಂದೇಶದ ಮೂಲ ಕೆಲವು ವರ್ಷಗಳ ಹಿಂದಿನ ಮಲಯಾಳಂ ಯೂಟ್ಯೂಬ್‌ ಚಾನೆಲ್‌ನಿಂದ ಬಂದಿದೆ. ಇದರ ಮೂಲ ಚಾನೆಲ್‌ ಮಲಬಾರ್‌ ಆನ್‌ಲೈನ್‌ ಆಗಿದ್ದು ನಾನುಗೌರಿ.ಕಾಂ ಗೆ ಈ ಚಾನೆಲ್‌ ಲಭ್ಯವಾಗಿಲ್ಲ.

ಆದರೆ 2018 ರ ಡಿಸೆಂಬರ್‌ ಮೂರರಂದು Shadshan Chrlary ಎಂಬವರು ಈ ವಿಡಿಯೊವನ್ನು ತಮ್ಮ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದರೆ ಇದನ್ನು ಈ ಚಾನೆಲ್‌ನಿಂದ ಹೆಚ್ಚು ಜನರು ವೀಕ್ಷಣೆ ಮಾಡಿರಲಿಲ್ಲ. ಜೊತೆಗೆ ಅದೇ ವರ್ಷ ನವೆಂಬರ್‌ ತಿಂಗಳಲ್ಲಿ ಇದೇ ರೀತಿಯ ಸುದ್ದಿಗಳನ್ನು ಮಲಯಾಳಂನ ಇನ್ನೂ ಕೆಲವು ಯೂಟ್ಯೂಬ್‌ ಚಾನೆಲ್‌ಗಳು ವರದಿ ಮಾಡಿದ್ದವು. ಅದನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನಾಸಾ ಡಿಸೆಂಬರ್‌ ತಿಂಗಳಲ್ಲಿ ಹೀಗೆ ನಡೆಯುತ್ತದೆ ಎಂದು ಹೇಳಿದೆಯ?

ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯಾದ ‘ನಾಸಾ’ ಡಿಸೆಂಬರ್‌ ತಿಂಗಳ ಯಾವುದಾದರು ದಿನದಂದು ಸೂರ್ಯ ಉದಯಿಸುವುದಿಲ್ಲ ಎಂದು ಹೇಳಿಲ್ಲ. ನಾಸಾ ಈ ರೀತಿಯ ಹೇಳಿಕೆ ನೀಡಿದ್ದರೆ ಜಗತ್ತಿನ ವಿಶ್ವಾಸಾರ್ಹ ಪತ್ರಿಕೆಗಳು ವರದಿ ಮಾಡಿರುತ್ತಿದ್ದವು. ಆದರೆ ಈ ರೀತಿಯಾಗಿ ಯಾವುದೆ ಸುದ್ದಿಗಳು ನಮಗೆ ಸಿಕ್ಕಿಲ್ಲ.

ಫ್ಯಾಕ್ಟ್‌ಚೆಕ್‌

ವಾಸ್ತವದಲ್ಲಿ ಈ ವರದಿಯು ವಿಜ್ಞಾನದ ಬಗ್ಗೆ ಸಾಮಾನ್ಯ ಜ್ಞಾನ ಕೂಡಾ ತಿಳಿಯದ ವ್ಯಕ್ತಿಗಳು ಮಾಡಿದ್ದಾರೆ. ಅವರು ವಿಡಿಯೊದಲ್ಲಿ, “ಭೂಮಿ ಸೂರ್ಯನ ಸುತ್ತ ತಿರುಗಲು 24 ಗಂಟೆಗಳು ಬೇಕಾಗುತ್ತದೆ” ಎಂದು ಹೇಳುತ್ತಾರೆ. ಆದರೆ ನಿಜವಾಗಿಯು ಭೂಮಿ ಸೂರ್ಯನ ಸುತ್ತಲು ತಿರುಗಲು ಒಂದು ವರ್ಷ (365 ದಿನಗಳು) ಬೇಕಾಗುತ್ತದೆ.

ವಿಡಿಯೊದಲ್ಲಿ ಹೇಳುವ ಪ್ರಕಾರ, ಸೂರ್ಯೋದಯ ಆಗದೇ ಇರುವುದು ಎಂದರೆ ಭೂಮಿ ತನ್ನ ಚಲನೆ 24 ಗಂಟೆಗಳ ಕಾಲ ನಿಲ್ಲಿಸುವುದಾಗಿದೆ. ಆದರೆ ಇದು ಅಸಾಧ್ಯವಾದ ವಿಷಯವಾಗಿದೆ. ಪ್ರಸ್ತುತ ಭೂಮಿಯು ಪ್ರತಿ ಸೆಕೆಂಡಿಗೆ 30 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತದೆ. ಈ ವೇಗದಲ್ಲಿ ಚಲಿಸುತ್ತಿರುವ ಭೂಮಿ ಸಡನ್ನಾಗಿ ನಿಂತರೆ ಏನಾಗಬಹುದು? ನೀವೇ ಊಹಿಸಿ. ಆದ್ದರಿಂದ ಭೂಮಿ ಹೀಗೆ ಸಡನ್ನಾಗಿ ತನ್ನ ಚಲನೆಯನ್ನು ನಿಲ್ಲಿಸುವುದಿಲ್ಲ.

ಭೂಮಿಯ ಚಲನೆ ನಿಧಾನವಾಗುತ್ತಿದೆಯೇ?

ಹೌದು, ವಿಜ್ಞಾನಿಗಳು ಭೂಮಿಯ ಚಲನೆ ನಿಧಾನವಾಗುತ್ತದೆ ಎಂದು ಹೇಳುತ್ತಾರೆ. ಭೂಮಿ ಹುಟ್ಟಿದ ಸುಮಾರು 4.5 ಶತಕೋಟಿ ವರ್ಷಗಳ ಹಿಂದಿನಿಂದ, ಇಂದಿನವರೆಗೂ ಭೂಮಿಯ ತಿರುಗುವಿಕೆ ಕ್ರಮೇಣ ನಿಧಾನವಾಗುತ್ತಿದೆ. ಇದು ಇಂದಿಗೂ ಮುಂದುವರೆದಿರುವ ಪ್ರಕ್ರಿಯೆಯಾಗಿದೆ. ಅಂದಾಜಿನಂತೆ ಭೂಮಿ ತನ್ನ ತಿರುಗುವಿಕೆಯಲ್ಲಿ ಒಂದು ಸೆಕೆಂಡ್‌ ನಿಧಾನ ಆಗಬೇಕೆಂದರೆ ಸುಮಾರು 60 ಸಾವಿರ ವರ್ಷಗಳು ಬೇಕಾಗುತ್ತದೆ.

ನೂರಾರು ಮಿಲಿಯನ್ ವರ್ಷಗಳ ಹಿಂದೆ ಹೋದರೆ, ಅಂದು ಭೂಮಿಯ ಒಂದು ದಿನ ಅಂದರೆ ಕೇವಲ 22 ಗಂಟೆಗಳು ಮಾತ್ರವಾಗಿತ್ತು!. ಈಗ ಅದು 24 ಗಂಟೆಗೆ ಬಂದು ತಲುಪಿದೆ.

ಒಟ್ಟಿನಲ್ಲಿ ಭೂಮಿಯು ತನ್ನ ಚಲನೆಯನ್ನು ತೀರಾ ನಿಧಾನವಾಗಿ ಕಡಿಮೆ ಮಾಡುತ್ತಿದೆ. ಮೇಲೆ ಹೇಳಿದರೆ ಒಂದು ಸೆಕೆಂಡ್ ನಿಧಾನವಾಗಲು 60 ಸಾವಿರ ವರ್ಷಗಳು ಬೇಕು. ಹಾಗಿರುವಾಗ ಭೂಮಿ, ಸೂರ್ಯನ ಸುತ್ತ ಸುತ್ತುವುದನ್ನು ನಿಲ್ಲಿಸುವುದು ಸಾಧ್ಯವೇ ಇಲ್ಲ ಮಾತು. ಹಾಗಾಗಿ ಮೇಲಿನ ‘ಸೂರ್ಯ ಉದಯಿಸುವುದಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರತಿಪಾದನೆ ಸಂಪೂರ್ಣ ತಪ್ಪಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌‌: ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ಪದವಿ ರದ್ದು ಮಾಡಲಾಗಿದೆಯೇ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಭೂಮಿಯ ಚಲನೆ ನಿಲ್ಲದ ಹಾಗೆ ಏನಾದರೂ ಒಂದು ಹೊಸ ತರಹದ ಹೋಮ ಇರಬಹುದೋ…ಏನೋ….

  2. ಬೆಳಕಾಗಿ ಇರುತ್ತದೆ ಎಲ್ಲೋ ಒಂದು ಕಡೆ ಸೈಕ್ಲೋನ್ ಮಳೆ ಬಾರ ಬಹುದು ಹಾಗ ಬಿಸಿಲೂ ಭೂಮಿ ಗೆ ತಕುವುದಿಲ್ಲಾದ ಕಾರಣ ಈ ವದಂತ್ತಿ ಹಬ್ಬಿರ ಬಹುದು

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...