Homeದಿಟನಾಗರಫ್ಯಾಕ್ಟ್‌ಚೆಕ್: ಮೋದಿಯ ಶಿಫಾರಸ್ಸಿನಂತೆ ಈ ಯುವ ವಿಜ್ಞಾನಿಯನ್ನು ಡಿಆರ್‌‌ಡಿಒಗೆ ಸೇರಿಸಲಾಗಿದೆಯೆ?

ಫ್ಯಾಕ್ಟ್‌ಚೆಕ್: ಮೋದಿಯ ಶಿಫಾರಸ್ಸಿನಂತೆ ಈ ಯುವ ವಿಜ್ಞಾನಿಯನ್ನು ಡಿಆರ್‌‌ಡಿಒಗೆ ಸೇರಿಸಲಾಗಿದೆಯೆ?

ಇವರು ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಡ್ರೋನ್ ಎಕ್ಸ್‌ಪೋ 2018 ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಚಿನ್ನದ ಪದಕವನ್ನು ಗೆದ್ದಿದ್ದರು.

- Advertisement -
- Advertisement -

ಅಸಾಮಾನ್ಯ ಸಾಧನೆ ಮಾಡಿದ ಈ ಯುವ ವಿಜ್ಞಾನಿಯನ್ನು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ಸೇರ್ಪಡೆ ಮಾಡಿದ್ದಾರೆ ಎಂದು ಹೇಳಲಾದ ಯುವ ಡ್ರೋನ್ ವಿಜ್ಞಾನಿ ‘ಪ್ರತಾಪ್’ ಅವರ ಕಥೆಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.

ಟ್ವಿಟ್ಟರ್‌ ಬಳಕೆದಾರ ಅಮಿತ್ ಸಿಂಗ್ ರಾಜಾವತ್ (@satya_AmitSingh) ಎಂಬವರು, ಫ್ರಾನ್ಸ್‌ನಿಂದ ಉನ್ನತ ಉದ್ಯೋಗ ಪ್ರಸ್ತಾಪವನ್ನು ನಿರಾಕರಿಸಿದ ಪ್ರತಾಪ್ ಅನ್ನು ಪ್ರಧಾನಿ ನರೇಂದ್ರ ಮೋದಿ ಡಿಆರ್‌ಡಿಒಗೆ ಸೇರಲು ಸೂಚಿಸಿದ್ದಾರೆ ಎಂದು ಬರೆದಿ‌ದ್ದಾರೆ.

ಈ ಟ್ವೀಟ್‌ 7,400 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 1,600 ರಿಟ್ವೀಟ್‌ಗಳಾಗಿವೆ.

ಇದೆ ಕತೆಯನ್ನು ಫೇಸ್‌ಬುಕ್‌ನಲ್ಲಿ ಕೂಡಾ ಹಂಚಿಕೊಳ್ಳಲಾಗುತ್ತಿದೆ.

ಇದೇ ಸುದ್ದಿಯನ್ನು ಸುಳ್ಳು ಮಾಹಿತಿಯೊಂದಿಗೆ ಇಂಡಿಯಾಗ್ಲಿಟ್ಜ್ ಎಂಬ ವೆಬ್‌ಸೈಟ್ ಸಹ ಹಂಚಿಕೊಂಡಿದೆ.

ಫ್ಯಾಕ್ಟ್‌‌ಚೆಕ್‌

“ಪ್ರತಾಪ್ ಡ್ರೋನ್ ವಿಜ್ಞಾನಿ” ಎಂಬ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಡಿದರೆ 2019 ರ ಡಿಸೆಂಬರ್‌ನಿಂದ ಹಲವಾರು ಸುದ್ದಿ ವರದಿಗಳು ಕಾಣಬಹುದಾಗಿದೆ. ಇದರಲ್ಲಿ ಇರುವ 22 ವರ್ಷದ ‘ಡ್ರೋನ್ ಬಾಯ್’ ಪ್ರತಾಪ್ ನಮ್ಮ ಕರ್ನಾಟಕದ ಕೃಷಿಕ ಕುಟುಂಬದಿಂದ ಬಂದ ಯುವ ವಿಜ್ಞಾನಿ ಎಂದು ಉಲ್ಲೇಖಿಸಲಾಗಿದೆ. ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಡ್ರೋನ್ ಎಕ್ಸ್‌ಪೋ 2018 ರಲ್ಲಿ ಇವರು ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಚಿನ್ನದ ಪದಕವನ್ನು ಗೆದ್ದಿದ್ದರು.

ಈ ಬಗ್ಗೆ “ದಿಕ್ವಿಂಟ್” ಸುದ್ದ ಜಾಲತಾಣ ಪ್ರತಾಪ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ. ಅವರೇ ಹೇಳುವಂತೆ “ನಾನು ಯೋಜನೆಗಾಗಿ ಡಿಆರ್ಡಿಒ ಜೊತೆ ಮಾತುಕತೆ ನಡೆಸುತ್ತಿದ್ದೇನೆ, ಅದರ ಬಗ್ಗೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಇನ್ನೂ ಪ್ರಧಾನಿ ಅಥವಾ ಪ್ರಧಾನ ಮಂತ್ರಿ ಕಚೇರಿಯಿಂದ ಯಾವುದೇ ಸಂವಹನ ನಡೆದಿಲ್ಲ. ಡಿಆರ್‌ಡಿಒಗೆ ನಾನು ಹೋಗುತ್ತಿದ್ದೇನೆ ಎಂಬ ಸುದ್ದಿ ಸುಳ್ಳಾಗಿದೆ.” ಎಂದು ಹೇಳಿದ್ದಾರೆ.

ಇಂಡಿಯಾ ಟೈಮ್ಸ್ 30 ಡಿಸೆಂಬರ್ 2019 ರ ವರದಿಯು “ನಿರ್ಣಾಯಕ ರಾಷ್ಟ್ರೀಯ ಯೋಜನೆಗಳಲ್ಲಿ ಡ್ರೋನ್ ಅನ್ವಯಿಕೆಗಾಗಿ ಡಿಆರ್ಡಿಒ ಜೊತೆಗಿನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳುತ್ತದೆ.

ಈ ಬಗ್ಗೆ ಕೇಳಿದಾಗ ಪ್ರತಾಪ್, “ನಾನು ಡಿಆರ್ಡಿಒ ದೊಂದಿಗೆ ಕೆಲಸ ಮಾಡಿದ್ದೇನೆ ಆದರೆ ನೇರವಾಗಿ ಅಲ್ಲ. ಡಿಆರ್‌ಡಿಒನ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಮತ್ತೊಂದು ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದ್ದೇನೆ” ಎಂದು ಹೇಳಿದ್ದಾರೆ.

ಡಿಆರ್‌ಡಿಒದಲ್ಲಿ ಪ್ರವೇಶ ಪ್ರವೇಶ ಪಡೆಯಲು ಕನಿಷ್ಠ ಅರ್ಹತೆಯಾದ ಸ್ನಾತಕೋತ್ತರ ಪದವಿಯನ್ನು ಪ್ರತಾಪ್ ಪ್ರಸ್ತುತ ಹೊಂದಿಲ್ಲ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ.

ಇಲ್ಲಿಗೆ ಪ್ರತಾಪ್ ಡಿಆರ್‌ಡಿಒ ದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.


ಓದಿ: ತೈಲ ಬೆಲೆ ಏರಿಕೆ ಖಂಡಿಸಿ ಪೆಟ್ರೋಲ್ ಬಂಕ್‌ ಮೇಲೆ ದಾಳಿ?; ಫ್ಯಾಕ್ಟ್‌‌ಚೆಕ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...