ತ್ರಿಪುರ ಹಿಂಸಾಚಾರದ ವೇಳೆ ಮುಸ್ಲಿಮರಿಗೆ ಜಿಹಾದ್‌ಗೆ ಕರೆ ನೀಡಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. ಭಾರತೀಯ ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡುವಂತೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ತ್ರಿಪುರದಲ್ಲಿ ಜಿಹಾದ್‌ಗೆ ಮಸೀದಿಯೊಂದು ಕರೆ ನೀಡಿದೆ ಎಂದು ಹಂಚಿಕೊಳ್ಳಲಾಗಿರುವ ವಿಡಿಯೊದ ಸ್ಕ್ರೀನ್ಶಾಟ್
ವಿಡಿಯೊ ಎಲ್ಲಿನದ್ದು?
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಫೆಬ್ರವರಿ 2020ರಲ್ಲಿ ಟರ್ಕಿಶ್ ಸೇನೆಯ ವಿರುದ್ಧ ಜಿಹಾದ್ ಘೋಷಿಸುವ ಇಡ್ಲಿಬ್‌ನಲ್ಲಿರುವ ಮಸೀದಿಗಳ ಹಳೆಯ ದೃಶ್ಯಗಳನ್ನು ತೋರಿಸುತ್ತದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದಾಗಿದೆ ಮತ್ತು ತ್ರಿಪುರಾದಲ್ಲಿ ಇತ್ತೀಚಿನ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಆಧಾರ
ವಿಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಸರ್ಚ್ ಮಾಡಿದಾಗ, ಇದೇ ರೀತಿಯ ವಿಡಿಯೊವನ್ನು ಯೂಟ್ಯೂಬ್ ಬಳಕೆದಾರರು 07 ಫೆಬ್ರವರಿ 2020ರಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ಯೂಟ್ಯೂಬ್ ಚಾನೆಲ್ ಇದನ್ನು ಇಡ್ಲಿಬ್‌ನಲ್ಲಿರುವ ಮಸೀದಿಯು ಜಿಹಾದ್‌ಗೆ (ಪವಿತ್ರ ಯುದ್ಧಕ್ಕೆ) ಕರೆ ನೀಡುತ್ತಿರುವುದು ಎಂದು ವರದಿ ಮಾಡಿದೆ.
ಈ ಕೀವರ್ಡ್‌ಗಳನ್ನು ಬಳಸಿಕೊಂಡು ವಿಶ್ವಾಸಾರ್ಹ ಮೂಲಗಳನ್ನು ಹುಡುಕಿದಾಗ, 07 ಫೆಬ್ರವರಿ 2020ರಂದು ಟರ್ಕಿಶ್ ಸುದ್ದಿ ವೆಬ್‌ಸೈಟ್ ‘ಯೆನಿಯಾಕಿಟ್’ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ವೀಡಿಯೊ ಕಂಡುಬಂದಿದೆ. ಈ ಲೇಖನವನ್ನು “ಮಸೀದಿಗಳಿಂದ ಸಿರಿಯನ್ನರಿಗೆ ಕರೆ: ಜಿಹಾದ್‌ಗೆ ನಾವು ಹೋಗೋಣ, ಯುವಜನರೇ, ಜಿಹಾದ್‌ಗೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.

ಟರ್ಕಿಶ್ ಸುದ್ದಿ ವೆಬ್‌ಸೈಟ್ ‘ಯೆನಿಯಾಕಿಟ್’ ಪ್ರಕಟಿಸಿದ ಲೇಖನದ ಸ್ಕ್ರೀನ್ಶಾಟ್
ಹಸನ್ ಸಿವ್ರಿ ಎಂಬ ಪತ್ರಕರ್ತ 07 ಫೆಬ್ರವರಿ 2020ರಂದು ಅದೇ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಹಸನ್ ಸಿವ್ರಿ, ಇಡ್ಲಿಬ್‌ನಲ್ಲಿನ ವಿರೋಧಿಬಣದ ನಿಯಂತ್ರಣದಲ್ಲಿರುವ ಮಸೀದಿಗಳು, ಇಡ್ಲಿಬ್‌ನ ಕಡೆಗೆ ಸಾಗುತ್ತಿರುವ ಟರ್ಕಿಶ್ ಸೇನಾ ಬೆಂಗಾವಲಿನ ವಿರುದ್ಧ ಹೋರಾಡಲು ಜಿಹಾದ್‌ಗಾಗಿ ಜನರಿಗೆ ಕರೆ ನೀಡಿವೆ ಎಂದು ವರದಿ ಮಾಡಿದ್ದಾರೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದು ಮತ್ತು ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.
Bu arada İdlip’te muhaliflerin kontrolündeki camilerden “Haydi cihada, gençler nerede, haydi cihada” çağrısı yapıldı pic.twitter.com/1vIPFXNUgp
— Hasan Sivri (@hasansvri) February 7, 2020
ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದ ಘಟನೆಗೆ ಸಂಬಂಧವಿಲ್ಲದ ಸಿರಿಯಾದ ಹಳೆಯ ವೀಡಿಯೊವನ್ನು, “ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರದಲ್ಲಿ ಹೋರಾಡಲು ಜಿಹಾದ್‌ಗೆ ಕರೆ ನೀಡುವ ಮಸೀದಿಯ ದೃಶ್ಯಗಳು” ಎಂದು ಹಂಚಿಕೊಳ್ಳಲಾಗಿದೆ. ಇದು ಮುಸ್ಲಿಮರ ವಿರುದ್ಧ ಕೋಮು ಭಾವನೆಗಳನ್ನು ಪ್ರಚೋದಿಸಲೆಂದೇ ಮಾಡಿದ ದೃಷ್ಕೃತವೆಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಎಂಐಎಂಗೆ ಶಾರುಖ್ ಬೆಂಬಲವೆಂದು ಫೋಟೋ ತಿರುಚಿ ಅಪಪ್ರಚಾರ


