ಪ್ರಧಾನಿ ಮೋದಿಯವರ ಮನವಿಯ ಮೇರೆಗೆ ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಒಂಬತ್ತು ನಿಮಿಷಗಳ ಕಾಲ ದೀಪ ಬೆಳಗಿಸಲಾಯಿತು. ಆದರೆ ಹಲಾವಾರು ಕಡೆ ಜನರು ಪಟಾಕಿ ಸಿಡಿಸಿ, ಬೀದಿಗಳಿಗೆ ಬಂದು ಪಂಜಿನ ಮೆರವಣಿಗೆ ಮಾಡಿ ಮೂರ್ಖತನ ಮೆರೆದರು. ಈ ಮಧ್ಯೆ ಹಲವಾರು ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣ ಹಾಗೂ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲೂ ಹರಿದಾಡಿವೆ. ಕೆಲವೊಂದು ನಿಜವಾದರೆ ಕೆಲವೊಂದು ಸುಳ್ಳಗಳನ್ನು ಹರಡಲಾಗಿದೆ.
ಮಹಾರಾಷ್ಟ್ರದ ಸೋಲಾಪುರ ನಗರದ ವಿಮಾನ ನಿಲ್ದಾಣದ ವಾಯುಪ್ರದೇಶದಲ್ಲಿ ಒಣಗಿದ ಹುಲ್ಲು ಬೆಂಕಿಗೆ ಆಹುತಿಯಾಗಿದೆ ಎಂಬ ವರದಿಯೂ ಹೊರಬಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು, ಇದನ್ನು ಹಲವಾರು ಜನ ಹಂಚಿಕೊಂಡಿದ್ದರು. ಟಿವಿ 9 ಮರಾಠಿ ಕೂಡಾ ಏಪ್ರಿಲ್ 5 ರಂದು ಸೋಲಾಪುರ ವಿಮಾನ ನಿಲ್ದಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿ ಅದನ್ನೇ ಪ್ರಸಾರ ಮಾಡಿತು. ಆದರೆ ಆ ಚಾನೆಲ್ ಈಗ ಆ ವೀಡಿಯೊವನ್ನು ಯೂಟ್ಯೂಬ್‌ನಿಂದ ತೆಗೆದಿದೆ.
Massive fire at solapur airport due to firecrackers.
Gid please save this world from andhbhakt pic.twitter.com/zYpmJ0iP0U
— Maaz patel (@maaz_patel1) April 5, 2020
ನ್ಯೂಸ್ 18 ರ ಮರಾಠಿ ಚಾನೆಲ್ ಲೋಕಮತ್ ವರದಿಗಾರ ಸಾಗರ್ ಸುರವಾಸೆ ಕೂಡಾ ಇದೆ ವೀಡಿಯೊವನ್ನು ಟ್ವೀಟ್ ಮಾಡಿದ್ದರು. ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಸುರವಾಸ್ ಅವರ ಟ್ವೀಟ್‌ಗೆ ರಿಟ್ವೀಟ್ ಮಾಡಿ ಅದು ಹಳೆಯ ವಿಡಿಯೊ ಕ್ಲಿಪ್ ಎಂದು ಸ್ಪಷ್ಟಪಡಿಸಿದ್ದರು.
सोलापूर ब्रेकिंग :
– सोलापूर विमानतळ परिसरात पुन्हा लागली आग.
– दिवे लावण्याच्या वेळेदरम्यान लागली भीषण आग.
– आगीचे कारण अद्याप अस्पष्ट मात्र फटाक्यामुळे आग लागल्याचा स्थानिकांचा आरोप@News18lokmat @meemilind @manojkhandekar @MaheshMhatre @solapurpolice pic.twitter.com/EeE7BTuXjL— sagar surawase (@sagarsurawase) April 5, 2020
ಅಷ್ಟೆ ಅಲ್ಲದೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಮತ್ತು ಕಾಂಗ್ರೆಸ್ ನಾಯಕರಾದ ಶ್ರೀವಾತ್ಸ ಕೂಡಾ ಸೋಲಾಪುರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿಕೊಂಡಿದ್ದರು.

ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿದ ನಂತರದಲ್ಲಿ ಸೋಲಾಪುರ ವಿಮಾನ ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದೆ ಎಂದು “ದಿ ಹಿಂದೂ” ಕೂಡಾ ವರದಿ ಮಾಡಿತ್ತು (ವರದಿಗೆ ಇಲ್ಲಿ ಕ್ಲಿಕ್ ಮಾಡಿ), ಅವರ ಪ್ರಕಾರ “ಸೋಲಾಪುರ ವಿಮಾನ ನಿಲ್ದಾಣದ ವಾಯುಪ್ರದೇಶದ ಉದ್ದಕ್ಕೂ ಇರುವ ಒಣ ಹುಲ್ಲುಗಳಿಗೆ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ಪಟಾಕಿ ಸಿಡಿಸುವುದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ನಂಬಲಾಗಿದೆ.”
ಫ್ಯಾಕ್ಟ್ ಚೆಕ್:
ಪ್ರಮುಖ ವ್ಯಕ್ತಿಗಳು ಟ್ವೀಟ್ ಮಾಡಿದ ಈ ವೀಡಿಯೊ ಹಳೆಯದು ಮತ್ತು ಅದಕ್ಕೂ ಇತ್ತೀಚೆಗಿನ ಘಟನೆಗೂ ಸಂಭಂಧವಿಲ್ಲ. ಯೂಟ್ಯೂಬ್‌ನಲ್ಲಿ ಕೀವರ್ಡ್ ಮೂಲಕ ನಡೆಸಿದಾಗ ಅದು ಫೆಬ್ರವರಿ 3, 2020 ರಂದು ಎಬಿಪಿ ಮಜಾ ಟಿವಿಯು ಪ್ರಸಾರ ಮಾಡಿದ್ದ ವಿಡಿಯೊ ಎಂದು “ಆಲ್ಟ್ ನ್ಯೂಸ್” ಕಂಡುಹಿಡಿದಿದೆ.
ಕೆಳಗಿರುವ ವಿಡಿಯೊ ಗಮನಿಸಿ.
ಫೆಬ್ರವರಿ 3, 2020 ರಂದು ಎಬಿಪಿ ಮಜಾ ಪ್ರಸಾರ ಮಾಡಿದ್ದ ವಿಡಿಯೊ ಮತ್ತು ಏಪ್ರಿಲ್ 5 ರಂದು ಟಿವಿ 9 ಮರಾಠಿ ಪ್ರಸಾರ ಮಾಡಿರುವ ವಿಡಿಯೊ ಎರಡೂ ಒಂದೇ ಎಂದು ತಿಳಿದು ಬಮದಿದೆ. ಕಳಗಿರುವ ಸ್ಕ್ರೀನ್ ಶಾರ್ಟ್‌ಗಳು ಅದನ್ನು ನಿರೂಪಿಸುತ್ತದೆ.

ಒಟ್ಟಿನಲ್ಲಿ ಪ್ರಧಾನಮಂತ್ರಿಯವರು ಕರೆ ನೀಡಿದ್ದ ದೀಪ ಬೆಳಗಿಸುವ ಅಭಿಯಾನದಂದು ಸೋಲಾಪುರ ವಿಮಾನ ನಿಲ್ದಾಣದಲ್ಲಿ ಬೆಂಕಿ ಹೊತ್ತಿಕೊಂಡಿಲ್ಲ ಹಾಗೂ ಅದು ಸರಿಸುಮಾರು ಎರಡು ತಿಂಗಳ ಹಿಂದೆ ನಡೆದ ಘಟನೆಯಾಗಿದೆ.


