ಫ್ಯಾಕ್ಟ್‌ಚೆಕ್‌: ಆಹಾರ, ಹಣಕ್ಕಾಗಿ ವಲಸೆ ಕಾರ್ಮಿಕರಿಂದ ದರೋಡೆ ಮತ್ತು ಕೊಲೆ?: ಇದು ನಿಜವಲ್ಲ

FactCheck: Robbery and Murder by Migrant Workers for Food and Money ?: It's Not True
ಚಿತ್ರಕೃಪೆ: ಬೂಮ್‌ಲೈವ್‌

ಆಹಾರವಿಲ್ಲದೇ ಕಂಗೆಟ್ಟಿದ್ದ ವಲಸೆ ಕಾರ್ಮಿಕರು ದೆಹಲಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ ನಗದು ದೋಚಿ ಆತನನ್ನು ಕೊಲೆ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

“ದಯವಿಟ್ಟು ರಾತ್ರಿಯ ವೇಳೆ ಯಾರೂ ಹೊರಗೆ ಬರಬೇಡಿ. ವಲಸೆ ಕಾರ್ಮಿಕರು ದಾಳಿ ಮಾಡಿ ನಗದು, ಆಭರಣ ದೋಚುವುದು ಸಾಮಾನ್ಯವಾಗಿಬಿಟ್ಟಿದೆ. ಏಕೆಂದರೆ ಅವರ ಬಳಿ ಹಣ, ಆಹಾರವಿಲ್ಲದೇ ಇಂತಹ ಕೃತ್ಯಕ್ಕಿಳಿದಿದ್ದಾರೆ” ಎಂಬ ಶೀರ್ಷಿಕೆ ಕೂಡ ನೀಡಲಾಗಿದೆ.

ಈ ಸುದ್ದಿ ಸಂಪೂರ್ಣ ಸುಳ್ಳಾಗಿದೆ. ವೈರಲ್ ಆದ ಸಿಸಿಟಿವಿ ವಿಡಿಯೋವು ದೆಹಲಿಯ ಬಲ್ಜಿತ್ ನಗರದಲ್ಲಿ ಏಪ್ರಿಲ್ 14 ರಂದು ಚಿತ್ರಿತವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೇ ಕೇಂದ್ರ ದೆಹಲಿ ಜಿಲ್ಲೆಯ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಪಿಯೂಶ್ ಜೈನ್ ಈ ಕುರಿತು ಸ್ಪಷ್ಟನೆ ನೀಡಿದ್ದು “ಈ ದರೋಡೆ ಪ್ರಕರಣದಲ್ಲಿ ಆರೋಪಿಯು ವಲಸೆ ಕಾರ್ಮಿಕನಲ್ಲ. ಸಂತ್ರಸ್ತನು ಬದುಕುಳಿದಿದ್ದು, ಇಬ್ಬರೂ ಅಪ್ತಾಪ್ತ ವಯಸ್ಕರಾಗಿದ್ದು ಬಲ್ಜಿತ್‌ನಗರದ ನಿವಾಸಿಗಳಾಗಿದ್ದಾರೆ” ಎಂದಿದ್ದಾರೆ.

ಘಟನೆಯಲ್ಲಿ ಹುಡುಗನೊಬ್ಬನು ಮತ್ತೊಬ್ಬನ ಮೊಬೈಲ್‌ ಫೋನ್‌ ಕದಿಯಲು ಪ್ರಯತ್ನಿಸುತ್ತಾನೆ. ಆಗ ವಿರೋಧಿಸಿದ್ದಕ್ಕೆ ಚಾಕುವಿನಿಂದ ಚುಚ್ಚವುದು ಸಿಸಿಟಿವಿಯಲ್ಲಿ ಕಾಣುತ್ತದೆ. ಆದರೆ ಈ ವಿಡಿಯೋವನ್ನು ವಲಸಿಗ ಕಾರ್ಮಿಕರಿಂದ ದರೋಡೆ ಎಂದು ಸುಳ್ಳು ಹರಡಲಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಲಾಕ್‌ಡೌನ್ ನಡುವೆ ಮುಂಬೈ ರೈಲು ನಿಲ್ದಾಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜವೇ? 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here