Homeದಿಟನಾಗರಫ್ಯಾಕ್ಟ್‌ಚೆಕ್: ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ/ರಾಜಕಾರಣಿ ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್‌ಚೆಕ್: ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ/ರಾಜಕಾರಣಿ ಎಂಬುದು ಸುಳ್ಳು ಸುದ್ದಿ

- Advertisement -
- Advertisement -

ಜಗತ್ತಿನಲ್ಲಿನ ಸಿರಿವಂತರ  ಪಟ್ಟಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೆಸರು ನಾಲ್ಕನೇ ಸ್ಥಾನದಲ್ಲಿದೆಯೆಂದು  ಹೇಳಲಾಗುತ್ತಿರುವ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನ ಷೇರ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಶ್ವದ ನಾಲ್ಕನೇ ಶ್ರೀಮಂತ ರಾಜಕಾರಣಿ ಎಂದು ಹರಡುತ್ತಿದ್ದಾರೆ. ಇದು ನಿಜವೇ ಪರಿಶೀಲಿಸೋಣ.

ಆ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್

2020 ವರ್ಷದ ʼಪೋರ್ಬ್ಸ್‌ʼ ಸಂಸ್ಥೆ ಬಿಡುಗಡೆ ಮಾಡಿದ ಪ್ರಪಂಚ ಬಿಲಿಯನೆರ್‌ಗಳ ಪಟ್ಟಿಯಲ್ಲಿ ಸೋನಿಯಾಗಾಂಧಿ  ಹೆಸರು  ಸಹ  ಇದೆಯೆ ಎಂದು ಹುಡುಕಿದಾಗ, ಆ ಪಟ್ಟಿಯಲ್ಲಿ ಅವರು ಇಲ್ಲವೆಂದು ತಿಳಿದುಬಂದಿದೆ. 2095 ಮಂದಿಯ ಹೆಸರುಗಳು ಇರುವ ಈ ಪಟ್ಟಿಯಲ್ಲಿ  ಅವರ ಹೆಸರು ಇಲ್ಲ. ಇಂಡಿಯಾಗೆ ಸಂಬಂಧಿಸಿದಂತೆ  ಮುಖೇಶ್ ಅಂಬಾನಿ 21ನೇ ಸ್ಥಾನದಲ್ಲಿ ಇದ್ದಾರೆ. ಬಿಲಿಯನರ್‌ಗಳಿಗೆ  ಸಂಬಂಧಿಸಿದ  ರಿಯಲ್‌ –ಟೈಮ್‌ ಪಟ್ಟಿಯನ್ನು ಇಲ್ಲಿ ನೋಡಬಹುದು.

ʼಬಿಜೆನೆಸ್‌  ಇನ್ಸೈಡರ್‌ʼ ನವರು ಬಿಡುಗಡೆ ಮಾಡಿದ  ‘Top 10 Richest women in India’ ಪಟ್ಟಿಯಲ್ಲಿಯೂ ಸಹ ಸಹ ಸೋನಿಯಾ ಗಾಂಧಿ ಇಲ್ಲ. 2019 ರ ಚುನಾವಣೆಯ ಅಫಿಡವಿಡಟ್‌ನಲ್ಲಿ ತನ್ನ ಆಸ್ತಿಗಳ ಬೆಲೆ ಸುಮಾರು 12 ಕೋಟಿ ರೂಪಾಯಿಗಳೆಂದು ಸೋನಿಯಾಗಾಂಧಿ ಹೇಳಿದ್ದಾರೆ.

 

ಜಗತ್ತಿನಲ್ಲಿನ ಸಿರಿವಂತರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಬ್ಬರು ಎಂದು ಹೇಳುತ್ತಾ, ʼಬಿಜೆನೆಸ್‌ ಇನ್ಸೈಡರ್‌ʼ ( ಸೋನಿಯಾ -4ನೇ ಸ್ಥಾನ) ಮತ್ತು ʼಹಾಫಿಂಗ್ಟನ್‌ ಪೋಸ್ಟ್‌ʼನವರು  ಈ ಹಿಂದೆ ಲೇಖನ ಪ್ರಕಟಿಸಿದ್ದರು. ಆದರೆ, ʼಬಿಜೆನೆಸ್‌ ಇನ್ಸೈಡರ್‌ʼನವರು ಸೋನಿಯಾಗೆ  ಸಂಬಂಧಿಸಿದಂತೆ ಡೇಟಾವನ್ನು ನಂಬಲಾರ್ಹ ವೆಬ್ಸೈಟ್‌ನಿಂದ ತೆಗೆದುಕೊಂಡಿಲ್ಲವೆಂದು 2018ರಲ್ಲಿ ʼಆಲ್ಟ್‌ ನ್ಯೂಸ್‌ʼನವರು  ಲೇಖನ ಬರೆದಿದ್ದಾರೆ.  ಅವರ ಪಟ್ಟಿಯನ್ನು ಕೆಲವರು ಪ್ರಶ್ನಿಸಿದ ಮೇಲೆ ʼಹಾಫಿಂಗ್ಟನ್‌ ಪೋಸ್ಟ್‌,ನವರು ಸೋನಿಯಾ ಗಾಂಧಿ ಹೆಸರನ್ನು ಪಟ್ಟಿಯಿಂದ ತೆದೆದುಹಾಕಿ, ತಾವು ಸೋನಿಯಾ ಗಾಂಧಿಯವರ ಆಸ್ತಿಗಳ ಬೆಲೆಯನ್ನು ಪರಿಶೀಲಿಸಲು ಆಗುವುದಿಲ್ಲವೆಂದು ವಿವರಣೆ ನೀಡಿದ್ದಾರೆ.

ಒಟ್ಟಿನಲ್ಲಿ, ಜಗತ್ತಿನಲ್ಲಿರುವ ಸಿರಿವಂತರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಾಲ್ಕನೆ ಸ್ಥಾನದಲ್ಲಿ ಇಲ್ಲ.

ಕೃಪೆ: ಫ್ಯಾಕ್ಟ್ಲಿ


ಇದನ್ನೂ ಓದಿ: Fact Check: ಸೋನಿಯಾ ಗಾಂಧಿ 4ನೇ ಶ್ರೀಮಂತ ಮಹಿಳಾ ರಾಜಕಾರಣಿ ಅಲ್ಲ. ಆದರೂ ಸುಳ್ಳು ಹರಡಿದ ಪೋಸ್ಟ್‌ ಕಾರ್ಡ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...