ಇಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಬೇಕಿತ್ತೇ? ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಎಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ನೀವೂ ಸರ್ಕಾರದ ಜೊತೆ ಸೇರಿ ಒಗ್ಗಟ್ಟಾಗಿ ಹೋರಾಡುವುದು ಬಿಟ್ಟು ಈ ರೀತಿಯಾಗಿ, ಈ ಸಮಯದಲ್ಲಿ ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯೇ? ಎಂದು ಪೋಸ್ಟ್ ಕಾರ್ಡ್ ಪೋಸ್ಟ್ ಮಾಡಿ ಹರಡಿದೆ.

ಫ್ಯಾಕ್ಟ್‌ಚೆಕ್
ಕಳೆದ ಮೂರು ದಿನಗಳಿಂದ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತಲುಪಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಬೆಂಗಳೂರನ್ನು ಕಟ್ಟಿದ ಈ ಕಾರ್ಮಿಕರು ಒಂದೂವರೆ ತಿಂಗಳು ಕಾದರೂ ಸಹ ಕೊನಗೆ ಕಣ್ಣೀರಿಡುತ್ತಾ ತಮ್ಮ ಊರು ತಲುಪಬೇಕಾದ ಪರಿಸ್ಥಿತಿ ಬಂದಿತ್ತು.
ಮೊದಲು ಕರ್ನಾಟಕ ಸರ್ಕಾರ ಮೇ 1 ರಂದು ಒಬ್ಬ ವ್ಯಕ್ತಿಗೆ ನಿಗಧಿತ ಬಸ್ ದರಕ್ಕಿಂತ ಮೂರು ಪಟ್ಟು ಹೆಚ್ಚು ಮಾಡಿತ್ತು. ಕಾರ್ಮಿಕರು ಮತ್ತು ಪ್ರಜ್ಞಾವಂತರಿಂದ ಇದಕ್ಕೆ ಬಲವಾದ ವಿರೋಧ ಬಂತು. ನಂತರ ಸರ್ಕಾರ ಮೇ 2 ರಂದು ಒಂದೇ ದರ (ಸಿಂಗಲ್ ಫೇರ್) ಘೋಷಿಸಿತು. ಈ ಕುರಿತು ವಿರೋಧ ಪಕ್ಷ ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ಟೀಕೆ ಮಾಡಿತು. ಅಷ್ಟೇ ಅಲ್ಲದೇ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣಕ್ಕೆ ತೆರಳಿ ಜನರ ಕಷ್ಟ ಆಲಿಸಿದರು. ಭಿಕ್ಷೆ ಬೇಡಿಯಾದರೂ ಸರಿಯೇ ನಾವು ಹಣ ಕೊಡುತ್ತೇವೆ, ವಲಸೆ ಕಾರ್ಮಿಕರಿಗೆ ಉಚಿತವಾಗಿ ಅವರ ಊರಿಗೆ ಕಳಿಸಿ ಎಂದು ಮನವಿ ಮಾಡಿದರು.
ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ಒಂದು ಕೋಟಿ ರೂ ಚೆಕ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರುಗಳು ಕೆಪಿಸಿಸಿ…
Posted by Indian National Congress – Karnataka on Saturday, May 2, 2020
ನಂತರ ಮೇ 3 ರಂದು ವಲಸೆ ಕಾರ್ಮಿಕರ ಬಸ್ ಚಾರ್ಜ್‌ಗಾಗಿ ಕಾಂಗ್ರೆಸ್ ಪಕ್ಷದಿಂದ 1 ಕೋಟಿ ರೂ ನೆರವು ಘೋಷಿಸಿದರು. ಆ ಚೆಕ್ ಅನ್ನು ಕೆಎಸ್‌ಆರ್‌ಟಿಸಿ ಎಂಡಿಯವರಿಗೆ ಹಸ್ತಾಂತರಿಸಲು ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇನ್ನಿತರ ನಾಯಕರು ಮೆಜೆಸ್ಟಿಕ್‌ಗೆ ನಡೆದರು. ಇದರಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ತೀವ್ರ ಮುಜುಗರ ಉಂಟಾಯಿತು. ಈ ಸರ್ಕಾರ ಕಾರ್ಮಿಕ ವಿರೋಧಿಯೆಂದು, ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವೆಂದು ಬಿಂಬಿತವಾಗುವುದು ಅವರಿಗೆ ಸಹಿಸಲಾಗಲ್ಲಿಲ್ಲ. ಹಾಗಾಗಿ ಕೂಡಲೇ ಮೂರು ದಿನಗಳ ಕಾಲ ಕಾರ್ಮಿಕರಿಗೆ ಉಚಿತ ಪ್ರಯಾಣ ಎಂದು ಘೋಷಿಸಿದರು!
ಉಚಿತ ಪ್ರಯಾಣಕ್ಕೆ ಅವಕಾಶಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರು, ಇಂದಿನಿಂದ ಮಂಗಳವಾರದವರೆಗೆ ಕೆ ಎಸ್ ಆರ್ ಟಿಸಿ ಬಸ್‍ಗಳಲ್ಲಿ ಬೆಂಗಳೂರು…
Posted by Chief Minister of Karnataka on Saturday, May 2, 2020
ತದನಂತರ ಕಾಂಗ್ರೆಸ್ ಮುಖಂಡರು ಅಲ್ಲಿಯೇ ಪಕ್ಕದಲ್ಲಿದ್ದ ಬಸ್‌ನಿಲ್ದಾಣಕ್ಕೆ ತೆರಳಿ ಕಾರ್ಮಿಕರೊಡನೆ ಮಾತನಾಡಿದರು. ಒಂದಷ್ಟು ಜನರಿಗೆ ಊಟದ ವ್ಯವಸ್ಥೆ ಮಾಡಿದರು. ಮಾಧ್ಯಮಗಳ ಜೊತೆ ಮಾತನಾಡಿದರು. ಆದರೆ ಆ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರು ಯಾವುದೇ ಪ್ರತಿಭಟನೆ ಮಾಡಲಿಲ್ಲ. ಈ ಕುರಿತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಕರ್ನಾಟಕ ಮತ್ತು ಸಿದ್ದರಾಮಯ್ಯನವರ ಫೇಸ್‌ಬುಕ್ ಪುಟದಲ್ಲಿ ಪೂರ್ಣ ಲೈವ್ ಇದೆ.
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದು ಆಲಿಸಿದರು
Posted by Indian National Congress – Karnataka on Saturday, May 2, 2020
ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದ್ದೇಕೆ?
ಆದರೆ ತದನಂತರ ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಏಕೆಂದರೆ ಆನೇಕಲ್ ಕ್ಷೇತ್ರದ ಬಿಜೆಪಿ ಮುಖಂಡರದ ಮುನಿರಾಜು ಎಂಬುವವರು ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಕೊಡುವ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ತನ್ನ ಮತ್ತು ಬಿಜೆಪಿಯ ಚಿತ್ರ ಹಾಕಿಸಿ ತಾನೇ ದಾನ ಕೊಡುತ್ತಿರುವುದಾಗಿ ಪೋಸು ಕೊಟ್ಟಿದ್ದಾರೆ. ಈ ಕುರಿತು ರೆಡ್ ಹ್ಯಾಂಡಾಗಿ ಸಿಕ್ಕಬಿದ್ದಿದ್ದಾರೆ. ಇದನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಕಾರ್ಮಿಕರ ವಿಚಾರಕ್ಕೂ ಸಂಬಂಧವಿಲ್ಲ. ಈ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರು ಭಾಗವಹಿಸಿಲ್ಲ. ವಿಡಿಯೋ ನೋಡಿ.
Posted by Indian National Congress – Karnataka on Sunday, May 3, 2020
ಇದನ್ನೂ ಓದಿ: ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ : ಕುಮಾರಸ್ವಾಮಿ


