”ಕೇರಳದ ವಯನಾಡ್‌ನಲ್ಲಿ ಇತ್ತಿಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಗೆಲುವನ್ನು ಆಚರಿಸುತ್ತಿರುವ ಕೇರಳ ಕಾಂಗ್ರೆಸ್‌ನ ಮಾಧ್ಯಮ ಮುಖ್ಯಸ್ಥ ಮೊಹಮ್ಮದ್ ಮುಜಾಹಿದ್ ಇಸ್ಲಾಂ” ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬ ಹಸುವಿನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಿರುವ ವಿಡಿಯೊವನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ವಿಡಿಯೊವನ್ನು 2023ರ ಮೇ ತಿಂಗಳಲ್ಲಿ ಕೂಡಾ ವೈರಲ್ ಮಾಡಲಾಗಿತ್ತು. ಆಗಿನ ಸಂದೇಶದಲ್ಲಿ ಈ ವಿಡಿಯೊವನ್ನು ರಾಹುಲ್ ಗಾಂಧಿ ಅವರ ಗೆಲುವಿನ ಆಚರಣೆ ಎಂದು ಪ್ರತಿಪಾದಿಸಲಾಗಿತ್ತು. ವಿಡಿಯೊ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದೆ. ಅವುಗಳನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್
ವಾಸ್ತವದಲ್ಲಿ ಪ್ರಿಯಾಂಕ ಗಾಂಧಿ ಅವರ ವಯನಾಡು ಗೆಲುವಿಗೂ, ಈ ವಿಡಿಯೊಗೂ ಯಾವುದೆ ಸಂಬಂಧವಿಲ್ಲ. ವರದಿಗಳ ಪ್ರಕಾರ ಈ ವಿಡಿಯೋ ಹೆಚ್ಚಾಗಿ ಮಣಿಪುರದ್ದಾಗಿದ್ದು, 2024ರ ಮೇ ತಿಂಗಳಿನದ್ದಾಗಿದೆ. ವಯನಾಡ್ ಉಪಚುನಾವಣೆ ನವೆಂಬರ್ 13 ರಂದು ನಡೆದಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಸಲಾಯಿತು. ಇದರರ್ಥ ವೈರಲ್ ವೀಡಿಯೊ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗೆಲುವಿಗಿಂತಲೂ ಆರು ತಿಂಗಳಿಗಿಂತ ಹೆಚ್ಚು ಮುಂಚಿನದ್ದಾಗಿದೆ.
ಈ ವಿಡಿಯೊವನ್ನು 2024ರ ಮೇ 9ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ನಲ್ಲಿ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಹೊಂದಿದೆ. ಚಿತ್ರದ ಶೀರ್ಷಿಕೆಯಲ್ಲಿ, “ಮಣಿಪುರದಲ್ಲಿ ಹಸುವಿನ ಮೇಲೆ ಎರಡು ಬಾರಿ ಗುಂಡು ಹಾರಿಸಿ ಹತ್ಯೆ” ಎಂದು ಬರೆಯಲಾಗಿದೆ.
7 ಮೇ 2024 ರಂದು ಫ್ರೀ ಪ್ರೆಸ್ ಜರ್ನಲ್ ಈ ಘಟನೆಯ ವರದಿ ಮಾಡಿದೆ. ವರದಿಯಲ್ಲಿ, ಘಟನೆಯು ಮಣಿಪುರದಲ್ಲಿ ನಡೆದಿದೆ ಎಂದು ಉಲ್ಲೇಖಿಸಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾದರರು, ಹಸುವಿಗೆ ಗುಂಡು ಹಾರಿಸಿದ ವ್ಯಕ್ತಿ “ಕ್ರಿಶ್ಚಿಯನ್ ಕುಕಿ ಬಂಡುಕೋರ” ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದ ಸಾಕು ಪ್ರಾಣಿಗಳನ್ನು ಕಳ್ಳತನ ಮಾಡಿ ಕ್ರೂರವಾಗಿ ಕೊಲ್ಲಲಾಗುತ್ತಿದ್ದು, ಈ ಮೂಲಕ ಕುಕಿ ಬಂಡುಕೋರರು ತಮ್ಮ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.
ಅಷ್ಟೆ ಅಲ್ಲದೆ, ಮೇ 7 ರಂದು, ಪೇಟಾ ಇಂಡಿಯಾ ಕೂಡಾ ಘಟನೆಗೆ ಪ್ರತಿಕ್ರಿಯಿಸಿದ್ದು, ವೀಡಿಯೊದಲ್ಲಿರುವ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮಣಿಪುರ ಪೊಲೀಸರ ಸೈಬರ್ ಕ್ರೈಮ್ ಸೆಲ್‌ನೊಂದಿಗೆ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿತ್ತು.
PETA India’s Cruelty Response Team is working with Manipur Police’s Cyber Crime Cell to confirm the details with respect to the location of the crime. Once it is ascertained we will work with the concerned district police to get an FIR registered and have necessary action taken.
— PETA India (@PetaIndia) May 7, 2024
ಅಷ್ಟೆ ಅಲ್ಲದೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪ್ತಿ ಮೇರಿ ವರ್ಗೀಸ್ ಅವರು ಕೇರಳ ಕಾಂಗ್ರೆಸ್‌ನ ಮಾಧ್ಯಮ ಮುಖ್ಯಸ್ಥೆ ಎಂದು ಸ್ವತಃ ಖಚಿತಪಡಿಸಿದ್ದಾರೆ. ಜೊತೆಗೆ ಅವರ ತಂಡದಲ್ಲಿ ಮೊಹಮ್ಮದ್ ಮುಜಾಹಿದ್ ಇಸ್ಲಾಂ ಎಂದು ಯಾರೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹೇಳಬೇಕಾದರೆ, ಈ ವಿಡಿಯೊ ಕೇರಳದ್ದಲ್ಲ, ಜೊತೆಗೆ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ಅವರ ಗೆಲುವು ಸಂಭ್ರಮಿಸಲು ಹಸುವಿಗೆ ಗುಂಡು ಹಾರಿಸಿದ್ದೂ ಅಲ್ಲ. ಅಷ್ಟೆ ಅಲ್ಲದೆ, ವ್ಯಕ್ತಿಯು ಮುಸ್ಲಿಂ ಕೂಡಾ ಅಲ್ಲ. ಬಿಜೆಪಿಯ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವಿಚಾರ ಸುಳ್ಳಾಗಿದೆ.
ಇದನ್ನೂ ಓದಿ: ಕನಿಮೋಳಿ, ಪೆರಿಯಾರ್ ಪ್ರತಿಮೆ ಕುರಿತು ವಿವಾದಾತ್ಮಕ ಹೇಳಿಕೆ; ತಮಿಳುನಾಡು ಬಿಜೆಪಿ ನಾಯಕನಿಗೆ 6 ತಿಂಗಳ ಜೈಲು ಶಿಕ್ಷೆ
ಕನಿಮೋಳಿ, ಪೆರಿಯಾರ್ ಪ್ರತಿಮೆ ಕುರಿತು ವಿವಾದಾತ್ಮಕ ಹೇಳಿಕೆ; ತಮಿಳುನಾಡು ಬಿಜೆಪಿ ನಾಯಕನಿಗೆ 6 ತಿಂಗಳ ಜೈಲು ಶಿಕ್ಷೆ


