ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 24-25 ರಂದು ಅಮೆರಿಕಗೆ ತೆರಳಿದ್ದರು. ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರೊಂದಿಗೆ ಸಂವಾದ, ಕ್ವಾಡ್ ಸಭೆ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಮುಖ್ಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್, ಮೋದಿಯವರ ಬಹುದೊಡ್ಡ ಫೋಟೊದೊಂದಿಗೆ “ಭೂಮಿಯ ಕೊನೆಯ ಮತ್ತು ಉತ್ತಮ ಭರವಸೆ” ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿದೆ ಎಂದು ಸ್ಕ್ರೀನ್ ಶಾಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ವಿಶ್ವದ ಅತ್ಯಂತ ಪ್ರೀತಿಯ ಮತ್ತು ಶಕ್ತಿಶಾಲಿ ನಾಯಕ ನಮ್ಮನ್ನು ಆಶೀರ್ವದಿಸಲು ಇಲ್ಲಿದ್ದಾರೆ” ಎಂಬ ಉಪಶೀರ್ಷಿಕೆಯೊಂದಿಗೆ ಮೋದಿಯವರು ಸಹಿ ಮಾಡುತ್ತಿರುವ ಫೋಟೊವುಳ್ಳ ನ್ಯೂಯಾರ್ಕ್ ಟೈಮ್ಸ್‌ನ ದಿನಾಂಕ 26 ಸೆಪ್ಟೆಂಬರ್ 2021ರ ಆವೃತ್ತಿ ಎಂದು ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ.
ಈ ಸ್ಕ್ರೀನ್ ಶಾಟ್ ಅನ್ನು ಬಿಜೆಪಿ ಯುವ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿ ರೋಹಿತ್ ಚಹಾಲ್ ಸೇರಿದಂತೆ ನೂರಾರು ಬಿಜೆಪಿ ನಾಯಕರು ಟ್ವಿಟರ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಷೇರ್ ಮಾಡಿದ್ದಾರೆ. ವಾಟ್ಸಾಪ್‌ನಲ್ಲಿ ಅತಿ ಹೆಚ್ಚು ಫಾರ್ವಾಡ್ ಆಗಿದೆ.

ಫ್ಯಾಕ್ಟ್ ಚೆಕ್:
ಸೆಪ್ಟಂಬರ್ 26 ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಮುಖಪುಟದಲ್ಲಿ ನರೇಂದ್ರ ಮೋದಿ ಕುರಿತಾಗಿ ಯಾವುದೇ ಲೇಖನ ಪ್ರಕಟಿಸಿಲ್ಲ ಮತ್ತು ಅವರ ಫೋಟೊವನ್ನು ಸಹ ಪ್ರಕಟಿಸಿಲ್ಲ. ಈ ಮೇಲಿನ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಯಾರೂ ಪತ್ರಿಕೆಯ URL ವಿವರನ್ನು ಒದಗಿಸಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಇದು ಎಡಿಟ್ ಮಾಡಿದ ಫೋಟೊ ಎಂಬುದನ್ನು ತೋರಿಸುತ್ತದೆ.
This is a completely fabricated image, one of many in circulation featuring Prime Minister Modi. All of our factual reporting on Narendra Modi can be found at:https://t.co/ShYn4qW4nT pic.twitter.com/gsY7AlNFna
— NYTimes Communications (@NYTimesPR) September 28, 2021
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತಾವು ಇದನ್ನು ಪ್ರಕಟಿಸಿಲ್ಲ. ಇದು ಎಡಿಟ್ ಮಾಡಿದ ಫೋಟೊ ಎಂದು ಸ್ಪಷ್ಟೀಕರಣ ನೀಡಿದೆ.
ಸ್ಕ್ರೀನ್ ಶಾಟ್‌ನಲ್ಲಿರುವ ಹೆಡ್‌ಲೈನ್ ಫಾಂಟ್ ನ್ಯೂಯಾರ್ಕ್ ಟೈಮ್ಸ್ ನಿರಂತರವಾಗಿ ಬಳಸುವ ಫಾಂಟ್‌ಗಿಂತ ಭಿನ್ನವಾಗಿದೆ. ಅಲ್ಲದೇ ಪತ್ರಿಕೆಯ ದಿನಾಂಕ ಬರೆಯುವ ಸ್ಥಳದಲ್ಲಿ 26 September ಎಂದು ಬರೆಯುವ ಬದಲು 26 “Setpember” ಎಂದು ತಪ್ಪಾಗಿ ಬರೆಯಲಾಗಿದೆ. ಹಾಗಾಗಿ ಇದು ಎಡಿಟೆಡ್ ಫೋಟೊ ಎಂದು ತೀರ್ಮಾನಿಸಬಹುದು.
UNESCO certified best #fakenews pic.twitter.com/Pvy7rAQmwm
— Swati Chaturvedi (@bainjal) September 26, 2021
ನಕಲಿ ಮುಖಪುಟದಲ್ಲಿ ಬಳಸಿದ ಪಿಎಂ ಮೋದಿಯವರ ಚಿತ್ರವನ್ನು ಕಳೆದ ತಿಂಗಳು ಪ್ರಕಟಿಸಿದ Zee News ಪ್ರಕಟಿಸಿದ “ಕಡಲ ಭದ್ರತೆಯನ್ನು ಹೆಚ್ಚಿಸುವ ಕುರಿತು ಯುಎನ್‌ಎಸ್‌ಸಿ ಉನ್ನತ ಮಟ್ಟದ ಮುಕ್ತ ಚರ್ಚೆಗೆ ಪಿಎಂ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ” ಎಂಬ ಲೇಖನಯಿಂದ ತೆಗೆದುಕೊಂಡಿರುವಂತೆ ಕಾಣುತ್ತದೆ.

ಅಲ್ಲದೆ ಈ ಫೋಟೊ ಮಾರ್ಚ್‌ನಿಂದಲೇ ಅಂತರ್ಜಾಲದಲ್ಲಿದೆ. “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 12, 2021 ರಂದು ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು” ಎಂಬ ಪ್ರೆಸ್ ಇನ್ಫರ್ಮೇಶನ್ ಬ್ಯೂರೋದ ಲೇಖನದಲ್ಲಿ ಇದೇ ಚಿತ್ರ ಹಾಕಲಾಗಿದೆ.
ಒಟ್ಟಿನಲ್ಲಿ ನರೇಂದ್ರ ಮೋದಿಯವರನ್ನು ಹೊಗಳುವುದಕ್ಕಾಗಿಯೇ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಅವರ ಬಗ್ಗೆ ಬಹುದೊಡ್ಡ ಲೇಖನ ಬಂದಿದೆ ಎಂದು ಎಡಿಟ್ ಮಾಡಿದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವಾಸ್ತವದಲ್ಲಿ ನ್ಯೂಯಾರ್ಕ್ ಟೈಮ್ಸ್ ಅಂತಹ ಯಾವುದೇ ಲೇಖನ ಪ್ರಕಟಿಸಿಲ್ಲ.
ಇದನ್ನೂ ಓದಿ: ತಾಲಿಬಾನ್ ಪರ ಪಾಕ್ ಆರ್ಮಿ ದಾಳಿ ಎಂದು ವಿಡಿಯೊ ಗೇಮ್ ಕ್ಲಿಪ್ ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ 


